ಬಿಸಿ ಬಿಸಿ ಸುದ್ದಿ

ಕನಕಪುರದಲ್ಲಿ ಆಯುಷ್‌ ಅಮೃತವರ್ಷಿಣಿ ಆಯುಷ್‌ ಫಾರ್ಮ್‌ ಪ್ರಾಜೆಕ್ಟ್‌ ಉದ್ಘಾಟನೆ

ಬೆಂಗಳೂರು: ಆಧುನಿಕ ಪ್ರಪಂಚದಲ್ಲಿ ಮಾನವನಿಗೆ ಜೀವನಶೈಲಿ ಕಾಯಿಲೆಗಳು ಹೆಚ್ಚಾಗಿ ಕಾಡುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ ಹೇಳಿದರು.

ಇಂದು ಕನಕಪುರದಲ್ಲಿ ಆಯುಷ್‌ ತತ್ವಗಳನ್ನು ಉತ್ತೇಜಿಸುವ ಆಯುಷ್‌ ಅಮೃತವರ್ಷಿಣಿ ಫಾರ್ಮ್‌ ಲ್ಯಾಂಡ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಪ್ರಪಂಚದಲ್ಲಿ ಜೀವನಶೈಲಿ ವ್ಯತ್ಯಯದಿಂದ ಆಗುವ ಕಾಯಿಲೆಗಳು ಹೆಚ್ಚಿನ ಜನರನ್ನು ಭಾಧಿಸುತ್ತಿವೆ. ಇದಕ್ಕೆ ನಾವು ನಮ್ಮ ಪಾರಂಪರಿಕ ಪದ್ದತಿಯನ್ನು ಅನುಸರಿಸುವುದನ್ನ ಬಿಟ್ಟಿರುವುದು ಪ್ರಮುಖ ಕಾರಣ. ಬಿಎಸ್‌ಆರ್‌ ಡೆವೆಲಪರ್ಸ್‌ ಆಯುಷ್‌ ಅಮೃತವರ್ಷಿಣಿ ಕೃಷಿ ಭೂಮಿಯನ್ನು ಖರೀದಿಸುವ ವಿನೂತನವಾದ ಯೋಜನೆಯನ್ನು ಪ್ರಾರಂಭಿಸಿರುವುದು ಬಹಳ ಸಂತಸದ ವಿಷಯ.

ಬೆಂಗಳೂರಿನಿಂದ ಕೇವಲ 1 ಗಂಟೆಯ ಪ್ರಯಾಣ ಮಾಡಿ ಜನರು ತಮ್ಮದೇ ಆದ ಜಮೀನು ಹೊಂದುವ ಆಲೋಚನೆ ಶ್ಲಾಘನೀಯ. ಈ ಜಮೀನಿನಲ್ಲಿ ಸಾವಯವ ಕೃಷಿಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಜೀವನಶೈಲಿಯ ಒತ್ತಡದ ಕಾಯಿಲೆಗಳು ದೂರವಾಗುವ ಅವಕಾಶ ದೊರೆಯಲಿದೆ ಎಂದು ಹೇಳಿದರು.

ಬಿಎಸ್‌ಆರ್‌ ಡೆವಲಪರ್ಸ್‌ನ ಮಾಲೀಕರಾದ ರಾಮೋಜಿ ಗೌಡ ಅವರು ಮಾತನಾಡಿ, ಕನಕಪುರದಲ್ಲಿ 105 ಎಕರೆ ಕೃಷಿ ಜಮೀನಲ್ಲಿ ಪ್ರಾರಂಭಿಸಲಾಗಿರುವ ಯೋಜನೆ ಇದಾಗಿದೆ. ಆಯುಷ್‌ ಧೀಮ್‌ ಫಾರ್ಮ್‌ ಲ್ಯಾಂಡ್‌ ಆಲೋಚನೆಯ ಕಾರಣೀಕರ್ತರು ನಾವು ಎನ್ನುವುದು ನಮ್ಮ ಹೆಮ್ಮೆಯಾಗಿದೆ.

ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಗ್ರಾಮೀಣ ಸೊಗಡಿನ ಜೀವನದ ಪರಿಚಯ ಮಾಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. 7 ಏಕರೆ ಜಮೀನಿನಲ್ಲಿ ಕ್ಲಬ್‌ಹೌಸ್‌ ನಿರ್ಮಾಣವಾಗುತ್ತಿದೆ. ಈ ಫಾರ್ಮ್‌ ಲ್ಯಾಂಡ್‌ ಕೊಂಡುಕೊಳ್ಳುವವರಿಗೆ ಕ್ಲಬ್‌ ಸದಸ್ಯತ್ವ ಉಚಿತವಾಗಿದೆ.

ಇಂದು ಭೂಮಿ ಖರೀದಿಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಶೇಕಡಾ 50 ರಷ್ಟು ಫಾರ್ಮ್‌ ಲ್ಯಾಂಡ್‌ ಖರೀದಿಗೆ ಗ್ರಾಹಕರು ಬುಕ್‌ ಮಾಡಿದ್ದಾರೆ. ಇಂದು ಬುಕ್‌ ಮಾಡಿದ 20 ಕ್ಕೂ ಹೆಚ್ಚು ಗ್ರಾಹಕರುಗಳಿಗೆ ಆಯುಷ್‌ ಅಮೃತವರ್ಷಿಣಿ ವತಿಯಿಂದ ಉಚಿತ ದುಬೈ ಪ್ರವಾಸದ ಟಿಕೆಟ್‌ ಗನ್ನು ನೀಡಲಾಯಿತು.

ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ತಮ್ಮದೇ ಆದ ಕೃಷಿ ಭೂಮಿಯನ್ನು ಹೊಂದುವ ಸದಾವಕಾಶ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಆರ್‌ ಡೆವಲಪರ್ಸ್‌ ಸಂಸ್ಥೆಯ ನೌಕರರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago