ಆಳಂದ: ಪಟ್ಟಣದ ಎಸ್ಆರ್ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಪದವಿ ಕಾಲೇಜಿನ ವಿದ್ಯಾರ್ಥಿನಿ ಸುಧಾ ರಾಠೋಡ ಅಂತರ ವಿಶ್ವವಿದ್ಯಾಲಯಗಳ ಕಬ್ಬಡಿ ಪಂದ್ಯಾವಳಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಮಹಿಳಾ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾಳೆ ಎಂದು ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ ತಿಳಿಸಿದ್ದಾರೆ.
ಡಿ. ೨೬ ರಿಂದ ೨೯ರ ವರೆಗೆ ಕೇರಳದ ಕಾರೈಕುಡಿಯ ಅಳಗಪ್ಪ ವಿಶ್ವವಿದ್ಯಾಲಯಲ್ಲಿ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮಹಿಳಾ ಕಬ್ಬಡ್ಡಿ ತಂಡದಲ್ಲಿ ಗುಲ್ಬರ್ಗಾ ವಿವಿಯನ್ನು ವಿದ್ಯಾರ್ಥಿನಿ ಸುಧಾ ಪ್ರತಿನಿಧಿಸಲಿದ್ದಾಳೆ.
ವಿದ್ಯಾರ್ಥಿನಿಯ ಆಯ್ಕೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…