ಕಲಬುರಗಿ: ಶತಮಾನಗಳಿಂದ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ ಮತ್ತು ಮೌಢ್ಯಾಚರಣೆಗಳನ್ನು ನಿರ್ಮೂಲನೆ ಮಾಡಬೇಕಾದರೆ ಪ್ರತಿಯೊಬ್ಬರು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಸಾಹಿತಿ ಧರ್ಮಣ್ಣ ಎಚ್ ಧನ್ನಿ ಕರೆ ನೀಡಿದರು.
ಜಿಲ್ಲೆಯ ಚಿತ್ತಾಪೂರ ತಾಲೂಕಿನ ಚಾಮನೂರ ಗ್ರಾಮದ ದೇವಮ್ಮ ದೇವಸ್ಥಾನದ ಆವರಣದಲ್ಲಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಸ್ಕಾರ ಪ್ರತಿಷ್ಠಾನ ಇವರು ಜಂಟಿಯಾಗಿ ಆಯೋಜಿಸಿದ ಅಸ್ಪೃಶ್ಯತೆ ನಿರ್ಮೂಲನಾ ಜನ ಜಾಗೃತಿ ಹಾಗೂ ಬೀದಿ ನಾಟಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಮುಂದುವರಿದರೂ ಇನ್ನೂ ಅಸ್ಪೃಶ್ಯತೆ ಅಳಿಸಲು ಸಾಧ್ಯವಾಗಿಲ್ಲ. ಬುದ್ಧ ಬಸವ ಡಾ ಅಂಬೇಡ್ಕರ ಅವರು ನಿರಂತರ ಹೋರಾಟ ಮಾಡಿದ್ದಾರೆ. ಇಂದು ಸರ್ವರಿಗೂ ಸಮ ಬಾಳು ಸಮ ಪಾಲು ಅವಕಾಶ ಮಾಡಿ ಕೊಟ್ಟ ನಮ್ಮ ಸಂವಿಧಾನವನ್ನು ಅಧ್ಯಯನ ಮಾಡಬೇಕು. ಆ ಮೂಲಕ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಎಲ್ಲಾ ಸಮುದಾಯದ ಜನ ಮುಂದಾಗಬೇಕು ಎಂದರು.
ಕಡಬೂರ ಗ್ರಾಪಂ ಸದಸ್ಯ ರಾಘು ದೊಡ್ಡಮನಿ ಹಾಗೂ ಸಂಗೀತ ಕಲಾವಿದ ಎಂ ಎನ್ ಸುಗಂಧಿ ರಾಜಾಪೂರ ಅವರು, ಸ್ವಾಭಿಮಾನದ ಬದುಕು ಕಲ್ಪಿಸಿ ಕೊಟ್ಟ ಸಂವಿಧಾನದ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು. ಸಮಾಜದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ದೊಡ್ಡ ಪೀಡುಗಾಗಿ ಕಾಡುತ್ತಿದೆ. ಮಹಾ ಪುರುಷರ ಹೋರಾಟ ಮತ್ತು ಚಿಂತನೆಗಳು ಅರ್ಥೈಸಿ ಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಗ್ರಾಪಂ ಉಪಾಧ್ಯಕ್ಷ ಖಾಜಾಸಾಬ ಜಮಾದಾರ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ ಚಿಕಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಅಮೃತ ದೊರೆ, ಕಾಶಪ್ಪ ಅಮಲಗೋಳ, ಮಾಜಿ ಅಧ್ಯಕ್ಷ ಭಗವಂತ ಎಂಟಮನೆ, ಮುಖಂಡರಾದ ಭಗವಂತ ದೊರೆ, ಪೀರಪ್ಪ ಹಾದಿಮನಿ, ಸೋಫಿಸಾಬ ಮತ್ತಿತರರು ಪಾಲ್ಗೊಂಡಿದರು.
ನಂತರ ಓಂ ಸಾಯಿ ಕಲಾ ತಂಡದ ಸದಸ್ಯರಾದ ಶಶಿಕಾಂತ ನಿರಗುಡಿ, ಜಯಶ್ರೀ ಗುತ್ತೇದಾರ, ಗಂಗುಬಾಯಿ, ಸಂದೀಪ ಕಾಳಕಿಂಗೆ ಅವರಿಂದ ಎರಡು ಬೀದಿ ನಾಟಕ ಪ್ರದರ್ಶಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…