ಕಲಬುರಗಿ: ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯ ಶ್ರೀ ದಂಡಗುಂಡ ಬಸವೇಶ್ವರ ಹಾಗೂ ಶ್ರೀ ವೀರ ಆಂಜನೇಯನ ದೇವಸ್ಥಾನದಲ್ಲಿ ನೂತನ ದಂಡಗುಂಡ ಬಸವಣ್ಣ ಮುರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜುರುಗಿತು.
ಕಾರ್ಯಕ್ರಮದಲ್ಲಿದಿವ್ಯ ಸಾನ್ನಿಧ್ಯ ವಹಿಸಿದ ವೀರ ತಪಸ್ವಿ ಶ್ರೀ ಷ.ಬ್ರ.ವೀರಭದ್ರ ಶಿವಾಚಾರ್ಯರು ಕಟ್ಟಿಮಠ ಕಡಗಂಚಿ, ಶೇಕ್ ರೋಜಾ ಶ್ರೀಗಳು ಮಾತನಾಡಿ ಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಮೂಲ ದೇವರಲ್ಲಿ ತಂದೆ ತಾಯಿ ಗುರು ಹಿರಿಯರಲ್ಲಿ ಭಕ್ತಿ ಇರಿಸಿ ಎಂದರು.
ಕಡಗಂಚಿಯ ಶ್ರೀ ಪಂಪಾಪತಿ ಸಮ್ಮುಖ ವಹಿಸಿದ್ದರು. ಜ್ಯೋತಿಷ್ಯ ರತ್ನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಿರೇಮಠ ಸುಂಟನೂರ ನೇತೃತ್ವ ವಹಿಸಿದ್ದರು. ನಾಡಿನ ಹೆಸರಾಂತ ಯುವ ಪ್ರವಚನ ಕಾರರಾದ ಸುಂಟನೂರ ಹಿರೇಮಠದ ಶ್ರೀ ಬಂಡಯ್ಯ ಶಾಸ್ತ್ರಿಗಳು ಸೊಲ್ಲಾಪುರದ ಸಿದ್ಧರಾಮೇಶ್ವರ ಕುರಿತು ಹನ್ನೆರಡನೇ ಶತಮಾನದ ಬದುಕಿನ ಎಲ್ಲ ಶರಣರು ಕಾಯಕ ನಿರತರಾಗಿದ್ದರು ಕಾಯಕದಿಂದ ಕೈಲಾಸ ಕಂಡರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರಾದ ಶಾರದಾ ವಿ ಸಿ ಪಾಟೀಲ್ , ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಚಣ್ಣ ಗಟಬ್ಯಾಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೈ ಸಿಂಗ್ ಠಾಕೂರ್, ಯುವ ಕಾಂಗ್ರೆಸ್ ಮುಖಂಡ ಮಂಜುಳ ಪಾಟೀಲ, ದೇವಸ್ಥಾನ ಕಮಿಟಿಯ ಉಪಾಧ್ಯಕ್ಷರಾದ ನಾಗರಾಜ್ ಪಾಟೀಲ ಆಲೂರು, ಸದಸ್ಯರಾದ ಶರಣು ಗುತ್ತೇದಾರ ಉಪಸ್ಥಿತರಿದ್ದರು.
ಕಲಾವಿದರಾದ ಕಾಳಪ್ಪ ಬಂಟ್ನಳ್ಳಿ, ಸಂತೋಷ್ ಕುಮಾರ್ ಕೋಡ್ಲಿ ಸಂಗೀತ ನೀಡಿದರು. ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು. ವಿಜಯನಗರ ಕಾಲೋನಿಯ ಸದ್ಭಕ್ತರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…