ಅಲ್ಲದೇ ಮಕ್ಕಳಾದ ನ್ಯಾಯವಾದಿ ಸಂತೋಷ ಸತ್ಯಂಪೇಟೆ ಮತ್ತು ಲೇಖಕ ಹಾಗೂ ‘ಬಸವ ಮಾರ್ಗ’ದ ಈಗಿನ ಸಂಪಾದಕರಾದ ವಿಶ್ವರಾಧ್ಯ ಸತ್ಯಂಪೇಟೆಯವರ ತಂದೆಯ ಅಂತ್ಯದ ವಿಚಾರಗಳೂ.!! ಮನುಷ್ಯಪ್ರೀತಿಯ ‘ಬಸವ ಮಾರ್ಗ’ದ ಲಿಂಗಣ್ಣ ಸತ್ಯಂಪೇಟೆ ಮಾನವಪ್ರೀಯ ‘ಬಸವ ಮಾರ್ಗ’ದ ಬಹು ಮಾನವತಾವಾದಿ ಬರಹಗಾರ, ಪಿ.ಲಂಕೇಶ್ ರ ವಿಚಾರದ ಅನುಯಾಯಿಗಳು, ಎಲ್ಲಕ್ಕೂ ಮಿಗಿಲಾಗಿ ‘ಬಸವತತ್ವ’ದ ಮುನ್ನಡೆಯ ಪಾರಿಚಾರಕ. ಹೀಗೆಲ್ಲಾ ಮನುಷ್ಯ ಧರ್ಮದ ಏನೇನೋ ಆಗಿದ್ದ ಲಿಂಗಣ್ಣ ಸತ್ಯಂಪೇಟೆ ಇಂದೇಕೋ ನೆನಪಾದರು. ಹಾಗಾಗಿ ಹೀಗೆಲ್ಲಾ ಏನೆನೋ ಬರೆದೆನು.
ಲಿಂಗಣ್ಣ ಸತ್ಯಂಪೇಟೆಯವರು ಮತ್ತು ಅವರ ಮಕ್ಕಳಾದ ವಿಶ್ವರಾಧ್ಯ ಸತ್ಯಂಪೇಟೆ, ಸಂತೋಷ ಸತ್ಯಂಪೇಟೆರೂ ನೆನಪಾದರು.
ಹಾಗೆಯೇ ಲಿಂಗಣ್ಣ ಸತ್ಯಂಪೇಟೆ ತೀರಿದಾಗ ಅವರ ಮಕ್ಕಳಾದ ವಿಶ್ವರಾಧ್ಯ ಸತ್ಯಂಪೇಟೆ ಮತ್ತು ಸಂತೋಷ ಸತ್ಯಂಪೇಟೆಯವರು ಆಗ ಪ್ರತಿಕ್ರಿಯಿಸಿದ ವಿಚಾರಗಳೂ ನೆನಪಾದವು. ಇದರ ಮೊದಲು ಆ ಸಂದರ್ಭದಲ್ಲಿ ಲಿಂಗಣ್ಣ ಸತ್ಯಂಪೇಟೆಯವರು ತೀರಿದಾಗ ಪ್ರತಿಕ್ರಿಯೆಸಿದ ಸಮಾಜದ ಬಗೆಗೆ ನೋಡೋಣ.
ಅದು ಹೀಗಿತ್ತು: ಲಿಂಗಣ್ಣ ಸತ್ಯಂಪೇಟೆಯವರು ಬಸವತತ್ವ ಪ್ರಚಾರ ಮಾಡುವುದರೊಂದಿಗೆ ತಮ್ಮ ಮೊನಚಾದ ಬರವಣಿಗೆ ಮೂಲಕ ಸಮಾಜದ ಓರೆಕೋರೆಗಳ ಮಾಹಿತಿ ನೀಡುತ್ತಿದ್ದ ಹಿರಿಯ ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ಅವರ ಸಾವಿನ ಕುರಿತು ಕೂಡಲೇ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಯುವ ಬಸವ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪಾರ್ಥಿವ ಶರೀರದೊಂದಿಗೆ ಸ್ವ-ಗ್ರಾಮ ಸತ್ಯಂಪೇಟೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್‌ನ್ನು ಸರ್ದಾರ್ ವಲ್ಲಭಭಾಯಿ ವೃತ್ತದಲ್ಲಿ ನಿಲ್ಲಿಸಿಕೊಂಡು ಅಂದು ಸಂಜೆ ಕೆಲಕಾಲ ರಸ್ತೆತಡೆ ನಡೆಸಿದ್ದರು.
12ನೇ ಶತಮಾನದಲ್ಲಿ ಬಸವಣ್ಣನವರು ಮಾಡುತ್ತಿದ್ದ ಸಮಾಜಸೇವೆಯನ್ನೇ, 21ನೇ ಶತಮಾನದಲ್ಲಿ ಲಿಂಗಣ್ಣ ಸತ್ಯಂಪೇಟೆ ಅವರು ಮಾಡಿಕೊಂಡುತ್ತಿದ್ದರು. ನಿಷ್ಠುರ ಬರಹ, ನಿಷ್ಠುರ ಭಾಷಣದ ಮೂಲಕ ಸಮಾಜ ಘಾತುಕರು ಹಾಗೂ ಸಮಾಜ ಘಾತುಕ ವಿಚಾರಗಳ ಬಗ್ಗೆ ಜನಜಾಗೃತಿಯನ್ನುಂಟು ಮಾಡುತ್ತಿದ್ದರು. ಬಹಳ ಅಮಾನವೀಯ ರೀತಿಯಲ್ಲಿ ಅವರ ಹತ್ಯೆಯಾಗಿರುವುದು ಮೇಲ್ನೊಟಕ್ಕೆ ತಿಳಿದು ಬಂದಿತ್ತು ಆಗ, ಅಲ್ಲದೇ ಈಗಲೂ ಕೂಡ. ಸರ್ಕಾರ ಕೂಡಲೇ ಈ ಕುರಿತು ಸಿಬಿಐ ತನಿಖೆ ನಡೆಸಬೇಕು. ಪಾತಕಿಗಳು ಯಾವ ಮೂಲಯಲ್ಲಿದ್ದರು ಅವರನ್ನು ಹೊರತರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಖಜಾಂಚಿ ವಿಜಯಕುಮಾರ ತೇಗಲತಿಪ್ಪಿ ತೀವ್ರವಾಗಿ ಬಡಿದುಕೊಂಡಿದ್ದರು.
ಲಿಂಗಣ್ಣ ಸತ್ಯಂಪೇಟೆ ಅವರ ಹತ್ಯೆ ಘಟನೆಯನ್ನು ವಿವಿಧ ಸಂಘಟನೆಗಳ ಮುಖಂಡರು ಖಂಡಿಸಿದ್ದರು. ರಾಷ್ಟ್ರೀಯ ಬಸವದಳ, ಯುವ ರಾಷ್ಟ್ರೀಯ ಬಸವದಳ, ಜೈ ಕರ್ನಾಟಕ ರಕ್ಷಣಾ ವೇದಿಕೆ, ವಚನೋತ್ಸವ ಸಮಿತಿ, ಬಸವ ಸಮಿತಿ, ಜಿಲ್ಲಾ ವೀರಶೈವ ನೌಕರರ ಸಂಘ, ವೀರಶೈವ ಯುವ ವೇದಿಕೆ ಹೀಗೆಯೇ ಹತ್ತಾರು ಸಂಘ-ಸಂಘಟನೆಗಳು, ಅನೇಕಾನೇಕ ‘ಮಾನವಪ್ರೀಯ’ ಮುಖಂಡರು ಪ್ರತಿಭಟನೆಗಳಲ್ಲೂ ಪಾಲ್ಗೊಂಡು ಕೊಲೆಗಡುಕ ಕಿರಾತಕ ಬಂಧನಕ್ಕೆ ಪೋಲಿಸ್ ಮತ್ತು ಸರ್ಕಾರದ ಬೆನ್ನು ಬಿದ್ದಿದ್ದರು.
ಆದರೆ ಕೊನೆಗೂ ಬಸವಪ್ರೀಯ ಬರಹಗಾರ ಲಿಂಗಣ್ಣ ಸತ್ಯಂಪೇಟೆಯವರ ಕೊಲೆಯ ಸತ್ಯ ಹೂರಣ, ಜಾತಿವಿಘಟನೆಯ ಕೊಲೆಗಡುಕ ಸಮಾಜದ ನಿಜ ಅಂಶ ಹೊರಬೀಳಲೇ ಇಲ್ಲ. ಅಷ್ಟು ಘಾತುಕವಾಗಿದೆ ಮನುಷ್ಯಪ್ರೀಯತೆಯ ಕೊಲೆಗಾರ ಸಮಾಜ. ಇರಲಿ. ಈಗ ಲಿಂಗಣ್ಣ ಸತ್ಯಂಪೆಟೆಯವರ ಮಾನವಪ್ರೀತೆ ಅಂದರೆ ಅವರ ‘ಬಸವ ಮಾರ್ಗ’ದ ಬಗೆಗೆ ನೋಡೋಣ.
ಸರಳ ಜೀವನದ ಸಾಹಿತಿ, ಹಿರಿಯ ಪತ್ರಕರ್ತರಾಗಿದ್ದ ಲಿಂಗಣ್ಣ ಸತ್ಯಂಪೇಟೆ ಅವರ ಸಾವು ತೀವ್ರ ಆಘಾತವನ್ನುಂಟು ಮಾಡಿದೆ. ಹಿರಿಯ ಬಸವ ಚೇತನವನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಈ ಅಕಾಲಿಕ ಮೃತ್ಯುವನ್ನು ಸಹಿಸುವಂತಹ ಶಕ್ತಿಯನ್ನು ಕುಟುಂಬ ವರ್ಗದವರಿಗೆ ಗುರು ಬಸವಣ್ಣ ಕರುಣಿಸಲಿ. ಕರುಣಿಸಿತೂ ಕೂಡ. ಆದರೆ ಹಾಗಂತ ಲಿಂಗಣ್ಣ ಸತ್ಯಂಪೇಟೆಯವರ ಬಸವಪ್ರೀತೆಯ ಕೊಲೆಯನ್ನು ಸಹಸಲು ಸಾಧ್ಯವೇ? ಅದು ಅನುದಿನ ಅನುಗಾಲವಿರುವ ನೋವು. ಹಾಗೂ ಮನನೋವಿನ ವಿಚಾರ.
ಲಿಂ. ಲಿಂಗಣ್ಣ ಸತ್ಯಂಪೇಟೆ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸುರೇಶ ಪಾಟೀಲ ಜೋಗೂರ, ಗೌರಿಶ ಎಸ್. ಖಾಶೆಂಪುರ, ಶರಣು ವಿ. ಪಾಟೀಲ, ಶಾಂತು ಖ್ಯಾಮಾ, ಸಿದ್ದು ಜಿ. ಭೂಸಾರೆ ಪ್ರಕಟಣೆ ಮೂಲಕ ಪ್ರಾರ್ಥಿಸಿದ್ದರೂ ಕೂಡ. ಇದೂ ಇರಲಿ. ಆದರೆ ಲಿಂಗಣ್ಣ ಸತ್ಯಂಪೇಟೆಯವರ ಬಸವಪ್ರೀಯತೆಯೆಂದರೆ ಮಾನವಪ್ರೀಯತೆಯನ್ನು ಹಿಂದೂ, ಇಂದು, ಮುಂದು ಮತ್ತು ಎಂದೆಂದಿಗೂ ಕೊಲ್ಲಲು ಸಾಧ್ಯವಿಲ್ಲವೆಂಬುದೂ ಅಷ್ಟೇ ಕರೆ.
ಆಗ ಶಾಸಕರಾಗಿದ್ದ ಅಲ್ಲಮ ಪ್ರಭು ಪಾಟೀಲ, ಆಗಿನ ಮಾಜಿ ಶಾಸಕ ವೈಜನಾಥ ಪಾಟೀಲ, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಂ ಪಾಟೀಲ, ಪಂಚ ಜಿಲ್ಲೆಗಳ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸುರೇಶ ಸಜ್ಜನ್, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಜೈ ಕರವೇ ಅಧ್ಯಕ್ಷ ಅರುಣಕುಮಾರ್ ಪಾಟೀಲ, ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಎಂ.ಬಿ. ಅಂಬಲಗಿ ಮತ್ತಿತರರು ಸತ್ಯಂಪೇಟೆ ಅವರ ಅಕಾಲ ಸಾವಿಗೆ ಸಂತಾಪ ಸೂಚಿಸಿದ್ದರು.
ಈಗ ಇದೆಲ್ಲಾ ಏಕೆ ನೆನಪಾಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ನೆನಪಾಯಿತು. ಆದರೆ ಅವರ ‘ಬಸವ ಮಾರ್ಗ’ದ ಅನುಸಂಧಾನ ಚಿರಂಜೀವಿ…ನ್ಯಾಯವಾದಿಯಾದಿ ಮಗ ಸಂತೋಷ ನೆನಪು ಲಿಂಗಣ್ಣ ಸತ್ಯಂಪೇಟೆ ಕುರಿತು ಹೀಗಿದೆ ನೋಡಿ…
ಬಸವ ಮಾರ್ಗ ತೋರಿದ ನನ್ನಪ್ಪ ಸತ್ಯ ಶರಣ: ಜೀವನ ಒಳಿತು ಕೆಡಕುಗಳ ಸಮ್ಮಿಶ್ರಣ ಬದುಕಿನ ಪಯಣದಲ್ಲಿ ದುಃಖವಿದೆ ಸುಖವೂ ಇದೆ ಇಲ್ಲಿ ನಡೆಯುವ ಕೆಲ ಸಂಗತಿಗಳಷ್ಟೇ ನಮ್ಮ ನಿಯಂತ್ರಣದಲ್ಲಿರುತ್ತವೆ, ಇನ್ನೂ ಕೆಲವು ನಮ್ಮ ಹಿಡಿತಕ್ಕೆ ಸಿಗುವದಿಲ್ಲ ಒಳಿತಾದಾಗ ಹೃದಯ ಹಿಗ್ಗಿದರೆ ಕೆಡಕಾದಾಗ ಮನಸ್ಸು ಕುಗ್ಗುತ್ತದೆ, ಆದರೆ ಕೆಡಕುಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಬದುಕು ಮುಂದೆ ಸಾಗದು, ಎಂಬಂತೆ ಸಾಗಿದ್ದು. ನಮ್ಮಜ್ಜ ಅಜ್ಜಿ ಅಪ್ಪ ಈಗ ಅದು ಇತಿಹಾಸ, ಇದನ್ನು ಸ್ವಲ್ಪ ಸಿಂಹಾವಲೋಕನ ಮಾಡಿ ನೋಡೋಣವೇ..!
ಸಂಬ್ರಮ ಎನ್ನುವ ಪದವೇ ವಿಶಿಷ್ಟವಾದದ್ದು, ಈ ಪದವು ಹಲವರಲ್ಲಿ ಅದ್ಭುತ ಪರಿಕಲ್ಪನೆ ಮೂಡುವದು ಸಹಜ, ಅಚ್ಚರಿ ಪರಿಕಲ್ಪನೆಯ ಖುಷಿ ಎಂತಲೇ ಹೇಳಬಹುದಾಗಿದೆ, ಒಂದು ಬಗೆಯ ವಿಜಯದ ಪತಾಕೆ ಹಾರಿಸಿದಂತೆ ಬಾಸ, ಆ ಸಂಬ್ರಮ ಪಡೋಕೆ ನಿತ್ಯ ವiನುóಷ ಒಂದಿಲ್ಲಾ ಒಂದು ಕೆಲಸಗಳಲ್ಲಿ ತೊಡಗಲು ಮಗ್ನನಾಗುತ್ತಾನೆ, ಜತೆಗೆ ಜೀವನವೆಂಬ ಬಂಡಿ ಎಳೆಯುತ್ತಿರುತ್ತಾನೆ, ಸಂಬ್ರಮ ಇದು ನಿಂತ ನೀರಲ್ಲ ಸದಾ ಒಬ್ಬರಿಂದೊಬ್ಬರಿಗೆ ಹರಿಯುತ್ತಲೇ ಬರುತ್ತದೆ.
ಅನೇಕರು ವೃತ್ತಿಗಾಗಿ ಬಡಿದಾಡಿ ಕಷ್ಟ ಪಟ್ಟು ಗೆಲವು ಕಂಡರೂ ಪ್ರವೃತ್ತಿ ಮತ್ತೋಂದಕ್ಕೆ ಕೈ ಹಿಡಿದೆಳೆದಿರುತ್ತದೆ, ಶಾಲಾ ಮಾಸ್ತರಿಕೆ ವೃತ್ತಿಯೊಂದಿಗೆ ಸಾಗುತ್ತಲೆ ಅಪ್ಪ ಪ್ರವೃತ್ತಿ ಬೆಳಸಿಕೊಂಡ, ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿ ಪ್ರವೃತ್ತಿಯೇ ವೃತ್ತಿಯಾಗಿಸಿಕೊಂಡ ಪರಿಯ ಬಗ್ಗೆ ನೋಡುವ ಬನ್ನಿ.
ಹಸಿದ ಹೊಟ್ಟೆ ಹರಿದ ಬಟ್ಟೆ ಬಡತನದಲ್ಲಿ ಬೆಂದು ಬಸವಳಿದಾ ಆ ದಿನದ ನಮ್ಮ ಹದಿನೈದು ಸದಸ್ಯರ ಕ್ರಿಕೆಟ್ ಟಿಂ ಕುಟುಂಬಕ್ಕೆ (ಶಿವಮ್ಮ ಮತ್ತು ಗುರಪ್ಪ ಯಜಮಾನ) ನಮ್ಮಜ್ಜಿ ನಮ್ಮೂತ್ಯೆನವರೆ ಕುಟುಂಬಕಾಧಾರ ಸ್ತಂಭ, ನಮ್ಮ ತಂದೆ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ “ತಂಗಿ ತಮ್ಮಂದಿರು ಅಂಬೆಗಾಲಿಡುವಷ್ಟರಲ್ಲೇ ನಮ್ಮೂತ್ಯಾ ದಾಸೋಹದೊಂದಿಗೆ ಬರಿದು ಮಾಡಿಕೊಂಡು ಬಡವಾಗಿದ್ದರಂತೆ. ಕೊರಳಲ್ಲಿನ ಚಿನ್ನದ ಲಿಂಗದಕಾಯಿ ಟೊಂಕದಲ್ಲಿ ಚಿನ್ನದ ಉಡದಾರ ಅಜ್ಜಿಯ ಓಲೆ.
ಡಾಬ ಕಂಟಿ ಸರಗಳು ಬಡತನಕ್ಕೆ ಕರಗಿದ್ದವಂತೆ, ಈ ಕುಟುಂಬಕ್ಕೆ ಅಪ್ಪನೆ ಹಿರಿಯ, ಅಂತಹ ಸಂದರ್ಬದಲ್ಲಿ ಶಾಲಾ ಮಾಸ್ತಾರಿಕೆ ನೌಕರಿ ಪಡೆದು ಶಾಲಾ ಮಕ್ಕಳಿಗೆ ಓದಿಸಿ ಬರೆಯಿಸಿ ಅಕ್ಷರಾಭ್ಯಾಸದ ಪಾಠವ ಮಾಡಿಸಿ ತಿಂಗಳ ಕೊನೆಗೆ ಮೊದಲ ಸಂಬಳ ಪಡೆದು ತನ್ನ ಸ್ವಂತ ಜೇಬಿಗಿರಿಸಿಕೊಂಡು ಬಂದು ನಮ್ಮೂತ್ಯೆನ ಕೈಗಿಟ್ಟಾಗ ನಮ್ಮೂತ್ಯಾ ನಮ್ಮಾಯಿ ಮತ್ತು ಮನೆಯ ಸದಸ್ಯರೆಲ್ಲರೂ ಹಣ ಮುಂದಿಟ್ಟುಕೊಂಡು (ಈಗಿನ ಬರ್ತಡೆ ಕೇಕ್‍ತರ)ಅದನ್ನು ಎಲ್ಲರೂ ಮುಟ್ಟಿ ನೋಡಿ ಸಂಬ್ರಮಿಸಿದ್ದರೂ ಎಂದು ಅಪ್ಪ ಹೇಳಿದ್ದ.
ನಮ್ಮಜ್ಜ ಮನೆಯಲ್ಲಿ ಪ್ರಭುಲಿಂಗಲೀಲೆ. ಪುರಾಣ ಪುಣ್ಯಕಥೆಗಳ ಅಧ್ಯಯನ ಮತ್ತು ಊರಿನಲ್ಲಿ ಯಜಮಾನಿಕೆಯೊಂದಿಗೆ ನ್ಯಾಯ ನೀತಿ ರೀತಿ ರೀವಾಜುಗಳಲ್ಲಿ ತೊಡಗಿದರೆ. ನಮ್ಮಜ್ಜಿ ಮುಂಜಾನೆದ್ದು ತಲೆಗೆ ಚಿಂದಿ ಬಟ್ಟೆಯ ಸಿಂಬಿ. ಕೈಯಲ್ಲಿ ಈಚಲ ಗಿಡದ ಪುಟ್ಟಿ ಕಾಲಿಗೆ ಅಂಬರಿ ತಪ್ಪಲಿನ ಚಪ್ಪಲಿಮಾಡಿ ಕಟ್ಟಿಕೊಂಡು ಐದಾರು ಅರದಾರಿ ನಡೆದು ದೂರದ ತೋಟಪಟ್ಟಿಗೆ ಹೋಗಿ ಕಾಯಿಪಲ್ಯೆ ಹಾಕಿಸಿಕೊಂಡು ಹತ್ತಾರು ಕೀ.ಮಿ. ನಡೆಯುತ್ತ ಪುಟ್ಟಯಾಗಿನ ಕಾಯಿಪಲ್ಯೆ ಮುಗಿಯುತನಕ ಅಲೆದಲೆದು ಮಾರಿ ದಾರಿಯಲ್ಲೆ ಸಜ್ಜೆ ಅಥವಾ ನೆವಣಿ ಮುಂಗಾರು ಜೋಳ ಪಡೆದು, ಹಸನು ಮಾಡಿ ಗಿರಣಿಗೆ ಹಾಕಿ ರಾತ್ರಿ ಹತ್ತರ ಸಮಯಕ್ಕೆ ನಮ್ಮವ್ವ ತಂದರೆ, ನಿಮ್ಮವ್ವ ರೊಟ್ಟಿಯ ಸಪ್ಪಳ ಮಾಡುತ್ತಿದ್ದಳು.
ಮಲಗಿಕೊಂಡವರಿಗೆ ಸಿಗುತ್ತಿರಲಿಲ್ಲವಂತೆ, ಎದ್ದರೆ ಏನ್ಮಾಡುತ್ತಿದ್ದಿರಿ ಎಂದರೆ? ಸಂಕಟದಿಂದ ರೊಟ್ಟಿ ಹರಿದು ಕೊಡಬೇಕಾಗಿರುತ್ತಿತ್ತಂತೆ, ಮುಂಜಾನೆಯಿಂದ ಸಂಜೆಗಂಟ ನೀವು ಅಷ್ಟೂ ಜನದ ಗತಿಯೇನು?ಎಂದು ನಾ ಪ್ರಶ್ನೆಮಾಡಿದೆ,? ಆಟವಾಡಲು ಹೋದವರು ಗಿಡವೇರಿ ಬಾರೆಣ್ಣು. ಜಂಪಲಹಣ್ಣು. ಪಂದ್ಲಣ್ಣು, ಇನ್ನೂ ಕಟ್ಟಿಗೆ ತರಲು ಸೆಗಣಿ ತರಲು ಹೊದವರು ಮಜ್ಜಿಗೆ. ಗಜ್ಜರೆ. ಗೆಣಸು. ಸುಟ್ಟ ಊಳ್ಳಾಗಡ್ಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತಿದ್ದರು, ಇನ್ನ ನಿಮ್ಮಗತಿ ಏನ್ರೀ ಎಂದರೆ? ನಾನೂ ಅವರಂತೆನೇ.
ಆದರೆ ನಾ ಶಿಕ್ಷಕ ಇರೋದರಿಂದ ಶಾಲೆಗೆ ಹೋಗುವ ದಾರಿಯಲ್ಲಿ ಕೆಲ ಅಂಗಡಿಗಳು ಇರುತ್ತಿದ್ದವು, ಅಂಗಡಿಯವರು ನನ್ನನ್ನು ತಡೆದು ಮಾತನಾಡಿಸಿ ‘ಏನ್ರೀ ಸರ್ ನಮ್ಮ ಮಗಾ ಓದುತ್ತಾನ ಇಲ್ಲೋ ಅಂತಾ ವಿಚಾರಿಸಿ ಅವನಿಗೆ ಜರ ಸರಿಯಾಗಿ ವಿದ್ಯಾಬುದ್ದಿ ಹೇಳ್ರೀ ಎಂದೇಳುತ್ತಿದ್ದರು, ಜತೆಗೆ ಬೆಲ್ಲಾಕೊಟ್ಟು ತಿನ್ನಿರಿ ಮಾಸ್ತಾರಸಾಬ್‍ಎಂದೇಳಿ ಚರಿಗೆ ನೀರುಕೊಡುತ್ತಿದ್ದರು, ಕುಡಿದ ನೀರು ಬೆಲ್ಲಾದೊಂದಿಗೆ ಸಂಜೆತನಕ ಇರುತಿದ್ದೆ.
ರೈತನಾಗಿ ರೇಷ್ಮೆ ಕೃಷಿಯಲ್ಲಿ ಸಂಬ್ರಮ: ಧಾರವಾಡದಿಂದ ಬರುತ್ತಿದ್ದ ಸಾವದಾನ ಪತ್ರಿಕೆ ಓದುತಿದ್ದೆ. ಒಂದು ಬಾರಿ ಅದರಲ್ಲಿ ಯಾರೋ ಬರೆದ ರೈತರ ಕಾಲಂನ ಲೇಖನದಲ್ಲಿ “ರೈತ ರೇಷ್ಮೆ ಕೃಷಿ ಮಾಡಿ ತಿಂಗಳಿಗೆ ಮಾಸ್ತಾರಿಕೆ ನೌಕರಿಗಿಂತ ಮೂರು ಪಟ್ಟು ಹಣ ಪಡೆದದ್ದನ್ನು ನಾ ಓದಿದೆ” ತಡಮಾಡದ ನಾ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿ ಅಲ್ಲಿಂದ ನಾ ಟೆಲಿಗ್ರಾಂ ಹಾಕಿ ಇಂತಲ್ಲಿ ಮುರುಘಾಮಠದಲ್ಲಿ ಇದ್ದೇನೆ. ಒಂದೆರಡು ವಾರಬಿಟ್ಟು ಬರುವೆ ಎಂದ್ಹೇಳಿದ್ದೆ.
ರೇಷ್ಮೆಕೃಷಿಯ ಮಾಹಿತಿ ಪಡೆದು ಸಾಲಾ ಮಾಡಿ ರೇಷ್ಮೆಕಡ್ಡಿಗಳನ್ನ ತಂದು ಅಳಿದುಳಿದ ನಮ್ಮ ಎರಡು ಎಕರೆಯ ಹೊಲ ಅರ್ದದಲ್ಲಿ ಹಸನು ಮಾಡಿ ನೇಗಿಲ ಕುಂಟೆ ರಂಟೆ ಹೊಡೆಸಿ ತಿಪ್ಯಾಗಿನ ಗೊಬ್ಬರ ಹಾಕಿ ಹಚ್ಚಿಸಿದೆ, “ಏನ್ ಗುರಪ್ಪ ಯಜಮಾನ” ನಿಮ್ಮ ಮಗಾ ನಿಂಗಣ್ಣಾ ಎಲ್ಲಿಂದಲೊ ಕಡ್ಡಿ ತಂದ ಹಚ್ಯ್ಚಾನ ಇಡೀ ಹೊಲ ಹಾಳುಗೇಡಿವ್ಯಾನ ಜ್ವಾಳ ಸಜ್ಜಿ ತೊಗರಿ ಹಾಕಿದ್ರಾ ವರ್ಷಪೂರ್ತಿ ಉಂಡ ಇರಬಹುದು, ಈ ಕಡ್ಡಿ ಹಚ್ಚಿದ್ರಾ ಉಣಕ ಬರ್ತದೇನ್. ಸಾಲಿ ಓದಿದವರು ಹಿಂಗೆ ಮಾಡ್ತರ ನೋಡು ಎಂದು ನಮ್ಮಹೊಲ ಹಾದು ಹೋಗುವವರು ಮುಸಿಮುಸಿ ನಗುತ್ತಿದ್ದಂರಂತೆ,,! ನಿಮ್ಮುತ್ಯಾನು ಇದಕ್ಕ ಸಹಮತ ಕೊಟ್ಟಿರಲಿಲ್ಲಪಾ ಎಷ್ಟೇ ವಿಘ್ನಗಳು ಬಂದ್ರು ಛಲಬಿಡದೆ ನೀರು ಕಟ್ಟಿ ಬೆಳೆ ಬೆಳಸಿದ್ವಿ ಎಂದ್ರು.
ಮನೆಯ ಸದಸ್ಯರೆಲ್ಲ ಸೇರಿ ರೇಷ್ಮೆ ಮಾಡಿ ತಿಂಗಳು ಸಮೀಪಿಸುತಿದ್ದಂತೆ ರೇಷ್ಮೆ ಹುಳುಗಳು ಗೂಡು ಕಟ್ಟಿ ಬಂಗಾರದ ಬಣ್ಣ ಮಾಡಿದವು ಸಂತಸಗೊಂಡ ನಾನು ಗೂಡು ತೆಗೆದುಕೊಂಡು ಬೆಂಗಳೂರಿಗೆ ಮಾರಲು ಪಯಣ ಬೆಳಸಿದೆ ಹೋಗುವ ತನಕ ಅಲ್ಲಿ ಯಾವ ರೇಟ್ ಇರುತ್ತದೆ ಎಂದು ಬುಗಿಲು ದಿಗಿಲು ಗೋಳ್ಳುತ್ತಾ ಹೋದೆ, ಖರ್ಚು ಮಾಡಿದ್ದಕ್ಕಿಂತ ಹೆಚ್ಚಿಗೆ ಹಣ ಬಂತು, ಅದೇ ಒಂದೆ ಖುಷಿಯಿಂದಲೇ ವಾಪಾಸ್ಸು ಊರಿಗೆ ಬಂದೆ ಮಾಡಿದ ಸಾಲವ ತೀರಿಸಿ ಉಳಿದ ಹಣ ನಿಮ್ಮಜ್ಜಿಕೈಗಿಟ್ಟೆ, ನಮ್ಮಪ್ಪ ನಮ್ಮವ್ವ ಮತ್ತು ನಾನು ಆ ಸಂಬ್ರಮ ಪಟ್ಟಿದ್ದು ನಾನೆಂದಿಗೂ ಮರೆಯಲಾರೆ.
ಆವಾಗಲೇ ನಾವು ಇದನ್ನೆ ಮಾಡೇಕು ಇದರಿಂದಲೇ ನಮ್ಮ ಬಡತನ ಮಾಯವಾಗಬಹುದು ಎಂದುಕೊಂಡು. ಸದಸ್ಯರೆಲ್ಲರೂ ಸೇರಿ ಇದನ್ನೆ ಮಾಡುತ್ತಾ ಬಂದ್ವಿ, ಹರಿದ ಬಟ್ಟೆಗೆ ತೇಪೆ ಹಚ್ಚುತ ಖಾಲಿ ಹೊಟ್ಟೆಗೆ ಅರ್ದ ಹೊಟ್ಟೆ ತುಂಬಿಸುತ್ತಾ ಜೀವ್ನಸಾಗಿಸಿದ್ವಿ, ಹೀಗೆ ಪ್ರತಿ ತಿಂಗಳಿಗೊಂದು ಸಲ ಬೆಳೆ ಬೆಳೆದು ಬೆಂಗಳೂರಿಗೆ ರೇಷ್ಮೆಗೂಡು ಮಾರಾಟ ಮಾಡಿ ಹಣ ಪಡೆದು ಸಂಬ್ರಮ ಪಡುತಿದ್ವಿ ಎಂದು ಅಪ್ಪಾ ಸಂಬ್ರಮವ ನೆನೆದು ಸಂತಸಪಟ್ಟಿದ್ದನ್ನ ಬಸವ ಮಾರ್ಗಪತ್ರಿಕೆಯ ಕೆಲಸ ಮಾಡುವಾಗ ಇಂತಹ ಹಳೆಯ ನೆನಪುಗಳ ಮೆಲಕು ಹಾಕುತ್ತ ಬೇಸರ ಬರದಂತೆ ನೋಡುತ್ತಿದ್ದರು, ತಾವು ಜೀವನದಲ್ಲಿ ಕಷ್ಟಪಟ್ಟಿದ್ದನ್ನ ತಿಳಿಸಿ. ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಗಳ ಭಾವಾರ್ಥದೊಂದಿಗೆ ಬದುಕಿನ ಪಾಠವನ್ನು ಅಪ್ಪ ಹೇಳುತಿದ್ದರು.
ಶಾಲಾ ಶಿಕ್ಷಕನಾಗಿ ಸೇವೆ ಮಾಡಿ ಸಂಬಳ ಪಡೆದು ಮತ್ತು ರೇಷ್ಮೆಕೃಷಿ ಕಾಯಕವ ಮಾಡಿ ಹಣ ಪಡೆದು ತಿಂಗಳ ಸಂಬ್ರಮ ಪಟ್ಟಿದ್ದನ್ನ ಹೇಳಿದ್ದು ಅದ್ಯಾಕೊ ನನ್ನ ನೆನಪಿಗೆ ಬಂತು. ಆದರೆ ಇವೆರಡಕ್ಕಿಂತಲೂ ಅತಿ ಹೆಚ್ಚು ಸಂಬ್ರಮ ಪಟ್ಟಿದ್ದು ‘ಬಸವ ಮಾರ್ಗ’ ಮಾಸಿಕ ಪತ್ರಿಕೆ ಅಂತಾನೆ ಹೇಳಹುದಾಗಿದೆ.
‘ಬಸವ ಮಾರ್ಗ’ ಮಾಸಿಕ ಪತ್ರಿಕೆ ಮಾಡಿ ಸಂಬ್ರಮ: ಸಾಮಾನ್ಯವಾಗಿ ಪತ್ರಿಕೆಗಳು ಬೆಂಗಳೂರನಂತಹ ಸಮುದ್ರದ ಕೇಂದ್ರಗಳಿಂದ ಇಳಿಮುಖವಾಗಿ ಸಲಿಸಾಗಿ ಈಜುಬರದಿದ್ದರೂ ರಭಸವಾಗಿ ನೀರಲ್ಲಿ ಕೊಚ್ಚಿಬರುತ್ತವೆ, ಈ ನೀರು ಎಷ್ಟು ಮನಸ್ಸುಗಳ ಕೊಳೆ ತೆಗೆಯುತ್ತದೋ ಗೋತ್ತಿಲ್ಲ,! ಆದರೆ ಇಲ್ಲಿಂದ ಕೇಂದ್ರಗಳಿಗೆ ಹೋಗಬೇಕಾದರೆ ಖಂಡಿತ ಈಜು ಬರಲೇಬೇಕು ನಮ್ಮ ಈ ಬಸವ ಮಾರ್ಗ ಪತ್ರಿಕೆ ಏಳೆಂಟು ಸಾವಿರ ಹಣ ಕೊಟ್ಟು ಓದುವ ಚಂದಾದಾರನ್ನ ಹೊಂದಿ. ಸಮುದ್ರಕ್ಕೆ ಮೇಲ್ಮಖವಾಗಿ ಏದುರು ಈಜುತ್ತಾ ಸಾಗಿದ್ದು ಒದುಗ ಒಡೆಯರಿಗೆಲ್ಲ ತಿಳಿದ ವಿಷಯ.
ಪ್ರತಿ ತಿಂಗಳ ಹುಣ್ಣಿಮೆ ಬಂತೆಂದರೆ ಸಾಕು ಆಕಾಶಕಾಯವೆಲ್ಲಾ ಹೇಗೆ ಹಾಲಿನ ಕೆನೆಯ ಹೊಳಪಿಟ್ಟಂತೆ ಪ್ರತಿ ಮಾಸದ ಬಸವ ಮಾರ್ಗ ಬಂದಾಗ ಅಪ್ಪನ ಮುಖದಲ್ಲಿ ಬೆಳದಿಂಗಳ ಚಂದಿರನಂತೆ ಹೊಳಪು ಆತನಲ್ಲಿ ಕಾಣುತ್ತಿದ್ದೇವು, ಎಂದೊ ಒಮ್ಮೆ ನಮ್ಮಜ್ಜಿ ಯಾವುದೊ ಒಂದು ಪ್ರಸಂಗದಲ್ಲಿ ಹೇಳಿದ ಒಂದು ಮಾತು ನೆನಪಿಗೆ ಬಂತು ನಿಮ್ಮಪ್ಪ ದವನದ ಹುಣ್ಣಿಮೆ ದಿವಸ ಹುಟ್ಟಿದ್ದಾನ ಆತ ಚಂದಿರನಂತೆ ಹೋಳೆಯುತ್ತಾನ ಅನ್ನೋ ಮಾತು ನಿಜ ಎನಿಸುವಂತಿದೆ.
ಅಪ್ಪ ಸಾಮಾನ್ಯವಾಗಿ ನಿಲ್ದಾಣದಲ್ಲಿ ನಿಂತ ಬಸ್ಸಿಗೆ ಹತ್ತಿ ಊರೂರು ಅಲೆಯುತಿದ್ದರೂ ತಿಂಗಳದ ಮೊದಲವಾರ ಮತ್ತು ಮಾಸದ ಕೊನೆಯವಾರ ಯಾವ ಊರಲ್ಲಿದ್ದರೂ ಶಹಾಪುರಕ್ಕೆ ಹೋಗುವ ಬಸ್‍ಗಾಗಿ ಕಾಯುತಿದ್ದರು, ಎಲ್ಲಿದ್ದಲಿಂದಲೇ ಎಲ್ಲರ ವಿಷಯಗಳ ತಿಳಿಯುತಿದ್ದರು. ಬೆಂಗಳೂರ ಸ್ನೇಹಾ ಮತ್ತಿನ್ನಿತರ ಪ್ರಿಂಟ್‍ರ್ಸಗೆ, ಕೋರಿಯರ್‍ಗೆ ಕರೆಮಾಡಿ ಪತ್ರಿಕೆ ಬರುವದನ್ನ ತಿಳಿದುಕೊಂಡು, ‘ಸಂತೋಷ್ ಪತ್ರಿಕೆ ಬಂದಿವೆ ಬೇಗ ಕೋರಿಯರ್‍ಗೆ ಹೋಗಿ ತೆಗೆದುಕೊಂಡು ಬಾ ಎಂದೇಳುತಿದ್ದರು.
ಅಯ್ಯೋ ಪತ್ರಿಕೆ ಬಂತಾ ಎಂದು ಗೊಣಗುತ್ತಲೇ ಹುಂ ಎನ್ನುತ್ತಿದ್ದೆ ಯಾಕೆಂದರೆ? ನನ್ನೊಂದಿಗೆ ಮನೆಯವರೆಲ್ಲರಿಗೂ ಯಾವುದೇ ಕೆಲಸವಿದ್ದರೂ ಬಸವ ಮಾರ್ಗ ಪತ್ರಿಕೆಗೆ ಕವರ್ಸಗಳು ಹಾಕುವದು, ಟಿಕೆಟ್. ವಿಳಾಸ ಹಚ್ಚುವದು ಆಯಾ ಊರಿನ ಮತ್ತು ಜಿಲ್ಲೆಗಳನ್ನು ಸುತ್ತಳಿಯಿಂದ ಕಟ್ಟಿ ಪೋಸ್ಟ ಆಫೀಸಿಗೆ ಒಯ್ದದಿಡಬೇಕು.
ಹೀಗೆ ನಾವ್ಯಾರು ಮೂರ್ನಾಲ್ಕುದಿನ ಅಲುಗಾಡದೆ ಪತ್ರಿಕೆಯ ಕೆಲಸ ಮಾಡಬೇಕಾಗುತ್ತಿತ್ತು, ಪ್ರಿಂಟರ್ಸನವರು ಕಳಿಸುವದು, ಮತ್ತು ನಾ ಕೋರಿಯರ್‍ನಿಂದ ತರುವದು ಪತ್ರಿಕೆಯ ಕಾರ್ಯಮಾಡುವದು ತಡವಾದರೆ ಅಪ್ಪನ ಸಿಟ್ಟಿಗೆ ನಾವ್ಯಾರೂ ಅಳತೆ ಮಾಡಲು ಸಾಧ್ಯವಿಲ್ಲ. ಆತ ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದರೆ ಬೆಳದಿಂಗಳ ಚಂದಿರನೆ ಸರಿ ಇಲ್ಲವಾದರೆ ಆತ ಸುಡುವ ಸೂರ್ಯ.
ಅಪ್ಪ ಮನೆಗೆ ಬಂದವರೆ ಎಂದಿನಂತೆ ಬಸವ ಮಾರ್ಗ ಪತ್ರಿಕೆಯ ಚಟುವಟಿಕೆಯಲ್ಲಿ ಬೀಜಿಯಾಗಿ, ಮನೆಯಿಂದ ಕದಲುತ್ತಿರುತ್ತಿರಲಿಲ್ಲ. ಹತ್ತಾರು ಬಾರಿ ಮುಖಪುಟ ಪರಿವಿಡಿ ಬಿಚ್ಚುಮಾತುಗಳು. ಒಂದು ಚಿಂತನ, ಲೇಖನಗಳು ಓದಿ. ಓದಿಸಿಕೊಂಡು ಆನಂದ ಪಡುತ್ತಿದ್ದರು, ಗಂಟೆಗಟ್ಟಲೇ ಲೇಖನಗಳ ಬಗ್ಗೆ ಅನೇಕರ ಜತೆ ಫೋನಿನಲ್ಲಿ ಮಾತಾಡಿ, ಪತ್ರಿಕೆಯ ಕಾರ್ಯಮಾಡಿದವರೆಲ್ಲರಿಗೂ ಸಿಹಿಮಾತನಾಡಿ ಸಂಬ್ರಮ ಪಡುತಿದ್ದರು.
ಅದಲ್ಲದೆ ಪುಸ್ತಕ ಪತ್ರಿಕೆಗಳು ಜೋಳಿಗೆಗೆ ತುಂಬಿಕೊಂಡು ಎಂದಿನ ಜಂಗಮನಂತೆ ಸಮಾಜೋದ್ದಾರದ ವಿಜಯ ಪತಾಕೆ ಹಾರಿಸಲು ಹೊರಟವರಂತೆ ಸಂಬ್ರಮದಿಂದ ಸಮಾಜದೊಂದಿಗೆ ಹೊರಡುತಿದ್ದರು. ಅಪ್ಪ ಹೇಳಿದ್ದ ಆ ಎರಡು ಕಪ್ಪು ಬಿಳುಪಿನ ಚಿತ್ರದ ಸಂಬ್ರಮಗಳು ಕೇಳಿ ಬಹುದಿನಗಳಾದರೂ ನಾ ಕಣ್ಣಾರೆ ಕಂಡ ಅಪ್ಪನ ಕಲರ ಚಿತ್ರದ ಸಂಬ್ರಮವೂ ಕೂಡಾ ಇಂದು ನನ್ನ ಕಣ್ಣಿಂದ ಮರೆಯಾಗಿದೆ.
ಅಪ್ಪ ಬೆನ್ನಿಗಿದ್ದ ನಾವೇಲ್ಲರೂ ಮುಂದೆ ಹೋಗುತಿದ್ವಿ ಇಂದು ನಮ್ಮನ್ನೇಲ್ಲ ಬಿಟ್ಟು ಹಿಂದೆ ಉಳಿದು ಬಿಟ್ಟ ಅಪ್ಪನೇನೋ ತನ್ನ ಬದುಕಿನ ದಡ ನೀರಲ್ಲಿ ಡುಮ್ಕಿ ಹೊಡೆದು ತೇಲಿಯೇ ಬಿಟ್ಟ ಆದರೆ ಅಪ್ಪ ಬಿಟ್ಟು ಹೋದ ಮನೆಯವರನ್ನ ಮತ್ತು ನಂಬಿದ್ದ ಜನ ಸಮಾಜವನ್ನ ಹೊತ್ತು ನಾವೇಲ್ಲರೂ ಹೊರಡಲೇ ಬೇಕು. ಬದುಕಿನ ನಾವೆಯಲ್ಲಿ ನಾಳಿನ ಶೋಧದಲ್ಲಿ , ಅಪ್ಪ ಇನ್ನೇನಿದ್ದರೂ ನಮ್ಮನೆ ಸದಸ್ಯರೆಲ್ಲರ ಸ್ಮುತಿಪಟಲದ ಚಿತ್ರ ಎದೆ ಭಾರವಾದಾಗ ಜಿನುಗುವ ಕಣ್ಣಂಚಿನ ಹನಿ ನೆನಪು ಕಾಡಿದಾಗ ಸದಾ ಕಣ್ಣಾಲೆಯಲಿ ತೇಲುತ್ತ ಸಾಗುವ ನೆನಪಿನ ದೋಣಿ, ನಿಮ್ಮ ಈ ಬರವಣಿಗೆಗಳೆ ನಮ್ಮಿ ಉರವಣಿಗೆಗಳು. ನಿಮ್ಮಿ ಈ ವಿಚಾರ ಚಿಂತನೆಗಳು ನಮ್ಮನೆಮಂದಿಗೆಲ್ಲರಿಗೂ ಆದರ್ಶ ಮತ್ತು ಸ್ಪೂರ್ತಿ, ಎಂದೆಂದಗೂ ಅಪ್ಪ ನಮ್ಮೇಲ್ಲರಿಗೂ ಬದುಕಿನ ದಾರಿ ದೀಪ ಶೂನ್ಯೆದೊಂದಿಗೆ ಹುಟ್ಟಿ ಶೂನ್ಯೆದೆಡೆಗೆ ಸಾಗುವ ಪರಿ ಅದೊಂದು ಸಡಗರ ಸಂಬ್ರಮ, ಆದರೆ ಈ ಜಗತ್ತಿನಲ್ಲಿ ಶೂನ್ಯ ಮುಟ್ಟಿದವರಿಲ್ಲಾ ಒಂದು ವೇಳೆ ಮುಟ್ಟಿದ್ದರೆ ಸಾವ ಮೆಟ್ಟಬಲ್ಲರಂತೆ..! ಒಟ್ಟಾರೆ ಆ ಸಂಬ್ರಮದೆಡೆಗೆ ಸಾಗುವದಿದೆಯಲ್ಲ ಅದು ಮಹತ್ವದು.
ಹೀಗೆಲ್ಲಾ ಲಿಂಗಣ್ಣ ಸತ್ಯಂಪೇಟೆಯವರ ಮಗ ಸಂತೋಷ್ ಸತ್ಯಂಪೇಟೆ. ವಕೀಲರು, ಶಹಾಪುರ, ಇವರು ತಮ್ಮಪ್ಪನನ್ನು ನೆನಪಿಸುತ್ತಾರೆ. ಇನ್ನೂ ಪ್ರಸ್ತುತ ‘ಬಸವ ಮಾರ್ಗ’ ಅನುಯಾಯಿ, ಅಲ್ಲದೇ ಸಂಪಾದಕರಾಗಿ ‘ಬಸವ ಮಾರ್ಗ’ ನಡೆಯಿಸಿಕೊಂಡು ನಡೆಯುತ್ತಿರುವ ವಿಶ್ವರಾಧ್ಯ ಸತ್ಯಂಪೇಟೆಯವರ ವಿಚಾರ ತಿಳಿಯೋಣ. ಈ ವಿಶ್ವರಾಧ್ಯ ಸತ್ಯಂಪೇಟೆಯವರು ಗೌರಿ ಲಂಕೇಶ್ ಇರುವಾಗ ಅಪ್ಪನಂತೆ ‘ಲಂಕೇಶ್ ಪತ್ರಿಕೆ’ ಮತ್ತು ‘ಗೌರಿ ಲಂಕೇಶ್’ ಪತ್ರಿಕೆಗೆ ಬರೆಯುತ್ತಿದ್ದವರೂ ಕೂಡ. ಈಗ ತಮ್ಮಪ್ಪನ ವಿಚಾರಗಳನ್ನು ಇವರು ಹೇಳುವ ಮೊದಲು ಈ ವಿಶ್ವರಾಧ್ಯ ಸತ್ಯಂಪೇಟೆಯವರ ಬಗೆಗೆ ನೋಡೋಣ.
ಲಿಂಗಣ್ಣ ಸತ್ಯಂಪೇಟೆಯವರ ಇನ್ನೊಬ್ಬ ಮಗ ವಿಶ್ವಾರಾಧ್ಯ ಸತ್ಯಂಪೇಟೆ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆಯವರು. ತಂದೆ ಹಿರಿಯ ಲೇಖಕ, ಚಿಂತಕ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ, ತಾಯಿ- ಶಾಂತಮ್ಮ ಸತ್ಯಂಪೇಟೆ.
ಬಿ.ಎ ಮುಗಿಸಿ, ಡಿಪ್ಲೋಮಾ ಇನ್ ಜರ್ನಲಿಸಂ ಪೂರ್ಣಗೊಳಿಸಿದ್ದಾರೆ. ಹವ್ಯಾಸಿ ಪತ್ರಕರ್ತರೂ ಆಗಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಹಾಗೂ ಸತ್ಯಂಪೇಟೆಯ ‘ಬಸವ ಮಾರ್ಗ’ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ.
ಈ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಬಸವ ಬೆಳಕು ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ‘ಮನೆಯಲ್ಲಿ ಮಹಾಮನೆ’ ಶೀರ್ಷಿಕೆಯಡಿ ಬಸವ ತತ್ವ ಪ್ರಚಾರ-ಪ್ರಸಾರವೇ ಜೀವಾಳವಾಗಿರಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಇವರ ಕೃತಿಗಳು ಹೀಗಿವೆ: ಸಾಹಿತ್ಯ ಕೃಷಿಯೂ ಇವರ ಇಷ್ಟದ ಹವ್ಯಾಸ. ಚಿತ್ತ ಚೋರರು, ಬಸವಣ್ಣ ಮತ್ತು ಲೋಹಿಯಾ, ನಿನಗೆ ಕೇಡಿಲ್ಲವಾಗಿ, ಹರಕೆಯ ಕುರಿಗಳು, ಧರ್ಮ ಮತ್ತು ದಗಲ್ಬಾಜಿಗಳು, ಮಠದೊಳಗಣ ಬಾವುಗಗಳು, ಎನ್ನನದ್ದಿ ನೀನೆದ್ದು ಹೋಗು, ಅಜ್ಞಾನದ ಕೇಡು, ಕಂಗಳ ಮುಂದಿನ ಬೆಳಕು, ಮಠದ ಗೂಳಿಗಳು, ದೇವರ ಹುಡುಕುತ್ತ, ಕಾವಿಯೊಳಗಿನ ಕೆಂಡ, ಕಲ್ಲದೇವರ ಮಾಡಿ, ಅಧರಕ್ಕೆ ಕಹಿ, ಉದರಕ್ಕೆ ಸಿಹಿ, ಮುಗಿಲ ಮರೆಯ ಮಿಂಚು, ಅಪ್ಪನನ್ನು ಅರಸುತ್ತ, ಪ್ರಳಯಾಂತಕರು, ಕಲ್ಯಾಣದ ಪ್ರಣತೆಯಲ್ಲಿ, ಬಸವಮಾರ್ಗ, ಅಪ್ಪನ ನೆನಪುಗಳು ಅವರ ಪ್ರಕಟಿತ ಕೃತಿಗಳು. ಹೀಗಿವೆ ವಿಶ್ವರಾಧ್ಯ ಸತ್ಯಂಪೇಟೆರ ಕೃತಿಗಳು.
ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಇಳಕಲ್ಲಿನ ಚಿತ್ತರಗಿ ಮಠದಿಂದ ಬಸವ ಕಾರುಣ್ಯ ಪ್ರಶಸ್ತಿ, ಚಿತ್ರದುರ್ಗದ ಮುರುಘಾಮಠದ ಬಸವ ಕೇಂದ್ರದಿಂದ ಶರಣ ದಂಪತಿಗಳು ಪ್ರಶಸ್ತಿ, ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ‘ಮಾನವ ಬಂಧುತ್ವ’ ಪ್ರಶಸ್ತಿ, ದಲಿತ ಸಂಘರ್ಷ ಸಮಿತಿಯಿಂದ ‘ಪೆರಿಯಾರ’ ಪ್ರಶಸ್ತಿ,ಬಸವ ಜ್ಯೋತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ,-ಗೌರವಗಳು ಲಭಿಸಿವೆ.
ಇದು ವಿಶ್ವರಾಧ್ಯ ಸತ್ಯಂಪೇಟೆಯವರ ಮಾಹಿತಿ.
ಆಯಿತು. ಇನ್ನೂ ಇವರ ತಂದೆಯವರ ಬಗೆಗಿನ ಅಂತ್ಯ ಕಾಲದ ಮಾಹಿತಿ ಹೀಗಿದೆ ನೋಡಿ. ಲಿಂಗಣ್ಣ ಸತ್ಯಂಪೇಟೆಯ ನಿಗೂಢ ಹತ್ಯೆ ಭೇದಿಸಲು ಪೋಲಿಸರಿಂದ ಸಾಧ್ಯವೆ.?! ಅದು ಕೊನೆಗೂ ಸಾಧ್ಯವಾಗಲಿಲ್ಲ ಎಂದೇ ನನ್ನ ಅಭಿಪ್ರಾಯ.
ನಾಡಿನ ಹಿರಿಯ ಬರಹಗಾರ, ಪತ್ರಕರ್ತ, ಚಿಂತಕ ಲಿಂಗಣ್ಣ ಸತ್ಯಂಪೇಟೆಯವರು ನಿಗೂಢವಾಗಿ ಹತ್ಯೆಯಾಗಿ ತಿಂಗಳೊಪ್ಪತ್ತು ಮುಗಿಯುತ್ತ ಬಂದಿದ್ದರೂ ಗುಲ್ಬಗರ್ಾ ಪೋಲಿಸ್ ವರಿಷ್ಠಾಧಿಕಾರಿಗಳು ಮಾತ್ರ ಮಿಸುಗಾಡುತ್ತಿರರಿಲ್ಲ. ಗುಡ್ಡ ಅಗೆದು ಇಲಿ ತೆಗೆದರು ಎಂಬಂತೆ ಶರಣಬಸವೇಶ್ವರ ದೇವಸ್ಥಾನದ ಇಬ್ಬರು ವಾಚ್ಮನ್ಗಳನ್ನು ಎಳೆದು ತಂದು ಕಾಗಕ್ಕ ಗುಬ್ಬಕ್ಕನ ಕಥೆಯನ್ನು ಅವರಿಂದ ಹೇಳಿಸಿ ಪ್ರಕರಣವನ್ನು ಸಂಪೂರ್ಣ ಮುಚ್ಚಿಬಿಡುವ ಎತ್ತುಗಡೆ ಆರಂಭವಾಗಿತ್ತು.
ಆದರೆ ಲಿಂಗಣ್ಣ ಸತ್ಯಂಪೇಟೆ ಬದುಕಿರುವಾಗ ಹೇಗೋ ಹಾಗೆಯೆ ಅವರು ಇಲ್ಲದ ದಿನಗಳಲ್ಲಿಯೂ ಬಿಸಿತುಪ್ಪವಾಗಿ ಕಾಡುತ್ತಾರೆಂಬ ಪರಿಜ್ಞಾನ ಈ ಪೋಲಿಸರಿಗೆ ಇಲ್ಲ. ಸಾಮಾನ್ಯ ಜ್ಞಾನ ಇರುವ ಯಾರಿಗೇ ಆದರೂ ಅರ್ಥವಾಗುವ ಕೆಲವು ಸತ್ಯಗಳು ಗುಲ್ಬರ್ಗಾ ಪೋಲಿಸರಿಗೆ ಅರ್ಥವಾಗದೆ ಇರುವುದು ವಿಸ್ಮಯವೋ? ಒಳ ಒಡಂಬರಿಕೆಯೋ? ಎಂದು ಅನುಮಾನ ಹುಟ್ಟಿಸುತ್ತವೆ. 25ರ ಜುಲೈ 2012 ರಂದು ಸಾಯಂಕಾಲ 6.45ಕ್ಕೆ ಗುಲ್ಬರ್ಗಾ ಕೇಂದ್ರ ಬಸ್ ನಿಲ್ದಾಣದಲ್ಲಿ ಲಿಂಗಣ್ಣನವರ ಮೊಬೈಲ್ ಟವರ್ ಲೋಕೇಶನ್ ತೋರಿಸುವುದಾಗಿ ಹೇಳುವ ಪೋಲಿಸರು, ಒಮ್ಮಿದೊಮ್ಮೆ 8.30 ಕ್ಕೆ ಸಂಗಮೇಶ್ವರ ನಗರದ ಲೋಕೇಶ್ ತೋರಿಸುತ್ತದೆ ಎನ್ನುತ್ತಿದ್ದರು.
ಹಾಗಾದರೆ 1.45 ನಿಮಿಷಗಳ ಮಧ್ಯದ ಅವಧಿಯಲ್ಲಿ ಅವರು ಎಲ್ಲಿದ್ದರು? ಎಂದು ನಿಖರವಾಗಿ ಈ ವರೆಗೂ ಪೋಲಿಸರು ಏನನ್ನೂ ಹೇಳಲಿಲ್ಲ. ಶರಣಬಸವೇಶ್ವರ ಗುಡಿಯ ರಸ್ತೆ ಎಲ್ಲರೂ ಬಲ್ಲಂತೆ ಜನ ನಿಭೀಡವಾಗಿರುವ ರಸ್ತೆ. ಜೊತೆಯಲ್ಲಿ ಇತ್ತೀಚೆಗೆ ಈ ರಸ್ತೆಯ ಕೆಲಸ ಬೇರೆ ನಡೆದಿದೆ. ಹೀಗಾಗಿ ವಾಹನಗಳ ಜನದಟ್ಟಣೆ ಹೆಚ್ಚಾಗಿ ಇರುತ್ತದೆ. ಆಗ ಶ್ರಾವಣ ಮಾಸವಾಗಿದ್ದರಿಂದ ಗುಡಿಗೆ ಬರುವ ಭಕ್ತರ ಸಂಖ್ಯೆ ದುಬ್ಬಟ್ಟು ಹೆಚ್ಚಾಗಿರುತ್ತದೆ. ಇಂಥ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ , ವಾಂತಿ ಮಾಡಿಕೊಂಡು ರಸ್ತೆಯ ಮೇಲೆ, ಚರಂಡಿಯ ಪಕ್ಕದಲ್ಲಿ ಬಿದ್ದಿದ್ದರು ಎಂದು ಹೇಳುವುದು ತೀರಾ ಬಾಲಿಷವಾದ ಮಾತಾಗುತ್ತದೆ.
ಚರಂಡಿಯ ಮೇಲೆಯೆ ಕಾಯಿ ,ಕಪ್ಪರ, ಊದುಬತ್ತಿ ಮುಂತಾದವನ್ನು ಮಾರುವ ಗೂಡಂಗಡಿ ಇಟ್ಟುಕೊಂಡಿರುವ ಶರಣುಮಂಟಗಿ ,ರಾಜು ಕಂತಿ ಹಾಗೂ ವಾಚ್ಮನ್ಗಳಾದ ದಯಾನಂದ ಬೀರಪ್ಪ ಪೂಜಾರಿ ಹಾಗೂ ಶ್ಯಾಮರಾವ್ ಲಕ್ಷ್ಮಣ ಪೂಜಾರಿ ಹೀಗೆ ನಾಲ್ಕು ಜನರಿಗೆ ಮಾತ್ರವೆ ಗೊತ್ತಾಗಿದ್ದು ಉಳಿದವರ್ಯಾರು ಅತ್ತ ಹಣಕಿಯೂ ಹಾಕಲಿಲ್ಲ ಎಂಬ ಪೋಲಿಸರ ಹೇಳಿಕೆ ಕಟ್ಟುಕಥೆಯಲ್ಲದೆ ಬೇರೇನೂ ಅಲ್ಲ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಏಕೆಂದರೆ ಅದೇ ದಿನ ರಾತ್ರಿ 7.20 ರ ಸುಮಾರಿಗೆ ಲಿಂಗಣ್ಣನವರ ಮಗ ಶಿವರಂಜನ್ ತನ್ನ ತಂದೆ ನಿಗದಿತವಾದ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂಬ ಕಾರ್ಯಕ್ರಮ ಸಂಯೋಜಕ ಎಸ್.ಬಿ.ಕಾಲೇಜಿನ ಚಿತಾರಗೋಳ್ ಎಂಬ ಪ್ರಾಧ್ಯಾಪಕರ ಮಾತು ಕೇಳಿ, ತನ್ನ ತಂದೆಯನ್ನು ಮೊಬೈಲ್ನ್ನು ಸಂಪಕರ್ಿಸಿದಾಗ ಅದು ಐದಾರು ನಿಮಿಷ ರಿಂಗಾಗಿದೆ.
ಆದರೆ ಅದನ್ನು ಯಾರೂ ಎತ್ತಿಲ್ಲ. ಕೊನೆಗೆ ಯಾರೋ ಕರೆ ಸ್ವೀಕಾರ ಮಾಡಿದಾಗ ಯಾರೊಬ್ಬರು ಮಾತಾಡಿಲ್ಲ. ಆದರೆ ಸೈಲೆಂಟಾಗಿ ಗಂಟೆಗಳ ಸದ್ದು, ಆಟೋ ಸದ್ದು ಹಾಗೂ ಒಂದಿಬ್ಬರು ಪಿಸು ಪಿಸು ಮಾತಾಡುವುದು ಮಾತ್ರ ಕೇಳಿದೆಯಂತೆ. ಹಾಗಾದರೆ ಆಗ ಲಿಂಗಣ್ಣನವರ ಮೊಬೈಲ್ ಕರೆಗಳನ್ನು ಎತ್ತಿಕೊಂಡದ್ದು ಯಾರು ? ಅವರು ಯಾವ ಏರಿಯಾದಲ್ಲಿದ್ದರು ? ಎಂಬ ಬಗ್ಗೆ ಪೋಲಿಸರು ದಿವ್ಯ ಮೌನವಹಿಸುತ್ತಾರೆ. ಹಿಂದೊಮ್ಮೆ ಹೃದಯಾಘಾತಕ್ಕೆ ಒಳಗಾಗಿದ್ದನ್ನು ಸ್ಮರಿಸಿಕೊಂಡ ಶಿವರಂಜನ್ ತಕ್ಷಣವೆ ಶರಣಬಸವೇಶ್ವರ ಗುಡಿಯ ಆವರಣಕ್ಕೆ ತಲುಪಿ ತನ್ನ ತಂದೆಯನ್ನು ಸುತ್ತೆಲ್ಲ ಹುಡುಕಾಡುತ್ತಾನೆ.
ಲಿಂಗಣ್ಣನವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರೂ ಎಂಬ ಸ್ಥಳದ ಮೂಲಕವೆ ಹಾದು ಹೋಗಿರುವ ಶಿವರಂಜನ್ಗೂ ಕಾಣದ ತಂದೆಯ ಕಳೆಬರಹ ಕೇವಲ ಮೂವರಿಗೆ ಮಾತ್ರವೆ ಕಾಣಿಸಿದ್ದು ಆಶ್ಚರ್ಯವಲ್ಲವೆ ? 25 ರ ಇಡೀ ರಾತ್ರಿ ಸಂಪೂರ್ಣ ಗುಲ್ಬಗರ್ಾದ ಮೂಲೆ ಮೂಲೆಯನ್ನು ಅವರ ಮಕ್ಕಳು ಹಾಗೂ ಅಭಿಮಾನಿಗಳು ತಡಕಾಡಿದರೂ ಸಿಕ್ಕದ ಲಿಂಗಣ್ಣ ಸತ್ಯಂಪೇಟೆ ಕೊನೆಗೆ ಶವವಾಗಿ 26 ರ ಬೆಳೆಗ್ಗೆ 11 ಗಂಟೆಗೆ ಶರಣಬಸವೇಶ್ವರ ಗುಡಿಯ ಮುಂದಿನ ಗಟಾರದಲ್ಲಿ ದೊರಕಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಹೃದಯಾಘಾತಕ್ಕೆ ಒಳಗಾದ ಯಾವುದೆ ವ್ಯಕ್ತಿ ತಾನು ಉಟ್ಟುಕೊಂಡಿದ್ದ ಬಟ್ಟೆ ಬರೆಗಳನ್ನು ಬಿಚ್ಚಿಹಾಕಿ ಎಲ್ಲೆಲ್ಲೂ ಬೀಳುವುದಿಲ್ಲ. ತಾನು ಮೆಟ್ಟಿಕೊಂಡಿದ್ದ ಬೂಟ್ಸ್ಗಳನ್ನು ಯಾವುದೋ ಡಬ್ಬಾದಲ್ಲಿ ತಂದು ತನ್ನ ಹತ್ತಿರ ಇಟ್ಟುಕೊಳ್ಳಲಾರ.
ಆದರೆ ಲಿಂಗಣ್ಣನವರ ಮೃತ ದೇಹ ಸಿಕ್ಕಾಗ ಬರೀ ಬನಿಯನ್ ಹಾಗೂ ಒಳ ಉಡುಪಿನಲ್ಲಿ ಮಾತ್ರ ಇದ್ದರು. ಜೊತೆಗೆ ಗೂಡಂಗಡಿಯ ಕೆಳಗಡೆ ತೂರಿಸಿ ಇಟ್ಟಿದ್ದರು. ಇದನ್ನೆಲ್ಲ ವ್ಯವಸ್ಥಿತವಾಗಿ ಯಾರು ಮಾಡಿಟ್ಟರು. ಅಂದು ಇಡೀ ರಾತ್ರಿ ಮಳೆ ಹನಿ ಹನಿಯಾಗಿ ಸುರಿಯುತ್ತಿತ್ತು. ಲಿಂಗಣ್ಣನವರ ಮೃತ ದೇಹದ ಮೇಲಾಗಲಿ, ಅವರ ಮೈಮೇಲೆ ಇದ್ದ ಬಟ್ಟೆ ಬರಿಗಳ ಮೇಲಾಗಲಿ ನೀರಿನ ಹಾಗೂ ರಸ್ತೆಯ ಧೂಳು ಯಾವುದೂ ಇರಲಿಲ್ಲವಲ್ಲ ? ಏಕೆ ? ಅನುಮಾನಾಸ್ಪದವಾಗಿ ಯಾವುದೆ ವ್ಯಕ್ತಿ ಸತ್ತರೂ ಆತನ ಮೃತ ದೇಹವನ್ನು ಹಾಗೂ ಅಲ್ಲಿರುವ ವಸ್ತುಗಳನ್ನು ಕೈಗವಚ ಹಾಕಿಕೊಳ್ಳದೆ ಮುಟ್ಟಬಾರದು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸತ್ಯ.
ಆದರೂ ಅಂದು ಪೋಲಿಸರು ಅವರ ಲಿಂಗಣ್ಣನವರ ಮೋಬೈಲ್ಗಳನ್ನು ಬರೀಗೈಯಿಂದ ಮುಟ್ಟಿದ್ದು ಯಾಕೆ ? ಮರಣೋತ್ತರ ಪರೀಕ್ಷೆ ನಡೆಸುವಾಗ ಲಿಂಗಣ್ಣನವರ ಹಿರಿಯ ಮಗ ವಿಶ್ವಾರಾಧ್ಯ ಸತ್ಯಂಪೇಟೆ ತನ್ನ ತಂದೆಯ ಮೃತ ದೇಹವನ್ನು ಸಂಪೂರ್ಣವಾಗಿ, ಏಕಾಗ್ರತೆಯಿಂದ ಗಮನಿಸಿದ್ದಾನೆ. ಮೇಲುನೋಟಕ್ಕೆ ದೇಹದ ಮೇಲೆ ಯಾವುದೆ ಗಾಯಗಳು ಆಗಿರಲಿಲ್ಲ. ಜೊತೆಗೆ ವಾಂತಿ ಹಾಗೂ ಮೋಶನ್ ಮಾಡಿದ ಯಾವುದೆ ಸಣ್ಣ ಕುರುಹುಗಳು ಇರಲಿಲ್ಲವಂತೆ. ಆದರೆ ಇದ್ದಕ್ಕಿಂದ್ದಂತೆ ಪೋಲಿಸರು ಈಗ ವಾಂತಿ ಹಾಗೂ ಮೋಶನ್ ಕುರುಹಗಳು ಪತ್ತೆ ಹಚ್ಚಿದ್ದಾರಲ್ಲ ?! ಅವೆಲ್ಲ ಯಾರವು ? ಎಲ್ಲಿದ್ದವು ? ಪೋಲಿಸರ ಮಾತು ನಂಬುವುದಾದರೆ ಲಿಂಗಣ್ಣನವರ ಮೈಮೇಲೆ ಏನೂಂದು ಕಲೆ ಇಲ್ಲದಂತೆ ಹೊಲಸನ್ನು ತೊಳೆದವರು ಯಾರು ? ಎಂಬ ಯಕ್ಷ ಪ್ರಶ್ನೆಗೆ ಪೋಲಿಸರು ತಡಬಡಿಸುತ್ತಾರೆ.
ಸತ್ಯಂಪೇಟೆ ಲಿಂಗಣ್ಣನವರು ಅಂದು ಉಟ್ಟುಕೊಂಡಿದ್ದ ಬೀಳಿ ಧೋತರ ಹಾಗೂ ಖಾದಿಯ ನೆಹರೂ ಶಟರ್್ಗಳಿಗೆ ಗಟಾರದ ಹಾಗೂ ಗಟಾರದ ಮೇಲ್ಗಡೆಯ ಮಣ್ಣಿನ ಜೊತೆ ಜೊತೆಗೆ ಇನ್ನಾವುದೋ ಬೇರೆ ಕಲೆಗಳು ಅದರ ಮೇಲೆ ಮೂಡಿವೆ. ಆ ಕಲೆಗಳು ಎಲ್ಲಿಯವು ? ಇದನ್ನು ಖಚಿತವಾಗಿ ವಿಶ್ವಾರಾಧ್ಯ ಗುರುತಿಸಿದ ನಂತರವಷ್ಟೆ ಪೋಲಿಸರು ಆ ಬಟ್ಟೆಗಳನ್ನು ತಜ್ಞರ ಪರಿಶೀಲನೆಗೆ ಕಳುಹಿಸಿದರಲ್ಲ ? ಏಕೆ ? ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿರುವಾಗಲೂ ಈಶಾನ್ಯ ವಲಯ ಪೋಲಿಸ್ ಐ.ಜಿ.ಪಿ.ಮೊಹ್ಮದ ವಜೀರ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರವೀಣ ಪವಾರ ಹಾಗೂ ಆಡಿಷನಲ್ ಎಸ್ಪಿ ಭೂಷಣ ಮೂವರು ಸೇರಿ ಲಿಂಗಣ್ಣ ಸತ್ಯಂಪೇಟೆಯವರ ಕೊಲೆಯನ್ನು ಭೇದಿಸಿದ ಪೋಲಿಸರ ಯಶಸ್ವಿ ಕಾರ್ಯಾಚರಣೆ ಎಂದು ಬಡಬಡಿಸಿದ್ದು ಏಕೆ ? ಲಿಂಗಣ್ಣ ಸತ್ಯಂಪೇಟೆಯವರದ್ದು ಕೊಲೆಯೆಂದು ಒಂದು ಕಡೆ ಒಪ್ಪಿಕೊಂಡ ಪೋಲಿಸರು ಮತ್ತೊಂದು ಕಡೆ ತೀವ್ರ ಹೃದಯಾಘಾತವೆಂದು ಯಾವ ಆಧಾರದ ಮೇಲೆ ಹೇಳುತ್ತಾರೆ ? ಕೊಲೆಯನ್ನು ಪತ್ತೆ ಹಚ್ಚುವವರು ಪೋಲಿಸರು, ಆ ಕೊಲೆ ಯಾವ ರೀತಿಯದು ಎಂದು ತಿಳಿಸುವುದು ವೈದ್ಯರು. ಆದರೆ ಪೋಲಿಸರು ಅಂದು ತಮ್ಮ ಅಧೀನದ ಎಂ.ಬಿ.ನಗರದ ತನಿಖಾಧಿಕಾರಿ ಚಂದ್ರಶೇಖರ ಹಾಗೂ ಅವರ ತಂಡಕ್ಕೆ 25 ಸಾವಿರ ರೂಪಾಯಿಗಳ ಬಹುಮಾನ ಏಕೆ ಘೋಷಿಸಿದರು ? ಲಿಂಗಣ್ಣನವರದು ಹೃದಯಾಘಾತದ ಸಾವು ಎಂದು ಹೇಳುವವರು ವೈದ್ಯರೆ ಹೊರತು ಪೋಲಿಸರಲ್ಲ.
ಹೀಗಾಗಿ ಪೋಲಿಸರಿಗೆ ಏಕೆ ಬಹುಮಾನ ನೀಡಿದರು ? ಹೃದಯಾಘಾತವೂ ಕೊಲೆಯಾಗುತ್ತದೆಯೆ ? ಹೃದಯಾಘಾತದ ಸಂಗತಿಗಳನ್ನು ಈಗೀಗ ಪೋಲಿಸರೆ ಭೇದಿಸುತ್ತಾರೆಯೆ ? ಲಿಂಗಣ್ಣನವರ ಮೃತ ದೇಹದ ಕೆಲವು ತುಣುಕುಗಳನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಗೆ ಬಳ್ಳಾರಿ ಹಾಗೂ ಹೈದ್ರಾಬಾದ್ ವಿಧಿ ವಿಜ್ಙಾನ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಹೇಳುವ ಪೋಲಿಸರು ಅವುಗಳ ಪರಿಕ್ಷಾರ್ಥ ವರದಿ ಬರುವುದಕ್ಕಿಂತ ಪೂರ್ವದಲ್ಲಿಯೆ ಕೆಲವು ಕಟ್ಟುಕಥೆಗಳನ್ನು ಹೆಣೆದು ತರಾತುರಿಯ ಪತ್ರಿಕಾಗೋಷ್ಠಿ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರಕಾರ ಕನರ್ಾಟಕದಾದ್ಯಂತ ಅಲ್ಲಲ್ಲಿ ನಡೆದಿರುವ ಪ್ರತಿಭಟನೆ , ಸಾಹಿತಿಗಳು, ಕಲಾವಿದರು ಹಾಗೂ ಪತ್ರಕರ್ತರ ಒತ್ತಾಯಕ್ಕೆ ಕಟ್ಟುಬಿದ್ದು ಸಿ.ಐ.ಡಿ. ತನಿಖೆಗೆ ಅದೇಶ ನೀಡಿದೆಯಾದರೂ ಇವತ್ತಿಗೂ ಅದು ಕಾರ್ಯಪ್ರವೃತವಾಗಿಲ್ಲ.
ಅಲ್ಲದೆ ಸಿ.ಐ.ಡಿ. ಅಧಿಕಾರಿಗಳೂ ಸ್ಥಳೀಯ ಪೋಲಿಸರ ಕಟ್ಟು ಕಥೆಗಳ ಮೇಲೆಯೆ ಸೌಧಕಟ್ಟುವವರಾದ್ದರಿಂದ ಅವರಿಂದಲೂ ನಿಸ್ಪಕ್ಷಪಾತ ತನಿಖೆ ನಡೆಯುತ್ತದೆ ಎಂಬ ಬಗ್ಗೆ ಹಲವು ಗುಮಾನಿಗಳಿವೆ. ಸಿ.ಬಿ.ಐ. ತನಿಖೆ ಮಾತ್ರವೆ ಲಿಂಗಣ್ಣ ಸತ್ಯಂಪೇಟೆಯವರ ಸಾವಿನ ಖಚಿತ ಉತ್ತರ ನೀಡಬಲ್ಲದು ಎಂದು ಅವರ ಅಭಿಮಾನಿಗಳ ಕುಟುಂಬ ವರ್ಗದವರ ಬೇಡಿಕೆಯಾಗಿದೆ. ಪುರೋಗಾಮಿ ವಿರೋಧಿ ಶಕ್ತಿಯ ವಿರುದ್ಧ ಗಟ್ಟಿಧ್ವನಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆಯ ನಿಗೂಢ ಸಾವನ್ನು ಭೇದಿಸುವ ತಾಕತ್ತು ಮಠ-ಮಂದಿರಗಳ ಸ್ವಾಮಿ ಮಹಾಸ್ವಾಮಿ, ಜಗದ್ಗುರುಗಳಿಗೆ ಒತ್ತಿಬಿದ್ದಿರುವ ಸರಕಾರದಿಂದ ಸಾಧ್ಯವೆ ? 0 ವರದಿಗಾರ ಲಿಂಗಣ್ಣನ ಹತ್ಯೆಯಲ್ಲಿ ಕುಂದರಗಿ ಮಠದ ಸ್ವಾಮಿಯ ಪಾತ್ರವೇನು ?ಲಿಂಗಣ್ಣ ಸತ್ಯಂಪೇಟೆ ಹೇಗೋ ಅವರ ಮಗ ವಿಶ್ವಾರಾಧ್ಯ ಸತ್ಯಂಪೇಟೆಯೂ ನಿಷ್ಠುರವಾದ ಬರಹಗಾರ. ವಸ್ತುನಿಷ್ಠವಾದ ವರದಿಗೆ ಪಕ್ಕಾದವರು.
ಅವರು ನಮ್ಮ ಪತ್ರಿಕೆಯ ನವೆಂಬರ್ 2007 ರ ಸಂಚಿಕೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಂಕಲಗಿ ಮಠದಲ್ಲೊಬ್ಬ ಮಟ್ಕಾಸ್ವಾಮಿ ಎಂಬ ವರದಿಯನ್ನು ಬರೆದಿದ್ದರು. ಅಂಕಲಗಿ ಮಠದ ವೀರಭದ್ರಯ್ಯ ಎಂಬ ಜಾಬಾದಿ ಸ್ವಾಮಿಯನ್ನು ಜಾಲಾಡಿದ್ದರು. ತೀರಾ ಇತ್ತೀಚೆನ ಒಂದೆರಡು ತಿಂಗಳುಗಳ ಹಿಂದೆ ಲಿಂಗಣ್ಣನವರು ಲಿಂಗಸೂಗೂರಿನಿಂದ ಸರಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಪಕ್ಕದಲ್ಲಿ ಕುಳಿತುಕೊಂಡು ಪ್ರಯಾಣ ಮಾಡಿದ. ಶಹಾಪುರ ಬಸ್ ನಿಲ್ದಾಣ ತಲುಪುವವರೆಗೂ ಸುಮ್ಮನಿದ್ದ ಆ ವ್ಯಕ್ತಿ ಶಹಾಪುರ ಬಸ್ ನಿಲ್ದಾಣ ತಲುಪುತ್ತಿರುವಂತೆಯೆ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಅಂಕಲಗಿ ಮಠದ ಸ್ವಾಮಿಗಳ ಕುರಿತು ನೀವು ವರದಿ ಬರೆದಿದ್ದೀರಾ ? ಎಂದು ಕೇಳಿದಾಗ. ಇಲ್ಲ, ಲಂಕೇಶ್ ಪತ್ರಿಕೆಗೆ ಬರೆಯುವುದು ಬಿಟ್ಟು ಹತ್ತುವರ್ಷಗಳಾಯಿತು. ನಾನು ಬರೆದಿಲ್ಲ. ಹಾಗಾದರೆ ನಿಮ್ಮ ಮಕ್ಕಳು ಯಾರಾದರೂ ಬರೆದಿರಬಹುದೆ ? ಎಂದು ಕೇಳಿದ್ದರಂತೆ.
ಅದನ್ನವರು ಮನೆಯಲ್ಲಿ ಬಂದು ಎಲ್ಲರಿಗೂ ಹೇಳಿದ್ದೂ ಇದೆ. ಜೊತೆಗೆ ತೀರಾ ಇತ್ತೀಚೆಗೆ ಮೇ 15, 2012 ರಂದು 9886626145 ಮೋಬೈಲ್ ನಂಬರಿನಿಂದ ಲಿಂಗಣ್ಣ ಸತ್ಯಂಪೇಟೆಯವರಿಗೆ ಅಕಳಾಸಕಳಾ ಮಾತಾಡಿದ್ದು, ಆ ಮಾತುಗಳಿಗೆ ಪ್ರತ್ಯುತ್ತರ ನೀಡಲು ಲಿಂಗಣ್ಣನವರು ಹೋಯ್ದಾಡಿದ್ದನ್ನು ಅವರ ಮಗ ವಿಶ್ವಾರಾಧ್ಯ ಬಲ್ಲ. ಆಶ್ಚರ್ಯವೆಂದರೆ ಈ ಮೋಬೈಲ್ ಸಂಖ್ಯೆ ಇರುವ ಬೆಳಗಾಂವಿಯ ಕುಂದರಗಿ ಮಠದ ಸ್ವಾಮಿಯಾಗಿರುವ ಅಮರೇಶ್ವರ ದೇವರು ಅಂಕಲಗಿ ಮಠದ ಶಾಖಾಮಠದ ಪೀಠಾಧಿಪತಿ. ಅಂಕಲಗಿ ಸ್ವಾಮಿಯ ಖಾಸಾ ಸಹೋದರನೊಬ್ಬ ಈಗ ಗುಲ್ಬಗರ್ಾದಲ್ಲಿಯೆ ಖಾಯಂ ಆಗಿ ವಾಸವಾಗಿದ್ದಾನೆ. ಜೊತೆಗೆ ಅಂಕಲಗಿ ಮಠದ ವೀರಭದ್ರಯ್ಯ ಎಂಥ ಚಾಲಬಾಜಿಯೆಂದರೆ ಕೇವಲ 6 ತಿಂಗಳುಗಳ ಹಿಂದೆ ವ್ಯಕ್ತಿಯೊಬ್ಬ ಆತನ ಮೇಲೆ ಏರಿ ಹೋದದ್ದನ್ನು ಸೇಡಾಗಿ ಇಟ್ಟುಕೊಂಡು ಆತನನ್ನು ಗೋಡೆಗಳ ಕೆಳಗಡೆ ನಿಲ್ಲಿಸಿ ಭೀಕರ ಹತ್ಯೆ ನಡೆಸಲಾಯಿತು.
ಈ ಬಗ್ಗೆ ಸರಿಯಾಗಿ ತನಿಖೆಯಾಗದೆ ಅದೊಂದು ಆಕಸ್ಮಿಕ ಸಾವು ಎಂಬಂತೆ ಮುಚ್ಚಿಹಾಕಲಾಯಿತು. ಲಿಂಗಣ್ಣ ಸತ್ಯಂಪೇಟೆಯವರ ನಿಗೂಢ ಹತ್ಯೆಯಲ್ಲಿಯೂ ಈ ಹೀನ ಸುಳಿಗಳೂ ಕಾರಣವಾಗಿರಬಹುದೆ ?ಈ ಬಗ್ಗೆ ಗುಲ್ಬಗರ್ಾ ಪೋಲಿಸರಿಗೆ ಖಚಿತವಾಗಿ ಲಿಂಗಣ್ಣನವರ ಮಕ್ಕಳು ಖಚಿತವಾಗಿ ಹೇಳಿದಾಗ್ಯೂ ಪೋಲಿಸರು ಮೀನಮೇಷ ನಡೆಸುತ್ತಿರುವುದು ಇನ್ನೂ ನಿಗೂಢವಾಗಿದೆ, ಅಲ್ಲವೆ..?! ನನಗೆ ತಿಳಿದ ಮಟ್ಟಿಗೆ ಈ ಕೊಲೆಯ ಸತ್ಯ ಆವಾಗ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದ ತಮ್ಮ ತಂದೆಯವರ ಅಂತ್ಯದ ವಿವಿರವಿದು.
ಆದರೆ ಕೊನೆಯ ವರೆಗೂ ಹೊರಬೀಳಲೇ ಇಲ್ಲ ಲಿಂಗಣ್ಣ ಸತ್ಯಂಪೇಟೆ ಸಾವಿನ ನಿಜ ವಿಚಾರ. ಇಂದಿಗೂ ಸಹ..! ಹೀಗೆಯೇ ಮುಕ್ತಾಯವಾಗುತ್ತದೆ ಈ ಲಿಂಗಣ್ಣ ಸತ್ಯಂಪೇಟೆ ಅಂತ್ಯದ ಕಥೆ..!
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…