ಬಿಸಿ ಬಿಸಿ ಸುದ್ದಿ

ಮೈ ನಡುಗುವ ಚಳಿಗೆ ಕರುನಾಡು ಗಢ ಗಢ —

  • ಕುಶಲ

ರಾಜ್ಯದಲ್ಲಿ ಸುರಿಯುತ್ತಿದ್ದ ಅಕಾಲಿಕ ಮಳೆಗೆ (Unseasonal Rains) ಬ್ರೇಕ್ ಬಿದ್ದಿದ್ದು, ಚಳಿ (Cold Wave) ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗಲಿದೆ. ಇನ್ನು ಮಲೆನಾಡು ಭಾಗಗಳಲ್ಲಿ ಮಧ್ಯಾಹ್ನದವರೆಗೆ ದಟ್ಟವಾದ ಮಂಜು ಆವರಿಸಿದೆ.

ಇತ್ತ ಬಿಸಿಲು ಪ್ರದೇಶಗಳಾದ ವಿಜಯಪುರ, ಗದಗ, ಬಾಗಲಕೋಟೆ, ಕಲಬುರಗಿಯಲ್ಲಿ ಆಳವಾದ ಮಂಜು ಆವರಿಸುತ್ತಿದೆ. ಉತ್ತರ ಕರ್ನಾಟಕ (North Karnataka) ಮಲೆನಾಡು ಭಾಗವಾಗಿ ಬದಲಾದಂತೆ ಕಾಣಿಸುತ್ತಿದೆ. ನಿರಂತರ ಮಳೆಯಿಂದ ಕಂಗೆಟ್ಟಿದ್ದ ಜನರು, ಇದೀಗ ಚಳಿ(Winter)ಯಿಂದ ಮನೆಯಲ್ಲಿ ಇರುವಂತಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಚಳಿ ಶುರುವಾಗಿದೆ. ಉತ್ತರ ಭಾರತದ ಹಲವೆಡೆ ಶೀತಲ ಅಲೆಯ ವಾತಾವರಣವಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ತಾಪಮಾನ ಇರಲಿದೆ. ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಲಿದೆ.

ಡಿಸೆಂಬರ್ ಅರ್ಧ ತಿಂಗಳು ಚಳಿಯ (Winter) ಪ್ರಮಾಣ ಏರಿಕೆಯಾಗುತ್ತಿದೆ. ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ಗಢ ಗಢ ನಡುಗುತ್ತಿತ್ತು ಅನ್ನೋ ಮಾತಿದೆ. ಅದೇ ರೀತಿ ರಾಜ್ಯದ ಎಲ್ಲ ಭಾಗದಲ್ಲಿ ಶೀತಲ ಗಾಳಿ (Cold War)ಆರಂಭಗೊಂಡಿದೆ.

# ರಾಜ್ಯದ ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ): ಬೆಂಗಳೂರು 26-13, ಮೈಸೂರು 28-14, ಚಾಮರಾಜನಗರ 28-15, ರಾಮನಗರ 27-14, ಮಂಡ್ಯ 28-14, ಬೆಂಗಳೂರು ಗ್ರಾಮಾಂತರ 26-13, ಚಿಕ್ಕಬಳ್ಳಾಪುರ 23-17, ಕೋಲಾರ 25-13, ಹಾಸನ 26-13, ಚಿಕ್ಕಮಗಳೂರು 26-12, ದಾವಣಗೆರೆ 28-14, ಶಿವಮೊಗ್ಗ 29-14, ಕೊಡಗು 28-13, ತುಮಕೂರು 26-13

ಉಡುಪಿ 33-21, ಮಂಗಳೂರು 32-21, ಉತ್ತರ ಕನ್ನಡ 30-16, ಧಾರವಾಡ 28-14, ಹಾವೇರಿ 29-14, ಹುಬ್ಬಳ್ಳಿ 29-14, ಬೆಳಗಾವಿ 28-14, ಗದಗ 28-14, ಕೊಪ್ಪಳ 28-15, ವಿಜಯಪುರ 28-14, ಬಾಗಲಕೋಟ 29-14, ಕಲಬುರಗಿ 29-14, ಬೀದರ್ 27-12, ಯಾದಗಿರಿ 30-16, ರಾಯಚೂರ 29-15, ಬಳ್ಳಾರಿ 28-15

ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಠ 26 ಮತ್ತು ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಚಳಿಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾತ್ರಿ ಎಂಟು ಗಂಟೆ ಆಗುತ್ತಲೇ ಸಿಲಿಕಾನ್ ಸಿಟಿ ರಸ್ತೆಗಳು, ಮಾರುಕಟ್ಟೆಗಳು ಖಾಲಿ ಖಾಲಿ ಆಗುತ್ತಿವೆ. ಚಳಿಗೆ ಹೆದರಿದ ಜನರು ಬೇಗ ಬೇಗ ಮನೆ ಸೇರುಕೊಳ್ಳುವಂತಾಗಿದೆ.

# ಭಾರೀ ಹಿಮಪಾತವಾಗುವ ಸಾಧ್ಯತೆ: ಡಿಸೆಂಬರ್ 17 ಮತ್ತು 19 ರ ನಡುವೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಹಿಮದ ಸಾಧ್ಯತೆಯಿದೆ. ಡಿಸೆಂಬರ್ 23 ಮತ್ತು ಡಿಸೆಂಬರ್ 25 ರ ನಡುವೆ ಕಣಿವೆ ಮತ್ತು ಲಡಾಖ್‌ನಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹರಿಯಾಣ, ಪಂಜಾಬ್, ಚಂಡೀಗಢ ಮತ್ತು ಉತ್ತರ ರಾಜಸ್ಥಾನವನ್ನು ಡಿಸೆಂಬರ್ 18 ರಿಂದ 20 ರ ನಡುವೆ ಸಂಪೂರ್ಣವಾಗಿ ಆವರಿಸುವ ನಿರೀಕ್ಷೆಯಿದೆ.

ಕಾಶ್ಮೀರದಲ್ಲಿ ಶೀತದ ಅಲೆಯ ಪ್ರಾರಂಭದೊಂದಿಗೆ ಕಣಿವೆಯ ಹೆಚ್ಚಿನ ಸ್ಥಳಗಳಲ್ಲಿ ರಾತ್ರಿಯ ಉಷ್ಣತೆಯು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಕಣಿವೆಯಲ್ಲಿ ಕನಿಷ್ಠ ತಾಪಮಾನದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೇಳಿದೆ.

# ಎರಡ್ಮೂರು ದಿನಗಳಲ್ಲಿ ಕನಿಷ್ಠ ತಾಪಮಾನ ದಾಖಲೆ: ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ, ಮುಂದಿನ ನಾಲ್ಕು ದಿನಗಳಲ್ಲಿ ವಾಯುವ್ಯ ಭಾರತ ಮತ್ತು ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago