ಸುರಪುರ:ನಕಲಿ ಬೇಡ ಜಂಗಮರು ಪರಿಶಿಷ್ಠ ಜಾತಿಯ ಸಂವಿಧಾನ ಬದ್ಧವಾದ ಹಕ್ಕು ವಂಚನೆಗೆ ಮುಂದಾಗಿದ್ದಾರೆ,ಇದನ್ನು ಕುರಿತು ಸರಕಾರದ ಗಮನಕ್ಕೆ ತಂದಿರುವ ಶಾಸಕ ಪಿ.ರಾಜೀವ್ ಅವರ ಪ್ರತಿಕೃತಿಯನ್ನು ದಹಿಸಿದವರ ಮೇಲೆ ಕೇಸ್ ದಾಖಲಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ,ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶತಮಾನಗಳಿಂದ ತುಳಿತಕ್ಕೊಳಗಾಗಿರುವ ಪರಿಶಿಷ್ಠ ಸಮುದಾಯವನ್ನು ಮೇಲಕ್ಕೆತ್ತಲು ಸಂವಿಧಾನ ಬದ್ಧವಾದ ಮೀಸಲಾತಿಯನ್ನು ಒದಗಿಸಿದರು.ಪರಿಶಿಷ್ಠ ಜಾತಿಯ ಒಟ್ಟು ೧೦೨ರ ಪಟ್ಟಿಯಲ್ಲಿ ಕ್ರಮ ಸಂಖ್ಯೆ ೧೯ ಬೇಡ ಜಂಗಮ ಬುಡ್ಗ ಜಂಗಮ ಜಾತಿ ಇದ್ದು,ಇದು ಅಸ್ಪೃಶ್ಯ ಸಮುದಾಯಕ್ಕೆ ಸೇರಿದೆ.
ನಕಲಿ ಬೇಡ ಜಂಗಮರು ಪರಿಶಿಷ್ಠ ಜಾತಿಯವರ ಸಂವಿಧಾಣ ಬದ್ಧವಾದ ಹಕ್ಕು ಕಬಳಿಸಲು ನಕಲಿ ಪ್ರಮಾಣ ಪತ್ರವನ್ನು ಪಡೆಯಲು ಮುಂದಾಗಿದ್ದಾರೆ.ಇದನ್ನು ಅಧೀವೇಶನದಲ್ಲಿ ಶಾಸಕರಾದ ಪಿ.ರಾಜೀವ್ ನ್ಯಾಯಪರವಾದ ಧ್ವನಿ ಎತ್ತಿದ್ದಾರೆ.ಇದನ್ನು ಸಹಿಸದೆ ಕೆಲ ಮಠಾಧೀಶರು ಕಳೆದ ೧೬ನೇ ತಾರೀಖು ಶಹಾಪುರದಲ್ಲಿ ಪಿ.ರಾಜೀವ್ ಅವರ ಪ್ರತಿಕೃತಿ ದಹಿಸಿದ್ದಾರೆ,ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಮತ್ತು ಪ್ರತಿಕೃತಿ ದಹಿಸಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ದಲಿತರನ್ನು ರಾಜಕೀಯವಾಗಿ ಆರ್ಥಿಕವಾಗಿ ತುಳಿಯುವ ಉದ್ದೇಶಿತ ಪಿತೂರಿಯಾಗಿದೆ,ಇದಕ್ಕೆ ಮೇಲ್ಜಾತಿಯ ರಾಜಕೀಯ ಪಕ್ಷಗಳ ಬೆಂಬಲವಿದೆ.ಕಲಬುರ್ಗಿ,ಯಾದಗಿರಿ,ಬೀದರ್,ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಆಂಧ್ರಗಡಿಯಲ್ಲಿ ಇರುವ ಹಳ್ಳಿಗಳಲ್ಲಿ ಮಾಲಾ ದಾಸರು,ಮಾದಿಗ ದಾಸರು,ಮಾಲಾ ಜಂಗಮರು,ಮಾದಿಗ ಜಂಗಮರು ನಿಜವಾದ ಬೇಡ ಜಂಗಮರು,ಇಲ್ಲಿರುವವರು ನಕಲಿ ಬೇಡ ಜಂಗಮರು ಎಂದು ಆರೋಪಿಸಿದರು.
ನಂತರ ಪ್ರತಿಕೃತಿಯನ್ನು ಹದನ ಮಾಡಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕುರಕುಂದಿ,ಮಹಾದೇವಪ್ಪ ಬಿಜಾಸಪುರ,ಬುದ್ಧಿವಂತ ನಾಗರಾಳ,ಜೆಟ್ಟೆಪ್ಪ ನಾಗರಾಳ,ರಾಮಣ್ಣ ಶೆಳ್ಳಗಿ,ಮರಿಲಿಂಗಪ್ಪ ನಾಟೇಕಾರ್,ಖಾಜಾಹುಸೇನ್ ಗುಡಗುಂಟಿ,ಮರಿಲಿಂಗಪ್ಪ ದೇವಿಕೇರಿ,ಮಹೇಶ ಯಾದಗಿರಿ,ಮಹ್ಮದ್ ಅನೀಫ್,ಭೀಮಪ್ಪ ಲಕ್ಷ್ಮೀಪುರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…