ಕಲಬುರಗಿ – ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಎ.ಟಿ) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಸಹಾಯಕ ಅರ್ಹತಾ ಪರೀಕ್ಷೆ) ತಾಂತ್ರಿಕ ಸಮಸ್ಯೆ ಹಾಗೂ ಭಾಷೆ ವ್ಯತ್ಯಾಸ ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದ್ದು, ಹೀಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಪರೀಕ್ಷಾರ್ಥಿಗಳು ಅಗ್ರಹಿಸಿದ್ದಾರೆ.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಂಡ ರಾಷ್ಟ್ರೀಯ ಅರ್ಹತಾ ಪರೀಕ್ಷೆಒಂದು ಗಂಟೆಯ ನಂತರ ಪರೀಕ್ಷಾರ್ಥಿಗಳಿಗೆ ಗೊಂದಲ ಕಾದಿತ್ತು. ಕ್ರಮವಾಗಿ ಮೊದಲ 10 ಪ್ರಶ್ನೆಗಳು ಕನ್ನಡ ಪ್ರಶ್ನೆಪತ್ರಿಕೆಯಲ್ಲಿದ್ದರೆ, ಉಳಿದ 90 ಪ್ರಶ್ನೆಗಳು ಹಿಂದಿಯಲ್ಲಿ ಪ್ರಶ್ನೆಗಳು ಬಂದಿದ್ದು ಕಂಡು ಪರೀಕ್ಷೆ ಆಕಾಂಕ್ಷೆಗಳು ಭಯಬೀತಗೊಂಡ ಪ್ರಸಂಗ ಉಂಟಾಯಿತು.
ಸುಮಾರು ಒಂದುವರೆ ಗಂಟೆಗಳ ಬಳಿಕ ಮರು ಲಾಗಿನ್ ಆಗಲು ಮೇಲ್ವಿಚಾರಕರು ತಿಳಿಸಿದಾಗ, ಆದಾಗಲೇ ಪ್ರಥಮ ಪತ್ರಿಕೆ ಪೂರ್ಣಗೊಳಿಸಿರುವ ಪರೀಕ್ಷಾರ್ಥಿಗಳು ಗೊಂದಲಕ್ಕೀಡಾದರು. ಪರೀಕ್ಷಾ ಮೇಲ್ವಿಚಾರಕರ ಸೂಚನೆ ಮೇರೆಗೆ ಮರು ಲಾಗಿನ್ ಆದಗ, ಪುನಃ ಆರಂಭದಿಂದ ಪ್ರಥಮ ಪತ್ರಿಕೆಯ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಇದಲ್ಲದೇ ಕೆಲವು ಪರೀಕ್ಷಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆಯಿಂದಾಗಿ ಲಾಗಿನ್ ಆಗಲು ಸಾಧ್ಯವಾಗಲಿಲ್ಲ. ಆದರೆ, ತೆಲುಗು ವಿದ್ಯಾರ್ಥಿಗಳು ಲಾಗಿನ್ ಆಗಿ ಪ್ರಶ್ನೆಪತ್ರಿಕೆಯನ್ನು ಪೂರ್ಣಗೊಳಿಸಿದರು.
ಈ ಘಟನೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಸರಿಯಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಇದಲ್ಲದೇ, ಪ್ರಶ್ನೆಪತ್ರಿಕೆಯಲ್ಲಿ ಸುಮಾರು ಎಂಟು ಪ್ರಶ್ನೆಗಳು ಮರುಪ್ರಶ್ನೆಗಳಾಗಿ ಮುದ್ರಣಗೊಂಡಿದ್ದು. ಪ್ರಶ್ನೆಪತ್ರಿಕೆಯು ಮೌಲ್ಯಾಧಾರಿತವಾಗಿರಲಿಲ್ಲ ಜೊತೆಗೆ ಪರೀಕ್ಷೆ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಬಿಮಿಟ್ ಕಷ್ಟವಾಗುತ್ತಿತ್ತು ಎಂದು ನೊಂದ ಪರೀಕ್ಷಾರ್ಥಿ ನಾನಾಸಾಹೇಬ ಎಸ್ ಹಚ್ಚಡದ ಅವರು ತಿಳಿಸುತ್ತಾರೆ.
ಇಂತಹ ಹಲವು ಗೊಂದಲ ನಡುವೆ ಪರೀಕ್ಷೆ ಜರುಗಿದ್ದು, ಪರೀಕ್ಷಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಕೋವಿಡ್-19 ಸಂದರ್ಭದಲ್ಲಿ ಎರಡು ಪರೀಕ್ಷೆಗಳನ್ನು ಒಂದೇ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳ ಆತಂಕವನ್ನು ದೂರ ಮಾಡಲು ಮರು ಪರೀಕ್ಷೆ ನಡೆಸಲು ನೊಂದ ಆಕಾಂಕ್ಷಿಗಳು ಮರುಪರೀಕ್ಷೆ ನಡೆಸಲು ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…