ಬಿಸಿ ಬಿಸಿ ಸುದ್ದಿ

ಕುವೆಂಪು ಜನ್ಮ ಸ್ಮರಣೆ: ವಿಶ್ವ ಮಾನವರಾಗಲು ಕಟ್ಟುಪಾಡುಗಳನ್ನು ಧಿಕ್ಕರಿಸಿ: ವಿಸಾಜಿ

ಕಲಬುರ್ಗಿ: ನೆಲದ ವೈಚಾರಿಕ ಕವಿ ಕುವೆಂಪು ಅವರ ಕರೆಯಂತೆ ವಿಶ್ವ ಮಾನವರಾಗಲು ಜಾತಿ, ಧರ್ಮ, ಮೌಢ್ಯಾಚಾರಣೆಗಳ ಕಟ್ಟುಪಾಡುಗಳಿಂದ ಹೊರ ಬರಬೇಕು. ಅಸಮಾನತೆಯ ಬಂಧನಗಳ ಜಡತ್ವದಿಂದ ಬಿಡುಗಡೆಯಾಗಬೇಕು ಎಂದು ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಹೇಳಿದರು.

ಕುವೆಂಪು ಅವರು ಜನ್ಮ ದಿನಾಚರಣೆ ಪ್ರಯುಕ್ತ ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ವತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕುವೆಂಪು ಬದುಕು-ಸಾಹಿತ್ಯ ಅವಲೋಕನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಈ ಸಮಾಜದಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಮತಗಳಿವೆ. ಇವುಗಳ ನಡುವೆಯೂ ನಮ್ಮದು ಮನುಜ ಮತ ವಿಶ್ವಪಥ ಆಯ್ಕೆಯಾಗಬೇಕು. ಪೂರ್ಣ ದೃಷ್ಠಿ, ಸಮನ್ವಯ ಮತ್ತು ಸರ್ವೋದಯ ವಿಚಾರಗಳನ್ನು ಕುವೆಂಪು ನಮಗೆ ಆಸ್ತಿಯಾಗಿ ಕೊಟ್ಟಿದ್ದಾರೆ.

ಗುಡಿ, ಚರ್ಚ್, ಮಸೀದಿಗಳಲ್ಲಿ ದೇವರಿಲ್ಲ ನೇಗಿಲ ಯೋಗಿಯ ಮನೆಯಲ್ಲಿ ದೇವರಿದ್ದಾನೆ ಎಂದು ಹೇಳುವ ಮೂಲಕ ಕುವೆಂಪು ಕಾಯಕ ತತ್ವವನ್ನು ಎತ್ತಿ ಹಿಡಿದಿದ್ದಾರೆ. ನಾನು ನನಗಾಗಿ ಎನ್ನದೆ ನಾವು ನಮಗಾಗಿ ಎಂದು ಬದುಕುವ ಪರಿಕಲ್ಪನೆ ಕೊಟ್ಟು ಸಂಪ್ರದಾಯ ಬೇಧಗಳ ಗೋಡೆಗಳನ್ನು ತಿರಸ್ಕರಿಸಿದ್ದಾರೆ ಎಂದರು.

ಸಮಾನತೆಯ ತತ್ವಗಳಡಿ ಬದುಕುವುದನ್ನು ಕಲಿಸಿದ ರಸಋಷಿ, ಕನ್ನಡ ಭಾಷಾ ಪ್ರಜ್ಞೆ ಮತ್ತು ಚಳುವಳಿಯ ಪ್ರಜ್ಞೆ ಬೆಳೆಸುವುದನ್ನು ಕಲಿಸಿದ್ದಾರೆ. ಅವರ ಮಂತ್ರಮಾಂಗಲ್ಯ ಸೂತ್ರ ಪುಸ್ತಕದಲ್ಲಿ ಆದರ್ಶ ಮದುವೆಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಸರಳವಾಗಿರಬೇಕು, ಜಾತಿರಹಿತವಾಗಿರಬೇಕು, ಆಡಂಬರ ರಹಿತವಾಗಿರಬೇಕು, ಕಡಿಮೆ ಜನರು ಭಾಗಿಯಾಗಿರಬೇಕು. ಸಂಸ್ಕøತ ಶ್ಲೋಕ, ಮಂತ್ರ, ತಂತ್ರ, ಹೋಮ, ಹವನ ಇಲ್ಲದೆಯೇ, ವ್ಯವಹಾರಿಕವಲ್ಲದ ಪತಿ-ಪತ್ನಿ ಜತೆಯಾಗಿ ಸಮಪ್ರಜ್ಞೆಯಿಂದ ಬದುಕುವ ವಾಗ್ದಾನ ಮಾಡಬೇಕು. ಇಂಥಹ ವಿಚಾರಗಳನ್ನು ಬೇರೆ ಯಾವ ಕವಿಯೂ ಕೊಡಲು ಸಾಧ್ಯವಾಗಿಲ್ಲ ಎಂದ ವಿಸಾಜಿ, ಕುವೆಂಪು ಅವರ ವಿಚಾರಗಳನ್ನು ಮೆಚ್ಚುವ ನಾವುಗಳು ಜಾತಿ, ವರ್ಗ, ವರ್ಣ ಬೇಧಗಳಿಲ್ಲದ ವೈಜ್ಞಾನಿಕ ಮನೋಭಾವದಡಿ ಬದುಕು ರೂಢಿಸಿಕೊಂಡಾಗ ಮಾತ್ರ ಸರ್ವೋದಯ ಸಮಾಜ ಉದಯವಾಗಲು ಸಾಧ್ಯ ಎಂದು ವಿವರಿಸಿದರು.

ಆವಿಷ್ಕಾರ ವೇದಿಕೆಯ ಜಿಲ್ಲಾ ಸಂಚಾಲಕಿ ಅಶ್ವಿನಿ ಮಾತನಾಡಿ, ಮತ ಮೌಢ್ಯಗಳಲ್ಲಿ ಹಂಚಿ ಹೋಗಿರುವ ಜನರಿಗೆ ನಾವು ವೈಚಾರಿಕ ಚಿಂತನೆಗಳನ್ನು ಪರಿಚಯಿಸುವ ಅವಶ್ಯಕತೆಯಿದೆ. ಸಮಾಜದ ಹಿನ್ನೆಡೆಗೆ ಕಾರಣವಾಗುತ್ತಿರುವ ಸಾಂಪ್ರದಾಯಿಕ ಬಂಧನಗಳಿಂದ ವಿದ್ಯಾರ್ಥಿ ಯುವಜನರು ಬಿಡುಗಡೆಯಾಗಬೇಕು. ಉತ್ತಮ ಕಲೆ, ಸಾಹಿತ್ಯ, ಸಿನೆಮಾಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಸಾಂಸ್ಕøತಿಕ ವಾತಾವರಣ ಶುಚಿಯಾಗಲು ಸಾಧ್ಯ. ಅನ್ಯಾಯ, ಅಸಮಾನತೆ, ಶೋಷಣೆಗಳನ್ನು ಕಂಡು ಕುವೆಂಪು ಅವರು ಪ್ರಖರವಾದ ಸಾಹಿತ್ಯವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅದನ್ನೇ ನಾವುಗಳು ಅಸ್ತ್ರವಾಗಿ ಬಳಸುವ ಮೂಲಕ ಸಮಾಜದ ಪರಿವರ್ತನೆಗೆ ಸಂಘಟಿತರಾಗಬೇಕಿದೆ. ಆವಿಷ್ಕಾರ ನಡೆಸುತ್ತಿರುವ ಸಾಂಸ್ಕøತಿಕ ಚಳುವಳಿಗೆ ದನಿಯಾಗಲು ಯುವಕರು ಮುಂದೆ ಬರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪೀಪಲ್ಸ್ ಏಜುಕೇಷನ್ ಸಂಸ್ಥೆಯ ಕಾರ್ಯದರ್ಶಿ ಡಾ.ಮಾರುತಿರಾವ ಡಿ.ಮಾಲೆ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು. ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಚಾರ್ಯ ಗಿರೀಶ ಎಂ.ಮೀಶಿ, ಉಪನ್ಯಾಸಕ ಡಾ.ವಸಂತ ನಾಸಿ, ಆವಿಷ್ಕಾರದ ಪುಟ್ಟರಾಜ ಲಿಂಗಶೆಟ್ಟಿ, ಮಹಾದೇವಿ ನಾಗೂರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಆವಿಷ್ಕಾರ ಜಿಲ್ಲಾ ಸಮಿತಿ ಸದಸ್ಯ ಮಡಿವಾಳಪ್ಪ ಹೇರೂರ ನಿರೂಪಿಸಿದರು. ಶ್ರೀಶರಣ ಹೊಸಮನಿ ವಂದಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಕುವೆಂಪು ವಿಚಾರಗಳ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಅತಿಥಿಗಳೊಂದಿಗೆ ಸಂವಾದ ನಡೆಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago