ಕಲಬುರ್ಗಿ : ಹೊಸ ವರ್ಷ ನಮ್ಮೆಲ್ಲರಿಗೂ ಒಂಥರಾ ಭಾವುಕ, ಭಾವನಾತ್ಮಕ ಕ್ಷಣವಿದು. ಯಾಕೆಂದರೆ, ಸಮಯ ಎಂಬುದು ಅದ್ಭುತ ಮತ್ತು ಅಮೂಲ್ಯ. ಈ ದೃಷ್ಟಿಯಿಂದ ನೋಡಿದರೆ ಪ್ರತೀ ವರ್ಷವೂ ಸರಿಯುವ ಕ್ಷಣ ಮನಸಿನಲ್ಲೇನೋ ನೋವು ತರುತ್ತವೆ. ಹಾಗಂತ, ಜಾಸ್ತಿ ನೊಂದು ಕುಳಿತುಕೊಳ್ಳಬೇಕಾಗಿಲ್ಲ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಗ್ರಂಥಾಲಯ ಸಿಬ್ಬಂದಿಗಳು ಏರ್ಪಡಿಸಿದ್ದ ಹೊಸ ವರ್ಷದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿಯವರೆಗೆ ನಮ್ಮ ಗ್ರಂಥಾಲಯದಲ್ಲಿ ಯಾರು ಮಾಡದೇ ಇರುವ ಕಾರ್ಯಕ್ರಮ ಇಂದು ಹೊಸ ವರ್ಷದ ನಿಮಿತ್ಯವಾಗಿ ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದು ಸಿಬ್ಬಂದಿಗೆ ಹರಿಸಿ ಹಾರೈಸಿದರು. ಗ್ರಂಥಪಾಲಕ ಡಾ. ಪ್ರವೀಣ್ ಕುಮಾರ್ ಕುಂಬಾರ ಮಾತನಾಡಿ, ನಮ್ಮ ಬದುಕಿನ ಅದ್ಯಾಯದ ಹೊಸ ಪುಟ ತೆರೆಯಲು, ಹೊಸ ಉಲ್ಲಾಸ, ಹೊಸ ಚೈತನ್ಯ, ಹೊಸ ವಿಶ್ವಾಸ ತುಂಬಲು ಹೊಸ ವರ್ಷ ಕಾದಿರುತ್ತದೆ. ಹಾಗೆಯೇ, ಈಗ ನಾವು ಹೊಸ ವರ್ಷದ ಸ್ವಾಗತದ ಮಾಡಿ ಸಂಭ್ರಮಿಸುವುದು ತುಂಬಾ ಸಂತೋಷ ಅನಿಸುತ್ತದೆ. ಬರುವ ದಿನಗಳಲ್ಲಿ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಗ್ರಂಥಾಲಯದ ಸಿಬ್ಬಂದಿಗಳು ಎಲ್ಲರೂ ಒಂದೇ ಬಣ್ಣದ ಪ್ಯಾಂಟ್ ಶರ್ಟ್ ಧರಿಸಿ ತಮ್ಮಲ್ಲಿರುವ ಒಗ್ಗಟ್ಟಿನ ಭಾವನೆ ತೋರಿದರೆ ಹೆಣ್ಣು ಮಕ್ಕಳು ಇವರಕ್ಕಿಂತ ನಾವೇನು ಕಡಿಮೆ ಇಲ್ಲ ಎಂದು ಅವರು ಒಂದೇ ಬಣ್ಣದ ಸೀರೆ ಮತ್ತು ಕುಪ್ಪಸ ತೊಟ್ಟು ಸಿಂಗಾರಗೊಂಡು ಇದು ನಮ್ಮ ಮನೆ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಬಾಂಧ್ಯವದ ಸಂಕೇತ ತೋರಿಸಿಕೊಟ್ಟರು.
ನಂತರ ಮುಕಾಭಿನಯ ಪಾತ್ರ ಮತ್ತು ಅಂತಾಕ್ಷರಿ ಕಾರ್ಯಕ್ರಮ ಮಾಡಿ ಎಲ್ಲರೂ ಹೊಸ ವರ್ಷದ ಸಂಭ್ರಮ ಆಚರಿಸಿದರು. ಮಮತಾ ಮೇಸ್ತ್ರಿ, ಡಾ. ಖೇಮಣ್ಣ ಅಲ್ದಿ, ಶುರಣು ಪಾಟೀಲ, ನಿಂಗಪ್ಪ ಕರನಾಳಕರ್, ಶಿವಲಿಂಗ, ಪ್ರವೀಣ, ರೂಪಾ, ಕಾವೇರಿ ಕಾಂಬಳೆ, ಪ್ರಕಾಶ, ಶ್ರೀನಿವಾಸ್, ಪಂಡಿತ್, ನಿಖಿಲ್, ಶ್ರೀಧರ, ರವಿ, ನಾಗರಾಜ ಇತರರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…