# ಕೆ.ಶಿವು.ಲಕ್ಕಣ್ಣವರ
ರಾಜ್ಯದ ಹದಿಮೂರನೇ ವಿಧಾನಸಭೆಯ, ಹದಿನೈದನೇ ಅಧಿವೇಶನ ಇದೇ ತಿಂಗಳು 5 ರಿಂದ13 ರವರೆಗೆ ಒಟ್ಟು 7 ದಿನಗಳ ಕಾಲ ಹೊಸದಾಗಿ ಉದ್ಘಾಟನೆಗೊಂಡಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಿತು. ಸುಮಾರು 36 ಗಂಟೆಗಳ ಕಾಲ ಈ ಅಧಿವೇಶನದಲ್ಲಿ ಸರಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳು ನಡೆದವು.
ಈ ಅಧಿವೇಶನದಲ್ಲಿ ಮಾಜಿ ಪ್ರಧಾನಿಯಾಗಿದ್ದ ಐ.ಕೆ.ಗುಜ್ರಾಲ್, ಕರ್ನಾಟಕದ ಮಾಜಿ ಸಚಿವರಾಗಿದ್ದ ಬಿ.ಮುನಿಯಪ್ಪ ಮುದ್ದಪ್ಪ, ಬಿ.ಎಲ್.ಪಾಟೀಲ, ಮಾಜಿ ಶಾಸಕರಾಗಿರುವ ಡಾ.ಎಚ್.ಪುಟ್ಟದಾಸ್, ಜಿ.ಜಿ.ಯಲ್ಲಿಗುತ್ತಿ, ಬಿ.ಆರ್.ಧನಂಜಯ, ಎಂ.ಶಂಕರರೆಡ್ಡಿ, ಡಿ.ಬಿ.ಗಂಗಾಧರಪ್ಪ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಡಾ.ಸಿ.ಬಂದೀಗೌಡ, ಕೇಂದ್ರ ಸಚಿವರಾಗಿದ್ದ ವಿಲಾಸರಾವ್ ದೇಶಮುಖ್, ಆರ್ಎಸ್ಎಸ್ ವರಿಷ್ಠರಾಗಿದ್ದ ಕೆ.ಎಸ್.ಸುದರ್ಶನ್, ಶಿವಸೇನೆ ವರಿಷ್ಠ ಬಾಳಾಸಾಹೇಬ ಠಾಕ್ರೆ, ಕ್ಷೀರಕ್ರಾಂತಿ ಹರಿಕಾರ ಡಾ.ವರ್ಗೀಸ್ ಕುರಿಯನ್, ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್, ಡಾ.ಅನಿಲ್ ಕಮತಿ, ಸಿತಾರ ವಾದಕ ಪಂಡಿತ ರವಿಶಂಕರ ಅವರ ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಯಿತು.
2011-12ನೇ ಸಾಲಿನ ಅರ್ಜಿಗಳ ಸಮಿತಿಯ 13, 14, 15 ಹಾಗೂ 16 ನೇ ವರದಿಗಳನ್ನು ಮಹಿಳಾ ಮತ್ತು ಮಕ್ಕಳ ಸಮಿತಿಯ 21, 22, 23 ಹಾಗೂ 24 ನೇ ವರದಿಗಳನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 16, 17 ಮತ್ತು 18ನೇ ವರದಿಗಳನ್ನು ಮತ್ತು ಸರಕಾರಿ ಭರವಸೆಗಳ ಸಮಿತಿಯ 2008-09 ಸಾಲಿನ ಮೊದಲ ವರದಿ 2009-10 ನೇ ಸಾಲಿನ 2ನೇ ವರದಿ ಹಾಗೂ 2010-11 ನೇ 3ನೇ ವರದಿಯನ್ನು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಮಿತಿಯ 2011-12 ನೇ ಸಾಲಿನ 126 ಮತ್ತು 127 ನೇ ವರದಿಗಳನ್ನು ಸದನಗಳಲ್ಲಿ ಮಂಡಿಸಲಾಗಿದೆ.
ಮುಖ್ಯಮಂತ್ರಿಗಳು 2012-13 ನೇ ಸಾಲಿನ ಪೂರಕ ಅಂದಾಜು (ಎರಡನೇ ಕಂತು) ಗಳನ್ನು ದಿ.10 ರಂದು ಸದನದಲ್ಲಿ ಮಂಡಿಸಿದ್ದರು. ಅದಕ್ಕೆ ದಿ.12 ರಂದು ಅಂಗೀಕಾರ ದೊರೆತಿದೆ. ಹಾಗೂ 2012-13 ನೇ ಸಾಲಿನ ರಾಜ್ಯ ಹಣಕಾಸು ಮಧ್ಯಮ ಅವಧಿ ಪರೀಶೀಲನಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಭಾರತ ಸಂವಿಧಾನದ 151 (2) ನೇ ಮೇರೆಗೆ 2011-12 ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಹಾಗೂ ಹಣಕಾಸು ಲೆಕ್ಕಗಳು (ಭಾಗ-1 ಮತ್ತು 2) ಗಳನ್ನು ದಿ.10 ರಂದು ಸದನದಲ್ಲಿ ಮಂಡಿಸಲಾಗಿದೆ.
ಭಾರತ ಸಂವಿಧಾನದ 151(2) ನೇ ಅನುಚ್ಛೇದ ಮೇರೆಗೆ ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ದಿ.31 ಮಾರ್ಚ್ 2012 ಕ್ಕೆ ಕೊನೆಗೊಂಡ ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉರ್ಜಿತಗೊಳ್ಳಬಲ್ಲ ಗಣಿಗಾರಿಕೆಗಾಗಿ ನಿಯಂತ್ರಣ ಮತ್ತು ವ್ಯವಸ್ಥೆಗಳ ಮೇಲಿನ ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ (ಸಂಖ್ಯೆ 2) ಹಾಗೂ ಸರಕಾರದಿಂದ ಭೂಮಿಯನ್ನು ಸ್ವಾಧೀನದಿಂದ ಕೈ ಬಿಡಬೇಕು. ಮತ್ತು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ನಿವೇಶನಗಳ ಹಂಚಿಕೆಯ ವರದಿ (ಸಂಖ್ಯೆ 3) ಗಳನ್ನು ಸದನದಲ್ಲಿ ಮಂಡಿಸಲಾಗಿದೆ.
ಈ ಅಧಿವೇಶನದಲ್ಲಿ ನಿಯಮ 60ರ ಮೇರೆಗೆ 9 ಸೂಚನೆಗಳನ್ನು ಸ್ವೀಕರಿಸಿದ್ದು, ಸದರಿ ಸೂಚನೆಗಳಲ್ಲಿ ಮೂರು ಸೂಚನೆಗಳು ನಿಯಮ 69 ಕ್ಕೆ ಪರಿವರ್ತಿಸಿದ್ದು, ಸದನದಲ್ಲಿ ಚರ್ಚೆಯಾಗಿವೆ. ಉಳಿದ 6 ಸೂಚನೆಗಳು ತಿರಸ್ಕಾರಗೊಂಡಿವೆ. ಸದರಿ ಅಧಿವೇಶನದಲ್ಲಿ ನಿಯಮ 69 ರ ಮೇರೆಗೆ ಮೂರು ಸೂಚನೆಗಳನ್ನು ಸ್ವೀಕರಿಸಿದ್ದು, ಸದನದಲ್ಲಿ ಚರ್ಚೆಯಾಗಿವೆ.
ಈ ಅವಧಿಯಲ್ಲಿ ಒಟ್ಟು 705 ಪ್ರಶ್ನೆ ಸ್ವೀಕರಿಸಿ 704 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. ಆ ಪೈಕಿ ಸದನದಲ್ಲಿ ಉತ್ತರಿಸಿದ 90 ಪ್ರಶ್ನೆಗಳು ಹಾಗೂ ಲಿಖಿತ ಮೂಲಕ ಉತ್ತರಿಸಿದ 614 ಪ್ರಶ್ನೆಗಳಿವೆ. ಸದನದಲ್ಲಿ ಉತ್ತರಿಸಲು ತೀರ್ಮಾನಿಸಲಾಗಿದ್ದ 90 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳ ಉತ್ತರಗಳನ್ನು ಹಾಗೂ ಲಿಖಿತ ಮೂಲಕ ಉತ್ತರಿಸುವ 614 ಪ್ರಶ್ನೆಗಳ ಪೈಕಿ 548 ಪ್ರಶ್ನೆಗಳ ಉತ್ತರ ವನ್ನು ಸರಕಾರದಿಂದ ಸ್ವೀಕರಿಸಲಾ ಗಿದೆ. ಒಂದು ಪ್ರಶ್ನೆ ತಿರಸ್ಕ್ಕತಗೊಂಡಿದೆ. ಒಂದು ಪ್ರಶ್ನೆ ವರದಿಯಾಗಿದೆ.
ನಿಯಮ 351 ಅಡಿಯಲ್ಲಿ ಒಟ್ಟು 64 ಸೂಚನೆಗಳು ಸ್ವೀಕೃತವಾಗಿದ್ದು, 57 ಸೂಚನೆಗಳು ಅಂಗೀಕಾರಗೊಂಡಿವೆ. ಈ ಪೈಕಿ 36 ಸೂಚನೆಗಳು ಸರಕಾರದಿಂದ ಉತ್ತರ ಸ್ವೀಕರಿಸಲಾಗಿದೆ. ಗಮನ ಸೆಳೆಯುವ ಸೂಚನೆಗಳು ಒಟ್ಟು 146 ಬಂದಿದ್ದು, ಈ ಪೈಕಿ 27 ಸೂಚನೆಗಳ ಕುರಿತು ಚರ್ಚೆಯಾಗಿದೆ. ಸಭೆಯ ಮುಂದಿಡಲಾದ ಕಾಗದ ಪತ್ರಗಳ ಮೊದ ಲ ಹಾಗೂ ಎರಡನೇ ಪಟ್ಟಿಯನ್ನು ದಿ.10 ರಂದು ಸದನದಲ್ಲಿ ಮಂಡಿಸಲಾಗಿದೆ.
ಧನ ವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 19 ವಿಧೇಯಕಗಳನ್ನು ಅಧಿವೇಶನದಲ್ಲಿ ಮಂಡಿಸಲಾಗಿದ್ದು, ಒಟ್ಟು 27 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಸದನದ ಎಲ್ಲ ಕಾರ್ಯ ಕಲಾಪಗಳಲ್ಲಿ ಭಾಗವಹಿಸಿ ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿಗಳಿಗೆ ವಿರೋಧಿ ಪಕ್ಷದ ನಾಯಕರಿಗೆ ಸಚಿವ ಸಂಪುಟದ ಸದಸ್ಯರಿಗೆ ಉಪಸಭಾಧ್ಯಕ್ಷರಿಗೆ ಜನತಾ ದಳ ಶಾಸಕಾಂಗ ಪಕ್ಷದ ನಾಯಕರಿಗೆ ಸದನದ ಎಲ್ಲ ಸದಸ್ಯರಿಗೆ ಸದನದ ಕಲಾಪ ಮಾಧ್ಯಮಗಳಲ್ಲಿ ವರದಿ ಮಾಡಿದ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಲು ಸಹಕರಿಸಿದ ಎಲ್ಲ ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಸರಕಾರದ ವಿವಿಧ ಅಧಿಕಾರಿ ಮತ್ತು ನೌಕರರಿಗೆ ಅಧಿವೇಶನ ನಡೆಸಲು ಸಮರ್ಪಕ ವ್ಯವಸ್ಥೆ ಮಾಡಿರುವ ಬೆಳಗಾವಿ ಜಿಲ್ಲಾ ಆಡಳಿತಕ್ಕೆ ಕಾನೂನು ಸುವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಸುವರ್ಣ ವಿಧಾನಸೌಧ ಕಟ್ಟಡದಲ್ಲಿ ಕೆಲಸ ಕಾರ್ಯ ನಿರ್ವಹಿಸಲು ಅನುಕೂಲ ಕಲ್ಪಿಸಿದ ಎಲ್ಲರಿಗೂ ವಿಧಾನಸಭೆಯ ಅಧ್ಯಕ್ಷ ಭೋಪಯ್ಯ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಂತರ ಅಧಿವೇಶನವನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಿದ್ದಾರೆ..!
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…