ಇಂದು ಧರಂಸಿಂಗ್ ಹುಟ್ಟುಹಬ್ಬ- ಜೇವರ್ಗಿಯಲ್ಲಿ ಸೇವಾ ಯೋಜನೆಗಳಿಗೆ ಶಿಲಾನ್ಯಾಸ, ಆಸ್ಪತ್ರೆಗೆ ಭೂಮಿ ಹಸ್ತಾಂತರ, ಧರಂಸಿಂಗ್ ಫೌಂಡಷನ್‍ನಿಂದ ಇವೆಲ್ಲ ಸೇವಾ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.- ಶಾಸಕ ಡಾ. ಅಜಯ್ ಸಿಂಗ್
ಕಲಬುರಗಿ: ನಾಡು ಕಂಡ ಅಪರೂಪದ ಹಾಗೂ ಜನಾನುರಾಗಿ ಮುಖ್ಯಮಂತ್ರಿ ದಿ. ಎನ್ ಧರಂಸಿಂಗ್ ಅವರ 85 ನೇ ಹುಟ್ಟುಹಬ್ಬ ಜೇವರ್ಗಿಯಲ್ಲಿ ಡಿ. 25 ರ ಶನಿವಾರ ನಡೆಯುತ್ತಿದೆ. ಇದೇ ದಿನ ಅವರ ಪುತ್ರರಾದ ಶಾಸಕ ಡಾ. ಅಜಯ್ ಸಿಂಗ್, ಎಂಎಲ್‍ಸಿ ವಿಜಯ್ ಸಿಂಗ್ ಇವರು ಕೂಡಿಕೊಂಡು ಧರಂಸಿಂಗ್ ಫೌಂಡೇಶನ್ ವತಿಯಿಂದ ಜೇವರ್ಗಿ ಮತಕ್ಷೇತ್ರದ ಜನತೆಗೆ ಹತ್ತು ಹಲವು ಅನುಕೂಲಗಳನ್ನು ಒದಗಿಸುವಂತಹ ಸೇವಾ ಯೋಜನೆಗಳಿಗೆ ಚಾಲನೆ ನೀಡಲು ಮುಂದಾಗಿದ್ದಾರೆ.
ಸದರಿ ಸಮಾರಂಭಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ಧರಂಸಿಂಗ್ ಅವರ ಆತ್ಮೀಯ ಗಳೆಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮಹನೀಯರು ಆಗಮಿಸುತ್ತಿದ್ದು ಡಿ. 25 ರ ಶನಿವಾರ ಮ. 3. 30 ಗಂಟೆಗೆ ಸಮಾರಂಭ ಜೇವರ್ಗಿ- ಕಲಬುರಗಿ ಹೆದ್ದಾರಿಯ ಕಟ್ಟಿ ಸಂಗಾವಿ ಹತ್ತಿರದ ನೂತನ ಐಬಿ ಮುಭಾಗದಲ್ಲಿ ನಡೆಯುತ್ತಿದೆ.
ಧರಂಸಿಂಗ್ ಫೌಂಡೇಶನ್ ಅಡಿಯಲ್ಲಿ ಅದಾಗಲೇ ಅಂಬುಲನ್ಸ್ ಸೇವೆ, ಆರೋಗ್ಯ ಸೇವೆಗಳನ್ನು ನೀಡುತ್ತ ಜೇವರ್ಗಿ ಸೇರಿದಂತೆ ಜಿಲ್ಲೆಯ ಜನಮನಕ್ಕೆ ಹತ್ತಿರವಾಗಿರುವ ಇವರು ಇದೀಗ ಧರಂಸಿಂಗ್ ಹೆಸರಲ್ಲಿ ಉಚಿತ ಕಲ್ಯಾಣ ಮಂಟಪ, ಅನ್ನ ದಾಸೋಹ, ಧರಂಸಿಂಗ್ ಹೆಸರಲ್ಲಿ ಗ್ರಂಥಾಲಯ, ಧರಂಸಿಂಗ್ ಬದುಕಿನ ಪರಿಚಯದ ಮ್ಯೂಸಿಯಮ್ ಸ್ಥಪಿಸುವ ಮೂಲಕ ಇನ್ನೂ ಜನಪರವಾಗಿರುವಂತಹ ನಿಲುವು ತಳೆದಿದ್ದಾರೆ.
ಕಲಬುರಗಿ- ಜೇವರ್ಗಿ ರಸ್ತೆಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಟ್ಟಿ ಸಂಗಾವಿ ಹತ್ತಿರ ಹೊಸ ಅತಿಥಿ ಗೃಹದ ಮುಂಭಾಗದಲ್ಲಿ, ಹೆದ್ದಾರಿಗೆ ಹೊಂದಿಕೊಂಡತೆಯೇ ಇರುವ ಭೂ ಪ್ರದೇಶದಲ್ಲಿ ಕಲ್ಯಾಣ ಮಂಟಪ, ಆಸ್ಪತ್ರೆ, ಗ್ರಂಥಾಲಯ, ಅನ್ನ ಸಾಸೋಹ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.
ಶ್ರೀ ಸಾಮಾನ್ಯರು ಮದುವೆ ಮಾಡಲು ಸಾಕಷ್ಟು ತೊಂದರೆ ಎದುರಿಸುತ್ತಿರೋದನ್ನ ಗಮನದಲ್ಲಿಟ್ಟುಕೊಂಡು ಅಂತಹ ಕುಟುಂಬಗಳಿಗೆ ನೆರವಾಗಲು ಧರಂಸಿಂಗ್ ಅವರ ಹೆಸರಲ್ಲಿ 2 ಎಕರೆಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಿ ಬಡವರಿಗೆಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ.
ಕೇಂದ್ರದಿಂದ ಜೇವರ್ಗಿಗೆ ಮಂಜೂರಾಗಿರುವ 100 ಹಾಸಿಗೆಯ ತಾಯಿ- ಮಕ್ಕಳ ಆಸ್ಪತ್ರೆಗೆ ಧರಂಸಿಂಗ್ ಫೌಂಡೇಶನ್ 2 ಎಕರೆ ನಿವೇಶನ ನೀಡುತ್ತಿದ್ದು ಇಲ್ಲಿ ತಲೆ ಎತ್ತಲಿರುವ ಆಸ್ಪತ್ರೆಗೆ ಧರಂಸಿಂಗ್ ಹೆಸರಿಡಲಾಗುತ್ತದೆ. ಆಸ್ಪತ್ರೆಗೆ ಭೂಮಿ ಹಸ್ತಾಂತರ ಹುಟ್ಟುಹಬ್ಬದ ದಿನವೇ ನಡೆಸಲಾಗುತ್ತದೆ.
ಜೇವರ್ಗಿ, ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಯುವಕರು- ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯ ಓದಿಗಾಗಿ ಸುಸಜ್ಜಿತ ಗ್ರಂಥಾಲಯ ಯೋಜನೆ ಕೊಡುಗೆ ನೀಡುತ್ತಿz್ದÉೀವೆ. ಇದಲ್ಲದೆ ಇಲ್ಲೇ ಧರಂಸಿಂಗ್ ಹೆಸರಲ್ಲಿ ನಿತ್ಯ ಅನ್ನ ದಾಸೋಹ ಯೋಜನೆಗೂ ಅಂದೇ ಅಡಿಗಲ್ಲು ಇಡಲಾಗುತ್ತಿದೆ. ಇದಲ್ಲದೆ ಇದೇ ಸ್ಥಳದಲ್ಲಿ ಜೇವರ್ಗಿ ಮತಕ್ಷೇತ್ರದ ಮಕ್ಕಳಿಗಾಗಿ ಗುಣಮಟ್ಟದ ಶಿಕ್ಷಣ ಒದಗಿಸುವಂತಹ ಶಾಲೆ ಆರಂಭಕ್ಕೂ ಧರಂಸಿಂಗ್ ಫೌಂಡೇಷನ್ ಸಿದ್ಧವಾಗಿದ್ದು ಅದಕ್ಕಾಗಿ ಹೈಕಶಿ ಸಂಸ್ಥೆಗೆ 2 ಎಕರೆ ಭೂಮಿ ದಾನ ಮಾಡಿದೆ. ಈ ಭೂಮಿಯಲ್ಲಿ ಸುಸಜ್ಜಿತ ಸಾಲೆ ನಿರ್ಮಾಣಗೊಂಡು ಅದು ಶೀಘ್ರದಲ್ಲೇ ಜೇವರ್ಗಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒದಗಲಿದೆ.
ಇಲ್ಲಿರುವ ಫೌಂಡೇಷನ್‍ನ 25 ಎಕರೆಯಲ್ಲಿ ಹಂತಹಂತವಾಗಿ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಮೊದಲ ಹಂತದಲ್ಲಿ ಮೇಲಿನ ಎಲ್ಲಾ ಯೋಜನೆಗಳ ಶಿಲಾನ್ಯಾಸ ನಡೆಯಲಿದೆ.
ಇವೆಲ್ಲ ವಿಧಾಯಕ ಹಾಗೂ ಜನೋಪಯೋಗಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಇಡಲು ಹಾಗೂ ಚಾಲನೆ ನೀಡಲು ಕಾಂಗ್ರೆಸ್ ರಾಷ್ಟ್ರೀಯ ನಾಯಕ , ರಾಜ್ಯಸಬೆ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಿದ್ದಾರೆ. ಶನಿವಾರ ಡಿ. 25 ರಂದು ಮಧ್ಯಾಹ್ನ 3. 30 ಗಂಟೆಗೆ ಸಮಾರಂಭ ನಡೆಯಲಿದೆ. ಇದೇ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಶರಣಬಸವಪ್ಪ ದರ್ಶನಾಪುರ, ರಾಜಶೇಖರ ಪಾಟೀಲ್ ಹುಮ್ನಾಬಾದ್, ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಎಂವೈ ಪಾಟೀಲ್, ಖಜೀನಾ ಫಾತೀಮಾ, ಎಂಎಲ್‍ಸಿಗಳಾದ ಅರವಿಂದ ಅರಳಿ, ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಬಿಆರ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಧÀರಂಸಿಂಗ್ ಪ್ರತಿಷ್ಠಾನದ ಪರವಾಗಿ ಧರಂಸಿಂಗ್ ಧರ್ಮಪತ್ನಿ ಶ್ರೀಮತಿ ಪ್ರಭಾವತಿ ಧರಂಸಿಂಗ್ ಹಾಗೂ ಪುತ್ರರಾದ ಡಾ. ಅಜಯ್ ಸಿಂಗ್, ವಿಜಯ್ ಸಿಂಗ್, ಪ್ರಿಯದರ್ಶಿನಿ ಚಂದ್ರಾಸಿಂಗ್ ಹಾಗೂ ಪರಿವಾರದÀ ಸದಸ್ಯರು, ಅಭಿಮಾನಿಗಳು, ಕಲಬುರಗಿ, ಜೇವರ್ಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರಪು, ಕಾರ್ಯಕರ್ತರೆಲ್ಲರೂ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…