ಸುರಪುರ: ನಗರದ ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದ ಬಳಿಯಲ್ಲಿ ಲಿಂ ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ ೨೦ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಬಸವತತ್ವ ಸಮಾವೇಶ ನಡೆಸಲಾಯಿತು.
ಸಮಾವೇಶದಲ್ಲಿ ಜ್ಯೋತಿ ಪ್ರಜ್ವಲನೆಗೈದ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,ಸಗರನಾಡಿನ ಸತ್ಯ ಶುದ್ಧ ಕಾರ್ಯಕ್ರಮಗಳಲ್ಲಿ ಈ ಬಸವತತ್ವ ಸಮಾವೇಶ ಪ್ರಮುಖವಾಗಿದೆ ಎಂದರು.ಎಲ್ಲರಲ್ಲೂ ಬಸವಾದಿ ಶರಣರ ಚಿಂತನೆಯನ್ನು ಮೂಡಿಸುವ ನಿಟ್ಟಿನಲ್ಲಿ ಗುಂಡಾನೂರ ಪರಿವಾರ ಕಳೆದ ೨೦ ವರ್ಷಗಳಿಂದ ಮಾಡುತ್ತಿರುವ ಬಸವತತ್ವ ಸಮಾವೇಶ ಯಶಸ್ವಿಯಾಗಿದೆ.ಪ್ರತಿಯೊಬ್ಬರಲ್ಲೂ ಬಸವಾದಿ ಶರಣರ ತತ್ವ ಚಿಂತನೆ ಬಂದಲ್ಲಿ ಸಮಾಜದ ಏಳಿಗೆ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಭಾಗವಹಿಸಿದ್ದ ಕಲಬುರ್ಗಿ ಕೇಂದ್ರಿಯ ವಿಶ್ವವಿದ್ಯಾಲಯದ ನಿರ್ದೇಶಕರಾದ ಬಾಬುರಾವ್ ಪೂಜಾರಿ ಅನುಭಾವ ನೀಡಿ,ಬಸವಣ್ಣನವರು ಇವನಾರವ ಇವನಾರವ ಎಂದೆನಿಸದೆ ಇವನಮ್ಮವ ಎಂದು ಬಾಹ್ಯದಲ್ಲಿನ ಜನರು ನಮ್ಮವರು ಮತ್ತು ದೇಹದೊಳಗಣ ಜೀವಕೋಶಗಳು ಎಲ್ಲವು ನಮ್ಮವ ಎಂಬ ಭಾವನೆಯನ್ನು ಹೊಂದಿರುತ್ತವೆ ಆದ್ದರಿಂದ ಬಸವಣ್ಣನವರು ಎಲ್ಲರನ್ನು ಇವನಮ್ಮವ ಎಂದರು ಇದು ಎಲ್ಲರು ಅರಿತುಕೊಳ್ಳಬೇಕು ಎಂದರು.ಇನ್ನೂ ಬಸವಣ್ಣನವರ ದೃಷ್ಟಿಯಲ್ಲಿ ಎಲ್ಲ ಕೆಲಸಗಳು ಒಂದೆ ಆಗಿದ್ದರಿಂದ ಅವರು ಕಾಯಕವನ್ನಾಗಿ ಕಂಡರು ಇದುವೇ ಕಾಯಕ ಸಿದ್ಧಾಂತವಾಗಿದೆ ಎಂದರು.ಅಲ್ಲದೆ ಪ್ರತಿಯೊಬ್ಬ ಮನಷ್ಯನ ಮನಸ್ಸು ತುಂಬಾ ಭರವಸೆದಾಯಕವಾಗಿರಲಿದೆ,ಆದ್ದರಿಂದ ಯಾವುದೇ ವ್ಯಕ್ತಿ ನಾನು ಇದನ್ನು ಮಾಡಬೇಕು ಅಥವಾ ಸಾಧಿಸಬೇಕು ಎಂದು ಸತತ ಪ್ರಯತ್ನ ಮಾಡುತ್ತಿದ್ದರೆ ಅದು ಯಶಸ್ವಿ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಬಸವಾದಿ ಶರಣರು ಬರೆದ ವಚನಗಳನ್ನು ನಿತ್ಯವು ಓದಿ ಅದನ್ನು ಬದುಕಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರ ಬದುಕು ಹಸನಾಗಲಿದೆ.ನಾವೆಲ್ಲರು ವಚನಗಳನ್ನು ಕಲಿಯಲು ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆಯವರ ಪ್ರಭಾವ ತುಂಬಾ ಇದೆ,ಅದರಂತೆ ಇಲ್ಲಿರುವ ಪ್ರತಿಯೊಬ್ಬರು ಕೂಡ ವಚನಗಳನ್ನು ಓದುವ ಜೊತೆಗೆ ಮಕ್ಕಳಿಗೆ ಕಲಿಸುವಂತೆ ಕರೆ ನೀಡಿದರು.ನಾನು ಕೂಡ ರಾಜಕೀಯ ವಿಚಾರಗಳಿಂದ ಸ್ವಲ್ಪ ದೂರವಿದ್ದು ಬಸವಾದಿ ಶರಣರ ವಿಚಾರಗಳತ್ತ ಹೆಚ್ಚು ಆಸಕ್ತಿ ತೋರಬೇಕಿದೆ ಎಂದರು.
ನಂತರ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ,ಸಾಹಿತಿ ಶಿವಣ್ಣ ಇಜೇರಿ,ಬಸವ ದಿನಚರಿ ಬಿಡಗಡೆಗೊಳಿಸಿದ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ನಾಗರತ್ನಮ್ಮ ವಿ ಪಾಟೀಲ್,ಪಿಎಸ್‌ಐ ಕೃಷ್ಣಾ ಸುಬೇದಾರ,ಹೋರಾಟಗಾರ ಚನ್ನಪ್ಪ ಆನೆಗುಂದಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಮಟ್ಟದ ರಾಜ್ಯೋತ್ಸವ ಮತ್ತು ಕರವೇ ಕುವೆಂಪು ಪ್ರಶಸ್ತಿ ಪುರಸ್ಕೃತರಾದ ಪಿಎಸ್‌ಐ ಕೃಷ್ಣಾ ಸುಬೇದಾರ,ಪತ್ರಕರ್ತ ರಾಜು ಕುಂಬಾರ,ಆಯುರ್ವೇದ ತಜ್ಞ ಡಾ: ಮಹಾದೇವಪ್ಪ ಪಟ್ಟಣಶೆಟ್ಟಿ,ಸಾಹಿತಿ ಶಿವಣ್ಣ ಇಜೇರಿ, ಶಿಕ್ಷಕ ಶಿವಕುಮಾರ ಕಮತಗಿ,ಮಾಜಿ ಸೈನಿಕ ಭಿಮಣ್ಣ ನಾಯಕ ಲಕ್ಷ್ಮೀಪುರ ಇವರುಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಿಸಲಾಯಿತು.ಚನ್ನಮಲ್ಲಿಕಾರ್ಜುನ ಗುಂಡಾನೂರ ಸ್ವಾಗತಿಸಿದರು,ವಕೀಲ ಸಂಗಣ್ಣ ಗುಳಗಿ ನಿರೂಪಿಸಿದರು,ರಾಜು ಕುಂಬಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸತ್ಯಂಪೇಟೆ,ಜಗದೀಶ ನೂಲಿ,ಶರಣಪ್ಪ ಯಾಳಗಿ ಸತ್ಯಂಪೇಟೆ,ಸೂಗುರೇಶ ವಾರದ,ವಿಶ್ವನಾಥರಡ್ಡಿ ಗೊಂದೆಡಗಿ,ಪರಮಣ್ಣ ಪೂಜಾರಿ, ಯಲ್ಲಪ್ಪ ಹುಲಿಕಲ್,ಚಂದ್ರಶೇಖರ ಡೊಣೂರ,ಮಲ್ಲಣ್ಣ ಗುಳಗಿ,ಹಣಮಂತ ಕೊಂಗಂಡಿ,ಸಿದ್ದಮ್ಮ ಸೇರಿದಂತೆ ಗುಂಡಾನೂರ ಪರಿವಾರದ ಎಲ್ಲಾ ಸದಸ್ಯರು ಹಾಗು ಬಸವಾಭಿಮಾನಿಗಳಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…