ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ 2020 ನೇ ಸಾಲಿನ ಕನ್ನಡನಾಡು ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 2021ರಲ್ಲಿ ಪ್ರಕಟಗೊಂಡ ಹನ್ನೊಂದು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ನಗರದ ಶ್ರೀಮತಿ ವೀರಮ್ಮಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ 26/ 12 /2021 ರಂದು ಮುಂಜಾನೆ 10:00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
2020 ನೇ ಸಾಲಿನ “ಕನ್ನಡನಾಡು ಸಾಹಿತ್ಯ “ಪ್ರಶಸ್ತಿ ಹಿರಿಯ ಸಾಹಿತಿಗಳಾದ ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರಿಗೆ ನೀಡಲಾಗಿದ್ದು, ಮಹಿಳಾ ಸಾಹಿತ್ಯ ವಿಭಾಗದ ಮಾಪಮ್ಮಾ ಶಂಭುಲಿಂಗ ಸ್ಮಾರಕ ಹೊಸ್ಮನಿ ಸಾಹಿತ್ಯ ಕೃತಿ ಪ್ರಶಸ್ತಿ ಕೆ ನೀಲಾ ಅವರು ರಚಿಸಿರುವ ನೆಲದ ನಂಟು ಕೃತಿಗೆ, ಕಾವ್ಯ ಸಂಕಲನ ವಿಭಾಗದ ಕಸ್ತೂರಿ ಮತ್ತು ಎಸ್.ಜಿ.ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಸಿದ್ದರಾಮ ಹೊನ್ನಕಲ್ ಅವರ ಹೊನ್ನ ಮಹಲ್, ಹಾಗೂ ಪ್ರಭುಲಿಂಗ ನಿಲೂರೆ ಅವರ ಮನಸೇ ಬದುಕು ನಿನಗಾಗಿ ಕೃತಿಗೆ, ಸಂಕೀರ್ಣ ವಿಭಾಗದ ಬಸಮ್ಮ ತುಳಜಪ್ಪ ಉಪಳಾoವಕರ್ ಸ್ಮಾರಕ ಸಾಹಿತ್ಯ ಪ್ರಶಸ್ತಿಗೆ ಡಾ. ಶ್ರೀನಿವಾಸ ಶಿರನೂರಕರರವರ ಕಾಲಕ್ಷೇಪ ಕೃತಿಗೆ, ಕಥಾಸಂಕಲನ ವಿಭಾಗದ ಶರಣಮ್ಮ ವೀರಭದ್ರಪ್ಪ ಅಕ್ಕೋಣೆ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಆನಂದ ಗೋಬ್ಬಿಯವರ ನಿರುದ್ಯೋಗಕ್ಕೆ ಹಣವಾದ ಅಪ್ಪ ಕೃತಿಗೆ ಲಭಿಸಿದೆ. ಪ್ರಶಸ್ತಿಯು ನಗದು ಮತ್ತು ಸನ್ಮಾನವನ್ನು ಒಳಗೊಂಡಿದೆ.
ಇದೇ ಸಂದರ್ಭದಲ್ಲಿ ಪ್ರೊ. ಶಾಶ್ವತ್ ಸ್ವಾಮಿ ಮುಕುಂದಮಠವರ ಕನ್ನಡ ಸಾಹಿತ್ಯ ದರ್ಪಣ, ಡಾ. ಮೀನಾಕ್ಷಿ ಬಾಳಿಯವರ ತತ್ವಪದದೊಳಗಿನ ತಿಳಿವು, ಡಾ. ವಿಜಯಶ್ರೀ ಸಬರದ ಅವರ ಲೋಕ ಜಾನಪದ, ಮಹಾದೇವಯ್ಯ ಕರದಳ್ಳಿ ಅವರ ಸ್ವತಂತ್ರ ಸಂಗ್ರಾಮದ ಕ್ರಾಂತಿವೀರರು, ರಾಜಶೇಖರ ಕುಕ್ಕುಂದಾ ಅವರ ಸೋನಪಾಪಡಿ, ಪ್ರಮೀಳಾ ಜನಪ್ಪಗೌಡ ಅವರ ಬಾಳೊಂದು ಪುಸ್ತಕ, ಗಿರೀಶ ಜಾಕಪೂರೆ ಅವರ ವ್ಯಾಮೋಹದ ಸುಳಿಯಲ್ಲಿ, ಡಾ.ಶರಣಬಸಪ್ಪ ವಡ್ದನಕೇರಿ ಅವರ ಪುಸ್ತಕ ದರ್ಪಣ, ಡಾ.ಮಲ್ಲಿಕಾರ್ಜುನ ಬಾಗೋಡಿ ಯವರ ಕಲ್ಯಾಣ ಕರ್ನಾಟಕದ ಚಿತ್ರಕಲೆ,ರೇಣುಕಾ ಹೇಳವರ ಅವರ ಕಿಟಕಿಯಂಚಿನ ಮೌನ, ಪ.ಮಾನು ಸಗರ ಅವರ ಪರಿಸರ ಪ್ರಜ್ಞೆ,ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ತಿನ ಸದಸ್ಯರಾದ ಶಶಿಲ್ ನಮೋಶಿ ಅವರು ನೆರವೇರಿಸಲಿದ್ದು,ಮುಖ್ಯ ಅತಿಥಿಗಳಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ದಯಾನಂದ ಅಗಸರ ಅವರು ಆಗಮಿಸಲಿದ್ದಾರೆ,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ ಬಸವರಾಜ ಡೊಣ್ಣೂರ, ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ ಹೊಸಮನಿ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣೆ ಯವರು ವಹಿಸಲಿದ್ದಾರೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಪಾಧ್ಯಕ್ಷರಾದ ಸ್ವಾಮಿರಾವ ಕುಲಕರ್ಣಿ ಅವರು ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…