ಬಿಸಿ ಬಿಸಿ ಸುದ್ದಿ

ಕರ್ನಾಟಕ ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಕಾಂಗ್ರೆಸ್‌ಗೆ ಭರ್ಜರಿ ಜಯ: ಬಿಜೆಪಿಗೆ ಮುಖಭಂಗ

  • # ಕೆ.ಶಿವು.ಲಕ್ಕಣ್ಣವರ

ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ-  ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಕೋವಿಡ್ ಎರಡನೇ ಅಲೆಯ ನಡುವೆಯೂ ಏಪ್ರಿಲ್ 27 ರಂದು 8 ಜಿಲ್ಲೆಗಳಲ್ಲಿ ನಡೆದಿದ್ದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿಗಳ ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಜೆಡಿಎಸ್ ಎರಡನೇ ಸ್ಥಾನ ಪಡೆದಿದ್ದು ಬಿಜೆಪಿಗೆ ಮುಖಭಂಗವಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ-  ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಉಳಿದಂತೆ ಚನ್ನಪಟ್ಟಣ ನಗರಸಭೆ ಮತ್ತು ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆದರೆ ಬಿಜೆಪಿ ಕೇವಲ ಮಡಿಕೇರಿ ನಗರಸಭೆಗೆ ಮಾತ್ರ ಸೀಮಿತವಾಗಿದೆ.

ಫಲಿತಾಂಶದ ಪೂರ್ಣ ವಿವರ ಹೀಗಿದೆ —
  • ಬಳ್ಳಾರಿ ಮಹಾನಗರ ಪಾಲಿಕೆ – ಕಾಂಗ್ರೆಸ್
  • ಒಟ್ಟು ಸ್ಥಾನಗಳು 39: ಕಾಂಗ್ರೆಸ್-21, ಬಿಜೆಪಿ-13, ಜೆಡಿಎಸ್-00, ಪಕ್ಷೇತರ-05
  • # ಬೀದರ್ ನಗರಸಭೆ – ಕಾಂಗ್ರೆಸ್ —
  • ಒಟ್ಟು ಸ್ಥಾನಗಳು 35: ಕಾಂಗ್ರೆಸ್-15, ಬಿಜೆಪಿ-08, ಜೆಡಿಎಸ್-07 ಪಕ್ಷೇತರ-05
  • # ರಾಮನಗರ ನಗರಸಭೆ – ಕಾಂಗ್ರೆಸ್ —
  • ಒಟ್ಟು ಸ್ಥಾನಗಳು 31: ಕಾಂಗ್ರೆಸ್-19, ಬಿಜೆಪಿ-00, ಜೆಡಿಎಸ್-11, ಪಕ್ಷೇತರ-01
  • ಭದ್ರಾವತಿ ನಗರಸಭೆ – ಕಾಂಗ್ರೆಸ್
  • ಒಟ್ಟು ಸ್ಥಾನಗಳು 35: ಕಾಂಗ್ರೆಸ್-18, ಬಿಜೆಪಿ-04, ಜೆಡಿಎಸ್-11, ಪಕ್ಷೇತರ-01
  • # ಚನ್ನಪಟ್ಟಣ ನಗರಸಭೆ – ಜೆಡಿಎಸ್
  • ಒಟ್ಟು ಸ್ಥಾನಗಳು 31: ಕಾಂಗ್ರೆಸ್-07, ಬಿಜೆಪಿ-07, ಜೆಡಿಎಸ್-16, ಪಕ್ಷೇತರ-01
  • #ಮಡಿಕೇರಿ ನಗರಸಭೆ – ಬಿಜೆಪಿ
  • ಒಟ್ಟು ಸ್ಥಾನಗಳು 23: ಕಾಂಗ್ರೆಸ್-01, ಬಿಜೆಪಿ-16, ಜೆಡಿಎಸ್-01, ಎಸ್‌ಡಿಪಿಐ-05 ಪಕ್ಷೇತರ-00
  • # ಬೇಲೂರು ಪುರಸಭೆ – ಕಾಂಗ್ರೆಸ್
  • ಒಟ್ಟು ಸ್ಥಾನಗಳು 23: ಕಾಂಗ್ರೆಸ್-17, ಬಿಜೆಪಿ-01, ಜೆಡಿಎಸ್-05, ಪಕ್ಷೇತರ-00
  • # ವಿಜಯಪುರ ಪುರಸಭೆ – ಜೆಡಿಎಸ್
  • ಒಟ್ಟು ಸ್ಥಾನಗಳು 23: ಕಾಂಗ್ರೆಸ್-06, ಬಿಜೆಪಿ-01, ಜೆಡಿಎಸ್-14, ಪಕ್ಷೇತರ-02
  • # ಗುಡಿಬಂಡೆ ಪಟ್ಟಣ ಪಂಚಾಯಿತಿ – ಕಾಂಗ್ರೆಸ್
  • ಒಟ್ಟು ಸ್ಥಾನಗಳು 11: ಕಾಂಗ್ರೆಸ್-06, ಬಿಜೆಪಿ-00, ಜೆಡಿಎಸ್-02, ಪಕ್ಷೇತರ-03
  • # ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ – ಕಾಂಗ್ರೆಸ್
  • ಒಟ್ಟು ಸ್ಥಾನಗಳು 15: ಕಾಂಗ್ರೆಸ್-09, ಬಿಜೆಪಿ-06, ಜೆಡಿಎಸ್-00, ಪಕ್ಷೇತರ-00

ಒಟ್ಟು 266 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು 119 ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು 44.73% ಮತಗಳನ್ನು ಪಡೆದಿದೆ. ಜೆಡಿಎಸ್ 67 ಸ್ಥಾನಗಳಲ್ಲಿ ಜಯಿಸಿದ್ದು, 25.18% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದ್ದು, 21.05% ರಷ್ಟು ಮತಗಳನ್ನು ಪಡೆದಿದೆ..!

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago