ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಸಿದ್ದತೆಗಳು ಭರದಿಂದ ನಡೆದಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಪತ್ರಿಕಾ ಭವನದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 3ರಂದು ಮಧ್ಯಾಹ್ನ 1.30 ಕ್ಕೆ ಪತ್ರಕರ್ತರ ಸಂಘದ ಸಾಮಾನ್ಯ ಸಭೆ ನಡೆಯಲಿದೆ. ಇದಕ್ಕೂ ಮುಂಚೆ ಜಿಲ್ಲೆಯ ಐತಿಹಾಸಿಕ ಸ್ಥಳ ಗಳ ಪ್ರವಾಸ ನಡೆಯಲಿದೆ. ತದನಂತರ ಸಂಜೆ 5 ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಕಲಬುರಗಿ ಜಿಲ್ಲೆಯ ಹೆಸರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಬ್ರ್ಯಾಂಡ್ ಕಲಬುರಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ವನ್ನು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸುವರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ್ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಶೇಷ ಆವ್ಹಾನಿತರಾಗಿ ಹಿರಿಯ ಪತ್ರಕರ್ತರಾದ ಬಿ. ಗಣಪತಿ, ಡಾ.ಓಂಕಾರ ಕಾಕಡೆ ಪಾಲ್ಗೊಳ್ಳುವರು. ಹಿರಿಯ ಪತ್ರಕರ್ತರಾದ ಪಿ.ರಾಮು ಪಾಟೀಲ್ ವಿಷಯ ಪ್ರಸ್ತಾವನೆ ಮಾಡುವರು. ಜಿಲ್ಲಾಧ್ಯಕ್ಣ ಭವಾನಿಸಿಂಗ್ ಠಾಕೂರ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ವಿವಿಧ ಪತ್ರಿಕೆಗಳ ಸ್ಥಾನಿಕ ಸಂಪಾದಕರು ಅತಿಥಿಗಳಾಗಿ ಪಾಲ್ಗೊಳ್ಳುವರು. ತದನಂತರ ಸಂಜೆ 7 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
4ರಂದು ಬೆಳಿಗ್ಗೆ 9.30 ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸುವರು. ಶರಣಬಸವೇಶ್ವರರ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ದಿವ್ಯ ಸಾನ್ನಿಧ್ಯ ವಹಿಸುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಸ್ತು ಪ್ರದರ್ಶನ ಉದ್ಘಾಟಿಸುವರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಡಾ. ಅಜಯಸಿಂಗ್ ವಸ್ತು ಪ್ರದರ್ಶನ ಉದ್ಘಾಟಿಸುವರು. ಸಂಸದ ಡಾ.ಉಮೇಶ ಜಾಧವ್ ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸುವರು. ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ ಕೊಣೆಮನೆ ಮೊದಲ ಮಾತುಗಳನ್ನಾಡುವರು.
ಪ್ರಾಸ್ತಾವಿಕ ನುಡಿಗಳನ್ನು ವಿಜಯವಾಣಿ ಕೆ.ಎನ್.ಚೆನ್ನೇಗೌಡ ಆಡಲಿದ್ದಾರೆ.
ನಂತರ ಕೆಡಬ್ಲೂಜೆ ವಸತಿಯಿಂದ ಹೊರತರಲಾದ 2022 ನೇಇಸವಿ ಕ್ಯಾಲೆಂಡರನ್ನ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರು ಹಾಗೂ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ರಾಜಕುಮಾರ ಪಾಟೀಲ್ ತೇಲ್ಕೂರು, ಅಧ್ಯಕ್ಷರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇವರು ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಸುಭಾಷ್ ಗುತ್ತೇದಾರ, ಪ್ರಿಯಾಂಕ್ ಖರ್ಗೆ, ಬಸವರಾಜ ಮತ್ತಿಮಡು, ಡಾ ಅವಿನಾಶ ಜಾಧವ ಹಾಗೂ ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಸುನೀಲ್ ವಲ್ಯಾಪುರೆ, ಚಂದ್ರಶೇಖರ್ ಪಾಟೀಲ್ ಹಾಗೂ ಶಶೀಲ್ ನಮೋಶಿ ಅವರು ಭಾಗವಹಿಸಲಿದ್ದಾರೆ ಹಾಗೂ ಬಿ.ವಿ.ಮಲ್ಲಿಕಾರ್ಜುನಯ್ಯ, ಅಧ್ಯಕ್ಷರು ಭಾರತೀಯ ಪತ್ರಕರ್ತರ ಒಕ್ಕೂಟ, ನವದೆಹಲಿ, ಹೆಚ್.ಬಿ.ಮದನಗೌಡ, ಕಾರ್ಯದರ್ಶಿಗಳು ಭಾರತೀಯ ಪತ್ರಕರ್ತರ ಒಕ್ಕೂಟ, ನವದೆಹಲಿ, ವಿ.ವಿ. ಜ್ಯೋತ್ಸ್ನಾ ಜಿಲ್ಲಾಧಿಕಾರಿ ಗಳು ಕಲಬುರಗಿ, ಡಾ. ವೈ. ಎನ್. ರವಿಕುಮಾರ್, ಪೊಲೀಸ್ ಆಯುಕ್ತರು ಕಲಬುರಗಿ, ಸ್ನೇಹಲ್ ಸುಧಾಕರ ಲೋಕಂಡೆ, ಆಯುಕ್ತರು ಕಲಬುರಗಿ ಮಹಾನಗರ ಪಾಲಿಕೆ ಹಾಗೂ ದಿಲೀಪ್ ಸಶಿ, ಸಿಇಓ ಜಿಪಂ ಕಲಬುರಗಿ ಉಪಸ್ಥಿತರಿರುತ್ತಾರೆ.
ಮಧ್ಯಾಹ್ನ 12.30 ಗಂಟೆಗೆ ಡಿಜಿಟಲ್ ಮಾಧ್ಯಮ ಸ್ಥಿತ್ಯಂತರ ಕುರಿತು ಗೋಷ್ಠಿ- 1 ನಡೆಯಲಿದ್ದು, ಮಾಧ್ಯಮ ತಜ್ಞರಾದ ಜಿ.ಎನ್. ಮೋಹನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಹಲ್ಕೋಡು ಆಗಮಿಸಲಿದ್ದು, ಶ್ರೀಮತಿ ಎಸ್ ರಶ್ಮಿ ವಿಷಯ ಪ್ರಸ್ತಾಪನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಬೆಲಗೂರು ಸಮೀವುಲ್ಲಾ ವಹಿಸಲಿದ್ದಾರೆ. ಈ ಗೋಷ್ಠಿ ಯಲ್ಲಿ ಪತ್ರಕರ್ತರಾದ ಶಿವರಾಯ ದೊಡ್ಮನಿ, ಮೋಹಿದ್ದೀನ್ ಪಾಷಾ, ಸಂಜಯ್ ಚಿಕ್ಕಮಠ, ಶಂಕರ ಕೋಡ್ಲಾ, ದ.ಕೋ. ಹಳ್ಳಿಚಂದ್ರಶೇಖರ್, ಎಂ.ಕೆ.ಹೆಗಡೆ ಹಾಗೂ ಡಾ ಎಂ. ಮಹಮದ್ ಬಾಷಾ ಗೂಳ್ಯಂ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಮಾಧ್ಯಮ ಮತ್ತು ಸರ್ಕಾರ ಸವಾಲುಗಳು ವಿಷಯದ 2 ನೆಯ ಗೋಷ್ಠಿ ನಡೆಯಲಿದ್ದು ವಾರ್ತಾ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಉದ್ಘಾಟಿಸಲಿದ್ದಾರೆ. ಟಿ.ಗುರುರಾಜ್ ವಿಷಯ ಪಸ್ತಾವನೆ ಮಾಡಲಿದ್ದು ,ಮುಖ್ಯ ಅತಿಥಿಗಳಾಗಿ ಅಬ್ಬೂರು ರಾಜಶೇಖರ್, ಅತಿಥಿಗಳಾಗಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದೇಶ್ವರಪ್ಪ ಹಾಗೂ ಅಧ್ಯಕ್ಷತೆಯನ್ನು ಸದಾಶಿವ ಶೆಣೈ ವಹಿಸಲಿದ್ದಾರೆ. ಈ ಗೋಷ್ಠಿಯಲ್ಲಿ ಪತ್ರಕರ್ತರಾದ ಪಿ.ಎಂ. ಮಣೂರು, ಶಿವಶರಣಪ್ಪ ವಾಲಿ, ಶರಣು ಜಿಡಗಾ ಹಾಗೂ ಬಿ.ವಿ.ಚಕ್ರವರ್ತಿ ಭಾಗವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಮಹಿಳೆ ಮತ್ತು ಸವಾಲುಗಳು ವಿಷಯದಲ್ಲಿ 3 ನೆಯ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಅಪ್ಪ, ಅಧ್ಯಕ್ಷರು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ ಉಪನ್ಯಾಸ ನೀಡಲಿದ್ದಾರೆ. ಡಾ. ಶಿವಕುಮಾರ ಕಣಸೋಗಿ, ಮುಖ್ಯಸ್ಥರು ಪತ್ರಿಕೋದ್ಯಮ ವಿಭಾಗ ಉಪಸ್ಥಿತರಿದ್ದು, ಡಾ ನಿರ್ಮಲ ಎಲಿಗಾರ, ನಿರ್ದೇಶಕರು, ಆಕಾಶವಾಣಿ ಬೆಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತೆಯರಾದ ಶ್ರೀಮತಿ ಶೀಲಾತಿವಾರಿ, ಶ್ರೀಮತಿ ಭೀಮಾಬಾಯಿ ದೇಶಮುಖ, ಶ್ರೀಮತಿ ಸುವರ್ಣಾ ಡಿ. ಶಿವಲಿಂಗಪ್ಪ ಹಾಗೂ ಶ್ರೀಮತಿ ಸರೋಜಾ ಯಂಕನಮರಡಿ ಭಾಗ ವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದಿಕ್ಸೂಚಿ ಭಾಷಣ ಮಾಡಲಿದ್ದು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ನುಡಿಗಳನ್ನು ನುಡಿಯಲಿದ್ದು, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹಾಗೂ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರ ಘನ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ, ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವಥನಾರಾಯಣ ಹಾಗೂ ಅಬಕಾರಿ ಸಚಿವರಾದ ಗೋವಿಂದಯ್ಯ ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ, ನರಸಿಂಹನಾಯಕ ( ರಾಜೂಗೌಡ) ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಶ್ರೀಮತಿ ತಾರಾ ಅನುರಾಧ, ಅಧ್ಯಕ್ಷರು ಅರಣ್ಯ ಅಭಿವೃದ್ದಿ ಮಂಡಳಿ, ಶಾಸಕರಾದ ಎಂ.ವೈ.ಪಾಟೀಲ್, ಶ್ರೀಮತಿ ಕನೀಜ್ ಫಾತೀಮಾ, ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಹಾಗೂ ಡಾ ಸಿ. ಸೋಮಶೇಖರ್, ಅಧ್ಯಕ್ಷರು ಗಡಿ ಅಭಿವೃದ್ದಿ ಪ್ರಾಧಿಕಾರ ಆಗಮಿಸಲಿದ್ದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಸಮಾರೋಭ ಭಾಷಣವನ್ನು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಪಾದಕರಾದ ರವಿ ಹೆಗಡೆ ಮಾಡಲಿದ್ದಾರೆ ಹಾಗೂ ಅಧ್ಯಕ್ಷತೆಯನ್ನು ಶಿವಾನಂದ ತಗಡೂರು ವಹಿಸಲಿದ್ದಾರೆ.
ಸಮಾವೇಶದ ವೇದಿಕೆಗೆ ಹಿರಿಯ ಪತ್ರಕರ್ತರಾದ ದಿ.ವಿ.ಎನ್.ಕಾಗಲಕರ ಅವರ ಹೆಸರಿಡಲಾಗಿದೆ ಎಂದು ಶಿವಾನಂದ ತಗಡೂರು ಇದೇ ಸಂದರ್ಭದಲ್ಲಿ ತಿಳಿಸಿದರು.
ಒಂದು ಕೋ.ರೂ ಬಿಡುಗಡೆ: ಕಲಬುರಗಿ ಪತ್ರಿಕಾ ಭವನದ ಮೇಲ್ಮಡಿಗೆ ಪೀಠೋಪಕರಣ, ಗ್ರಂಥಾಲಯ ಹಾಗೂ ಇತರ ಸೌಕರ್ಯ ಗಳಿಗೆ ಜತೆಗೇ ಸಮ್ಮೇಳನಕ್ಕೆಂದು ಸರ್ಕಾರಕ್ಕೆ ಒಂದು ಕೋ.ರೂ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಆದರೆ ಇನ್ನೂ ಮಂಜೂರಾತಿ ದೊರೆತು ಬಿಡುಗಡೆಯಾಗಿಲ್ಲ. ಮುಂದೆ ಬಿಡುಗಡೆಯಾಗುವ ದೃಢ ವಿಶ್ವಾಸ ಹೊಂದಲಾಗಿದೆ ಎಂದು ತಗಡೂರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಿಶೇಷ ವಾಗಿ ಸನ್ಮಾನಿಸಲಾಗುತ್ತಿದೆ. ಕೊವಿಡ್ ದಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಬಿಡುಗಡೆ ಮಾಡಿರುವುದು ಸಾಮಾನ್ಯವಾದುದ್ದಲ್ಲ.ಹೀಗಾಗಿ ಸನ್ಮಾನಿಸಲಾಗುತ್ತಿದೆ ಎಂದು ವಿವರಣೆ ನೀಡಿದರು. ಕಳೆದ ಮೂರು ವರ್ಷಗಳುದ್ದಕ್ಕೂ ಸಂಘ ಪತ್ರಕರ್ತರ ಶ್ರೇಯೋಭಿವೃದ್ದಿಗೆ ಶ್ರಮಿಸಿರುವುದನ್ನು ಸಹ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಸೇರಿದಂತೆ ಮುಂತಾದವರಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…