ಬಿಸಿ ಬಿಸಿ ಸುದ್ದಿ

ಜುಲೈ 19 ರಂದು ಕಲಬುರಗಿಯಲ್ಲಿ ಉದ್ಯೋಗ ಮೇಳ

ಕಲಬುರಗಿ: ವಿಶ್ವ ಕೌಶಲ್ಯ ದಿನದ ಅಂಗವಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜುಲೈ 19 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಗೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಈ ಉದ್ಯೋಗ ಮೇಳದಲ್ಲಿ ಕೆಳಕಂಡ ಕಂಪನಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿ ಟೆಲಿ ಕ್ರೋಮ್ ಸರ್ವಿಸೆಸ್‌ನಲ್ಲಿ ಟೆಲಿಕಾಲರ್, ಸುಪ್ರವೈಜರ್ ಟೀಮ್ ಲೀಡರ್ ಹೆಚ್.ಆರ್. ೨೦ ಹುದ್ದೆಗಳಿಗೆ ಪಿ.ಯು.ಸಿ., ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ವಯೋಮಿತಿ ೧೮ ರಿಂದ ೨೮ ವರ್ಷದೊಳಗಿರಬೇಕು. ಸಿಕಂದ್ರಾಬಾದಿನ ಬ್ಲಾಕ್‌ಬೆಲ್ಟ್ ಕಮಾಂಡೋಸ್ ಸೆಕ್ಯೂರಿಟಿ ಸಿಸ್ಟಮ್ ಪ್ರೈ.ಲಿ. ನಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ಸುಪ್ರವೈಜರ್ ೨೦ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ವಯೋಮಿತಿ ೪೦ ವರ್ಷದೊಳಗಿರಬೇಕು.

ಕಲಬುರಗಿಯ ಸ್ವಿಗ್ಗಿಯಲ್ಲಿ ೨೦೦ ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಪಾಸ್ ಅಥವಾ ಫೇಲ್ ಆಗಿರಬೇಕು. ವಯೋಮಿತಿ ೧೪ ರಿಂದ ೪೫ ವರ್ಷದೊಳಗಿರಬೇಕು. ಬೆಂಗಳೂರಿನ ಸ್ಟ್ರೈಡ್ಸ್ ಫಾರ್ಮ್ ಸೈನ್ಸ್ ಲಿ.ದಲ್ಲಿ ೧೦೦ ಟ್ರೇನಿ ಹುದ್ದೆಗೆ ಪಿಯುಸಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೨೩ ವರ್ಷದೊಳಗಿರಬೇಕು. ಧಾರವಾಡದ ಕರಾವಳಿ ಟೀಚರ‍್ಸ್ ಹೆಲ್ಪ್‌ಲೈನ್(ರಿ) ನಲ್ಲಿ ಬೋಧಕ-ಬೋಧಕೇತರು (ಪ್ರೀ ನರ್ಸರಿ, ಇಂಗ್ಲೀಷ್, ಕನ್ನಡ, ಹಿಂದಿ, ರಾಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್, ಪ್ರಿನ್ಸಿಪಾಲ್/ ಅಡ್ಮಿನ್ ಕೋ-ಆರ್ಡಿನೇಟರ್, ಕ್ಲರ್ಕ್ ಹಾಗೂ ವಾರ್ಡನ್ ಹುದ್ದೆಗಳಿಗೆ ಎನ್.ಟಿ.ಸಿ., ಪಿ.ಯು.ಸಿ., ಡಿ.ಎಡ್., ಬಿ.ಎ. ಬಿ.ಎಸ್ಸಿ., ಬಿ.ಕಾಂ. ಬಿ.ಎಡ್., ಬಿ.ಪಿ.ಎಡ್., ಎಂ.ಎ., ಎಂ.ಕಾಂ., ಎಂ.ಎಸ್ಸಿ., ಬಿ.ಸಿ.ಎ. ಎಂ.ಬಿ.ಎ., ಎಂ.ಸಿ.ಎ. ಪಾಸಾಗಿರಬೇಕು. ವಯೋಮಿತಿ ೨೨ ರಿಂದ ೫೫ ವರ್ಷದೊಳಗಿರಬೇಕು.

ಕಲಬುರಗಿಯ ಸಮಸ್ತ ಮೈಕ್ರೋ ಫೈನಾನ್ಸ್‌ನಲ್ಲಿ ಕಸ್ಟಮರ್ ರಿಲೇಷನ್‌ಶಿಪ್ ಆಫೀಸರ್, ಸಿನಿಯರ್ ಸಿ.ಆರ್.ಒ, ಆಡಿಟರ್ ಹುದ್ದೆಗಳಿಗೆ ಪಿ.ಯು.ಸಿ., ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೨೮ ವರ್ಷದೊಳಗಿರಬೇಕು. ಕಲಬುರಗಿ ಟಿ.ವಿ.ಸುಂದರಂ ಐಯ್ಯಾಂಗಾರ ಆಂಡ್ ಸನ್ಸ್ ಪ್ರೈ.ಲಿ.ನಲ್ಲಿ ಟೆಕ್ನಿಶಿಯನ್ ಮತ್ತು ಸರ್ವೀಸ್ ಇಂಜಿನಿಯರ್ ೧೨ ಹುದ್ದೆಗಳಿಗೆ ಐ.ಟಿ.ಐ. (ಡಿಸೆಲ್ ಮೆಕ್ಯಾನಿಕ್/ಮೋಟಾರ ಮೆಕ್ಯಾನಿಕ್/ಫಿಟ್ಟರ್), ಡಿಪ್ಲೋಮಾದಲ್ಲಿ (ಮೆಕ್ಯಾನಿಕಲ್) ಪಾಸಾಗಿರಬೇಕು. ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು. ವಯೋಮಿತಿ ೨೨ ರಿಂದ ೪೫ ವರ್ಷದೊಳಗಿರಬೇಕು.

ಫುಲ್ಲರ್‌ಟಾನ್ ಇಂಡಿಯಾ ಪೈ.ಲಿ. ನಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೨೮ ವರ್ಷದೊಳಗಿರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡೇಟಾ ಹಾಗೂ ಆಧಾರ ಕಾರ್ಡ್‌ದೊಂದಿಗೆ ಮೇಲ್ಕಂಡ ದಿನದಂದು ಸಂದರ್ಶನಕ್ಕೆ ಹಾಜರಾಗಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನಿಡಲಾಗುವುದಿಲ್ಲ.

ಅದೇ ರೀತಿ ವಿಶ್ವ ಕೌಶಲ್ಯ ದಿನದ ಅಂಗವಾಗಿ ಇದೇ ಜುಲೈ ೧೮ ರಂದು ಬೆಳಿಗ್ಗೆ ೧೧ ಗಂಟೆಗೆ ನುರಿತ ಉಪನ್ಯಾಸಕರಿಂದ ಅಭ್ಯರ್ಥಿಗಳಿಗೆ ಎಂಪ್ಲಾಯಮೆಂಟ್ ಸ್ಕೀಲ್ ಟ್ರೇನಿಂಗ್‌ನ್ನು ನೀಡಲಾಗುತ್ತಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago