ಸತೀಶ ಕುಲಕರ್ಣಿಯವರ ಹೋರಾಟದ ‘ಒಡಲಾಳದ ಕಿಚ್ಚು’

  • ಕೆ.ಶಿವು.ಲಕ್ಕಣ್ಣವರ

‘ಕಟ್ಟುತೇವ ಕಾವ್ಯ’ ಎಂಬ ಹಾಡು ನಮ್ಮ ನಾಡಿನಲ್ಲಿ ಜನಜನಿತ. ವಿನಾಶ, ವಿಧ್ವಂಸಕತೆಯನ್ನು ಸದಾ ವಿರೋಧಿಸುತ್ತ, ಕಟ್ಟುವುದರ ಬಗ್ಗೆ ಆಶಯ ವ್ಯಕ್ತಪಡಿಸುತ್ತಾ ಈ ಹೋರಾಟದ ಗೀತೆ ರಚಿಸಿದವರು ಹಾವೇರಿಯ ಸತೀಶ ಕುಲಕರ್ಣಿಯವರು.ಹೋರಾಟದ ಕಿಚ್ಚು, ಮಾಗಿದ ಅನುಭವಜಾತಿ ಇಲ್ಲದ, ಭೀತಿ ಇಲ್ಲದ, ಬಾಳ ಕಟ್ಟತೇವ…ಗೋಳಿಲ್ಲದ, ಗುಂಡಿಲ್ಲದ, ನಾಡ ಕಟ್ಟತೇನವ.

ಕವನದ ಸಾಲುಗಳನ್ನು ಓದಿದರೆ ಸತೀಶ ಕುಲಕರ್ಣಿಯವರದು ತರತಮಗಳಿಲ್ಲದ ಒಂದು ನೆಮ್ಮದಿಯ ಸಮಾಜದ ಅಪೇಕ್ಷೆವುದು ಎಂಬುದು ಸ್ಪಷ್ಟವಾಗುತ್ತದೆ. ಹೀಗೆಯೇ ಸಾಮಾಜಿಕವಾಗಿಯೂ ಸಮಾನತೆಯನ್ನು ಬಯಸುವ ಹಾಗೂ ತಮ್ಮ ಕವನಗಳಲ್ಲಿ ಅದನ್ನು ಅಭಿವ್ಯಕ್ತಿಸುವ ಸತೀಶ ಕುಲಕರ್ಣಿ ಒಬ್ಬ ಬಂಡಾಯ ಕವಿ, ದಲಿತ ಮತ್ತು ಬಂಡಾಯ ಕಾವ್ಯ ಇವರ ಕವನಗಳ ಮೇಲೆ ಗಾಢ ಪ್ರಭಾವ ಬೀರಿವೆ ಎಂಬುದು ಗಮನಾರ್ಹವೇ ಆಗಿದೆ.

ಈಗ ಅವರ ಸಮಗ್ರ ಕವಿತೆ ಬಂದಿದೆ. ಲೋಹಿಯಾ ಅವರ ಸಮಾಜವಾದವನ್ನು ಬಲವಾಗಿ ಅಪ್ಪಿಕೊಂಡಿರುವ ಸತೀಶ ಕುಲಕರ್ಣಿ, ಸಮಕಾಲೀನ ಸಂದರ್ಭದ ಪ್ರತಿಗಾಮಿ ರಾಜಕಾರಣಕ್ಕೆ ಸ್ಪಂದಿಸಿದ ಕವಿಯೂ ಹೌದು ಎಂಬುದು ನನ್ನ ವಯಕ್ತಿಕ ಅಭಿಪ್ರಾಯವಾಗಿದೆ.ಅದು ಇವರ ಕವನಗಳಲ್ಲಿ ವೈಚಾರಿಕತೆಗೊಂದು ವಿಶಿಷ್ಟ ಸ್ಥಾನವಿದೆ. ಸಾಮಾಜಿಕ ‘ಅಸಮಾನತೆ’ಯ ವಿರುದ್ಧ ಆಕ್ರೋಶ, ರಾಜಕೀಯ ವ್ಯವಸ್ಥೆಯ ವಿಡಂಬನೆ ಇವರ ಕವನಗಳ ಪ್ರಮುಖ ಸರಕು ಆಗಿದೆ. ತಮ್ಮ ಕವನಗಳಲ್ಲಿರುವ ನೋವು, ಯಾತನೆಗಳಲ್ಲಿ ಮರೆಮಾಚಿದ ಹಲವು ಸತ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ ಸತೀಶ ಕುಲಕರ್ಣಿಯವರು.

ಇದಕ್ಕೊಂದು ಉತ್ತಮ ನಿದರ್ಶನ ‘ಅಗ್ರಹಾರದ ಹಾಡು’. ಜಡಸ್ಥಿತಿಯ ಸಂಕೇತದಂತಿರುವ ಈ ಕವನ ಹೊಸ ಆಶಯ ಹುಟ್ಟು ಹಾಕುವಂತಿದೆ. ಇದು ‘ಅಗ್ರಹಾರ, ನೂರಾರು ವರ್ಷಗಳಿಂದ ಬೋಳು ತಲೆಗಳು, ಡೊಳ್ಳು ಹೊಟ್ಟೆಗಳು, ವೃಥಾ ಭಜನೆ, ಕೀರ್ತನೆ, ಅರ್ಚನೆಗಳ ವ್ಯವಹಾರಗಳಲ್ಲಿ…’ ಹೀಗೆಯೇ ಈ ಕವನದ ಸಾಲುಗಳನ್ನು ಓದಿದರೆ ಸಾಕು, ಅವರ ಕಾವ್ಯದಲ್ಲಿ ಇರುವ ಮೌಢ್ಯಗಳ ವಿರುದ್ಧದ ಆಕ್ರೋಶ ಥಟ್ಟನೆ ಗೊತ್ತಾಗುತ್ತದೆ.

ಇದೇ ರೀತಿಯ ಇವರ ಮೊದಲ ಕವನ ಸಂಕಲನ ‘ಒಡಲಾಳದ ಕಿಚ್ಚು’ ಅಂಚಿಗೆ ತಳ್ಳಲ್ಪಟ್ಟ ಕೆಳವರ್ಗದವರ ಬಗ್ಗೆ, ನೊಂದು ಬೆಂದವರ ಬಗ್ಗೆ, ಅವರ ಯಾತನೆಗಳ ಮೇಲೆ ಬೆಳಕು ಚೆಲ್ಲುವಲ್ಲಿಯ ಯತ್ನವಾಗಿದೆ. ಸಾಮಾಜಿಕ ವಿಮರ್ಶೆಯ ಜತೆಗೆ ತಮ್ಮ ನಿಲುವನ್ನೂ ಪ್ರತಿಭಟನಾತ್ಮಕ ರೂಪದಲ್ಲಿ ಈ ಕವನಗಳಲ್ಲಿ ಸತೀಶ ಕುಲಕರ್ಣಿ ಬಿಂಬಿಸಿದ್ದಾರೆ.

ಇತ್ಯರ್ಥವಾಗದ ಇತಿಹಾಸದ ನಿಯಮಗಳು
ಬಿಚ್ಚುತ್ತಿವೆ ಮಹಲಿನಿಂದ ಮಹಲಿಗೆ
ಬಂಗಾರದ ಬೆಲ್ಟುಗಳ ಕಟ್ಟಿದ
ಗಡಿಯಾರದ ಕೈಗಳಿಂದ ಕೈಗಳಿಗೆ’
ಎನ್ನುವ ‘ತುಳಿತ’

ಶೀರ್ಷಿಕೆಯ ಕವನ ಶೋಷಣೆಯ ವಿಸ್ತಾರ ಮತ್ತು ಕರಾಳಮುಖದ ಪರಿಚಯ ಮಾಡಿಸುತ್ತದೆ. ಈ ಸಂದರ್ಭ ಮತ್ತು ಸನ್ನಿವೇಶಗಳ ತಲ್ಲಣಗಳಿಗೆ ವಿಶೇಷ ಒತ್ತು ಕೊಟ್ಟು , ಶ್ರೀಸಾಮಾನ್ಯನ ನೋವು-ನಲಿವುಗಳನ್ನು ಇವರ ಕವನಗಳು ಹಿಡಿದಿಡುತ್ತವೆ. ಬದಲಾವಣೆಗೆ ಸ್ಪಂದಿಸುತ್ತಾ ತನ್ನ ಮೂಲ ಧ್ವನಿ ಹಾಗೂ ಆಶಯಗಳಿಗೆ ಧಕ್ಕೆಯಾಗದಂತೆ ಬರವಣಿಗೆ ಸಾಗಿಸುತ್ತಾ ಬಂದಿರುವ ಈ ಕವನಗಳು ನಿರಂತರತೆಯನ್ನು ಕಾಪಾಡಿಕೊಂಡು ಬಂದಿವೆ. ‘ದಮನಕ್ಕೆ ಉತ್ತರ ಧಿಕ್ಕಾರ, ಬಂಡಾಯ ದಬ್ಬಾಳಿಕೆಗೆ ಉತ್ತರ, ಗೆಳೆಯ ಗೊತ್ತಿರದ ಹಾದಿಗೆ ಸದಾ ಹುಡುಕಾಟ ನಮ್ಮ ಹತ್ತಿರ’ ಎಂಬ ಈ ಕವನಗಳ ಸಾಲುಗಳು ಸಾಕಾರಗೊಳ್ಳದ ಸಾಮಾಜಿಕ ಸಮಾನತೆ ಬಗೆಗಿನ ಅಸಮಾಧಾನವನ್ನು ವ್ಯಕ್ತಪಡಿಸುತ್ತವೆ.

ಇವರು ಕಾರ್ಯ ನಿರ್ವಹಿಸಿರುವ ಸರಕಾರಿ ಇಲಾಖೆಯೂ ಇಲ್ಲಿ ಕಾವ್ಯದ ವಸ್ತುವಾಗಿದೆ. ‘ಲೈನ್‌ಮ್ಯಾನ್ ಮಡಿವಾಳ ಭೀಮಪ್ಪನಿಗೆ’ ಹಾಗೂ ‘ಈ ನನ್ನ ಕೆಇಬಿ’ ಎಂಬ ಅಪರೂಪದ ಪದ್ಯಗಳು ಇವರ ವೃತ್ತಿವ್ಯಾಮೋಹಕ್ಕೆ ಉತ್ತಮ ಉದಾಹರಣೆಗಳಿವೆ. ಇವರ ಕವನಗಳಲ್ಲಿನ ಸಾತ್ವಿಕ ಸಿಟ್ಟು, ಆಕ್ರೋಶ ಏನಿದ್ದರೂ ವ್ಯಕ್ತಿಯೊಂದಿಗಲ್ಲ, ವ್ಯವಸ್ಥೆಯೊಂದಿಗೆ ಎಂಬುದು ಇವರ ಕವಿತೆಗಳನ್ನು ಓದುತ್ತಿದ್ದರೆ ವಿದಿತವಾಗುತ್ತದೆ.

ಹೀಗೆಂಬುದು ನನ್ನ ಅನುಭವವಾಗಿದೆ ಹಲವಾರು ದಿನಗಳಲ್ಲಿ ನಾನು ನೋಡಿಕೊಂಡು ಬಂದ ಸತೀಶ ಕುಲಕರ್ಣಿ ಎಂಬ ಹೋರಾಟಗಾರರನ್ನು. ಬಾಬರಿ ಮಸೀದಿ ಉರುಳಿದ ಘಟನೆಯ ಸುತ್ತ ಬೆಳೆದ ಪದ್ಯ ‘ವಿಷಾದ ಯೋಗ’. ಇದರಲ್ಲಿ ಅಯೋಧ್ಯೆಯಲ್ಲಿ ನಡೆದ ಸಂಬಂಧಿಸಿದ ಘಟನೆಗಳ ಚಿತ್ರಣಗಳನ್ನು ಕಟ್ಟಿಕೊಡುವ ಯತ್ನವಿದೆ. ಇದು ಪರಿಸ್ಥಿತಿಯ ವೈರುಧ್ಯಕ್ಕೆ ಹಿಡಿದ ಕೈಗನ್ನಡಿ.

‘ತುಟಿಯಲಿ ಹೂವೆದೆಯ ಹನಿ ಬಳಕು,
ಕಣ್ಣು ತುಂಬಾ ಸಮುದ್ರ ಜೀವ ತುಳುಕು
ಕಾರ್ತಿಕ ಕತ್ತಲೆಯ ಪುಟ್ಟ ಹಣತೆಯ ತಿಳಿಬೆಳಕು,
ಹಲವು ಒಲವು ಕನಸು ಕವಿತೆಗಳ ಬಿತ್ತಿದ್ದಳು ಒಬ್ಬಳಿದ್ದಳು’

ಎನ್ನುವ ಈ ಕವನ ಓದಿದರೆ ಹೆಣ್ಣಿನ ಮಾರ್ದವತೆ, ಪ್ರೀತಿ-ವಿರಹ-ವಿಷಾದಗಳನ್ನು ತಮ್ಮ ವಿಶಿಷ್ಟ ಶೈಲಿಯ ಪದಬಳಕೆಯಿಂದ ನಿರೂಪಿಸಿದ್ದಾರೆ ಸತೀಶ ಕುಲಕರ್ಣಿ.ಹೆಣ್ಣಿನ ಶೃಂಗಾರ ವರ್ಣಿಸಲು ಇಲ್ಲಿ ಬಳಸಲಾದ ಹೋಲಿಕೆಗಳು ಮತ್ತು ಉಪಮೆಗಳು ಮತ್ತು ಶೈಲಿ ಗಮನ ಸೆಳೆಯುತ್ತವೆ.

ಗುಡಿ, ಮಠ, ಮಸೀದಿ
ಹೆಜ್ಜೆಹೆಜ್ಜೆಗೆ ವಜ್ಜೆ ವಕಾಲತ್ತಾಗಿ
ಅಡೆತಡೆ ಕಟ್ಟೆಯಾಗಬಹುದು
ಮಾತುಗಳು ಮರೆತು
ಮಂತ್ರಗಳು ಕುತಂತ್ರಗಳು
ಮೂಕದೇವರ ಸೂತ್ರಗಳಾಗಿ
ಕುಣಿದಾಡಿಸಬಹುದು’

ಎನ್ನುವ ಈ ಕವನದ ಸಾಲುಗಳು ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ದುಷ್ಪರಿಣಾಮದ ಆತಂಕವನ್ನು ಸೂಚಿಸುತ್ತವೆ. ಒಟ್ಟಾರೆ ಹೇಳುವುದಾದರೆ ಸತೀಶ ಕುಲಕರ್ಣಿಯವರ ಕಾವ್ಯ ಕೃಷಿ ಉದಾರವಾದ ಮಾನವೀಯ ನಿಲುವು ಮತ್ತು ಜನಪರ ಕಾಳಜಿಯನ್ನು ಒಳಗೊಂಡಿದೆ. ದಲಿತ-ಬಂಡಾಯವೇ ಇಲ್ಲಿಯ ತಾತ್ವಿಕ ಹಿನ್ನೆಲೆಯನ್ನು ತೆರೆದಿಡುವ ಕವನಗಳು ಎನಿಸಿದರೂ ಅದಕ್ಕೊಂದು ವಿಶಿಷ್ಟ ಸ್ಥಾನವಿದೆ.

ಲೋಹಿಯಾ ಅವರ ಸಮಾಜವಾದದ ಗಾಢ ಛಾಯೆ ಇವರ ಕವನಗಳಲ್ಲಿ ಎದ್ದು ಕಾಣುತ್ತದೆ. ಸಮಕಾಲೀನ ಸ್ಥಿತ್ಯಂತರಗಳನ್ನು, ಅವನತಿಗಳನ್ನು ಸಾರುವ ಕವನದ ಸಾಲುಗಳು ಜತೆಜತೆಗೆ ಆಶಾವಾದವನ್ನೂ ಹೊಂದಿವೆ ಎಂಬುವುದೇ ನನ್ನ ತಾತ್ವಿಕ ಅಭಿಪ್ರಾಯ ಸತೀಶ ಕುಲಕರ್ಣಿಯವರ ಕವನಗಳ ಕುರಿತು.

ಹೀಗಿರುವ ಸತೀಶ ಕುಲಕರ್ಣಿಯವರ ಬಗೆಗೆ ಒಂದಿಷ್ಟು ಸಾಂಕೇತಿಕ ನನ್ನ ಅಭಿಪ್ರಾಯ ನೋಡಿ, ಅದು ಹೀಗಿದೆ: ಸಾಹಿತಿ ಸತೀಶ ಕುಲಕರ್ಣಿ ಎಂಬ ಸಾಂಸ್ಕ್ರತಿಕ ರಾಯಬಾರಿಯೂ.:ಬಹುಮುಖ ವ್ಯಕ್ತಿತ್ವದ ಸತೀಶ ಕುಲಕರ್ಣಿ ಪ್ರತಿಭಾವಂತರು ಹಾಗೂ ಪ್ರಗತಿಪರರಾಗಿದ್ದು, ಸಮುದ್ರದ ಗಾಂಭೀರ್ಯದಂತೆ ಅವರ ವ್ಯಕ್ತಿತ್ವಂತವರು. ಸಾಹಿತ್ಯ, ನಾಟಕ, ಸಂಘಟನೆ, ವಿಮರ್ಶಾ ಕ್ಷೇತ್ರದಲ್ಲಿ ಕಳೆದ 6 ದಶಕಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಆಳವಾದ ಅಧ್ಯಯನವನ್ನೂ ಅವರು ಮಾಡಿದವರು.

ಸತೀಶ ಕುಲಕರ್ಣಿ ಅವರು ನಾಡಿನ ಸಾಂಸ್ಕ್ರತಿಕ ರಾಯಬಾರಿ ಎಂಬದೇ ನಾಡಿನ ಹಿರಿಯ ಸಾಹಿತ್ಯದ ಪ್ರಾಜ್ಞರ ಅಭಿಪ್ರಾಯವೂ ಆಗಿದೆ. ತಾನು ಮಾತ್ರ ಬೆಳೆಯದೇ ತನ್ನ ಸುತ್ತಲಿನ ಪ್ರತಿಭೆಗಳನ್ನು ಬೆಳೆಸುವ ಕವಿ ಸತೀಶ ಕುಲಕರ್ಣಿ ಒಬ್ಬ ಅಜಾತಶತೃ ಸಾಹಿತಿಯಾಗಿದ್ದಾರೆ. ಕಾವ್ಯ , ನಾಟಕ , ಸಂಘಟನೆಗಳ ಮೂಲಕ ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಛಾಪನ್ನು ನಾಡಿಗೆ ಪರಿಚಯಿಸುತ್ತಿರುವ ಸಾಂಸ್ಕೃತಿಕ ರಾಯಭಾರಿ ಎಂದೇ ಹೇಳಬಹುದು.

ಮುಖ್ಯವಾಗಿ ಸತೀಶ ಕುಲಕರ್ಣಿ ಅವರು ನಾಡಿನ ಸಾಕ್ಷಿ ಪ್ರಜ್ಷೆಯೂ ಆಗಿದ್ದಾರೆ. ಅವರ ಸಾಹಿತ್ಯ , ನಾಟಕ, ಸಂಘಟನೆಯ ಬಗೆಗೆ ಹೇಳಬೇಕಾದದ್ದು ಬಹಳಷ್ಟು ಇದೆ. ಆದರೆ ಸಂಕ್ಷಿಪ್ತವಾಗಿ ಒಂದೆರಡು ಮಾತುಗಳಲ್ಲಿ ಹೇಳಿ ಮುಗಿಸಿತ್ತೇನೆ. ಸತೀಶ ಕುಲಕರ್ಣಿ ಒಬ್ಬ ಅಜಾತಶತೃ ಆಗಿದ್ದು, ಹೋರಾಟದ ಗುಣ ಅವರಲ್ಲಿದೆ. ಸಾಹಿತ್ಯ ಅಕಾಡೆಮಿಯ ಸತೀಶ ಕುಲಕರ್ಣಿಯವರಿಗೆ ’ಸಾಹಿತ್ಯಶ್ರೀ’ ಪ್ರಶಸ್ತಿ ಬಂದಾಗ, ಅವರಿಗೆ ‘ಸಾಹಿತ್ಯಶ್ರೀ’ ಬದಲು ಗೌರವ ಪ್ರಶಸ್ತಿ ಕೊಡಬಹುದಿತ್ತು ಎಂಬುದೇ ಸಾಹಿತ್ಯಾಸಕ್ತರ, ಹಾಗೂ ಅನೇಕಾನೇಕ ಸಾಹಿತಿಗಳ ಅಭಿಪ್ರಾಯವಾಗಿತ್ತು. ಏನೇ ಇರಲಿ, ಸತೀಶ ಕುಲಕರ್ಣಿ ಅವರು ಅಪ್ಪಟ ‘ಮಾನವೀಯ’ ನೆಲೆಯ ಸಾಹಿತಿ ಎಂಬುದು ನನ್ನ ಅಭಿಪ್ರಾಯವಾಗಿದೆ.

ಎಲ್ಲದಕ್ಕೂ ಮೊದಲು ಸಾಹಿತಿ, ಕಲಾವಿದರೂ ಆದ ಮತ್ತು ಹೋರಾಟಗಾರ ಸತೀಶ ಕುಲಕರ್ಣಿ ಅವರ ಒಟ್ಟು ಸಾಹಿತ್ಯದ ಹಾಗೂ ಇತರೆ ವಿಷಯಗಳ ಬಗೆಗೆ ತಿಳದುಕೊಳ್ಳೋಣ. ಅದು ಹೀಗಿದೆ ನೋಡಿ. ಕವಿ, ಕಲಾವಿದ, ನಾಟಕಕಾರ ಮತ್ತು ಹೋರಾಟಗಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.

ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡ ಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿ ಬಂತು ಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ ಮಾಡಿದವರು ಸತೀಶ ಕುಲಕರ್ಣಿ.

ಅವರ ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ಕಿಚ್ಚು’ ಅವರ ಕವನ ಸಂಕಲನಗಳು. ಅಲ್ಲದೇ ಇವೆಲ್ಲವನ್ನೂ ಕ್ರೋಢಿಕರಿಸಿದ ಬಹು ಮುಖ್ಯ ಕವನ ಸಂಕಲನವಾದ ‘ಸಮಯಾಂತರ’ ಕವನಗಳ ಸಂಕಲನವನ್ನೂ ತಂದಿದ್ದಾರೆ ಸತೀಶ ಕುಲಕರ್ಣಿಯವರು.

ಇವರಿಗೆ ಅವರಿಗೆ ವಿದ್ಯಾವರ್ಧಕ ಸಂಘದ ಪ್ರಶಸ್ತಿ, ರಾಜ್ಯ ಮಟ್ಟದ ನಿರ್ದೇಶಕ ಪ್ರಶಸ್ತಿಗಳೂ ಲಭಿಸಿವೆ. ಯುವರಂಗದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಂಗಾರಕೊಡ ನಾಟಕಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ, ವಿದ್ಯಾವರ್ಧಕ ಸಂಘದ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ನಿರ್ದೇಶಕ ಪ್ರಶಸ್ತಿಗಳೂ ಇವರಿಗೆ ಸಂದಿವೆ..!

ಸತೀಶ ಕುಲಕರ್ಣಿಯವರ ಸಮಯಾಂತರ ಕುರಿತು ನನ್ನ ಒಂದಿಷ್ಟು ಅನಿಸಿಕೆ ಹೀಗಿದೆ ನೋಡಿ. ಇವರ ಉಳಿದೆಲ್ಲಾ ಕವನ ಸಂಕಲನಗಳ ವಿಮರ್ಶೆ ನಂತರದ ದಿನಗಳಲ್ಲಿ ನೋಡೋಣ. ಈಗ ಅವರ ಸಮಯಾಂತರ ಕವನ ಸಂಕಲನದ ಬಗೆಗೆ ನೋಡೋಣ. ಅದು ಹೀಗಿದೆ ನೋಡಿ…–

“ಸಹಜ ಕವಿಯ ಸಹಜ ‘ಸಮಯಾಂತರವೂ..!” ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಸಾಹಿತ್ಯಿಕ ದೃಷ್ಟಿಯಿಂದ ಅಷ್ಟೇನೂ ಉತ್ಸಾಹದಾಯಕ ಪರಿಸರ ಹೊಂದಿರದ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಪಟದಲ್ಲಿ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಅವರು ಪ್ರಮುಖರು.

ಐದು ದಶಕಗಳಿಂದ ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವ ಸತೀಶ ಕುಲಕರ್ಣಿಯವರು ಸುಮಾರು ಇನ್ನೂರಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. “ಬೆಂಕಿ ಬೇರು”, “ನೆಲದ ನೆರಳು”, “ಒಡಲಾಳ ಕಿಚ್ಚು”, “ವಿಷಾದಯೋಗ”, “ಗಾಂಧೀಗಿಡ” ಮತ್ತು “ಸತೀಶ ಸಮಗ್ರ ಕವಿತೆಗಳು” ಅವರ ಕವನ ಸಂಕಲನಗಳು.

“ಸಮಯಾಂತರ” ಅವರ ಆಯ್ದ ಅರವತ್ತು ಕವಿತೆಗಳ ಸಂಕಲನ. ಮೊಗಸಾಲೆ ಪ್ರಕಾಶನದ ಮೂಲಕ ಸುಂದರವಾಗಿ ಪ್ರಕಟಗೊಂಡಿರುವ ಈ ಕೃತಿಗೆ ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ಅನೇಕ ಒಳನೋಟಗಳಿರುವ ಅಭ್ಯಾಸ ಪೂರ್ಣ ಮುನ್ನುಡಿ ಬರೆದಿದ್ದಾರೆ. ಸತೀಶ ಕುಲಕರ್ಣಿಯವರ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದ ವಿಮರ್ಶಿಸಿರುವ ನಂಗಲಿಯವರ ಮುನ್ನುಡಿ ಸತೀಶ ಕುಲಕರ್ಣಿಯವರ ಕಾವ್ಯಕ್ಕೆ ಉತ್ತಮ ಪ್ರವೇಶ ಒದಗಿಸುತ್ತದೆ.

(ಅಂದಹಾಗೇ ಮೊನ್ನೆ ನಾನು ನನ್ನ ಗೆಳೆಯ ‘ಬೋದಿಲೇರನ ಭಕ್ತ’ನಾದ ಬಿ.ಎಂ.ರಶೀದ್ ಕುರಿತು ಒಂದು ಲೇಖನ ಬರೆಯುವಾಗ ನನ್ನ ಇನ್ನೊಬ್ಬ ಗೆಳೆಯ ಹೇಳಿದ. ಈ ಬೋದಿಲೇರನ ಬಗೆಗೆ ಸತೀಶ ಕುಲಕರ್ಣಿ ದಶಕದ ಹಿಂದೆಯೇ ಒಂದು ಕವನ ಬರೆದಿದ್ದಾರೆ ಅದನ್ನು ಓದು ಎಂದು. ಹೌದು ಆ ಕವಿತೆಯನ್ನು ಅವರ ‘ಸಮಯಾಂತರ’ದಲ್ಲೂ ನಾನು ಓದಿದ ನೆನಪು. ಹಾಗಾದರೆ ಆ ಕವನ ಕುರಿತು ಒಂದು ಪುಟ್ಟ ಟಿಪ್ಪಣಿಯನ್ನು ಬೋದಿಲೇರನ ಕುರಿತೇ ಒಂದು ಲೇಖನ ಬರೆಯುವಾಗ ಬರೆಯುತ್ತೇನೆ.)

ಸತೀಶ ಕುಲಕರ್ಣಯರನ್ನು ಸಾಮಾನ್ಯವಾಗಿ ದಲಿತ – ಬಂಡಾಯ ಚಳುವಳಿಯೊಂದಿಗೆ ಗುರುತಿಸಿಲಾಗುತ್ತದೆ. ಅವರನ್ನು “ಬಂಡಾಯ ಕವಿ”ಯೆಂದು ಕರೆಯುವುದು ಅವರ ಕಾವ್ಯದ ಮಹತ್ವವನ್ನು ಸೀಮಿತಗೊಳಿಸುತ್ತದೆ. ಅವರ ಕವಿತೆಗಳು ಅಪಾರ ಜೀವನಾನುಭವದಿಂದ ಮೂಡಿ ಬಂದಿವೆ. ಅವರ ಕವಿತೆಗಳು ಕೃತಕವಾಗಿರದೇ ಸಹಜವಾಗಿರುವುದರಿಂದ ಅವರನ್ನು ಸಹಜ ಕವಿಯೆಂದು ಕರೆಯಬಹುದು ಎಂಬುದು ನಾಡಿನ ಅವರ ಸ್ನೇಹಿತರ ಮತ್ತು ಅವರ ಕವನಗಳ ಓದುಗರ ಅಭಿಪ್ರಾಯವೂ ಆಗಿದೆ. ಅಂತ ಹೇಳಿ ಸತೀಶ ಕುಲಕರ್ಣಿಯವರ ಬಗೆಗೆ ನನ್ನ ಈ ಒಂದರಡು ವಾಕ್ಯವನ್ನು ಮುಗಿಸಿತ್ತೇನೆ ಸದ್ಯಕ್ಕೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago