ಬಿಸಿ ಬಿಸಿ ಸುದ್ದಿ

‘ಹೈದರಾಬಾದ್ ಕರ್ನಾಟಕ’ದಲ್ಲಿ ‘ಗಜಲ್‌’ಗಳ ಘಮಲು

  • ಕೆ.ಶಿವು.ಲಕ್ಕಣ್ಣವರ

ಕವಿ ಚಿದಾನಂದ ಸಾಲಿ ಅವರ ಗಜಲ್‌ವೊಂದರ ದ್ವಿಪದಿ ಹೀಗಿದೆ–

ಹೆಂಡತಿ ಮೋಹವ ಕರಗಿಸಲೆಂದೇ ಹುಟ್ಟಿದಳು ಮಗಳು ಈ ಭವ ದಾಹವ ಮೆರುಗಿಸಲೆಂದೇ ಹುಟ್ಟಿದಳು ಮಗಳು ಈ ಸಾಲುಗಳು ನನಗೆ ಇಷ್ಟವಾದವು. ಸಾಲಿ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದರು ಕೆಲವರು.

‘ಗಜಲ್‌ ಎಂದರೆ ಹೆಂಗಸರೊಡನೆ ಮಾತನಾಡುವುದು, ಪ್ರೇಮ, ಮೋಹ–ಅನುರಾಗವನ್ನು ವ್ಯಕ್ತಪಡಿಸುವುದು ಎನ್ನುತ್ತಾರೆ; ನಿಜವೇ?’ ಎಂದು ಕೇಳಿದರು.

‘ಗಜಲ್‌ ಪ್ರೀತಿ, ಪ್ರೇಮ, ವಿಪ್ರಲಂಭ, ಶೃಂಗಾರಗಳಿಗಷ್ಟೇ ಮೀಸಲಾಗಿಲ್ಲ. ಬದುಕಿನ ಸಮಗ್ರ ವಿಷಯಗಳನ್ನು ಒಳಗೊಳ್ಳುವ ಕಾವ್ಯವಾಗಿದೆ. ಗಜಲ್‌ ಮುಖ್ಯವಾಗಿ ಅಂತರಂಗದ ಕಾವ್ಯವಾಗಿದೆ. ಪ್ರತಿಮೆ, ರೂಪಕ, ಸಂಕೇತಗಳಲ್ಲಿಯೇ ಅದು ಮಾತನಾಡುತ್ತದೆ’ ಎಂದು ವಿವರಣೆ ನೀಡಿದವರು ಕವಿ ಚಿದಾನಂದ ಸಾಲಿಯವರು.

ಮಾನವನಾದರೇ ಸಾಕು ಮಹಾತ್ಮನಾಗುವುದು ಯಾರಿಗೆ ಬೇಕು ಇದ್ದ ನೆಲವನರಿತರೆ ಸಾಕು ಇಲ್ಲದ ಸಗ್ಗಸುಖ ಯಾರಿಗೆ ಬೇಕು ಕವಿ ಜಂಬಣ್ಣ ಅಮರಚಿಂತ ಅವರ ಗಜಲ್‌ನ ಈ ಸಾಲುಗಳನ್ನು ಅವರು ಉಲ್ಲೇಖಿಸಿದರು ಕವಿ ಚಿದಾನಂದ ಸಾಲಿಯವರು.

ಕನ್ನಡದಲ್ಲಿನ ಗಜಲ್‌ ಕೃಷಿ ಕುರಿತು ಧ್ಯಾನಿಸತೊಡಗಿದೆ. ಕನ್ನಡ ಗಜಲ್‌ ಪ್ರಕಾರಕ್ಕೆ ಹೈದರಾಬಾದ್‌ ಕರ್ನಾಟಕ ಪ್ರದೇಶದ ಕೊಡುಗೆ ಅಪಾರವಾದದು. ಈ ಭಾಗದಲ್ಲಿ ಗಜಲ್‌ ರಚಿಸುವವರು ಹೇರಳವಾಗಿದ್ದಾರೆ.

‘ಹೈದರಾಬಾದ್‌ ಕರ್ನಾಟಕದಲ್ಲೇ ಏಕೆ ಗಜಲ್‌ ಸಾಹಿತ್ಯ ಉಜ್ವಲವಾಗಿದೆ’ ಎನ್ನುವವರ ಕುತೂಹಲವನ್ನು ಚಿದಾನಂದ ಸಾಲಿ ಅವರು ಸಂಪಾದಿಸಿರುವ ‘ಕನ್ನಡ ಗಜಲ್‌’ ಪುಸ್ತಕ ನನ್ನ ಮನ ತಣಿಸಿತು.

ಹೈದರಾಬಾದ್‌ ಕರ್ನಾಟಕವು ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಈ ಪ್ರದೇಶದ ಆಡಳಿತ ಭಾಷೆ ಮತ್ತು ಶಿಕ್ಷಣ ಮಾಧ್ಯಮ ಉರ್ದುವಾಗಿತ್ತು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಿತ್ತು. ಈ ಭಾಗದಲ್ಲಿ ಕನ್ನಡ ಗಜಲ್ ಪರಂಪರೆ ಹೆಚ್ಚು ಬೆಳೆಯುವಂತಾಯಿತು. ಇದಕ್ಕೆ ಬಹುಮುಖ್ಯ ಕಾರಣ; ‘ರಾಜಕೀಯ ಸಂದರ್ಭ’.

ಕನ್ನಡದಲ್ಲಿ ಎಪ್ಪತ್ತರ ದಶಕದಲ್ಲಿ ಗಜಲ್‌ಗಳ ರಚನೆ ಪ್ರಾರಂಭವಾಯಿತು; ಅದು ಶಾಂತರಸರಿಂದ. ಉರ್ದುವಿನ ಒಡನಾಟ ಮತ್ತು ಮೂಲ ಉರ್ದು ಗಜಲ್‌ಗಳ ರಸಾಸ್ವಾದನೆಯಿಂದಾಗಿ ಇವರು ಗಜಲ್‌ ರಚನೆಗಿಳಿದರು.

ರಚನಾದೃಷ್ಟಿಯಿಂದ ಕನ್ನಡದ ಗಜಲ್‌ ಪರಂಪರೆಗೆ ಇವರೇ ಮೂಲ. ಆದರೆ ಪೂರ್ಣ ಪ್ರಮಾಣದ ಗಜಲ್‌ ಸಂಕಲನವನ್ನು ಮೊದಲು ಪ್ರಕಟಿಸಿದವರು ಮಾತ್ರ ಇವರ ಮಗಳು ಎಚ್‌.ಎಸ್‌.ಮುಕ್ತಾಯಕ್ತ. ಶಾಂತರಸ ಅವರು ಗಜಲ್‌ ಸಂಕಲನವೊಂದರ ಮುನ್ನುಡಿಯಲ್ಲಿ ಹೀಗೆಯೇ ಬರೆಯುತ್ತಾರೆ…:

‘ಹಾಗೆ ನೋಡಿದರೆ ಗಜಲ್‌ನ ಮೂಲ ಪಾರ್ಸಿಯಾಗಿದೆ. ಪಾರ್ಸಿಯಿಂದ ಗಜಲ್‌ ಉರ್ದುವಿಗೆ ಬಂದಿತಾದರೂ ಪಾರ್ಸಿ ಭಾಷಾ ಗಜಲಿನ ಮಕ್ಕಿ ಕಾ ಮಕ್ಕಿ ಆಗಲಿಲ್ಲ. ಉರ್ದು ಗಜಲ್‌ ಕವಿಗಳು ಅದಕ್ಕೆ ಭಾರತೀಯ ಸಂಸ್ಕೃತಿಯ ಸ್ಪರ್ಶ ನೀಡಿ ಅದನ್ನು ಅಪ್ಪಟ ಭಾರತೀಯ ಗಜಲ್‌ ಆಗಿ ಬೆಳೆಸಿದರು.

ಇದರಂತೆಯೇ ಉರ್ದು ಗಜಲ್‌ಗಳು ಕನ್ನಡಕ್ಕೆ ಬಂದವು. ಇವೂ ಕೂಡ ಉರ್ದು ಗಜಲ್‌ನ ಮಕ್ಕಿ ಕಾ ಮಕ್ಕಿ ಆಗದೇ ಕನ್ನಡ ನೆಲ ಮೂಲ ಸಂಸ್ಕೃತಿ ಮತ್ತು ಅದರ ಜಾಯಮಾನವನ್ನು ಅರಗಿಸಿಕೊಂಡು ಮೈಗೂಡಿಸಿಕೊಂಡು ಕನ್ನಡದ್ದೇ ಗಜಲ್‌ಗಳಾಗಿ ರೂಪು ತಳೆದವು’.

ಗಜಲ್‌ ಎಂದರೆ ಪ್ರೀತಿ–ಪ್ರೇಮ ಕುರಿತಾಗಿಯೇ ಬರೆಯಲಾಗಿರುವ ಮತ್ತು ಬರೆಯಬೇಕಾಗಿರುವ ಕಾವ್ಯ ಪ್ರಕಾರ ಎನ್ನುವುದು ಸರಿಯಲ್ಲ. ಸಾಂಪ್ರದಾಯಿಕ ವಸ್ತು ಮತ್ತು ವ್ಯಾಪ್ತಿ ಮೀರಿ ಗಜಲ್‌ ತುಂಬಾ ದೂರ ಕ್ರಮಿಸಿದೆ.

ಇದರ ಗೇಯತೆ, ಲಯ, ಕೋಮಲ ವಿನ್ಯಾಸದಲ್ಲಿ ವರ್ತಮಾನಕ್ಕೆ ‘ಮುಖಾಮುಖಿ’ ಆಗುವುದಿಲ್ಲ ಎನ್ನುವ ಮತ್ತೊಂದು ಆಕ್ಷೇಪವಿದೆ. ಆದರೆ ಗಜಲ್‌ಗಳಲ್ಲಿ ಬಂಡಾಯ ಮತ್ತು ಸಾಮಾಜಿಕತೆಯ ಧ್ವನಿಯೂ ಆಗಿದೆ. ನವ್ಯಕಾವ್ಯದ ಪ್ರಮುಖ ಸ್ಥಾಯಿಭಾವವಾದ ಆತ್ಮಾವಲೋಕನ ಮತ್ತು ಆತ್ಮವಿಮರ್ಶೆಯೂ ಆಗಿದೆ.

ಆನಂದ ಝಂಜರವಾಡ ಅವರ ಗಜಲ್‌ನ ಈ ಸಾಲುಗಳನ್ನೇ ನೋಡಿ…:ಡಾ.ಕಾಶೀನಾಥ ಅಂಬಲಗೆ ಅವರ ಗಜಲ್‌ನ ದ್ವಿಪದಿ ಹೀಗಿದೆ ನೊಡಿ…:ನಮ್ಮ ಹೊಲ ನಮ್ಮ ನೆಲ ನಮ್ಮದೇ ಬೀಜ ಎಂತಹ ಕಾಲ ಹೋಗ್ತಾ ಹೋಗ್ತಾ ಬುಸ್‌ಗುಡ್ತಾ ಬುಷ್‌ ನೋಡಿದ್ದೇ ಕೆಟ್ಟ ಕಾಲ

ಡಾ.ದಸ್ತಗೀರಸಾಬ್ ದಿನ್ನಿ ಅವರು ಬರೆಯುತ್ತಾರೆ. ಧರ್ಮದ ಹೆಸರಲಿ ತಲೆಗಳುರುಳುತಿವೆ ನಿತ್ಯ ನಂದನವನದಿ ಶಾಂತಿ ಸೌಹಾರ್ದತೆಯ ಹೂಗಳರಳಿಸಬೇಕು ಉರ್ದು ಗಜಲ್‌ಗಳು ಸಾಮಾನ್ಯರ ಹೃದಯ ತಟ್ಟಲು ಹಿಂದಿ ಚಿತ್ರರಂಗದ ಕೊಡುಗೆ ಅನನ್ಯವಾಗಿದೆ. ಚಿತ್ರ ಸಾಹಿತಿಗಳಾದ ಸಾಹಿರ್‌ ಲೂಧಿಯಾನ್ವಿ, ಮಜ್ರೂಹ್‌ ಸುಲ್ತಾನ್‌ಪುರಿ, ಹಸ್ರತ್‌ ಜೈಪುರಿ, ಪ್ರದೀಪ್‌, ನೌಶಾದ್‌, ಗುಲ್ಜಾರ್‌ ಮುಂತಾದವರು ಸಿನಿಮಾಗಳಿಗೆ ಹಾಡು ಬರೆಯಬೇಕಾದಾಗಲೆಲ್ಲ ಛಂದೋಬದ್ಧವಾದ, ರಸಪೂರ್ಣವಾದ ಗಜಲ್‌ಗಳನ್ನೇ ಬರೆದುಕೊಟ್ಟರು. ಇದರ ಫಲವಾಗಿ ಎಲ್ಲರಿಗೂ ಗಜಲ್‌ನ ಶೈಲಿ ಮತ್ತು ಸೌಂದರ್ಯದ ಸಾಮೀಪ್ಯ ದೊರೆಯುವಂತಾಯಿತು.

ಕನ್ನಡದಲ್ಲಿ ಗಜಲ್‌ ಕವಿಗಳು ಇದ್ದಾರೆ; ಹಾಡುವವರು ಇಲ್ಲ. ‘ಸ್ಪರ್ಶ’ ಸಿನಿಮಾಕ್ಕೆ ಪ್ರೊ.ಇಟಗಿ ಈರಣ್ಣ ರಚಿಸಿದ ‘ಚಂದಕ್ಕಿಂತ ಚಂದ ನೀನೇ ಸುಂದರ’ ಹಾಗೂ ‘ಆ್ಯಕ್ಸಿಡೆಂಟ್’ಗೆ ಬಿ.ಆರ್‌.ಲಕ್ಷ್ಮಣರಾವ್‌ ಅವರ ‘ಬಾ, ಮಳೆಯೇ ಬಾ, ‘ಅಷ್ಟು ಬಿರುಸಾಗಿ ಬಾರದಿರು ನಲ್ಲೆ ಬರಲಾಗದಂತೆ’ ಎನ್ನುವ ಗಜಲ್‌ಗಳು ಕೇಳುಗರ ಕಿವಿಯನ್ನು ತುಂಬಿಕೊಂಡಿವೆ.

ಆದರೂ ಚಿತ್ರರಂಗ ಗಜಲ್‌ಗಳ ಬಳಸಿಕೊಳ್ಳಲು ಮನಸ್ಸು ಮಾಡಿಲ್ಲ. ಸುಗಮ ಸಂಗೀತಗಾರರು ಪ್ರೇಮಗೀತೆ, ಭಾವಗೀತೆ, ಕನ್ನಡಗೀತೆಗಳನ್ನು ಹಾಡುವುದರಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಅವರು ಗಜಲ್‌ಗಳಿಗೂ ಒಲಿದರೆ ಸಹೃದಯಿಗಳು ಆಸ್ವಾದಿಸುತ್ತಾರೆ.

ಈಗಿನ ಸಾಹಿತ್ಯಿಕ ಸಂದರ್ಭದಲ್ಲಿ ಗಜಲ್‌ ರಚನೆಗೆ ಉತ್ತೇಜನ ಸಿಗುವಂತಾಗಬೇಕು. ಆಗ ಅದರ ನುಡಿಗಟ್ಟು, ಲಯಗಾರಿಕೆ ಮತ್ತು ವಿಶೇಷ ಲಾಲಿತ್ಯ ಹೊಸರೂಪದಲ್ಲಿ ಅಭಿವ್ಯಕ್ತಗೊಳ್ಳಲು ಸಾಧ್ಯವಾಗುತ್ತದೆ. ತರುಣ–ತರುಣಿಯರು ಇದರೆಡೆಗೆ ಆಕರ್ಷಿತರಾಗಿ ರಚನೆ, ಪ್ರಯೋಗ, ಚರ್ಚೆಗಳು ಶುರುವಾಗುತ್ತವೆ.

ಗಜಲ್‌ಗೆ ಕನ್ನಡ ಕಾವ್ಯದ ಆಳ–ಅಗಲ–ಎತ್ತರಗಳು ದಕ್ಕುತ್ತದೆ. ಗಜಲಿನ ಆಳ– ಅಗಲ–ಎತ್ತರಗಳು ವರ್ತಮಾನದ ಕನ್ನಡ ಕಾವ್ಯಕ್ಕೂ ದಕ್ಕುವಂತಾಗಿ ಅದಕ್ಕೆ ಹೊಸ ಸಂವೇದನೆಯ ಸ್ಪರ್ಶ ನೀಡಲು ಸಾಧ್ಯವಾಗುತ್ತದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago