ಕಲಬುರಗಿ : ನಗರದ ಹಿಂದಿ ಪ್ರಚಾರ ಸಭಾಗಣದ ಆವಣದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಶಲೋಮ್ ಎವರ್ ಲಾಸ್ಟಿಂಗ್ ಲೈಫ್ ಚರ್ಚ್ ವತಿಯಿಂದ ಶಾಂತಿಯ ಕ್ರಿಸ್‌ಮಸ್ ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೩ ಗಣ್ಯರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕರ್ನಾಟಕ ಸಂಘಟನೆ ವೇದಿಕೆ ಸಂಸ್ಥಾಪಕ ಗುರುರಾಜ ಸಿ . ಬಂಡಿ, ಸಾಹಿತಿ ಸರೋಜಾದೇವಿ ನಿಣೇಕರ್, ಕ್ರೀಡಾಪಟು ಮನೋಹರ ಬೆರನೂರ, ಕ್ರಿಶ್ಚಿಯನ್ ಮಿನಿಸ್ಟರಿಯ ಮುಖಂಡ ಸ್ವಾಮಿದಾಸ್ ಬಿ., ವಕೀಲ ರೇವಣಸಿದ್ದಪ್ಪ ಬಾವಿಕಟ್ಟಿ, ಪತ್ರಕರ್ತರಾದ ಅಕ್ರಮ್‌ಪಾಷಾ ಮೋಯಿನ್, ಸುಧೀರ ಕೋಟಿ, ಸಂಗಮೇಶ ಹಿರೇಮಠ, ಸಮಾಜ ಸೇವಕರಾದ ರೇಶ್ಮಾ, ಓಂಕಾರ, ಪದ್ಮಾ, ಕಾಶಿನಾಥ ಮಾಳಗೆ, ರಮೇಶ ಕಟ್ಟಿ , ಸಂಚಾರ ಠಾಣೆ ಸಬ್‌ಇನ್‌ಸ್ಪೆಕ್ಟರ್ ಭಾರತಿಬಾಯಿ ಧನ್ನಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಲೋಮ್ ಎವರ್‌ಲಾಸ್ಟಿಂಗ್ ಲೈಫ್ ಮಿನಿಸ್ಟರೀಸ್‌ನ ಸಂಸ್ಥಾಪಕ ಅಧ್ಯಕ್ಷ ಬಿಷಪ್ ಗೋಪಾಲ ಶಲೋಮ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಿವಮೊಗ್ಗದ ಬಿಷಪ್ ಕುಮಾರ್ ಅವರು ಹಬ್ಬದ ಸಂದೇಶ ನೀಡಿದರು. ಮುಂಬೈನ ಫಾಸ್ಟರ್ ಪುಂಡಲೀಕ ಲೋಂಡೆ ಸಾನ್ನಿಧ್ಯ ವಹಿಸಿದ್ದರು. ಚಿಕ್ಕೋಡಿಯ ಬಿಷಫ್ ಉಮಯಾ ಹಾಗೂ ರೆವರೆಂಡ್ ಶ್ರೀನಿವಾಸ ಕಲ್ಡಗಿ, ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ಪಾಲಿಕೆ ಸದಸ್ಯರಾದ ವಿಶಾಲ ನವರಂಗ, ರಾಗಮ್ಮ ಇನಾಮದಾರ್, ಶಂಭುಲಿಂಗ ಬಳಬಟ್ಟಿ, ಲಿಂಗರಾಜ ತಾರಪೈಲ್, ಸಚಿನ್ ಫರತಾಬಾದ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…