ಬಿಸಿ ಬಿಸಿ ಸುದ್ದಿ

ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರದಿಂದ ಗುರುವಂದನಾ ಕಾರ್ಯಕ್ರಮ

ದಾವಣಗೆರೆ: ನಗರದ ಶಿವಯೋಗಾಶ್ರಮದ ಆವರಣದಲ್ಲಿಂದು ಬೆಳಿಗ್ಗೆ ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರದಿಂದ ಗುರುಪೂರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಯದೇವ ಸ್ವಾಮೀಜಿ, ಮಲ್ಲಾಡಿಹಳ್ಳಿ ಸ್ವಾಮೀಜಿ ಹಾಗೂ ವಿಠಲದಾಸ್ ಶಣೈ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತುಹಿರಿಯ ಪತ್ರಕರ್ತ ಸುಭಾಷ್ ಬಣಗಾರ್ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಯೋಗಪಟು ಶರಣಾರ್ಥಿ ಬಕ್ಕೇಶ್ ಅಧ್ಯಕ್ಷತೆ ವಹಿಸಿದ್ದರು. ಯೋಗ ಗುರು ಮಂಜುನಾಥ ಸಿ. ಅವರನ್ನು ಸಂದರ್ಭದಲ್ಲಿ ಯೋಗ ಬಂಧುಗಳು ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್ ಅವರು, ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಜೊತೆಗೆ, ಅವರ ಮುಂದಿನ ಜೀವನಕ್ಕೆ ಭದ್ರ ಬುನಾದಿ ಹಾಕುವ ಗುರುಗಳಿಗೆ ಸನ್ಮಾನಿಸಿದರೆ, ಗುರುವಿನ ಎಲ್ಲಾ ಶಿಷ್ಯರಿಗೆ ಸನ್ಮಾನಿಸಿದಂತಾಗುತ್ತದೆ. ಗುರವಿಗೆ ಸಲ್ಲುವ ಗೌರವ ಆತನ ಶಿಷ್ಯಂದಿರಿಗೂ ಸಲ್ಲಿಸಿದಂತಾಗುತ್ತದೆ. ಗುರುವಿನಲ್ಲಿ ತಾಳ್ಮೆ, ತ್ಯಾಗ ಮನೋಭಾವ, ಸರಳತೆ ಇರುತ್ತದೆ. ಗುರು ಶ್ರೇಷ್ಠ ಧ್ಯೆಯ ಹೊಂದಿರುತ್ತಾನೆ. ತನಗಿಲ್ಲದಿದ್ದರೂ, ಪರರಿಗೆ ಒಳ್ಳೆಯದಾಗಲಿ ಎಂಬ ಉದಾರತೆ ಗುರುವಿನಲ್ಲಿರುತ್ತದೆ. ಶಿಷ್ಯನು ಎಷ್ಟೆ ತಪ್ಪು ಮಾಡಿದರೂ, ಸಹನೆಯಿಂದ ಅದನ್ನು ತಿದ್ದುವ ಗುಣ ಹೊಂದಿರುತ್ತಾನೆ. ತಾನು ಎಷ್ಟೇ ಕಷ್ಟ ಅನುಭವಿಸುತ್ತಿದ್ದರೂ, ಅದನ್ನು ತೋರ್ಪಡಿಸಿಕೊಳ್ಳದೆ, ತಮ್ಮ ಶಿಷ್ಯವರ್ಗಕ್ಕೆ ಸದಾ ಉತ್ತಮ ಮಾರ್ಗದರ್ಶನ ನೀಡುತ್ತಿರುತ್ತಾನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸದಾ ಅಧ್ಯಯನದೊಂದಿಗೆ, ಚಿಂತನಶೀಲನೂ ಆಗಿರುತ್ತಾನೆ. ಬಹುಮುಖ ವ್ಯಕ್ತಿತ್ವ ಗುರುವಿನಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಸಮಾಧಾನದಿಂದ, ನಗುನಗುತ್ತಲೆ ಉತ್ತರ ನೀಡಿ, ಅವರಿಗೆ ತೃಪ್ತಿ ಪಡಿಸುತ್ತಾನೆ. ಆದರ್ಶ, ಮಾದರಿ ವ್ಯಕ್ತಿಯಾಗಿ ಗುರು ಕಂಡು ಬರುತ್ತಾರೆ ಎಂದು ನುಡಿದರು.

ಗುರುಪೂರ್ಣಿಮೆಯ ದಿನದಂದು ಎಲ್ಲರೂ ತಮ್ಮ ಗುರುಗಳನ್ನು ನೆನೆಸಿಕೊಳ್ಳುತ್ತಾರೆ. ಪ್ರತಿದಿನವೂ ಗುರುವಿನ ಆಶೀರ್ವಾದ ಪಡೆದು, ಅವರ ಮಾರ್ಗದರ್ಶನದಲ್ಲಿ ನಡೆದರೆ, ಇಡೀ ಜೀವನವೇ ಸಂತೋಷದಿಂದ ಕೂಡಿರುತ್ತದೆ. ನಾವು ಎಷ್ಟೇ ಉನ್ನತ ಮಟ್ಟಕ್ಕಿ ಹೋದರೂ ಅದು ಗುರುವಿನ ಪಾಠದಿಂದ, ಆಶೀರ್ವಾದಿಂದ ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶರಣಾರ್ಥಿ ಬಕ್ಕಪ್ಪ ಮಾತನಾಡಿ, ಅರಿವೇ ಗುರು ಎನ್ನುತ್ತಾರೆ. ಗುರುವಿನ ಮಾರ್ಗದರ್ಶನ, ಆಶೀರ್ವಾದದ ಜೊತೆಗೆ ನಮ್ಮ ಅರಿವು ನಮಗಾಗಬೇಕು ಎಂದು ಹೇಳಿದರು. ಯೋಗಪಟು ಉಮಾಶಂಕರ್, ಶ್ರೀಮತಿ ನೀಲಮ್ಮ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯೋಗ ಬಂಧುಗಳಾದ ಜಿ.ಎಸ್.ಈರಣ್ಣ, ಶಾಂತಕುಮಾರ್ ಸೋಗಿ, ಸಿದ್ದೇಶ್ ಬಿ.ಎಸ್, ಸಂಜಯಕುಮಾರ್, ವಿರೇಶ್ ಬಸಾಪುರ, ಅನಿತಾ ಜಾಧವ್, ಭಾರತಿ ಬೇತೂರು, ಗಂಗಾ ಸುಧಾಕರ್, ಗೌರಮ್ಮ, ಸಾವಿತ್ರಮ್ಮ, ಸುಲೋಚನಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago