ಬಿಸಿ ಬಿಸಿ ಸುದ್ದಿ

ಜಾತಿ ಇಲ್ಲದ ಅನಾಥರಿಗೆ ವಿಶೇಷ ವರ್ಗ

ದಾವಣಗೆರೆ: ವಿವಿಧ ಸಮುದಾಯಗಳು ಮೀಸಲು ನೀಡಬೇಕು ಎಂದು ಆಗ್ರಹಿಸುತ್ತಿವೆ. ಅದಕ್ಕೆ ಪೂರಕವಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಾತಿಯೇ ಗೊತ್ತಿಲ್ಲದ ಅನಾಥ ಮಕ್ಕಳನ್ನು “ವಿಶೇಷ ವರ್ಗ’ಕ್ಕೆ ಸೇರಿಸಲು ಸಜ್ಜಾಗಿದೆ.

ಜಾತಿ ಗೊತ್ತಿಲ್ಲದೆ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಿಗದೆ ಪರದಾಡುತ್ತಿರುವ ಅನಾಥ ಮಕ್ಕಳಿಗೆ ಶಾಶ್ವತ ಪರಿಹಾರ ಒದಗಿಸುವ ದಿಸೆಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.

ವಿಶೇಷ ಸೌಲಭ್ಯಕ್ಕೆ ಶಿಫಾರಸು : ನೆರೆಯ ರಾಜ್ಯಗಳಾಗಿರುವ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಅನಾಥ ಮಕ್ಕಳ ಶಿಕ್ಷಣ, ಉದ್ಯೋಗ ದೊರಕಿ ಸುವ ಜವಾಬ್ದಾರಿಯನ್ನು ಸರಕಾರಗಳೇ ಹೊತ್ತಿವೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಕೆಲಸವಾಗ ಬೇಕು ಎಂದು ಶಿಫಾರಸು ಮಾಡಲು ಆಯೋಗ ಕಾರ್ಯೋ ನ್ಮುಖವಾಗಿದೆ.

ಕಾನೂನು ಆಯೋಗ ಸಲಹೆ: ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ “ಜಾತಿ ರಹಿತ ವರ್ಗ’ ಎಂದು ವಿಶೇಷವಾಗಿ ಗುರುತಿಸಿ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು. ಇದರಿಂದ ಅನಾಥ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸುಲಭ ವಾಗಿ ಮೀಸಲಾತಿ ದೊರೆತು ಮುಖ್ಯವಾಹಿನಿಗೆ ಬರಲು ಸಾಧ್ಯ ವಾಗುತ್ತದೆ ಎಂದು ರಾಜ್ಯ ಕಾನೂನು ಆಯೋಗ ಈ ಹಿಂದೆಯೇ ಸರಕಾರಕ್ಕೆ ಸಲಹೆ ನೀಡಿತ್ತು. ಸರಕಾರದ ಸೌಲಭ್ಯಕ್ಕೆ ಜಾತಿ ಪ್ರಮಾಣ ಪತ್ರ ಪ್ರಮುಖ ವಾಗಿದೆ. ಜಾತಿ ಗೊತ್ತಿಲ್ಲದ ಕಾರಣ ಸೌಲಭ್ಯ ವಂಚಿತ ಅನಾಥ ಮಕ್ಕಳಿಗೆ ಆಯೋಗದ ಈ ಕಾರ್ಯ ಹೆಚ್ಚು ಅನುಕೂಲ ಕಲ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ದಾವಣಗೆರೆಯಿಂದ ಆರಂಭ: ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಜಿಲ್ಲೆ ಯಿಂದಲೇ ಅನಾಥ ಮಕ್ಕಳ ಸಮೀಕ್ಷೆ ಆರಂಭಿಸಲಾಗಿದೆ. ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ತಂಡ ನಗರದ ವೀರೇಶ್ವರ ಪುಣ್ಯಾಶ್ರಮದ ಅನಾಥ ಮಕ್ಕಳನ್ನು ಭೇಟಿಯಾಗುವ ಮೂಲಕ ಚಾಲನೆ ನೀಡಿದೆ.

ರಾಜ್ಯದ ಅನಾಥಾಶ್ರಮಗಳಲ್ಲಿರುವ ಸಾವಿರಾರು ಮಕ್ಕಳಿಗೆ ತಮ್ಮ ಜಾತಿ ಗೊತ್ತಿಲ್ಲದ್ದರಿಂದ ಪ್ರಮಾಣಪತ್ರ ಸಿಗದೆ ತೊಂದರೆ ಯಲ್ಲಿದ್ದಾರೆ. ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ವರ್ಗವೆಂದು ಪರಿಗಣಿಸುವ ಬಗ್ಗೆ ಶೀಘ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. -ಕೆ. ಜಯಪ್ರಕಾಶ ಹೆಗ್ಡೆ  ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

emedialine

Recent Posts

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

9 mins ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

11 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

11 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

11 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

11 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

11 hours ago