ಬಿಸಿ ಬಿಸಿ ಸುದ್ದಿ

ಸ್ವಾತಂತ್ರ್ಯ ಸೇನಾನಿ, ಕರ್ನಾಟಕ ಉಕ್ಕಿನ ಮನುಷ್ಯ, ಗಾಂಧಿವಾದಿ ಮತ್ತು ಗುರುಕುಲ ಪ್ರವರ್ತಕ ಗುದ್ಲೆಪ್ಪ ಹಳ್ಳಿಕೇರಿ..!

  • ಕೆ.ಶಿವು.ಲಕ್ಕಣ್ಣವರ

ಸ್ವಾತಂತ್ರ್ಯ ಚಳುವಳಿಯ ಸೇನಾನಿ, ಕರ್ನಾಟಕ ಉಕ್ಕಿನ ಮನುಷ್ಯ ಹಿರಿಯ ಗಾಂಧಿವಾದಿ ಮತ್ತು ಗುರುಕುಲ ಪ್ರವರ್ತಕರೆಂದು ಖ್ಯಾತರಾದ ಗುದ್ಲೆಪ್ಪ ಹಳ್ಳಿಕೇರಿ ಅವರು ಹಾವೇರಿ ಜಿಲ್ಲಾ ಹೊಸರಿತ್ತಿ ಗ್ರಾಮದ ರೈತಾಪಿ ವ್ಯಾಪಾರಸ್ಥರಾದ ವೀರಪ್ಪ ವೀರಮ್ಮನವರ 5ನೇ ಮಗನಾಗಿ ೧೯೦೬ ಜೂನ್ ೬ ರಂದು ಜನಿಸಿದರು. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ಅಣ್ಣ ಸಂಗಣ್ಣನ ಮಾರ್ಗದರ್ಶನದಲ್ಲಿ ಬೆಳೆದವರು.

ಪ್ರಾಥಮಿಕ ಶಿಕ್ಷಣವನ್ನು ಹೊಸರಿತ್ತಿಯಲ್ಲಿ, ಮಾಧ್ಯಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪಡೆದಿದ್ದಾರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಂಧೀಜಿ ಯವರ ಮತ್ತು ಧಾರವಾಡ ಮುರುಘಾಮಠದ ಪೂಜ್ಯ ಮೃತ್ಯುಂಜಯಪ್ಪ ಸ್ವಾಮಿಗಳ ವಿಚಾರ ಧಾರೆ, ಪ್ರಭಾವಕ್ಕೆ ಒಳಗಾದವರು. ಧರ್ಮ ಶಾಸ್ತ್ರ, ತತ್ವಶಾಸ್ತ್ರ, ರಾಜ್ಯ ಶಾಸ್ತ್ರದ ಕುರಿತು ಆಳವಾಗಿ ಅಧ್ಯಯನ ದೊಂದಿಗೆ ಟಾಲ್‌ಸ್ಟ್ರಾಯ್, ಲೆನಿನ್, ಸ್ವಾಮಿ ವಿವೇಕಾನಂದ, ತಿಲಕ, ಠಾಕೂರ, ಅರವಿಂದರ, ಭಾರತೀಯ ವಿದ್ಯಾಭವನ ಸಾಹಿತ್ಯವನ್ನು ಅಭ್ಯಸಿಸಿ ದರು. ಗಣಿತದ ವಿಷಯದಲ್ಲಿ ಅಗಾಧ ಜ್ಞಾನ ಹೊಂದಿದ ಅವರು ಆಕರ್ಷಕ ಮಾತುಗಾರರಾಗಿದ್ದರು.

ಬಿರ್ಲಾ ಅವರ ಪಿಲಾನಿ, ರವೀಂದ್ರರ ಶಾಂತಿನಿಕೇತನ, ಶ್ರದ್ಧಾನಂದರ ಕಾಂಗ್ರಿ ಗುರುಕುಲಗಳಿಂದ, ಗಾಂಧೀಜಿಯವರ ಸಾಬರಮತಿ ಆಶ್ರಮದಿಂದ ಪ್ರಭಾವಿತರಾಗಿ ಹುಟ್ಟೂರು ಹೊಸರಿತ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯನ್ನು ಪ್ರಾರಂಭಿಸಿ, ಆ ಮೂಲಕ ಗ್ರಾಮೀಣ ಭಾಗದಲ್ಲಿ ಗುರುಕುಲ ಸ್ಥಾಪಿಸಿ ಶಿಕ್ಷಣ ಪ್ರಸಾರಕ್ಕೆ ನೆರವಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳನ್ನು, ಉಚಿತ ಚಿಕಿತ್ಸಾಲಯಗಳನ್ನು, ಸ್ಥಾಪಿಸಿ ಸಾರ್ವಜನಿಕ ಸೇವೆಗೆ ಯುವಕರನ್ನು ಸನ್ನದ್ಧಗೊಳಿಸಿದ್ದಾರೆ. ಕೃಷಿ, ಗ್ರಾಮೋದ್ಯೋಗ, ಖಾದಿ ಪ್ರಚಾರ, ಅಸ್ಪಶ್ಯತಾ ನಿವಾರಣೆ ಮತ್ತು ಸ್ವಯಂ ಉದ್ಯೋಗಕ್ಕೆ ಹೆಚ್ಚು ಒಟ್ತುಕೊಟ್ಟಿರುವುದನ್ನು ಅವರ ಜೀವನ ಚರಿತ್ರೆಯಿಂದ ಗಮನಿಸಬಹುದು.

ವಿದೇಶಿ ವಸ್ತುಗಳ ಬಹಿಷ್ಕಾರ, ಅಸಹಕಾರ, ಕರ ನಿರಾಕರಣೆ, ಕಾನೂನು ಭಂಗ ಚಳುವಳಿ, ಸೈಮನ್ ಕಮಿಶನ್ ಮುಂತಾದ ಹೋರಾಟ ಚಳವಳಿಗಳಲ್ಲಿ ಜನಸಾಮಾನ್ಯರು ಭಾಗವಹಿಸುವಂತೆ ಮಾಡಿದ ಶ್ರೇಯಸ್ಸು ಅವರದ್ದು. ಹಾವೇರಿಯ ಎಂ.ಎಲ್.ಎ ಆಗಿ ಮುಂದೆ. ಎಮ್.ಎಲ್.ಸಿ ಆಗಿ ಸಭಾಪತಿಗಳಾಗಿಯೂ ಕಾರ‌್ಯ ನಿರ್ವಹಿಸಿದವರು.

೧೯೬೦ರಲ್ಲಿ ವರದಾ ನದಿಗೆ ಬಂದ ಪ್ರವಾಹದಿಂದ ಅನೇಕ ಹಳ್ಳಿಗಳು ಸಂಕಷ್ಟಕ್ಕೆ ಗುರಿಯಾದಾಗ ಹಳ್ಳಿಕೇರಿ ಅವರು ಸ್ಥಳದಲ್ಲಿಯೇ ಬಿಡಾರ ಹೂಡಿ ಪರಿಹಾರ ಕಾರ‌್ಯಗಳು ಎಲ್ಲರಿಗೂ ದೊರೆಯುವಂತೆ ಮಾಡಿದರಲ್ಲದೇ, ೧೯೬೬ ರಲ್ಲಿ ಮುಂಡರಗಿಯಲ್ಲಿ ಬೀಸಿದ ಬಿರುಗಾಳಿಯಿಂದ ತತ್ತರಿಸಿದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿ ಜನಾನುರಾಗಿಗಳೆನಿಸಿದರು. ಪತ್ನಿ ಗಂಗಮ್ಮನವರ ಸಹಕಾರದಿಂದ ಆಸ್ಪಶ್ಯತೆ ನಿವಾರಣೆ, ಹರಿಜನ ಸೇವೆಯನ್ನು ನಿರಂತರ ಮಾಡಿದವರು. ಸಂಘಟನೆ, ಹೋರಾಟ, ಸೇವೆಯ ಮೂಲಕ ಸಾರ್ವಜನಿಕರಲ್ಲಿ ಯಜಮಾನ ಎಂಬ ಖ್ಯಾತಿಗೆ ಪಾತ್ರರಾದ ಅವರು ರ ಮೇ ೧೫ರಂದು ನಿಧನ ಹೊಂದಿದರು..!

ಪ್ರಶಾಂತವಾದ ೩೨ ಎಕರೆ ವಿಸ್ತಾರವಾದ ಗಾಂಧಿ ಗ್ರಾಮೀಣ ಗುರುಕುಲ ಸುಸಜ್ಜಿತ ಶಾಲಾ ಕಟ್ಟಡ, ವಸತಿ ಗೃಹ, ಆಟದ ಮೈದಾನ, ಹೂದೋಟ, ಹಸಿರು ಪರಿಸರದಿಂದ ಕೂಡಿದೆ. ವಿದ್ಯಾರ್ಥಿಗಳಿಗೆ ಖಾದಿ ಸಮವಸ್ತ್ರ, ಊಟ, ಉಪಹಾರಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಸಾಮಾನ್ಯ ಶಿಕ್ಷಣದ ಜೊತೆಗೆ ಕೃಷಿ, ಕೈ-ತೋಟ, ರೇಷ್ಮೆ ವ್ಯವಸಾಯ, ನೂಲು- ನೇಯ್ಗೆ, ಹೈನುಗಾರಿಕೆ ಕಂಪ್ಯೂಟರ್ ಜ್ಞಾನವನ್ನು ನೀಡಲಾಗುತ್ತಿದೆಯಲ್ಲದೇ, ತಜ್ಞರಿಂದ ಪರಿಣಿತರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ನಾಗರಿಕ ಪ್ರಜ್ಞೆ ಯನ್ನು, ಸ್ವದೇಶಾಭಿಮಾನವನ್ನು, ಸ್ವಾವಲಂಬನೆಯ ಜೀವನ ಕ್ರಮವನ್ನು ಬೋಧಿಸಲಾಗುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಸಂಕಲ್ಪವನ್ನು ಪ್ರಚಾರ ಮಾಡುತ್ತಿದ್ದಾರೆ.

ಹಾಗೆಯೇ ಹಾವೇರಿಯ ಗುದ್ಲೆಪ್ಪ ಹಳಿಕೇರಿ‌ ಮಹಾವಿದ್ಯಾಲಯವೂ ಸೇರಿದಂತೆ ಇತರೆಡೆ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿದರು. ಜಯಂತ್ಯುತ್ಸವ ಸಂದರ್ಭದಲ್ಲಿ ಸಾಮಾಜಿಕ ಕಾರ‌್ಯಕರ್ತರಿಗೆ ನೀಡುವ ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿಯನ್ನು ಲಕ್ಷ್ಮೇಶ್ವರ ಬಿ.ಡಿ. ತಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ‌್ಯದರ್ಶಿಗಳಾದ ಸೋಮನಾಥ ಶಿ. ಮಹಾಜನಶೆಟ್ರ ಅವರಿಗೆ ಪ್ರಧಾನ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ವಿ.ವಿ.ಹೆಬ್ಬಳ್ಳಿ ರಚಿಸಿದ ಶಿಕ್ಷಣ ಪರಂಪರೆ– ಗ್ರಂಥವನ್ನು ಗುದ್ಲೇಪ್ಪ ೧೯೭೧ ಸ್ಮಾರಕ ಗಾಂಧಿ ಗ್ರಾಮೀಣ ಗುರುಕುಲದ ವತಿಯಿಂದ ಬಿಡುಗಡೆ ಮಾಡಲಾಗಿದೆ.

ಹಳ್ಳಿಕೆರೆ ಗುದ್ಲೆಪ್ಪನವರ ಆದರ್ಶ, ತತ್ವ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ‌್ಯಗಳನ್ನು ಅವರ ಮಕ್ಕಳಾದ ಡಾ.ದೀನಬಂಧು ಹಳ್ಳಿಕೇರಿ ಪರಿವಾರದವರು, ಬಂಧುಗಳು, ಪದಾಧಿಕಾರಿಗಳಾದ ಬಿ.ಜಿ. ಗೌರಿಮನಿ, ಡಾ. ಸಿ.ಸಿ. ಕಲಕೋಟಿ, ವೀರಣ್ಣ ಚೆಕ್ಕಿ, ಗೋಪಣ ಕುಲಕರ್ಣಿ ಇತರ ಪದಾಧಿಕಾರಿಗಳು, ಮತ್ತು ಎಲ್ಲ ಸದಸ್ಯರು, ಅಭಿಮಾನಿಗಳು ಸೇವೆ ಸಲ್ಲಿಸಿದರು. ಈ ಸೇವೆ ಇನ್ನೂ ಹಲವರಿಂದ ಮುಂದುವರಿದೇ ಇದೆ..!

ಹಳ್ಳಿಕೇರಿ ಗುದ್ಲೆಪ್ಪನವರು ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧಾರವಾಡದ ಕರ್ನಾಟಕ ಹೈಸ್ಕೂ ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿದ್ದರು. ಗಾಂಧೀಜಿಯಿಂದ ಪ್ರಭಾವಿತರಾದ ಹಳ್ಳಿಕೇರಿ ಗುದ್ಲೆಪ್ಪನವರು ಸ್ವಾತಂತ್ರ್ಯ ಆಂದೋಲನದಲ್ಲಿ ಸೇರ್ಪಡೆಯಾದರು. ೧೯೨೮ರಿಂದ ೧೯೪೨ರ ವರೆಗಿನ ಅವಧಿಯಲ್ಲಿ ಗುದ್ಲೆಪ್ಪನವರು ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಕೈಗೊಂಡರು.

ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ, ಗಾಂಧೀ ಆಶ್ರಮ, ಗ್ರಾಮಿಣ ಮಕ್ಕಳಿಗಾಗಿ ಪ್ರೌಢಶಾಲೆ ಪ್ರಾರಂಭಿಸಿದರು. ೧೯೩೦ರಲ್ಲಿ ದಂಡಿಯಾತ್ರೆಗೆ ಕರ್ನಾಟಕದ ಪ್ರಥಮ ಸತ್ಯಾಗ್ರಹಿಯಾಗಿ ಆಯ್ಕೆಯಾದವರು. ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದವರು. ೧೯೩೨ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೊಳಗಾದವರು. ೧೯೪೨ರಲ್ಲಿ ಚಲೇಜಾವ್ ಚಳುವಳಿಯಲ್ಲಿ ೩ ವರ್ಷ ಜೈಲುವಾಸಕ್ಕೊಳಗಾದವರು.

ಹಳ್ಳಿಕೇರಿ ಗುದ್ಲೆಪ್ಪನವರು ೧೯೪೬ ರಿಂದ ೧೯೬೦ ರವರೆಗೆ ನಿರಂತರ ೧೫ ವರ್ಷ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ೧೯೫೦ ರಿಂದ ೧೯೫೫ ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೫೨ರಲ್ಲಿ ಮುಂಬಯಿ ರಾಜ್ಯ ವಿಧಾನಸಭೆಗೆ ಹಾವೇರಿ ತಾಲೂಕಿನಿಂದ ಅಯ್ಕೆಯಾದರು. ೧೯೫೪ರಲ್ಲಿ ಚೀನಾ ಪ್ರವಾಸವನ್ನು ಮಾಡಿದರು.

೧೯೬೦ರಲ್ಲಿ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಇಂಗ್ಲಂಡ, ಜರ್ಮನಿ ಹಾಗೂ ಇಜಿಪ್ತ ದೇಶಗಳಿಗೆ ಭೆಟ್ಟಿ ನೀಡಿದರು. ೧೯೫೬ ರಿಂದ ೧೯೬೧ ರವರೆಗೆ ಕರ್ನಾಟಕ ರಾಜ್ಯ ಗಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದವರು. ೧೯೬೦ ರಲ್ಲಿ ಮೈಸೂರು ವಿಧಾನ ಪರಿಷತ್ತಿಗೆ ಆಯ್ಕೆಯಾದರು. ೧೯೬೧ ರಿಂದ ೧೯೬೬ ರವರೆಗೆ ವಿಧಾನ ಪರಿಷತ್ ಸಭಾಪತಿಯಾಗಿದ್ದರು. ೧೯೬೭ ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದರು. ೧೯೭೧ರಲ್ಲಿ ಎರಡನೆ ಅವಧಿಗೆ ವಿಧಾನ ಪರಿಷತ್ ಸಭಾಪತಿಯಾದರು.

ಇಂತಹ ಹಳ್ಳಿಕೇರಿ ಗುದ್ಲೆಪ್ಪನವರು ೧೫ ಮೇ ೧೯೭೧ ರಂದು ನಿಧನರಾದರು. ಆದರೆ ಅವರು ಮಾಡಿದ ಮಡಿದ ಮಹಾನುಭಾವರಾದರು.

emedialine

Recent Posts

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

1 hour ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

2 hours ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

4 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

4 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

4 hours ago

ನಾಗಾವಿ, ಕಾಳಗಿ ಸ್ಮಾರಕಗಳ ಸಂರಕ್ಷಣೆಗೆ ಕ್ರಮ; ಪ್ರವಾಸಿಗಳಿಗೆ ಸೌಲಭ್ಯ | ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ; ಜಿಲ್ಲೆಯ ನಾಗಾವಿ ಮತ್ತು ಕಾಳಗಿಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವದರೊಂದಿಗೆ ಈ ಎರಡು ಸ್ಥಳಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಲು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420