ಬಿಸಿ ಬಿಸಿ ಸುದ್ದಿ

ಜೆಡಿಎಸ್ ನಿಂದ ಜೀವನದಿ ಉಳಿಸುವ ಸಂಕಲ್ಪ ಯಾತ್ರೆ

ಬೆಳಗಾವಿ: ಸಂಕ್ರಾಂತಿಯ ಬಳಿಕ ಜೆಡಿಎಸ್‌ ರಾಜ್ಯದ ಎಲ್ಲ ಜೀವನದಿಗಳನ್ನೂ ಉಳಿಸುವ ಸಂಕಲ್ಪ ಯಾತ್ರೆ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಧರ್ಬದಲ್ಲಿ ಇ-ಮೀಡಿಯಾಲೈನ್ ಕುಮಾರಸ್ವಾಮಿ ಅವರ ಸಂದರ್ಶನವನ್ನು ಇ-ಮೀಡಿಯಾಲೈನ್ ನ ನಮ್ಮ ವರದಿಗಾರ ಕುಶಲರಿಗೆ ಫೋನ್ ಸಂಧರ್ಶನ ಕೊಟ್ಟರು. ಆ ಸಾರಾಂಶವು ಹೀಗಿದೆ. ಅದು ಇಲ್ಲಿದೆ ನೋಡಿ..!

ವಿಧಾನಮಂಡಲ ಅಧಿವೇಶನದ ನಡುವೆ ಇ-ಮೀಡಿಯಾಲೈನ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ‘ರಾಜ್ಯಾದ್ಯಂತ ನಡೆ ಯುವಯಾತ್ರೆಯಲ್ಲಿ ಪ್ರತೀ ನದಿಯಿಂದ ಕಲಶಗಳಲ್ಲಿ ನೀರು ತಂದು ಪೂಜೆ ಮಾಡಿ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ವಿಚಾರದಲ್ಲಿ ನಮ್ಮ ಬದ್ಧತೆ ಏನು ಎಂಬುದನ್ನೂ ಅಂದು ಜನರ ಮುಂದಿಡಲಾಗುವುದು’ ಎಂದಿದ್ದಾರೆ.

ಮೇಕೆದಾಟು ಯೋಜನೆ ಅನುಷ್ಠಾನ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆಗೆ ಮುಂದಾಗಿರು ವಾಗಲೇ ಎಚ್‌ಡಿಕೆ ಅವರ ಈ ಮಾತುಗಳು ಕುತೂಹಲ ಮೂಡಿಸಿವೆ.

# ಸಂದರ್ಶನದ ಸಾರಾಂಶ: ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಫಲಿತಾಂಶ ಯಾಕೆ ಬರಲಿಲ್ಲ?ನಾವು ಶಕ್ತಿ ಮೀರಿ ಶ್ರಮ ಹಾಕಿದ್ದೆವು. ಆದರೆ ಕೊನೇ ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ದುಡ್ಡಿನ ಮುಂದೆ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲಬೇಕಾಯಿತು. ಸೋಲಿ ನಿಂದ ಜೆಡಿಎಸ್‌ ಕುಸಿದಿಲ್ಲ.

ಜೆಡಿಎಸ್‌ ಭದ್ರಕೋಟೆಯಲ್ಲೇ ಸೋಲು ಹಿನ್ನಡೆಯಂತಾಗಲಿಲ್ಲವೇ?ಸೋಲು-ಗೆಲುವು ಸಹಜ. ಈಗಿನ ಸೋಲು ತಾತ್ಕಾಲಿಕ ಹಿನ್ನಡೆ. 2023ರ ವಿಧಾನಸಭೆ ಚುನಾ ವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಪಕ್ಷದ ಶಕ್ತಿ ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ.

ಜೆಡಿಎಸ್‌-ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿತ್ತಾ?ಅದರ ಅನಿವಾರ್ಯ ನಮಗಿಲ್ಲ. ಕಾಂಗ್ರೆಸ್‌ ನಾಯಕರು ಪದೇ ಪದೆ ಆ ರೀತಿ ಆರೋಪ ಮಾಡಿ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ಮಾಡಿದರು. ಅವರಿಗೆ ಅದೊಂದು ಅಂಟು ರೋಗ. ಯಾವ ಪಕ್ಷದ ಜತೆಯೂ ಮೈತ್ರಿ, ಒಪ್ಪಂದ ಇಲ್ಲ. ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನನ್ನದೇ ಆದ ಕಾರ್ಯಕ್ರಮಗಳೊಂದಿಗೆ ಜನರ ಮುಂದೆ ಹೋಗುತ್ತೇನೆ.

ಪರಿಷತ್‌ ಚುನಾವಣೆ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾ?ಆ ರೀತಿ ಅಂದುಕೊಂಡರೆ ಭ್ರಮೆಯಷ್ಟೇ, ಯಾವ ದಿಕ್ಸೂಚಿಯೂ ಅಲ್ಲ. 2016ರ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನ ಗೆದ್ದಿತ್ತು, 2018ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಕ್ಕೆ ಇಳಿದಿತ್ತು. ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ನಡೆಯುವ ಚುನಾವಣೆಯೇ ಬೇರೆ. ಮತದಾರರಿಂದ ನಡೆಯುವ ಚುನಾವಣೆಯೇ ಬೇರೆ.

ಜೆಡಿಎಸ್‌ ಮುಳುಗುತ್ತಿರುವ ಹಡುಗು ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲಾ?ಸಿದ್ದರಾಮಯ್ಯ ಅವರಿಗೆ ತಲೆ ನಿಲ್ಲುತ್ತಿಲ್ಲ. ಅವರ ಮಾತುಗಳು ಅಹಂಕಾರದ ಪರಮಾವಧಿ. ಇವೆಲ್ಲದಕ್ಕೂ ರಾಜ್ಯದ ಜನರೇ ಪಾಠ ಕಲಿಸಲಿದ್ದಾರೆ. ಸಿದ್ದ ರಾಮಯ್ಯಗೆ ಜೆಡಿಎಸ್‌ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುವಂತಾಗಿದೆ. ಮೈಸೂರಿನಲ್ಲಿ ಏನೇನೋ ಪ್ರಯತ್ನ ಪಟ್ಟರೂ ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಆಗಲಿಲ್ಲ. ಯಾರೋ ಕೆಲವು ನಾಯಕರನ್ನು ಸೆಳೆದರೆ ಪಕ್ಷ ವನ್ನು ಮುಳುಗಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆ ಬರಲಿ ಅವರೇ ಮುಳುಗಿ ಹೋಗ್ತಾರೆ.

ಮಂಡ್ಯ, ತುಮಕೂರು ಸೋಲು ಪ್ರಸ್ತಾವಿಸಿದ್ದಾರಲ್ಲಾ ?ಪರಿಷತ್‌ ಚುನಾವಣೆಯಲ್ಲಿ ಎರಡು ಕಡೆ ಜೆಡಿಎಸ್‌ ಸೋಲು ಅನುಭವಿಸಿದೆ ಎಂದು ಕೆಲವರು ವಿಕೃತ ಆನಂದ ಪಡುತ್ತಿದ್ದಾರೆ. ಅವರ ಸಾಚಾತನ ಏನು ಎಂಬುದನ್ನು ಬಯಲು ಮಾಡುತ್ತೇನೆ.

ಜೆಡಿಎಸ್‌ನಲ್ಲಿ ಪಕ್ಷ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆಯಲ್ಲಾ?ನಮ್ಮಲ್ಲಿ ಅಧಿಕಾರ ಪಡೆದು ಬೇರೆ ಪಕ್ಷಕ್ಕೆ ಹೋಗುವುದು ಮೊದಲಿ ನಿಂದಲೂ ನಡೆದಿದೆ. ಇದರಲ್ಲಿ ಅಚ್ಚರಿ ಇಲ್ಲ. ಆದರೆ ನೂರಾರು ನಾಯಕ ರನ್ನು ಬೆಳೆ ಸುವ ಶಕ್ತಿ ಜೆಡಿಎಸ್‌ಗಿದೆ. ಕೆಲವು ನಾಯಕರು ಬಿಟ್ಟು ಹೋಗಿರ ಬಹುದು; ಲಕ್ಷಾಂತರ ಕಾರ್ಯ ಕರ್ತರು, ಮುಖಂಡರು ನಮ್ಮ ಜತೆಗಿದ್ದಾರೆ. ಪಕ್ಷ ಮತ್ತೆ ಖಂಡಿತ ಪುಟಿದೇಳಲಿದೆ.ಇತ್ತೀಚೆಗೆ ನೀವು ಹಾಗೂ ಯಡಿ ಯೂರಪ್ಪ ಹತ್ತಿರವಾಗುತ್ತಿದ್ದೀರಲ್ಲಾ?.

ಆ ರೀತಿ ಏನೂ ಇಲ್ಲ. ವೈಯಕ್ತಿಕ ಸ್ನೇಹ ಬೇರೆ, ರಾಜಕೀಯವೇ ಬೇರೆ: ಜೆಡಿಎಸ್‌ ಸಂಘಟನೆ ಹೇಗಿದೆ?: ತಳಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಆರಂಭಿಸಲಾಗಿದೆ. ಇತ್ತೀಚೆಗೆ ಬಿಡದಿಯಲ್ಲಿ ನಡೆಸಿದ ಮೊದಲ ಹಂತದ ಕಾರ್ಯಾಗಾರ ಯಶಸ್ವಿಯಾಗಿದ್ದು ಎರಡನೇ ಹಂತ ಸದ್ಯದಲ್ಲೇ ಪ್ರಾರಂಭವಾಗಲಿದೆ. ಬೂತ್‌ ಮಟ್ಟದಲ್ಲಿ ಜೆಡಿಎಸ್‌ ಪಡೆ ರಚನೆ ಮಾಡಲಾಗುವುದು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago