ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆ (ರಿ), ರಾಜ್ಯ ಘಟಕದ ವತಿಯಿಂದ ಆಗ್ರಹಿಸುವದೆನೆಂದರೆ, ಬೆಳಗಾವಿಯ ಎಂ.ಎಸ್.ಯು. ಸಂಘಟನೆಯು ಕರ್ನಾಟಕದಲ್ಲಿ ಹುಟ್ಟಿ, ಬೆಳೆದು, ಮತ್ತು ರಾಜಕೀಯ ಅಧಿಕಾರವನ್ನು ಪಡೆದುಕೊಂಡು ತಮ್ಮ ಪ್ರದತ್ತವಾದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕನ್ನಡ ನಾಡಿನ ಬಗ್ಗೆ ಗೌರವಿರದೇ, ಕೇವಲ ಮಹಾರಾಷ್ಟ್ರದ ಬಗ್ಗೆ ಗೌರವ ತೋರುವ ಇಂತಹ ಕಿಡಗೇಡಿಗಳು ಬೆಳಗಾವಿಯ ವಿಧಾನ ಮಂಡಲ ಅಧೀವೇಶಕ್ಕೆ ಪರ್ಯಾಯವಾಗಿ ’ಮಹಾಮೇಳಾವ’ ನಡೆಸಿ, ಎಂ.ಇ.ಎಸ್. ಸಂಘಟೆಯ ಮುಖಂಡರು ದಿನಾಂಕ: ೧೪-೧೨-೨೦೨೧ ರಂದು ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿ ಪುಂಡಾಟಿಕೆ ಮರೆದಿದ್ದು ಅವಮಾನಿಸಿದ ಘಟನೆ ಆಗಿದೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚಿನ ಫರತಾಬಾದ್ ಆಗ್ರಹಿಸಿದಾರೆ.
ಇಂತಹ ಘಟನೆಯನ್ನು ಅವರು ಪದೇ ಪದೇ ಮಾಡುತ್ತಲೇ ಬಂದಿದ್ದು, ಅಲ್ಲದೇ ಸದರಿ ಮರಾಠ ಜನಾಂಗಕ್ಕೆ ಕರ್ನಾಟಕ ಸರಕಾರವು ಇವರಿಗೆ ಮರಾಠಾ ನಿಗಮ ಮಂಡಳಿ ಸ್ಥಾಪಿಸಿ, ಅವರ ಅಭಿವೃದ್ಧಿಗೋಸ್ಕರ್ ಎಲ್ಲಾ ರೀತಿಯ ಸೌವಲತ್ತುಗಳನ್ನು ನೀಡಿದರೂ ಸಹಿತ ಇವರು ಕೇವಲ ಮಹಾರಾಷ್ಟ್ರವೆಂದು ಘೋಷಣೆ ಕೋಗುತ್ತಾ, ಕರ್ನಾಟಕ ನಾಡಿನ ಜನತೆಗೆ ಮೋಸ ಮಾಡುತ್ತಿದ್ದು, ಇಂತಹ ಪುಂಡಾಟಿಕೆ ಮುಖಂಡರಿಂದ ಇಡಿ ಸಮಾಜದ ಸ್ವಾಸ್ಥ ಹಾಳಾಗಿ, ಭಾಷೆ-ಭಾಷೆಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಇಂತಹವರಿಗೆ ಮರಾಠಾ ನಿಗಮ ಮಂಡಳಿ ನೀಡಿರುವುದನ್ನು ಮುಲಾಜೀಲದೇ ರದ್ದಗೋಳಿಸಬೇಕೆಂದು ಆಗ್ರಹಿಸಿದರು.
ಅದರಂತೆ ಸೌಲಭ್ಯಗಳನ್ನು ವಾಪಸ್ಸಾತಿ ಪಡೆದುಕೊಂಡು ಇವರಿಗೆ ತಕ್ಕಪಾಠ ಕಲಿಸಬೇಕೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು. ಅದೇ ರೀತಿಯಾಗಿ ಈ ಘಟನೆಗೆ ಸಂಬಂಧಿಸಿದಂತೆ ಇದೇ ೧೭ರಂದು ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಜೊತೆ ಜೊತೆಗೆ ಇದಕ್ಕೆ ಕುಮ್ಮಕು ನೀಡುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಭಾವಚಿತ್ರವನ್ನು ಸುಡುವುದರ ಮುಖಾಂತರ ಪ್ರತಿಭಟಿಸಲಾಗುತ್ತದೆ ಎಂದು ಸಚಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…