ಆ ಕಾಲದಲ್ಲಿ ಮುಸ್ಲಿಂ ಬರಹಗಾರರಿಗೆ ಒಂದು ಬರಹದ ಪ್ರೋತ್ಸಾಹವಿರಲಿಲ್ಲ. ಆಗ ಸಾ.ರಾ ಅಬೂಬಕರ್ ರ ಬರಹದ ಪ್ರೋತ್ಸಾಹಕ್ಕೆ ಬಂದವರು ಪಿ.ಲಂಕೇಶ್‌ರು. ಹಾಗಾಗಿ ಸಾ.ರಾ.ಅಬೂಬಕರ್‌ರ ಮೊದಲ ಗುರುಗಳು ಪಿ.ಲಂಕೇಶ್‌ರು ಅಂದರೆ ಅಡ್ಡಿಯಿಲ್ಲ. ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಿದ ಲೇಖಕಿ ಸಾ.ರಾ.ಅಬೂಬಕರ್ ರವರು. ಸಾ.ರಾ.ಅಬೂಬಕರ್ ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ.
ಆ ಕಾಲದಲ್ಲಿ ಮುಸ್ಲಿಂ ಬರಹಗಾರರಿಗೆ ಒಂದು ಬರಹದ ಪ್ರೋತ್ಸಾಹವಿರಲಿಲ್ಲ. ಆಗ ಸಾ.ರಾ ಅಬೂಬಕರ್ ರ ಬರಹದ ಪ್ರೋತ್ಸಾಹಕ್ಕೆ ಬಂದವರು ಪಿ.ಲಂಕೇಶ್‌ರು. ಹಾಗಾಗಿ ಸಾ.ರಾ.ಅಬೂಬಕರ್‌ರ ಮೊದಲ ಗುರುಗಳು ಪಿ.ಲಂಕೇಶ್‌ರು ಅಂದರೆ ಅಡ್ಡಿಯಿಲ್ಲ. ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಿದ ಲೇಖಕಿ ಸಾ.ರಾ.ಅಬೂಬಕರ್ ರವರು.
ಸಾ.ರಾ.ಅಬೂಬಕರ್ ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ.
ತಂದೆ ನ್ಯಾಯವಾದಿಗಳಾಗಿದ್ದ ಪಿ.ಅಹಮದ್, ತಾಯಿ ಚೈನಾಬಿ ಅಂತ. ಸಾ.ರಾ.ಅಬೂಬಕರ್‌ರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ಆಯಿತು. ಹೈಸ್ಕೂಲು ವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಸಾ.ರಾ. ಅಬೂಬಕರ್‌ರು ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಬರೆಯಬೇಕೆಂದು ಬಾಲ್ಯದಲ್ಲೇ ಹುಟ್ಟಿದ ಕನಸು ನಿರ್ಧಾರವಾಯಿತು. ಎಂಜನಿಯರ್ ಆಗಿದ್ದ ಅಬೂಬಕರ್ ರೊಡನೆ ವಿವಾಹವಾಯಿತು. ಅಲ್ಲಿಂದ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು ಸಾ.ರಾ.ಅಬೂಬಕರ್.
ಆದರೆ ಕಾರಂತರು, ಇನಾಂದಾರ್, ಭೈರಪ್ಪ, ಯು.ಆರ್.ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾದರು ಸಾ.ರಾ.ಅಬೂಬಕರ್ ಅವರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳ ಆಕರ್ಷಣೆಗೆ ಒಳಗಾದರು ಸಾ.ರಾ.ಅಬೂಬಕರ್. ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಮುಸ್ಲಿಂ ಹೆಂಗಸರ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು. ತಲಾಕ್ ಸಂಪ್ರದಾಯದ, ಮಕ್ಕಳಾದ ನಂತರದ ಅಸಹನೀಯ ಬದುಕು, ಅಣ್ಣ ತಂದು ಕೊಡುತ್ತಿದ್ದ ವೈ.ಕಂ.ಮಹಮದ್ ಬಷೀರ್ ರವರ ಕಾದಂಬರಿಗಳ ಪ್ರಭಾವ-ಬರೆಯಬೇಕೆಂಬ ಅಂತರಾಳದ ಒತ್ತಡ. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನ ಎಂ.ಕೆ.ಇoದಿರಾರವರAತೆ ನಲವತ್ತು ದಾಟಿದ ನಂತರ ಪ್ರಾರಂಭಿಸಿದ ಸಾಹಿತ್ಯದ ಬರಹ ಶುರುಮಾಡಿದರು ಸಾ.ರಾ.ಅಬೂಬಕರ್.
ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಹೊರಹೊಮ್ಮಿದ ಶೋಷಿತ ಮುಸ್ಲಿಂ ಮಹಿಳೆಯರ ದನಿಯಾಗಿ, ವಾಸ್ತವಿಕ ಬದುಕಿನ ಚಿತ್ರಣದ ಈ ಕಾದಂಬರಿಯನ್ನು ಬರೆದರು. ಪಿ. ಲಂಕೇಶ್ ರವರು ಸಾ.ರಾ.ಅಬೂಬಕರ್ ರವರೆಗೆ ಬರೆಯಲು ಸಂಪೂರ್ಣ ಪ್ರೊಸ್ತಾಹ ನೀಡಿದರು. ಇದರಿಂದ ಸಾ.ರಾ.ಅಬೂಬಕರ್ ಬಹುಬೇಗ ಓದುಗರಿಂದ ಪಡೆದ ಮೆಚ್ಚುಗೆ ಪಡೆದರು. ನಂತರ ಬರೆದದ್ದು ಹಲವಾರು ಕಾದಂಬರಿಗಳು.
ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-2), ತಳ ಒಡೆದ ದೋಣಿ, ಪಂಜರ. ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು. ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮವಿಜ್ಞಾನದ ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು)ಗಳನ್ನು ಮತ್ತು ಪ್ರವಾಸಕಥನ-ಐಷಾರಾಮದಲ್ಲಿ ಬರೆದರು.
ಸಾ.ರಾ.ಅಬೂಬಕರ್ ರನ್ನು ಹುಡಿಕಿಕೊಂಡು ಬಂದ ಪ್ರಶಸ್ತಿಗಳೆಂದರೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕ.ಸಾ.ಪ.ನ.ಬಿ. ಸರೋಜಾದೇವಿ ಪ್ರಶಸ್ತಿ, ಸಹನಾ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ಸುಳಿಯಲ್ಲಿ ಸಿಕ್ಕವರು ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚಿನದು-ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪ್ರಮುಖವಾದುವುಗಳು ಸಾ.ರಾ.ಅಬೂಬಕರ್ ರನ್ನು ಅರಸಿ ಬಂದವು..!
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…