ಬಿಸಿ ಬಿಸಿ ಸುದ್ದಿ

ಡಿ. 25 ಕ್ಕೆ ಮಾಜಿ ಸಿಎಂ ದಿ. ಧರಂಸಿಂಗ್ 85 ನೇ ಹುಟ್ಟುಹಬ್ಬ: ಜೇವರ್ಗಿಯಲ್ಲಿ ಹಲವು ಜನಪರ ಯೋಜನೆಗಳಿಗೆ ಚಾಲನೆ

ಕಲಬುರಗಿ: ಇದೇ ಡಿ. 25 ರಂದು ಮಾಜಿ ಸಿಎಂ ಧರಂಸಿಂಗ್ ಅವರ 85 ನೇ ಹುಟ್ಟುಹಬ್ಬ, ತನ್ನಿಮಿತ್ತ ಜೇವರ್ಗಿಯಲ್ಲಿ ಅದೇ ದಿನ ಕಲ್ಯಾಣ ಮಂಟಪ, ಗ್ರಂಥಾಲಯ, ತಾಯಿ- ಮಕ್ಕಳ ಆಸ್ಪತ್ರೆಗೆ ಭೂದಾನ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳಿಗೆ ಅಡಿಗಲ್ಲು ಇಡಲಾಗುತ್ತಿದೆ, ಈ ಮಹತ್ವದ ಹಾಗೂ ಜನಪರವಾಗಿರುವಂತಹ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ, ರಾಜ್ಯಸಭೆ ಪ್ರತಿಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳುತ್ತಿದ್ದಾರೆಂದು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೇವರ್ಗಿ ಜನರ ಋಣ ತಮ್ಮ ಕುಟುಂಬದ ಮೇಲೆ ತುಂಬ ಇದೆ. ತಂದೆಯವರಾದ ದಿ. ಧರಂಸಿಂಗ್ ಅವರನ್ನು ಸತತ ಆಯ್ಕೆಮಾಡುತ್ತ ನಾಡಿನ ಸಿಎಂ ಆಗುವಂತೆ ಮಾಡಿದ್ದು ಜೇವರ್ಗಿ ಜನತೆ. ಜನರ ಸೇವೆ ಮಾಡುವ ಮೂಲಕ ಅವರಿಗೆ ನೆರವಿನ ಹಸ್ತ ಚಾಚುವ ಚಿಂತನೆ ತಮ್ಮದು. ಇದಕ್ಕಾಗಿ ಧರಂಸಿಂಗ್ ಫೌಂಡಷÀನ್‍ನಿಂದ ಇವೆಲ್ಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಲ್ಯಾಣ ಮಂಟಪ- ಗ್ರಂಥಾಲಯ- ಅನ್ನ ದಾಸೋಹ: ಕಲಬುರಗಿ- ಜೇವರ್ಗಿ ರಸ್ತೆಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಟ್ಟಿ ಸಂಗಾವಿ ಹತ್ತಿರ ಹೊಸ ಅತಿಥಿ ಗೃಹದ ಮುಂಭಾಗದಲ್ಲಿ, ಹೆದ್ದಾರಿಗೆ ಹೊಂದಿಕೊಂಡತೆಯೇ ಇರುವ ಭೂ ಪ್ರದೇಶದಲ್ಲಿ ಕಲ್ಯಾಣ ಮಂಟಪ, ಆಸ್ಪತ್ರೆ, ಗ್ರಂಥಾಲಯ, ಅನ್ನ ಆಸೋಹ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಈ ಬಾರಿ ತಂದೆಯವರಾದ ಧರಂಸಿಂಗ್ ಅವರ  85 ನೇಯ ಹುಟ್ಟುಹಬ್ಬವನ್ನು ಜನ ಅವಿರತ ಸ್ಮರಿಸುವಂತೆ ಮಾಡಲು ಈ ಕೆಳಗಿನ ಯೋಜನೆಗಳನ್ನು ಜೇವರ್ಗಿ ಮಹಾ ಜನತೆಗೆ ಕೊಡುಗೆ ರೂಪದಲ್ಲಿ ನೀಡಲಾಗುತ್ತಿದೆ ಎಂದು ಡಾ. ಅಜಯ್ ಸಿಂಗ್ ವಿವರಿಸಿದರು.

ಧರಂಸಿಂಗ್ ಕಲ್ಯಾಣ ಮಂಟಪ: ತಂದೆಯವರಾದ ಶ್ರೀ ಧರಂಸಿಂಗ್ ಅವರ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ಇದೇ ದಿನ (ಡಿ. 25 ರಂದು) ನೆರವೇರಿಸಲಾಗುತ್ತದೆ. ಕಲಬುರಗಿ- ಜೇವರ್ಗಿ ರಸ್ತೆಯಲ್ಲಿ ಬರುವ ಕಲಬುರಗಿ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಕಟ್ಟಿ ಸಂಗಾವಿ ಹತ್ತಿರ ಹೊಸ ಅತಿಥಿ ಗೃಹದ ಮುಂಭಾಗದಲ್ಲಿ, ಹೆದ್ದಾರಿಗೆ ಹೊಂದಿಕೊಂಡತೆಯೇ ಇರುವ  2 ಎಕರೆಯಲ್ಲಿ  ಬೃಹತ್ತಾದ ಹಾಗೂ ಅತ್ಯಾಧುನಿಕ ಸವಲತ್ತುಗಳಿರುವಂತಹ ಕಲ್ಯಾಣ ಮಂಟಪ ಇದಾಗಿರಲಿದೆ. ಈ ಕಲ್ಯಾಣ ಮಂಟಪ ಶ್ರೀ ಸಾಮಾನ್ಯರಿಗೆ ಉಚಿತವಾಗಿ ನೀಡಲು ಉz್ದÉೀಶಿಸಲಾಗಿದೆ.

ಧರಂಸಿಂಗ್ ಸ್ಮಾರಕ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ: ಜೇವರ್ಗಿಯಲ್ಲಿ ಸರಕಾರದಿಂದ ತಲೆ ಎತ್ತಲಿರುವ ತಾಯಿ ಹಾಗೂ ಮಕ್ಕಳ ಆರೈಕೆಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಧರಂಸಿಂಗ್ ಫೌಂಡೇಶನ್‍ನಿಂದ ಜೇವರ್ಗಿ- ಕಲಬುರಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಕಟ್ಟಿ ಸಂಗಾವಿ ಹತ್ತಿರದ ಹೊಸ ಅತಿಥಿ ಗೃಹದ ಮುಂಭಾಗದಲ್ಲಿಯೇ 2 ಎಕರೆ 10 ಗುಂಟೆ ಭೂಮಿ ದಾನವಾಗಿ ನೀಡಲಾಗುತ್ತಿದೆ. ಈ ನಿವೇಶನದಲ್ಲಿಯೇ ಆಸ್ಪತ್ರೆ ಕಟ್ಟಡ ತಲೆ ಎತ್ತಲಿದ್ದು, ಇದು ಶ್ರೀ ಧರಂಸಿಂಗ್ ಸ್ಮಾರಕ ತಾಯಿ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆಯಾಗಿ ಜೇವರ್ಗಿ ಮತಕ್ಷೇತ್ರದ ಜನತೆಗೆ ಆರೋಗ್ಯ ಸೇವೆ ನೀಡಲಿದೆ. ಈ ಸಮಾರಂಭದಲ್ಲಿ ಸರಕಾರಕ್ಕೆ 2 ಎಕರೆ 10 ಗುಂಟೆ ಎಕರೆ ಭೂಮಿಯನ್ನು ಹಸ್ತಾಂತರಿಸಲಾಗುತ್ತಿದೆ.

ಧರಂಸಿಂಗ್ ಪ್ರಸಾದ ನಿಲಯ ಹಾಗೂ ಗ್ರಂಥಾಲಯ: ಕಲಬುರಗಿ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಕಟ್ಟಿ ಸಂಗಾವಿ ಬಳಿ ಇರುವ ಹೊಸ ಐಬಿ ಹತ್ತಿರದ  ಭೂ ಪ್ರದೇಶದಲ್ಲಿ ಧರಂಸಿಂಗ್ ಅವರ ಹೆಸರಲ್ಲಿಯೇ ಉಚಿತ ಪ್ರಸಾದ ನಿಲಯ ಕೂಡಾ ಆರಂಭಿಸಲಾಗುತ್ತಿದೆ. ಆಸ್ಪತ್ರೆಗೆ ಬರುವವರು ಈ ಪ್ರಸಾದ ನಿಲಯದ ಸದುಪಯೋಗ ಪಡೆಸಿಕೊಳ್ಳಬಹುದಾಗಿದೆ.

ಇದರ ಜೊತೆಗೇ ಇಲ್ಲೊಂದು ಬೃಹತ್ತಾದಂತಹ ಗ್ರಂಥಾಲಯ ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪುಸ್ತಕಗಳು, ಇ ಜರ್ನಲ್‍ಗಳು ಇಲ್ಲಿ ಲಭ್ಯ. ಕಲಬುರಗಿ, ಬೀದರ್, ಯಾದಗಿರಿ ಸೇರಿದಂತೆ  ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಯುವಕ- ಯುವಯರಿಗೆ ಧರಂಸಿಂಗ್ ಉಚಿತ ಪ್ರಸಾದ ನಿಲಯ ಹಾಗೂ ಗ್ರಂಥಾಲಯ ಅನುಕೂಲವಾಗಲಿ ಎಂಬುದೇ ಈ ಯೋಜನೆಗಳ ಆರಂಭದ ಹಿಂದಿರುವ ಸದಿಚ್ಚೆಯಾಗಿದೆ.

ನಿರಂತರ ಅನ್ನ ದಾಸೋಹ: ಅನ್ನ ದಾಸೋಹ ಯೋಜನೆ ಅನುಷ್ಠಾನ ತುಂಬ ಸವಾಲಿನದ್ದು, ಇದನ್ನು ಜಾರಿ ಮಾಡುವ ಮುಂಚೆಯೇ ತಾವು ಅದಮ್ಯ ಚೇತನ, ಇಸ್ಕಾನ್ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿಂದ ಸಾಕಷ್ಟು ಮಾಹಿತಿ ಪಡೆದಿರುವುದಾಗಿ ಹೇಳಿದ ಡಾ. ಅಜಯ್ ಸಿಂಗ್ ಅಂತಹ ಅನುಭವದಲ್ಲಿಯೇ ತಾವು ಜೇವರ್ಗಿಯಲ್ಲಿ ತಂದೆಯವರ ಹೆಸರಲ್ಲಿ ಪ್ರಸಾದ ಸೇವೆಗೆ ಮುಂದಾಗಿದ್ದಾಗಿ ಹೇಳಿದರು. ಜೇವರ್ಗಿಯಲ್ಲಿ ಅನ್ನ ದಾಸೋಹ ನಾವಿದನ್ನ ಒಮ್ಮೆ ಶುರು ಮಾಡಿದರೆ ನಿರಂತರ ನಡೆಯುವಂತೆ ಯೋಜಿಸಿ ಮುಂದಡಿ ಇಡುತ್ತಿz್ದÉೀವೆ, ತಮ್ಮ ಎಆರ್‍ಸಿ ಸಂಸ್ಥೆಯ ಆದಾಯದ ಒಂದು ಬಾಗ ಜೇವರ್ಗಿಯಲ್ಲಿನ ಈ ಯೋಜನೆಗಳಿಗೇ ಮೀಸಲಿಡುತ್ತಿರೋದಾಗಿಯೂ ಡಾ. ಅಜಯ್ ಸಿಂಗ್ ಹೇಳಿದರು.

ತಮ್ಮ ತಂದೆಯವರಾದ ಧರಂಸಿಂಗ್ ಅವರಿಗೆ ಕ್ಷೇತ್ರದ ಜನ ಮನೆಗೆ ಬಂದಾಗ ಊಟ ಮಾಡಿಸೋದೇ ಸಂತಸದ ವಿಚಾರವಾಗಿರುತ್ತಿತ್ತು. ಅದನ್ನುಹತ್ತಿರದಿಂದ ಕಂಡಿರುವ ತಮ್ಮ ಮನದಲ್ಲಿ ನಿತ್ಯ ಅನ್ನ ದಾಸೋಹ ಯೋಜನೆ ಮೂಡಿದ್ದು ಅದನ್ನು ಸವಾಲಾಗಿ ಸ್ವೀಕರಿಸಿ ಜಾರಿಗೆ ತರುವ ಸಂಕಲ್ಪ ಮಾಡಿದ್ದಾಗಿ ಡಾ. ಅಜಯ್ ಸಿಂಗ್ ಹೇಳಿದರು. ಇವೆಲ್ಲ ಜನರ ಕಲ್ಯಾಣದ ಯೋಜನೆಗಳು, ಇದರಲ್ಲಿ ಯಾವುದೇ ಅನ್ಯ ಉz್ದÉೀಶಗಳಿಲ್ಲ. ಇವೆಲ್ಲ ಕಟ್ಟಡಗಳು ಮುಂಬರುವ 6 ರಿಂದ 8 ತಿಂಗಳಲ್ಲಿ ಪೂರ್ಣಗೊಂಡು ಕಾರ್ಯಗತಗೊಳ್ಳುವಂತೆ ಮಾಡುತ್ತೇವೆಂದರು.

ಕಳೆದ  ಒಂದೂವರೆ ದಶಕಕ್ಕೂ ಹೆಚ್ಚು ಅವಧಿಯಿಂದ ಅಂಬುಲನ್ಸ್ ಸೇವೆ, ಆರೋಗ್ಯ ಶಿಬಿರಗಳು, ಕ್ರೀಡಾ ಕೂಟಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ನಿರಂತರ ಹಾಗೂ ಅನೇಕ ಜನಪರ ಯೋಜನೆಗಳ ಮೂಲಕ ಜೇವರ್ಗಿ ಜನಮನದೊಂದಿಗೆ ಬೆಸೆದುಕೊಂಡಿರುವ ಧರಂಸಿಂಗ್ ಫೌಂಡೇಷನ್ ಇದೀಗ ಇವೆಲ್ಲ ಸೇವೆ ಯೋಜನೆಗಳೊಂದಿಗೆ ಜನಸೇವೆಯತ್ತ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು.

ಧರಂಸಿಂಗ್ ಹೆಸರಲ್ಲಿ ಶಾಲೆ, ಧರಂಸಿಂಗ್ ಮ್ಯೂಸಿಯಮ್: ಕಟ್ಟಿ ಸಂಗಾವಿ ಹತ್ತಿರದ ಭೂಪ್ರದೇಶದಲ್ಲಿಯೇ ಬರುವ ದಿನಗಳಲ್ಲಿ ಧರಂಸಿಂಗ್ ಅವರ ಹೆಸರಲ್ಲಿ ಶಾಲೆ ಆರಂಭಕ್ಕೆ ಚಿಂತಿಸಲಾಗುತ್ತಿದೆ. ಇದಲ್ಲದೆ ಇಲ್ಲಿಯೇ ಧರಂಸಿಂಗ್ ವರ ಸವಿ ನೆನಪು ಅಮರಗೊಳಿಸುವ ಉz್ದÉೀಶದಿಂದ ಅಲ್ಲಿ ಧರಂಸಿಂಗ್ ಬದಕಿನ ಸವಿಸ್ತಾರ ಮಾಹಿತಿ ಇರುವ, ಅವರು ಬಳಸಿದಂತಹ ವಸ್ತುಗಳಿರುವ ಮ್ಯೂಸಿಯಮ್ ಆರಂಭಿಸುವ ಉz್ದÉೀಶವೂ ಇದೆ. 25 ಎಕರೆ ಪ್ರದೇಶದಲ್ಲಿ ಮೊದಲ ಹಂತವಾಗಿ ಕಲ್ಯಾಣ ಮಂಟಪ, ಆಸ್ಪತ್ರೆ, ಗ್ರಂಥಾಲಯ, ಅನ್ನ ದಾಸೋಹ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. 2 ನೇ ಹಂತದಲ್ಲಿ ಶಾಲೆ, ಮ್ಯೂಸಿಯಮ್ ಯೋಜನೆ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

24 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago