ಬಿಸಿ ಬಿಸಿ ಸುದ್ದಿ

ನೇರ ಮಾರುಕಟ್ಟೆ ಬಗ್ಗೆ ಯಾವುದೇ ಮಾಹಿತಿಗೂ ಸಿದ್ಧ ಎಂಎಲ್‍ಎಂ ಶರತ್

ಬೆಂಗಳೂರು: ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ಕುರಿತು ಯಾವುದೇ ಮಾಹಿತಿ ಬೇಕಿರಲಿ, ತರಬೇತಿ ಬೇಕಿರಲಿ, ಅದರಲ್ಲಿ ಕಾನೂನುಗಳು, ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳು, ಕಾಲ ಕಾಲಕ್ಕೆ ಅದರಲ್ಲಿ ಅಪ್‍ಡೇಟ್‍ಗಳು ಬೇಕೇ?ಹೌದು ಎಂದಾದವರು ಎಂಎಲ್‍ಎಂ ಶರತ್ ಅವರನ್ನು ಸಂಪರ್ಕಿಸಬಹುದು.ಇವರು ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ಕುರಿತು ಆಸಕ್ತರಿಗೆ ಊಟದೊಂದಿಗೆ ಉಚಿತ ತರಬೇತಿ ನೀಡಲಿದ್ದಾರೆ. ಜತೆಗೆ ಉಚಿತವಾಗಿ ಅಖಿಲ ಭಾರತ ನೆಟ್‍ವರ್ಕರ್ಸ್ ಅಸೋಸಿಯೇಷನ್‍ನ ಸದಸ್ಯತ್ವ ಮಾಡಿಸಿ ಉಚಿತವಾಗಿ ಗುರುತಿನ ಚೀಟಿಯನ್ನು ಕೊಡಲಿದ್ದಾರೆ.

ಎಂಎಲ್‍ಎಂ ಇಂಡಸ್ಟ್ರಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಐದು ವರ್ಷಗಳ ಹಿಂದೆ ನೇರ ಮಾರುಕಟ್ಟೆ/ನೆಟ್‍ವರ್ಕರ್ಸ್ ದಿನವನ್ನು ಆಚರಿಸಲಾಯಿತು.

ಎಂಎಲ್‍ಎಂ ಶರತ್ ಅವರು ಐದು ವರ್ಷಗಳ ಹಿಂದೆ ಒಬ್ಬಂಟಿಯಾಗಿ ಆರಂಭಿಸಿದ ನೇರ ಮಾರುಕಟ್ಟೆ ದಿನ ಇಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದು ಶರತ್‍ರ ಹೆಗ್ಗಳಿಕೆ. ನೆಟ್‍ವರ್ಕರ್‍ಗಳಿಗೆ ಒಂದು ದಿನ ಇರಬೇಕೆಂಬುದು ಶರತ್ ಅವರ ಕನಸಾಗಿತ್ತು. ಇದೀಗ ಅದನ್ನು ನನಸು ಮಾಡಿದ್ದಾರೆ. ನೆಟ್‍ವರ್ಕರ್ಸ್‍ಗೆ ಶಿಕ್ಷಣ ನೀಡುವುದು, ಸರಕಾರದಿಂದ ಸವಲತ್ತುಗಳು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಶರತ್ ಹೋರಾಟ ನಡೆಸುತ್ತಿದ್ದಾರೆ.

ನೇರ ಮಾರುಕಟ್ಟೆಯಲ್ಲಿ ಪಿಜಿ ಡಿಪೆÇ್ಲಮಾ ಮಾಡಿರುವ ಶರತ್, ಇವರು ಕಲಿಕಾಸಕ್ತರಿಗೆ ನೇರ ಮಾರುಕಟ್ಟೆಯ ಕುರಿತು ಅಗತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇವರಿಗೆ ಬರೋಬ್ಬರಿ 17 ವರ್ಷಗಳ ಅನುಭವ ಇದೆ. ನೇರ ಮಾರುಕಟ್ಟೆಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಲು ಬಯಸುವ ಹಲವರಿಗೆ ಇವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇವರು ಕನ್ನಡದಲ್ಲಿ ಯೂಟ್ಯೂಬ್ ಮುಖಾಂತರ ಹೆಚ್ಚು ವಿಡಿಯೋಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದಿದ್ದಾರೆ. ಎಂಎಲ್‍ಎಂ ಶರತ್ ಎಂದು ಹುಡುಕಿದರೆ ಇವರ ವಿಡಿಯೋಗಳು ಬರುತ್ತವೆ.

ಇವರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರನ್ನು ನೇರ ಮಾರುಕಟ್ಟೆಯಲ್ಲಿ ತಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ ಸ್ಫೂರ್ತಿಯಾಗಿದ್ದಾರೆ. ಇವರು ಕನ್ನಡದಲ್ಲಿ ಯೂಟ್ಯೂಬ್ ಮುಖಾಂತರ ಹೆಚ್ಚು ವಿಡಿಯೋಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದಿದ್ದಾರೆ. ಎಂಎಲ್‍ಎಂ ಶರತ್ ಎಂದು ಹುಡುಕಿದರೆ ಇವರ ವಿಡಿಯೋಗಳು ಬರುತ್ತವೆ.

ಇವರು ನೇರ ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಕೆಲಸ ಮಾಡಿದ್ದರೂ, ಇವರು ಈಗ ನೇರ ಮಾರುಕಟ್ಟೆಯಲ್ಲಿ ಪಿಜಿ ಡಿಪೆÇ್ಲಮಾವನ್ನು ವ್ಯಾಸಂಗ ಮಾಡುತ್ತಿರುವುದು ವಿಶೇಷ ಎಂದೇ ಹೇಳಬಹುದು. ಇವರು ಅತಿ ದೊಡ್ಡ ವಿದ್ಯಾರ್ಥಿ ಬಳಗವನ್ನು ಹೊಂದಿದ್ದು, ಇವರನ್ನು ಅನೇಕ ಜನರು ಗುರುವಾಗಿ ಸ್ವೀಕರಿಸಿದ್ದಾರೆ. ಇವರನ್ನು ಮಾದರಿಯಾಗಿಟ್ಟುಕೊಂಡು ಹಲವಾರು ಜನರು ಇವರ ದಾರಿಯಲ್ಲಿ ನಡೆಯುತ್ತಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

18 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago