# ಕುಶಲ
ಬೆಂಗಳೂರು: ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪಣವಾಗಿದ್ದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಹೆಚ್ಚಿನ ಕಡೆ ಪಕ್ಷೇತರೇ ಹೆಚ್ಚು ಗೆದ್ದಿದ್ದಾರೆ. ಹೀಗಾಗಿ, ಅರ್ಧದಷ್ಟು ನಗರಸಂಸ್ಥೆಗಳು ಅತಂತ್ರ ಫಲಿತಾಂಶ ಕಂಡಿವೆ, ಅಥವಾ ಪಕ್ಷೇತರರ ವಶವಾಗುತ್ತಿದೆ.
ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಪಕ್ಷ ಹೆಚ್ಚು ಯಶಸ್ಸು ಕಂಡಿದೆ. 58 ನಗರಸಂಸ್ಥೆಗಳ ಪೈಕಿ ಕಾಂಗ್ರೆಸ್ 21ರಲ್ಲಿ ಗೆದ್ದರೆ ಆಡಳಿತಾರೂಢ ಬಿಜೆಪಿಗೆ 21ರಲ್ಲಿ ಮಾತ್ರ ಅಧಿಕಾರಭಾಗ್ಯ ಸಿಕ್ಕಿದೆ. ಜೆಡಿಎಸ್ ಪಾಲಿಗೆ ಅಧಿಕಾರ ಸಿಕ್ಕಿದ್ದು ಒಂದರಲ್ಲಿ ಮಾತ್ರ.
ಐದು ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳ ಒಟ್ಟು 1185 ವಾರ್ಡ್ಗಳಿಗೆ ಸೋಮವಾರ ಚುನಾವಣೆ ಆಗಿತ್ತು. ಇಂದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅತಿ ಹೆಚ್ಚು ವಾರ್ಡ್ಗಳನ್ನ ಗೆದ್ದಿದೆ. 501 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ 431 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಎಸ್ ಪಕ್ಷ ಕೇವಲ 45 ವಾರ್ಡ್ಗಳಲ್ಲಿ ಮಾತ್ರ ಗೆಲುವು ಕಂಡಿದೆ. ಪಕ್ಷೇತರರು ಮತ್ತು ಇತರೆ ಪಕ್ಷಗಳವರು 207 ವಾರ್ಡ್ಗಳಲ್ಲಿ ಜಯ ಸಾಧಿಸಿದ್ಧಾರೆ.
34 ಪಟ್ಟಣ ಪಂಚಾಯಿತಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೇ ಅತಿ ಹೆಚ್ಚು ವಿಜೃಂಬಿಸಿರುವುದು ಕುತೂಹಲ. ಬೆಳಗಾವಿ ಜಿಲ್ಲೆಯ ಕೆಲ ಪ.ಪಂ.ಗಳಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಪಕ್ಷೇತರರಾಗಿ ನಿಂತು ಗೆದ್ದಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಆನಂದ್ ಸಿಂಗ್ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಕೊಪ್ಪಳ, ವಿಜಯಪುರದ ಕೆಲ ಪಟ್ಟಣ ಪಂಚಾಯಿತಿಗಳಲ್ಲಿ ಪಕ್ಷೇತರರೇ ಅಧಿಕ ಸಂಖ್ಯೆಯಲ್ಲಿ ಗೆದ್ದಿದ್ದಾರೆ.
ಸಿದ್ದರಾಮಯ್ಯ ಪ್ರತಿಕ್ರಿಯೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಗರಸಂಸ್ಥೆಗಳ ಚುನಾವಣೆ ಫಲಿತಾಂಶವನ್ನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನಾಭಿಪ್ರಾಯಕ್ಕೆ ದಿಗ್ಸೂಚಿ ಎಂದು ಬಣ್ಣಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಜನರ ಆಕ್ರೋಶವು ಈ ತೀರ್ಪಿನ ಮೂಲಕ ಹೊರಬಂದಿದೆ ಎಂದಿದ್ದಾರೆ ಸಿದ್ದರಾಮಯ್ಯ.
ಸಿಎಂ ಪ್ರತಿಕ್ರಿಯೆ: ಆದರೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಚುನಾವಣೆಯ ಫಲಿತಾಂಶ ಬಿಜೆಪಿಗೆ ಹಿನ್ನಡೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ನವರಿಗೆ ಬುಡವೇ ಇಲ್ಲ. ಕಾಂಗ್ರೆಸ್ನವರು ಅಲ್ಲೊಂದು ಇಲ್ಲೊಂದು ಕಡೆ ಗೆದ್ದು ಸುಮ್ಮನೆ ಬೀಗುತ್ತಿದ್ದಾರೆ. ಬಿಜೆಪಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಪಟ್ಟಣ ಪಂಚಾಯಿತಿಯಲ್ಲೂ ಇದ್ದೇವೆ. ಜನರು ಸರ್ಕಾರಕ್ಕೆ ಬೆಂಬಲ ಕೈಬಿಟ್ಟಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಬೆಂಬಲಿಸುವುದನ್ನು ಮುಂದುವರಿಸುತ್ತಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ ಫಲಿತಾಂಶದ ವಿವರ:
ಒಟ್ಟು ನಗರಸಂಸ್ಥೆಗಳು: 58
ಬಿಜೆಪಿ: 12
ಕಾಂಗ್ರೆಸ್: 21
ಜೆಡಿಎಸ್: 1
ಇತರೆ ಮತ್ತು ಅತಂತ್ರ: 24
ಒಟ್ಟು ಕ್ಷೇತ್ರಗಳು: 1185
ಫಲಿತಾಂಶ ಘೋಷಣೆಯಾಗಿರುವುದು: 1184
ಬಿಜೆಪಿ: 431
ಕಾಂಗ್ರೆಸ್: 501
ಜೆಡಿಎಸ್: 45
ಇತರರು: 207
ನಗರಸಭೆ: 5
ಬಿಜೆಪಿ: 2
ಕಾಂಗ್ರೆಸ್: 1
ಜೆಡಿಎಸ್: 0
ಅತಂತ್ರ: 2
ಪುರಸಭೆ: 19
ಬಿಜೆಪಿ: 5
ಕಾಂಗ್ರೆಸ್: 8
ಜೆಡಿಎಸ್: 1
ಅತಂತ್ರ: 3
ಪಟ್ಟಣ ಪಂಚಾಯತ್: 34
ಬಿಜೆಪಿ: 5
ಕಾಂಗ್ರೆಸ್: 12
ಜೆಡಿಎಸ್: 0
ಅತಂತ್ರ: 17
ವಾರ್ಡ್ವಾರು ಫಲಿತಾಂಶ ವಿವರ:
ನಗರಸಭೆ: 166 ವಾರ್ಡ್
ಬಿಜೆಪಿ 67
ಕಾಂಗ್ರೆಸ್ 61
ಜೆಡಿಎಸ್ 12
ಇತರರು 26
ಪುರಸಭೆ: 441 ವಾರ್ಡ್
ಬಿಜೆಪಿ 175
ಕಾಂಗ್ರೆಸ್ 203
ಜೆಡಿಎಸ್ 21
ಇತರೆ 43
ಪ.ಪಂ: 577 ವಾರ್ಡ್ಗಳು
ಬಿಜೆಪಿ 189
ಕಾಂಗ್ರೆಸ್ 237
ಜೆಡಿಎಸ್ 12
ಇತರೆ 238
: ಇಷ್ಟು ದಿನ ಕಡ್ಲೆಕಾಯಿ ತಿಂತಿದ್ರು, ಈಗ ಮೇಕೆ ಮಾಂಸಕ್ಕಾಗಿ ಪಾದಯಾತ್ರೆ: ಕಾಂಗ್ರೆಸ್ ಬಗ್ಗೆ R. Ashoka ಲೇವಡಿ
ನಗರಸಭೆಗಳ ಅಧಿಕಾರ ಯಾರಿಗೆ?:
1) ಚಿಕ್ಕಮಗಳೂರು ನಗರಸಭೆ- ಬಿಜೆಪಿ
2) ತುಮಕೂರಿನ ಶಿರಾ ನಗರಸಭೆ- ಅತಂತ್ರ
3) ಗದಗ-ಬೆಟಗೇರಿ ನಗರಸಭೆ – ಬಿಜೆಪಿ
4) ವಿಜಯನಗರದ ಹೊಸಪೇಟೆ ನಗರಸಭೆ- ಅತಂತ್ರ
5) ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ- ಕಾಂಗ್ರೆಸ್
ಪುರಸಭೆಗಳಲ್ಲಿ ಅಧಿಕಾರ:
1) ಬೆಂಗಳೂರು ನಗರದ ಜಿಗಣಿ ಪುರಸಭೆ:
2) ಬೆಂಗಳೂರು ನಗರದ ಚಂದಾಪುರ ಪುರಸಭೆ:
3) ಧಾರವಾಡದ ಅಣ್ಣಿಗೇರಿ ಪುರಸಭೆ: ಕಾಂಗ್ರೆಸ್
4) ಹಾವೇರಿಯ ಬಂಕಾಪೂರ ಪುರಸಭೆ: ಕಾಂಗ್ರೆಸ್
5) ರಾಮನಗರದ ಬಿಡದಿ ಪುರಸಭೆ: ಜೆಡಿಎಸ್
6) ದಾವಣಗೆರೆಯ ಮಲೆಬನ್ನೂರು ಪುರಸಭೆ: ಕಾಂಗ್ರೆಸ್
7) ಉಡುಪಿಯ ಕಾಪು ಪುರಸಭೆ: ಬಿಜೆಪಿ
8) ಬೆಳಗಾವಿಯ ಅಥಣಿ ಪುರಸಭೆ: ಕಾಂಗ್ರೆಸ್
9) ಬೆಳಗಾವಿತ ಹಾರೋಗೇರಿ ಪುರಸಭೆ: ಬಿಜೆಪಿ
10) ಬೆಳಗಾವಿಯ ಮುಗಳಖೋಡ ಪುರಸಭೆ: ಬಿಜೆಪಿ
11) ಬೆಳಗಾವಿಯ ಮುನವಳ್ಳಿ ಪುರಸಭೆ: ಅತಂತ್ರ (ಬಿಜೆಪಿ ಸಾಧ್ಯತೆ)
12) ಬೆಳಗಾವಿಯ ಅಗಾರಖುರ್ದು ಪುರಸಭೆ: ಕಾಂಗ್ರೆಸ್
13) ಕೊಪ್ಪಳದ ಕಾರಟಗಿ ಪುರಸಭೆ: ಅತಂತ್ರ
14) ಬಳ್ಳಾರಿಯ ಕರೆಕುಪ್ಪ ಪುರಸಭೆ: ಅತಂತ್ರ
15) ಬಳ್ಳಾರಿಯ ಕುರುಗೋಡು ಪುರಸಭೆ: ಕಾಂಗ್ರೆಸ್
16) ವಿಜಯನಗರದ ಹಗರಿಬೊಮ್ಮನಹಳ್ಳಿ ಪುರಸಭೆ: ಕಾಂಗ್ರೆಸ್
17) ರಾಯಚೂರು ಮಸ್ಕಿ ಪುರಸಭೆ: ಬಿಜೆಪಿ
18) ಯಾದಗಿರಿ, ಕೆಂಭಾವಿ ಪುರಸಭೆ: ಬಿಜೆಪಿ
19) ಯಾದಗಿರಿ, ಕೆಕ್ಕೇರಾ ಪುರಸಭೆ: ಕಾಂಗ್ರೆಸ್
ಪಟ್ಟಣ ಪಂಚಾಯಿತಿ ಫಲಿತಾಂಶ:
1) ಚಿತ್ರದುರ್ಗ, ನಾಯಕನ ಹಟ್ಟಿ ಪ.ಪಂ. – ಕಾಂಗ್ರೆಸ್
2) ದಕ್ಷಿಣಕನ್ನಡ, ವಿಟ್ಲಾ ಪ.ಪಂ., 18 – ಬಿಜೆಪಿ
3) ದಕ್ಷಿಣ ಕನ್ನಡ, ಕೋಟೆಕಾರು ಪ.ಪಂ: ಬಿಜೆಪಿ
4) ಬೆಳಗಾವಿ, ಎಂ.ಕೆ. ಹುಬ್ಬಳ್ಳಿ ಪ.ಪಂ. – ಪಕ್ಷೇತರ
5) ಬೆಳಗಾವಿ, ಕಂಕನವಾಡಿ ಪ.ಪಂ. – ಬಿಜೆಪಿ
6) ಬೆಳಗಾವಿ, ನಾಗನೂರ ಪ.ಪಂ. – ಪಕ್ಷೇತರ
7) ಬೆಳಗಾವಿ, ಯಕ್ಸಾಂಬ ಪ.ಪಂ. – ಕಾಂಗ್ರೆಸ್
8) ಬೆಳಗಾವಿ, ಚೆನ್ನಮ್ಮನ ಕಿತ್ತೂರು ಪ.ಪಂ. – ಅತಂತ್ರ
9) ಬೆಳಗಾವಿ, ಅರಭಾವಿ ಪ.ಪಂ. – ಪಕ್ಷೇತರ
10) ಬೆಳಗಾವಿ, ಐನಾಪುರ ಪ.ಪಂ. – ಕಾಂಗ್ರೆಸ್
11) ಬೆಳಗಾವಿ, ಶೇಡಬಾಳ ಪ.ಪಂ. – ಬಿಜೆಪಿ
12) ಬೆಳಗಾವಿ, ಚಿಂಚಿಲಿ ಪ.ಪಂ. – ಅತಂತ್ರ
13) ಬೆಳಗಾವಿ, ಬೋರಗಾಂವ ಪ.ಪಂ. – ಪಕ್ಷೇತರ
14) ಬೆಳಗಾವಿ, ಕಲ್ಲೋಳಿ ಪ.ಪಂ. – ಪಕ್ಷೇತರ
15) ವಿಜಯಪುರ, ನಲತವಾಡ ಪ.ಪಂ. – ಕಾಂಗ್ರೆಸ್
16) ವಿಜಯಪುರ, ನಿಡಗುಂದಿ ಪ.ಪಂ. – ಕಾಂಗ್ರೆಸ್
17) ವಿಜಯಪುರ, ದೇವರಹಿಪ್ಪರಗಿ ಪ.ಪಂ. – ಅತಂತ್ರ
18) ವಿಜಯಪುರ, ಆಲಮೇಲ ಪ.ಪಂ. – ಅತಂತ್ರ
19) ವಿಜಯಪುರ, ಮನಗೂಳಿ ಪ.ಪಂ. – ಬಿಜೆಪಿ
20) ವಿಜಯಪುರ, ಕೋಲ್ಹಾರ ಪ.ಪಂ. – ಕಾಂಗ್ರೆಸ್
21) ಬಾಗಲಕೋಟೆ, ಕಮತಗಿ ಪ.ಪಂ. – ಕಾಂಗ್ರೆಸ್
22) ಬಾಗಲಕೋಟೆ, ಬೆಳಗಲಿ ಪ.ಪಂ. – ಅತಂತ್ರ
23) ಬಾಗಲಕೋಟೆ, ಅಮೀನಗಡ ಪ.ಪಂ. – ಅತಂತ್ರ
24) ಹಾವೇರಿ, ಗುತ್ತಲ ಪ.ಪಂ. – ಕಾಂಗ್ರೆಸ್
25) ಉತ್ತರಕನ್ನಡ, ಜಾಲಿ ಪ.ಪಂ. – ಪಕ್ಷೇತರ
26) ಕೊಪ್ಪಳ, ತಾವರೆಗೇರಾ ಪ.ಪಂ. – ಅತಂತ್ರ
27) ಕೊಪ್ಪಳ, ಕೂಕನೂರ ಪ.ಪಂ. – ಕಾಂಗ್ರೆಸ್
28) ಕೊಪ್ಪಳ, ಭಾಗ್ಯನಗರ ಪ.ಪಂ. – ಅತಂತ್ರ
29) ಕೊಪ್ಪಳ, ಕನಕಗಿರಿ ಪ.ಪಂ. – ಕಾಂಗ್ರೆಸ್
30) ವಿಜಯನಗರ, ಮರಿಯಮ್ಮನಹಳ್ಳಿ ಪ.ಪಂ. – ಕಾಂಗ್ರೆಸ್
31) ರಾಯಚೂರು, ಕವಿತಾಳ ಪ.ಪಂ. – ಅತಂತ್ರ
32) ರಾಯಚೂರು, ತುರ್ವಿಹಾಳ ಪ.ಪಂ. – ಕಾಂಗ್ರೆಸ್
33) ರಾಯಚೂರು, ಬಳಗಾನೂರು ಪ.ಪಂ. – ಅತಂತ್ರ
34) ರಾಯಚೂರು, ಸಿರವಾರ ಪ.ಪಂ. – ಅತಂತ್ರ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…