ಬಿಸಿ ಬಿಸಿ ಸುದ್ದಿ

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ‘ಗಜಲ್’ಗೆ ವಿಶೇಷ ಸ್ಥಾನಮಾನವಿದೆ: ಅಲ್ಲಾಗಿರಿಜ್

  • ಕೆ.ಶಿವು.ಲಕ್ಕಣ್ಣವರ

ಹೌದು ಅಲ್ಲಾಗಿರಿರಾಜನ ಸಾಹಿತ್ಯ ಪರಂಪರೆಯಲ್ಲಿ ‘ಗಜಲ್’ಗೆ ಒಂದು ವಿಶಿಷ್ಟ ಸ್ಥಾನವಿದೆ ಎಂದೇ ನನಗೂ ಅನ್ನಿಸುತ್ತಿದೆ ಈಗೀಗ ಇವನ ‘ಗಜಲ್ ಪ್ರರಪಂಚ’ದೊಳು ಪ್ರವೇಶಿದಾಗ.

ಕೊಪ್ಪಳ ಜಿಲ್ಲೆಯ ಕನಕಗಿರಿಯ ಅಲ್ಲಾಗಿರಿರಾಜ್ ನನಗೆ ಪರಿಚಯ ಮತ್ತು ಆತ್ಮೀಯ ಗೆಳೆಯನಾಗಿದ್ದು ಅಗ್ನಿ ಶ್ರೀಧರ್ ಅವರ ವಾರಪತ್ರಿಕೆಯಾದ ‘ಅಗ್ನಿ’ಯಲ್ಲಿ. ಆಗಲೇ ಇವನೊಳಗೊಬ್ಬ ‘ಗಜಲ್ ಫಕೀರ್’ನನ್ನು ಕಂಡವನು ನಾನು. ಆ ‘ಗಜಲ್ ಫಕೀರ್’ನು ಇವನು ‘ಅಗ್ನಿ’ ವಾರಪತ್ರಿಕೆಯ ವರದಿಗಾರಿಕೆ ಬಿಟ್ಟ ನಂತರವೇ.

ಈ ಅಲ್ಲಾಗಿರಿರಾಜ್ ನಿಗೆ ಈ ‘ಗಜಲ್ ಪರಪಂಚ’ ಸಾಕಷ್ಟು ಪ್ರಶಂಸೆ ಮತ್ತು ಬಿರುದಾವಳಿಗಳನ್ನೂ ತಂದುಕೊಟ್ಟಿತು. ಹಾಗೇಯೇ ನಾನು ಇವನ ‘ಗಜಲ್ ಗಮಲ’ನ್ನು ಸವಿದವನು. ಹಾಗಾಗಿಯೇ ಈ ಅಲ್ಲಾಗಿರಿರಾಜ್ ನ ಗಜಲ್ ಕುರಿತು ಹೀಗೆಯೇ ಒಂದು ಜಲಕ್ ನ್ನು ಬರೆದೆನು ನೋಡಿ.

‘ಗಜಲ್’ ಎಂಬ ಪದವೇ ಬಲು ರೋಮಾಂಚನವಾದುದು. ಅದು ಎದೆಯೊಳಗಿನ ಮಾತು, ಪಿಸು ಮಾತು. ಸಣ್ಣ ಬಾಲೆಯ ಗೆಜ್ಜೆಯ ನಾದ ಆಗಿದೆ. ಮನುಷ್ಯನ ಬರಹ ಆರಂಭವಾದದ್ದು ಕಾವ್ಯದಿಂದಲೇ. ಸಾಹಿತ್ಯದ ಪ್ರಮುಖ ಘಟ್ಟವೇ ಕಾವ್ಯ. ಕಾವ್ಯ ಅಭಿವ್ಯಕ್ತ ಸ್ವಾತಂತ್ರ್ಯದ ಅಂಗಕೂಡಾ ಆಗಿದೆ. ಕಾವ್ಯವನ್ನು ಬೇರೆ ಬೇರೆ ಆಯಾಯಮಗಳಿಂದ ಕಟ್ಟಬಹುದು. ‘ಗಜಲ್ ಪರಪಂಚ’ದ ಭಾಷೆಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.

ಗಜಲ್ ಪರ್ಶಿಯನ್ ಭಾಷೆಯಲ್ಲಿ ಆರಂಭವಾಯಿತು. ಆದರೆ ಕುಂಟುತ್ತಾ ಕುಂಟುತ್ತಾ ಮರುಭೂಮಿಗೆ ಬಂದು ಅರಬೀ ಭಾಷೆಯಲ್ಲಿ ಪ್ರಚಲಿತವಾಯಿತು. ಮುಂದೆ 9ನೇ ಶತಮಾನದಲ್ಲಿ ಭಾರತದಲ್ಲಿ ಸೂಫಿ ಸಂತರ ಆಗಮನದಿಂದ ‘ಗಜಲ್ ಪರಪಂಚ’ ಪರಿಚಯವಾಯಿತು. ಅದು ಬಾರತದಲ್ಲಿ ಉರ್ದು ಭಾಷೆಯನ್ನು ಸೃಷ್ಟಿಮಾಡಿತು. ಒಂದು ಭಾಷೆಯನ್ನು ಸೃಷ್ಟಿಮಾಡಿದ ಕೀರ್ತಿ ಗಜಲ್‍ಗೆ ಇದೆ ಎಂದೂ ಹೇಳಬಹುದು. ಎಲ್ಲಂದಲೂ ಇದಕ್ಕೆ ಪ್ರಶಂಸೆ ಬಂದಾಗ ಅದು ರಾಜ್ಯಾಶ್ರಯದ ಪರಂಪರೆಗೆ ಹೋಯಿತು ಹಾಗೂ ಶ್ರೀಮಂತರಿಗೂ ಹತ್ತಿರವಾಯಿತು. ಆಗಲೇ ಅದು ಜನ ಸಾಮಾನ್ಯರಿಂದ ದೂರವಾಯಿತು. ಸೌಮ್ಯತೆ, ಮುಗ್ದತೆಯು ಗಜಲ್ ಭಾಷೆಯಾಗಿದೆ.

ಪರಪಂಚದಲ್ಲಿ ‘ಗಜಲ್’ ಕಡಿಮೆಯಾದರೂ ಭಾರತಲ್ಲಿ ಕಡಿಮೆಯಾಗಲಿಲ್ಲ. ಉರ್ದು ಸಾಹಿತ್ಯದಲ್ಲಿ ಗಜಲ್ ಗಟ್ಟಿಯಾಗಿ ಭಾರತದ ಬೇರೆ ಬೇರೆ ಭಾಷೆಗಳಲ್ಲಿಯೂ ಇದೆ. ಅಲ್ಲದೇ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ‘ಗಜಲ್ ಪರಂಪರೆ’ ಇದೆ ಅನ್ನಬಹುದು. ಮುಖ್ಯವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಗಜಲ್ ಹೇರಳವಾಗಿದೆ. ಬಿಜಾಪುರ ರಾಜ್ಯದವರು ‘ಗಜಲ್ ಪರಂಪರೆ’ ಕಟ್ಟಿ ಕೊಟ್ಟವರು. ಗಜಲ್ ಅಂದರೆ ತಲೆಬರಹ ಇಲ್ಲದ ಕಾವ್ಯ ಎಂದು ಹೇಳಿಕೊಳ್ಳುತ್ತಿದ್ದರು ಅವರು.

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ‘ಗಜಲ್’ಗೆ ವಿಶೇಷ ಸ್ಥಾನಮಾನವಿದ್ದೇ ಇದೆ. ‘ಗಜಲ್’ ಅನೇಕ ದೇಶ – ಭಾಷೆಯ ಜನರ ದನಿಯ ಸಂಸ್ಕೃತಿಯಾಗಿ, ರಸಿಕತೆಯ ಎದೆಯ ಹಾಡಾಗಿ, ಮುಕ್ತ ಪ್ರೇಮ – ಕಾಮದ ಅಂತರಂಗದ ಸಂವೇದನೆಯಾಗಿ, ಎಲ್ಲಕ್ಕಿಂತ ಮುಖ್ಯವಾಗಿ ‘ಸುಂದರ ಕಾವ್ಯ’ವಾಗಿ ಹಾಡುಗಾರಿಕೆಯ ನಾದ ಲಯವಾಗಿ ಸರ್ವರನ್ನು ತನ್ನ ಹತ್ತಿರಕ್ಕೆ ಸೆಳೆದಿದ್ದು ‘ಗಜಲ್’ನ ಮೋಡಿ. ಹೀನ್ನುವುದನ್ನು ಮರೆಯುವಂತಿಲ್ಲ.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಸಾಹಿತ್ಯ ಭಾರತಿ – ಸಾಹಿತ್ಯ ಚಿಂತನ -28 ರ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದೊಂದಿಗೆ ಇತ್ತೀಚಿನ ಫೆಬ್ರವರಿ 27 ರಂದು ಸಂಜೆ ಸಮರಸ ಭವನದಲ್ಲಿ ಆಯೋಜಿಸಿದ್ದರು ”ಕನ್ನಡದಲ್ಲಿ ಗಜಲ್ ಸಾಹಿತ್ಯ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಗಜಲ್ ಎಂಬುದು ಮಾದ್ಯಮವಾಗಬಾರದು. ಅದು ಜನಸಾಮಾನ್ಯರ ಎದೆಯ ಹಾಡು ಆಗಬೇಕು. ವಚನಕಾರರ ಪ್ರಭಾವ ಗಜಲ್ ಮೇಲೆ ಬಿದ್ದಿದೆ. ತತ್ವಪದಕಾರರ ವಿಶಿಷ್ಠ ಮಾರ್ಗದರ್ಶನ ಕೂಡಾ ಗಜಲ್ ಪರಂಪರೆಗೆ ಆಗಿತ್ತು. ಗಜಲ್ ಪರಂಪರೆ 19ನೇ ಶತಮಾನದ ಮೇಲೆ ನಿಶಬ್ದವಾಯಿತು. ಮತ್ತೆ ಮರು ಜೀವ ಕೊಟ್ಟವರು ಮಹಾರಾಷ್ಟ್ರದವರು. ಕನ್ನಡಕ್ಕೆ ಮತ್ತೇ ‘ಗಜಲ್ ಪರಂಪರೆ’ ಬೆಳೆದು ಬಂದಾಗ ಮೊದಲು ಗಜಲ್ ಬರೆಯಲು ಕಲಿಸಿ ಕೊಟ್ಟವರು ಹಾಗೂ ಪುಸ್ತಕ ಕೊಟ್ಟವರು ಶಾಂತರಸರವರು.

ವಿಶಿಷ್ಟವಾದ ಗಜಲ್ ಸಾಹಿತ್ಯ ಪರಂಪರೆ ಈಗ ಮತ್ತೇ ಸೃಷ್ಟಿಯಾಗಿದೆ. ಗಜಲ್ ಪರಂಪರೆ ಕನ್ನಡದಲ್ಲಿ ಗಟ್ಟಿಯಾಗಬೇಕಿದೆ. ಗಜಲ್ ಸಾಹಿತ್ಯ ಜನ ಸಾಮಾನ್ಯರಲ್ಲಿ ಮನುಷ್ಯ ಪ್ರೀತಿಯನ್ನು ಕಟ್ಟುತ್ತದೆ. ಮತ್ತು ಕಟ್ಟುತ್ತಿದೆ. ಗಜಲ್ ಸಾಮಾನ್ಯರ ಜೀವ ಮಿಡಿತದ ಮನದ ಮಾತು, ಮತ್ತು ಬದುಕಿನ ಅವಿಭಾಜ್ಯವೂ ಹೌದು. ಕತೆ, ಕಾದಂಬರಿ, ಕವಿತೆ, ಹಾಗೂ ಇನ್ನಿತರ ಸಾಹಿತ್ಯಕ್ಕೆ ಕೊಟ್ಟ ಪ್ರಾಮುಖ್ಯತೆ ಗಜಲ್‍ಗೆ ಕೊಟ್ಟಿಲ್ಲ. ‘ಗಜಲ್’ ಪ್ರಾಮುಖ್ಯತೆ ಕೊಟ್ಟವರು ‘ನವರಸ ಜೀವನದ ಅನುಭವ’ವಂತರು, ಪ್ರತಿಭಾವಂತರು ಮತ್ತು ಬದುಕಿನ ಪ್ರಜ್ಞಾವಂತರು..!

emedialine

Recent Posts

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

5 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago