ಬಿಸಿ ಬಿಸಿ ಸುದ್ದಿ

ನಿವೃತ್ತ ಸೈನಿಕರಗಿಲ್ಲ ಭೂಮಿ: ರಾಜ್ಯಾದ್ಯಂತ 4292 ಅರ್ಜಿಗಳು ಬಾಕಿ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ!!

  • # ಕುಶಲ

ದೇಶದ ರಕ್ಷಣೆಗಾಗಿ ಹಗಲಿರಳು ಶ್ರಮಿಸಿ, ನಿವೃತ್ತಿ ಬಳಿಕ ತವರಿಗೆ ಮರಳಿರುವ ಸೈನಿಕರಿಗೆ ಭೂ ಮಂಜೂರಾತಿ ಮಾಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸಿದೆ. ಭೂಮಿ ಮಂಜೂರಾತಿ ಮಾಡುವಂತೆ ಮಾಜಿ ಸೈನಿಕರು ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದರೂ ಈವರೆಗೆ ವಿಲೇವಾರಿ ಆಗಿಲ್ಲ. ಇದರಿಂದ ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ.

ಕೆಲ ಸೈನಿಕರು ಶತ್ರುಗಳ ಗುಂಡೇಟಿಗೆ ಹುತಾತ್ಮರಾದರೆ, ಇನ್ನೂ ಕೆಲವರು ಯುದ್ಧದಲ್ಲಿ ಅಥವಾ ಗಡಿ ಕಾಯುವ ವೇಳೆ ನಡೆಯವ ಹೋರಾಟ ಸಂದರ್ಭ ಅಂಗವಿಕಲರಾಗಿದ್ದಾರೆ. ನಿವೃತ್ತಿ ಬಳಿಕ ಸುಖ ಜೀವನ ನಡೆಸಲು ಬಯಸುವ ಈ ಸೈನಿಕರಿಗೆ ಇಂದಿಗೂ ಸವಲತ್ತು ಸಿಕ್ಕಿಲ್ಲ. ಕಳೆದ 3 ವರ್ಷಗಳಲ್ಲಿ ಭೂ ಮಂಜೂರಾತಿಗಾಗಿ ರಾಜ್ಯಾದ್ಯಂತ 5,790 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 1,498 ಅರ್ಜಿ ವಿಲೇಯಾಗಿದ್ದು, 4,292 ಅರ್ಜಿಗಳು ಬಾಕಿ ಉಳಿದಿವೆ.

# ಯಾವ ಜಿಲ್ಲೇಲಿ ಎಷ್ಟು ಬಾಕಿ? :  ಬೆಳಗಾವಿಯಲ್ಲಿ 486, ಚಿಕ್ಕಬಳ್ಳಾಪುರ 306, ಕೋಲಾರ 304, ಕೊಡಗು 269, ಬಳ್ಳಾರಿ 272, ಚಿಕ್ಕಮಗಳೂರು 244, ತುಮಕೂರು 238, ಹಾಸನ 206, ಶಿವಮೊಗ್ಗ 176, ರಾಮನಗರ 166, ಧಾರವಾಡ 153, ಉತ್ತರ ಕನ್ನಡ 152, ಕೊಪ್ಪಳ 123, ಬಾಗಲಕೋಟೆ 114, ಉಡುಪಿ 108, ಚಿತ್ರದುರ್ಗ 98, ಮಂಡ್ಯ 96, ಬೆಂಗಳೂರು ಗ್ರಾಮಾಂತರ 95, ವಿಜಯಪುರ 85, ಚಾಮರಾಜನಗರ 64, ದಾವಣಗೆರೆ 62, ಹಾವೇರಿ 53, ಬೀದರ್ 52, ಕಲಬುರಗಿ 48, ಗದಗ 31, ಮೈಸೂರು 26, ಬೆಂಗಳೂರು ಮತ್ತು ರಾಯಚೂರು ತಲಾ 14 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 7 ಅರ್ಜಿಗಳು ಬಾಕಿ ಉಳಿದಿವೆ.

# ಒಂದು ಅರ್ಜಿಯೂ ವಿಲೇ ಆಗಿಲ್ಲ : ಬಾಗಲಕೋಟೆ, ಬೆಳಗಾವಿ, ಬೆಂ.ಗ್ರಾಮಾಂತರ, ಬೀದರ್, ಚಾಮರಾಜನಗರ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಯಲ್ಲಿ ಇದುವರೆಗೆ ಒಂದು ಅರ್ಜಿಯೂ ವಿಲೇವಾರಿ ಆಗಿಲ್ಲ.

# 30 ವರ್ಷ ಅಲೆದಾಟ : ಕೆಲ ಸೈನಿಕರಂತೂ 30 ವರ್ಷಗಳಿಂದ ಅಲೆದರೂ ಮತ್ತು ಆರೇಳು ಬಾರಿ ನ್ಯಾಯಾಲಯಗಳ ಮೆಟ್ಟಿಲು ಏರಿದರೂ ನ್ಯಾಯ ಸಿಗದೇ ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿ ಬದುಕಿನ ಬದಲು ಕೊರಗುವಂತಾಗಿದೆ. ಅರ್ಜಿ ಸಲ್ಲಿಸಿ 15-16 ವರ್ಷ ಕಳೆದರೂ ಭೂಮಿ ಮಂಜೂರಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸಿದರೆ ‘ಇವತ್ತು ಬನ್ನಿ, ನಾಳೆ ಬನ್ನಿ’ ಎನ್ನುತ್ತಾರೆ. ಅರ್ಜಿಗಳ ವಿಲೇವಾರಿಗೆ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದರು ನವೀನ್ ನಾಗಪ್ಪ ನಿವೃತ್ತ ಸೈನಿಕ.

# ಅಧಿಕಾರಿಗಳು, ಜನಪ್ರತಿನಿಧಿಗಳ ಮೌನ : ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಅನ್ವಯ ವಾರ್ಷಿಕ ಆದಾಯ ಮಿತಿಗೆ ಒಳಪಟ್ಟು ನಿವೃತ್ತ ಸೈನಿಕರು ಭೂ ಮಂಜೂರಾತಿಗೆ ಅರ್ಹರಾಗಿರುತ್ತಾರೆ. ಆಯಾ ಜಿಲ್ಲೆಯ ಸ್ಥಳೀಯ ತಹಸೀಲ್ದಾರ್​ಗಳಿಗೆ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಯುದ್ಧದಲ್ಲಿ ಮಡಿದ ಮತ್ತು ಹೋರಾಟ ಸಂದರ್ಭದಲ್ಲಿ ಅಂಗವಿಕಲರಾದ ಸೈನಿಕರ ಪತ್ನಿ ಅಥವಾ ಅವಲಂಬಿತರ ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಬೇಕು. ಆದರೆ, ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿ ಭೂಮಿ ಪಡೆಯಲು ಸೈನಿಕರು/ಕುಟುಂಬಸ್ಥರು ಅಲೆಯುತ್ತಿದ್ದಾರೆ.

ಒಂದು ವೇಳೆ ಜಮೀನು ಲಭ್ಯವಿಲ್ಲದಿದ್ದರೆ ಸರ್ಕಾರ ರೂಪಿಸಬಹುದಾದ ವಸತಿ ಯೋಜನೆಯಡಿ ನಗರ ಪ್ರದೇಶದಲ್ಲಿ 1200 ಚದರ ಅಡಿ ಅಥವಾ ಗ್ರಾಮಾಂತರ ಪ್ರದೇಶದಲ್ಲಿ 2400 ಚದರ ಅಡಿ ನಿವೇಶನವನ್ನು ಉಚಿತವಾಗಿ ಆಯಾ ಜಿಲ್ಲೆಯಲ್ಲಿ ನಿವೃತ್ತಿ ಸೈನಿಕರಿಗೆ ಮಂಜೂರು ಮಾಡಬೇಕು. ಈ ಕಾರ್ಯವೂ ಆಗಿಲ್ಲ. ಇದನ್ನು ಬಗೆಹರಿಸಲು ಜನಪ್ರತಿನಿಧಿಗಳು ಮೌನವಹಿಸುವ ಜತೆಗೆ ಸರ್ಕಾರಕ್ಕೂ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago