ಬೆಂಗಳೂರು: ಸಾರಿಗೆ ಇಲಾಖೆ ಒಂದು ಸರ್ಕಾರದ ಜೀವನಾಡಿ ಇದ್ದಂತೆ, ಸರ್ಕಾರ ಎಷ್ಟು ಚಲನಶೀಲತೆ ಹೊಂದಿದೆ ಎನ್ನುವಂತಹದು ಒಂದು ಸಂಕೇತ, ಹಲವಾರು ಸಂಕೇತಗಳಲ್ಲಿ ಸಾರಿಗೆ ಇಲಾಖೆಯೂ ಒಂದು ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಇಂದು ವಿಧಾನಸೌಧದ ಪೂರ್ವದ್ವಾರದ ಬಳಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿದ್ಯುತ್‍ಚಾಲಿತ ಬಸ್ ಮತ್ತು ಬಿಸ್-6 ಡೀಸೆಲ್ ಬಸ್‍ಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಅವರು, ಸಾರಿಗೆ ವ್ಯವಸ್ಥೆಯು ಜನಸಾಮಾನ್ಯರ ಓಡಾಟಕ್ಕೆ ಸುಗಮವಾದ ವ್ಯವಸ್ಥೆಯಾಗಿದೆ.ಹೊಸ-ಹೊಸ ತಂತ್ರಜ್ಞಾನ ಹಾಗೂ ಆಧುನಿಕ ಬದಲಾವಣೆಗಳೊಂದಿಗೆ ಸಾರಿಗೆ ಸಂಸ್ಥೆ ಇಂದು ಮನ್ನಡೆಯುತ್ತಿದೆ ಎಂದು ಹೇಳಿದರು.
ಆಧುನಿಕ ಸಾರಿಗೆ ವ್ಯವಸ್ಥೆಯಲ್ಲಿ ನಮ್ಮ ಸಾರಿಗೆ ಸಂಸ್ಥೆಯೂ ಕೂಡ ಮುಂದುವರೆಯಬೇಕು ಎನ್ನವುದು ನಮ್ಮೆಲ್ಲರ ಚಿಂತನೆ. ಸಬ್ಸಿಡಿ ಆಧಾರದಲ್ಲಿ ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಕಷ್ಟಸಾಧ್ಯ. ಸಬ್ಸಿಡಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ಇದು ನಮ್ಮ ಮುಂದಿರುವ ಒಂದು ದೊಡ್ಡ ಸವಾಲು. ಅದಕ್ಕಾಗಿ ಸಂಪೂರ್ಣ ಸಾರಿಗೆ ಸಂಸ್ಥೆಯನ್ನು ಪುನಃಶ್ಚೇತನ ಮಾಡಲು ಹಿಂದಿನ ಮುಖ್ಯ ಕಾರ್ಯದರ್ಶಿಗಳಾದ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಸಮಿತಿಯನ್ನು ಮಾಡಲಾಗಿದೆ. ಬೆಸ್ಕಾಂನಲ್ಲಿ ಪ್ರಧಾನ ಕಾರ್ಯದರ್ಶಿ ಜಯರಾಜ್ ಅವರ ಅನುಭವನ್ನು ಪಡೆದುಕೊಂಡು ನಾವು ಸಾರಿಗೆ ಸಂಸ್ಥೆಯ ಪುನಃಶ್ಚೇತನ, ನಿಗಮಗಳು ಮತ್ತು ಬೆಂಗಾವಲು ಪಡೆಗಳಿಗೆ ಹೊಸ ಸ್ವರೂಪವನ್ನು ಕೊಟ್ಟು ದಕ್ಷತೆಯಿಂದ ಜನರ ಸೇವೆಗಳನ್ನು ಮಾಡಬೇಕು.
ಸಾರಿಗೆ ಸಂಸ್ಥೆಯಲ್ಲಿ ಆರ್ಥಿಕ ಸ್ವಾವಲಂಬನೆ ಆಗಬೇಕು. ನಮ್ಮ ರಾಜ್ಯದಲ್ಲಿ ಎರಡು ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ ಆದರೆ ಒಂದು ಜನರ ಸೇವೆಯನ್ನು ಚೆನ್ನಾಗಿ ಮಾಡಬಹುದು ಅದರ ಜೊತೆಗೆ ಸಂಸ್ಥ್ತೆಯನ್ನು ಚೆನ್ನಾಗಿ ಕಟ್ಟಬಹುದು ಹಾಗೂ ಸರ್ಕಾರದ ಹೊರೆಯನ್ನು ಕಡಿಮೆ ಮಾಡಬಹುದಾಗಿದೆ. ಹಾಗಾಗಿ ಸಾರಿಗೆ ಸಂಸ್ಥೆ ಮತ್ತು ಬೆಸ್ಕಾಂ ಸಂಸ್ಥೆಗಳು ಇವೆರಡರ ಪುನಃಶ್ಚೇತನ ಮಾಡುವುದು ಸರ್ಕಾರದ ಒಂದು ಸಂಕಲ್ಪವಾಗಿದೆ.
ಬಿಎಸ್-6 ಉನ್ನತ ಮಟ್ಟದ ಪರಿಸರ ಸ್ನೇಹಿ ಮಾನದಂಡಗಳನ್ನು ಹೊಂದಿರುವಂತಹ ಯುರೋಪಿಯನ್ ಸ್ಟ್ಯಾಂಡರ್ಸ್‍ನಲ್ಲಿ ಪ್ರಮುಖವಾಗಿದೆ. ಇದನ್ನು ಈಗಾಗಾಲೇ ಕೆಎಸ್‍ಆರ್‍ಟಿಸಿ ಅಳವಡಿಸಿಕೊಂಡಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ಇಡೀ ಏಷ್ಯಾದಲ್ಲಿ ಖಾಸಗೀ ಇರಬಹುದು, ಸಾರ್ವಜನಿಕ ಸಾರಿಗೆ ಇರಬಹುದು ಪರಿಸರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅನಿವಾರ್ಯವಾಗಿದೆ. ಬಿಎಸ್-6 ಅತ್ಯಂತ ಹೊಸದಾದ ವಾಹನವಾಗಿದ್ದು, ಅದರ ಜೊತೆಗೆ ಎಲೆಕ್ರ್ಟಿಕ್ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೈಡ್ರೋಕಾರ್ಬನ್ ಪೆಟ್ರೋಲ್, ಡೀಸೆಲ್ ಫಾಸಿಲ್, ಫ್ಯೂಯೆಲ್ಸ್, ಆಯಿಲ್‍ಗಳು, ಕೋಲ್ ಬಳಕೆ ಕಡಿಮೆ ಮಾಡಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಅದರ ಅನುಗುಣವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಸಾರಿಗೆ ಸಂಸ್ಥೆಯು 90 ಎಲೆಕ್ಟ್ರಿಕ್ ಬಸ್ಸ್ಸುಗಳನ್ನು ಅಳವಡಿಸುತ್ತಿದ್ದೇವೆ. ಒಟ್ಟು 300 ಬಸ್ಸುಗಳನ್ನು ಅಳವಡಿಸಬೇಕೆನ್ನುವ ಗುರಿ ಇದೆ. ಮುಂದೆ ಸುಮಾರು 600 ಬಿಎಸ್-6 ಬಸ್ಸುಗಳನ್ನು ಅಳವಡಿಸಬೇಕು ಎನ್ನುವ ತೀರ್ಮಾನ ಮಾಡಲಾಗಿದೆ. ಈ ಬಸ್ಸುಗಳು ಬಂದರೆ ಬೆಂಗಳೂರಿನಲ್ಲಿ ಒತ್ತಡ, ಪರಿಸರ ಹಾನಿ, ಮಾಲಿನ್ಯ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುವಂತೆ ಮಾಡಿ ಜನರಿಗೆ ಉತ್ತಮ ಸೇವೆಯನ್ನು ನೀಡಿ, ಲಾಭವನ್ನು ಸಹ ಗಳಿಸಬೇಕು. ಈ ನಿಟ್ಟಿನಲ್ಲಿ ಕೆಎಸ್‍ಆರ್‍ಟಿಸಿ ಚಿಂತನೆ ಮಾಡಬೇಕಿದೆ. ಸಂಸ್ಥೆಯು ಆಧಾಯ ಗಳಿಕೆಗೆ ಹೆಚ್ಚು ಒತ್ತನ್ನು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಆದಾಯವು ಸೋರಿಕೆಯಾಗುತ್ತಿದ್ದು ಅದನ್ನು ತಡೆಯುವಂತಹ ಕಾರ್ಯವಾಗಬೇಕಿದೆ. ಒಂದು ಕಡೆ ಸರ್ಕಾರ ಸಬ್ಸಿಡಿ ಕೊಡುತ್ತಿದ್ದರೆ, ಇನ್ನೊಂದು ಕಡೆ ಸೋರಿಕೆ ಹೆಚ್ಚಾಗುತ್ತಿದ್ದರೆ ಕಷ್ಟ ಆಗುತ್ತದೆ.
ಆನಿಟ್ಟಿನಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಸಲಹಾ ಸೂಚನೆಗಳನ್ನು ಅಳವಡಿಸುವುದರ ಮೂಲಕ ಸಾರಿಗೆ ಸಚಿವರ ನೇತೃತ್ವದಲ್ಲಿ ಸಾರಿಗೆ ಸಂಸ್ಥೆಗೆ ಹೊಸ ಶಕ್ತಿಯನ್ನು ಹಾಗೂ ಹೊಸ ಆಯಾಮವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸಾರಿಗೆ ವ್ಯವಸ್ಥೆ ಹೆಚ್ಚಾಗಿ ಬಳಕೆ ಮಾಡುವಂತಾಗಬೇಕಿದೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ಬಿಎಂಟಿಸಿ ಸೇವೆಯನ್ನು ಸಾರ್ವಜನಿಕರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸ್ವಂತ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದು, ವಾಯು ಮಾಲಿನ್ಯ ಹೆಚ್ಚಾಗುವುದರೊಂದಿಗೆ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಬೇಕು. ಹೆಚ್‍ಎಎಲ್, ಐಟಿ ಕಂಪನಿಗಳು, ಇತರೆ ಖಾಸಗಿ ಕಂಪನಿಗಳು ಬಿಎಂಟಿಸಿ ಸೇವೆಯನ್ನು ಬಳಸಿಕೊಂಡರೆ, ವಾಯು ಮಾಲಿನ್ಯವನ್ನು ತಡೆಗಟ್ಟಬಹುದು. ಹಾಗೂ ಸಾರಿಗೆ ಸಂಸ್ಥೆಯೂ ಸಹ ಲಾಭವನ್ನು ಗಳಿಸಬಹುದಾಗಿದೆ. ಈ ಸಂಬಂಧ ಸಾರಿಗೆ ಸಂಸ್ಥೆಗಳು ಇಂತಹ ಕಂಪನಿಗಳ ಮನವೊಲಿಸಿ ಕಾರ್ಯನಿರ್ವಹಿಸಬೇಕು. ಹೊಸ ಚಿಂತನೆಗಳಿಂದ ಹೊಸ-ಹೊಸ ಸೇವೆಗಳನ್ನು ನೀಡುವ ಮೂಲಕ ಇಡೀ ದೇಶದಲ್ಲಿ ಬಿಎಂಟಿಸಿ ನಂಬರ್ ಒನ್ ಮಾಡುವುದಕ್ಕೆ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಶ್ರೀರಾಮಲು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಎನ್.ಎಸ್. ನಂದೀಶ್‍ರೆಡ್ಡಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಆರ್.ವೆಂಕಟೇಶ್, ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್‍ಸಿಂಗ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರಕುಮಾರ್ ಕಟಾರಿಯಾ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರಾದ ಸೂರ್ಯಸೇನ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…