ಬಿಸಿ ಬಿಸಿ ಸುದ್ದಿ

ಸಹೋದರತ್ವ ಭಾವನೆ ಬಿತ್ತಿ ಸಮ ಸಮಾಜ ಕಟ್ಟುವ ಶಕ್ತಿ ಸಾಹಿತ್ಯಕ್ಕಿದೆ: ಡಾ.ಎಸ್. ಬಾಲಾಜಿ

ಕಲಬುರಗಿ: ಸರ್ವರ ಮನಸ್ಸನ್ನು ಒ೦ದುಗೂಡಿಸಿ ಸಹೋದರತ್ವ ಭಾವನೆ ಬಿತ್ತಿ ಸಮ ಸಮಾಜ ಕಟ್ಟುವ ಶಕ್ತಿ  ಜನಪದ ಸಾಹಿತ್ಯಕ್ಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ ತಿಳಿಸಿದರು.

ಶನಿವಾರ ಕಲಬುರಗಿ ನಗರದ ಕಲಾಮಂಡಲದಲ್ಲಿ ಕನ್ನಡ ಜಾನಪದ ಪರಿಷತ್ ಕಲಬುರಗಿ ತಾಲ್ಲೂಕು ಉತ್ತರ ವಲಯ ಹಾಗೂ ದಕ್ಷಿಣ ವಲಯ ಪದಗ್ರಹಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಆದರೆ ಇಂದಿನ ಕಾರ್ಯಕ್ರಮದಲ್ಲಿ ಅದ್ಭುತ ಪ್ರತಿನಿಧಿ ಪ್ರತಿಭೆಗಳಿಗೆ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಇಂಥಹ ಪ್ರತಿಭೆಗಳು ರಾಜ್ಯಮಟ್ಟಕ್ಕೆ ಪರಿಚಯಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ರುವ ಮಕ್ತಂಪುರದ ಗುರುಬಸವೇಶ್ವರ  ಮಠದ ಪೂಜ್ಯರಾದ ಶಿವಾನಂದ ಮಹಾಸ್ವಾಮಿಗಳು  ಆಶೀರ್ವಚನ ನೀಡುತ್ತಾ ಕುಟ್ಟುವ, ಬೀಸುವ ಪದ, ಸೋಬಾನೆ ಪದ, ಹಂತಿ ಪದ ಹೀಗೆ ಹಲವಾರು ಪದಗಳನ್ನು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಬರುವುದರೊಂದಿಗೆ  ನಿಖರವಾದ ಲೇಖನ ಇಲ್ಲದೆ ನಶಿಸಿ ಹೋಗುತ್ತಿರುವುದು ಕಳವಳದ ಸಂಗತಿ.ಜನಪದ ಅಳಿಯುವ ಸಂದರ್ಭದಲ್ಲಿ ಉಳಿಸುವ ಪ್ರಾಮಾಣಿಕ ಪ್ರಯತ್ನ ಪರಿಷತ ವತಿಯಿಂದ ನಡೆಯಲಿ ಎಂದು ಹೇಳಿದರು.

ವೇದಿಕೆಯ ಮೇಲೆ  ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ನ್ಯಾಯವಾದಿ ಜ್ಯೋತಿಲಕ್ಷ್ಮಿ ಎಸ್ ಶೆಟ್ಟಿ,ಕರ್ನಾಟಕ ರಾಜ್ಯ ಟೇಲರ್ಸ್ ಮತ್ತು ಸಹಾಯಕರ ಫೆಡರೇಷನ್ ಜಿಲ್ಲಾಧ್ಯಕ್ಷರಾದ ಅನಿತಾ ಡಿ. ಭಕರೆ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಕಜಾಪ ಜಿಲ್ಲಾಧ್ಯಕ್ಷರಾದ ಎಂ ಬಿ ನಿಂಗಪ್ಪ, ಕಾರ್ಯದರ್ಶಿಗಳಾದ ಎಚ್ ಬಿ ಪಾಟೀಲ,ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಉಪಸ್ಥಿತರಿದ್ದರು.ದಕ್ಷಿಣ ವಲಯದ ಅಧ್ಯಕ್ಷರಾದ ಸಿದ್ದಲಿಂಗಪ್ಪ ಎಸ್. ಬಾಗಲಕೋಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೆ  ಸಂದರ್ಭದಲ್ಲಿ ಸಾಹಿತ್ಯ, ಜನಪದ, ಸಂಗೀತದಲ್ಲಿ ಸೇವೆಗೈಯುತ್ತಿರುವ ಮಹನೀಯರಾದ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ ನೂತನ ಜಿಲ್ಲಾಧ್ಯಕ್ಷರಾದ  ವಿಜಯಕುಮಾರ ತೇಗಲತಿಪ್ಪಿ, ಜನಪದ ಕಲಾವಿದರಾದ ಶ್ರೀಮತಿ ನಿಂಗಮ್ಮ ಕೋಡ್ಲಿ ಸಂಗೀತ ಕಲಾವಿದರಾದ ಶಿವಾನಂದ ಮಡಿವಾಳ ಗೌಡಗಾ೦ವ, ಶರಣಪ್ಪ ಎಸ್. ಕಟ್ಟಿಮನಿ ಸಾಗನೂರ, ಬಾಲ ಪ್ರತಿಭೆ ಕುಮಾರ ಸಾತ್ವಿಕ್ ಎಸ್. ದ್ಯಾಮನಕರ್ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಕಲಬುರ್ಗಿ ತಾಲ್ಲೂಕಿನ  ಉತ್ತರ ಹಾಗೂ ದಕ್ಷಿಣ ವಲಯದ ಪದಾಧಿಕಾರಿಗಳಿಗೆ ಗೌರವಿಸಿ ರಾಜ್ಯಾಧ್ಯಕ್ಷರು  ಪದಗ್ರಹಣ ಮಾಡಿದರು.

ಕಾರ್ಯಕ್ರಮದಲ್ಲಿ  ಶಿವರಾಜ ಅ೦ಡಗಿ, ರವಿಕುಮಾರ ಶಹಾಪುರಕರ, ರಘುನಂದನ ಕುಲಕರ್ಣಿ, ಅಸ್ಲಾಂ ಶೇಖ, ಶರಣಬಸಪ್ಪ ಪಾಟೀಲ, ಸಂಗಮೇಶ ಶಾಸ್ತ್ರಿ ಮಾಶಾಳ, ಮಲ್ಲು ಕುಮಸಿ, ರಾಜು ಹೆಬ್ಬಾಳ, ಗೌಡೇಶ  ಬಿರಾದಾರ, ಮಹೇಶ ತೆಲೆಕುಣಿ,ಶಾಂತಪ್ಪ ಪಾಟೀಲ, ಮಲಕಾರಿ ಪೂಜಾರಿ, ಸಂಜೀವ ಕುಮಾರ ಶೆಟ್ಟಿ, ಸಿದ್ದರಾಮ ತಳವಾರ, ಉಮೇಶ ಬಿರಾದಾರ, ಲಕ್ಕಣ್ಣ ಪಾಟೀಲ, ಗುಂಡಪ್ಪ ಕೋಡ್ಲಿ, ರಾಜಕುಮಾರ ಲಿಂಗಶೆಟ್ಟಿ, ಸಂತೋಷ ಕುಡಳ್ಳಿ,  ಸೋಮೇಶ ಡಿಗ್ಗಿ,  ಶೈಲೇಂದ್ರ ಠಾಕೂರ, ಶರಣು ಎಸ್. ಆಲಗೂಡ,  ಶ್ರೀಕಾಂತ ಇಸರಿ, ಲಕ್ಷ್ಮಣ ಹೇರೂರ  ಜಿಲ್ಲೆ ಸೇರಿದಂತೆ ಹಲವಾರು ಜನ ಭಾಗವಹಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago