ಜೇವರ್ಗಿ: ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರು ನಾನು ಕಷ್ಟ-ನಷ್ಟದಲ್ಲಿಯೂ ಭಾಗಿಯಾಗುತ್ತಿದ್ದೇವು. ಇಬ್ಬರೂ ಸೇರಿ ಪಕ್ಷˌ ರಾಜ್ಯ ಹಾಗೂ ಕಲಬುರಗಿ ಜಿಲ್ಲೆಯ ಬಗ್ಗೆ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವು ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಟ್ಟಿಸಂಗಾವಿ ಹತ್ತಿರ ಶನಿವಾರ ನೂತನವಾಗಿ ನಿರ್ಮಿಸುತ್ತಿರುವ ತಾಯಿಮಕ್ಕಳ ಆಸ್ಪತ್ರೆˌ ಗ್ರಂಥಾಲಯˌ ಕಲ್ಯಾಣ ಮಂಟಪ ಹಾಗೂ ಪ್ರಸಾದ ನಿಲಯ ಕಟ್ಟಡಗಳ ಅಡಿಗಲ್ಲು ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ತತ್ವಸಿದ್ಧಾಂತಗಳಿಗೆ ಈಗ ಹಿನ್ನೆಡೆಯಾಗಿರಬಹುದು ಆದರೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯದಂತೆ ದೇಶ ನಡೆಸುವ ಜನರು ಮುಂದೆ ಹುಟ್ಟುತ್ತಾರೆ.
ಬರಗಾಲದಲ್ಲಿ ಬಾಯಿ ಇದ್ದವ ಬದುಕಿದ ಎನ್ನುವ ಹಾಗೆ ಈಗ ದೇಶದಲ್ಲಿ ನಡೆಯುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನನ್ನ ಮತ್ತು ಧರ್ಮಸಿಂಗ್ ಅವರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಆದರೂ ಅಭಿವ್ರದ್ಧಿಯಲ್ಲಿ ನಾವು ಜೊತೆಗೆ ನಡೆಯುತ್ತಿದ್ದೇವು. ನಮ್ಮ ಗೆಳೆತನಕ್ಕೆ 50 ವರ್ಷದ ಇತಿಹಾಸವಿದ್ದುˌ ಇಂತಹ ಗೆಳೆಯನನ್ನು ಕಳೆದುಕೊಂಡಿದ್ದು ನೋವು ತರುತ್ತಿದೆ ಎಂದರು.
ದಿˌ ಧರ್ಮಸಿಂಗ್ ಅವರ ತತ್ವಗಳು ಮತ್ತು ನೆಹರು ಅವರ ತತ್ವಗಳು ಒಂದೇ ದಾರಿಯಲ್ಲಿದ್ದವು. ಬಸವಣ್ಣನವರು ಐಕ್ಯರಾಗಿದ್ದರೂ ಸಹ ಅವರ ತತ್ವಗಳು ಮುಳುಗಲಿಲ್ಲ ಎಂಬುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಾಸಕ ಡಾ.ಅಜಯಸಿಂಗ್ ಮಾತನಾಡಿ. ದಿವಂಗತ ಧರ್ಮಸಿಂಗ್ ಅವರ ಹೆಸರು ಅಜರಾಮರವಾಗಿ ಉಳಿಸಬೇಕು ಎನ್ನುವ ಉದ್ದೇಶದಿಂದ ಕಟ್ಟಿಸಂಗಾವಿ ಬಳಿಹೂ ತಾಯಿ ಮಕ್ಕಳ ಆಸ್ಪತ್ರೆˌ ಕಲ್ಯಾಣ ಮಂಟಪˌ ಗ್ರಂಥಾಲಯ ಹಾಗೂ ಪ್ರಸಾದ ನಿಲಯವನ್ನು ನಿರ್ಮಿಸಲಾಗುವುದು ಎಂದರು.
ದಿ.ಧರ್ಮಸಿಂಗ್ ಅವರು ರಾಜ್ಯˌ ಜಿಲ್ಲೆಯ ಜನರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಈಗಲೂ ನಾನು ವಿಧಾನಸಭೆಯಲ್ಲಿ ಪ್ರವೇಶಿಸುವಾಗ ಧರ್ಮಸಿಂಗ್ ಅವರನ್ನು ನೆನೆಸಿ ಮಾತನಾಡುತ್ತಾರೆ. ಅವರು ಹೇಳಿದ ಮಾತುಗಳನ್ನು ಹೆಜ್ಜೆ ಹೆಜ್ಜೆಗೂ ನೆನೆಸಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಶ್ರೀಮತಿ ಪ್ರಭಾವತಿ ಧರ್ಮಸಿಂಗ್ˌ ಶಾಸಕರುಗಳಾದ ಶರಣಬಸಪ್ಪ ದರ್ಶನಾಪುರˌ ಪ್ರಿಯಾಂಕ್ ಖರ್ಗೆˌ ರಾಜಶೇಖರ ಪಾಟೀಲˌ ರಹೀಂಖಾನˌ ಈಶ್ವರ ಖಂಡ್ರೆˌ ಎಂವೈ ಪಾಟೀಲˌ
ಎಂಎಲ್ಸಿಗಳಾದ ವಿಜಯ್ ಧರ್ಮಸಿಂಗ್ˌ ಭೀಮರಾವ ಪಾಟೀಲˌ ಮಾಜಿ ಶಾಸಕರಾದ ಬಿ.ಆರ್.ಪಾಟೀಲˌ ಶರಣಪ್ರಕಾಶ ಪಾಟೀಲˌ ತಿಪ್ಪಣ್ಣಪ್ಪ ಕಮಕನೂರˌ ಭೀಮಣ್ಣ ಸಾಲಿˌ ಡಾ.ಶರಣಬಸಪ್ಪ ಹರವಾಳˌ ಶ್ರೀಮತಿ ಪ್ರಿಯದರ್ಶಿನಿˌ ಶ್ವೇತಾ ಅಜಯಸಿಂಗ್ˌ ಜಗದೇವ ಗುತ್ತೇದಾರˌ ಮಹಾನಗರ ಪಾಲಿಕೆ ಸದಸ್ಯ ಸಚೀನ ಶಿರವಾಳˌ ರಾಜೀವ ಜಾನೆˌ ರುಕುಂಪಟೇಲ ಇಜೇರಿˌ ಖಾಸೀಂಪಟೇಲ ಮುದುವಾಳˌ
ಜಿಪಂ ಮಾಜಿ ಸದಸ್ಯರುಗಳಾದ ಗುರುಲಿಂಗಪ್ಪಗೌಡ ಆಂದೋಲಾˌ ಶಾಂತಪ್ಪ ಕೂಡಲಗಿˌ ರಾಜಶೇಖರ ಚಂದ್ರಶೇಖರ ಹರನಾಳˌ ಸಂಗಣಗೌಡ ಪಾಟೀಲ ಗುಳ್ಯಾಳˌ ನೀಲಕಂಠ ಅವಂಟಿ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…