ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ
•••••••••••••••••••••••••••••••••••••••
ದಿನಾಂಕ: 06.01.2022
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-606
ಲೇಖಕರು: ಡಾ. ಮಲ್ಲಿಕಾರ್ಜುನ ಡಂಬಳ
✍️: ಇಂದಿನ ವಿಷಯ:
ಈ ಕೊವಿಡ್ ಅಲೆಯಲ್ಲಿ ಹೆಚ್ಚು ಎಚ್ಚರ ವಹಿಸಲೇಬೇಕಾದವರು ಯಾರು?
•••••••••••••••••••••••••••••••••••••••
ಈ ಬಾರಿಯ ಕೊವಿಡ್ ಸೋಂಕಿನ ವಿಷಯದಲ್ಲಿ ಕೆಲ ಜನರಿಗೆ ಹೆಚ್ಚಿನ ಎಚ್ಚರ ಬೇಕೇಬೇಕು. ಅವರು ಸೋಂಕು ತಗುಲಿಸಿಕೊಳ್ಳದಿರುವುದೇ ಅತ್ಯುತ್ತಮ ಮಾರ್ಗ.
ಯಾರು ಹೆಚ್ಚು ತೊಂದರೆಗೆ ಒಳಗಾಗುತ್ತಾರೆ?
• ಯಾರು ವ್ಯಾಕ್ಸೀನ್ ಪಡೆದಿರುವಿರೋ ಅವರು
• ಯಾರು ಹಿಂದಿನ ಸೋಂಕಿಗೆ ಸ್ಟಿರಾಯ್ಡ್ ಪಡೆದಿರುವಿರೋ ಅವರು
ಕಾರಣವೇನು?
ವ್ಯಾಕ್ಸೀನ್ ಬಳಸಿದ್ದೇವೆ — ಯಾವ ಹೆಚ್ಚಿನ ವಿಚಾರವನ್ನೂ ಮಾಡದೇ!!! ಅದು ಮಾನವರ ಶರೀರದ ಮೇಲೆ ತನ್ನ ಪ್ರಭಾವವನ್ನು ಚೆನ್ನಾಗಿಯೇ ಮಾಡಿದೆ…
ಅವುಗಳೆಂದರೆ – ವ್ಯಾಕ್ಸಿನೇಷನ್ ನಂತರ ಆರೋಗ್ಯದಲ್ಲಿ ಈ ವ್ಯತ್ಯಾಸಗಳಾಗಿವೆಯೇ? ಗಮನಿಸಿ…
• ಬಿ.ಪಿ. ಒಮ್ಮೆ ಹೆಚ್ಚು ಒಮ್ಮೆ ಕಡಿಮೆ ಆಗುತ್ತಿದೆಯೇ?
• ಎಂದೂ ಬಾರದ ತಲೆಸುತ್ತು ಮತ್ತೆ ಮತ್ತೆ ಬರುತ್ತಿದೆಯೇ?
• ಏಕಾಏಕಿ ತಲೆ ಧಿಂ ಎಂದು ಕೆಲಕಾಲ ಮೂರ್ಛೆ ಬಂದಿದೆಯೇ?
• ಹೃದಯದ LVEF ಏಕಾಏಕಿ ಕಡಿಮೆಯಾಗಿದೆಯೇ? ಮತ್ತು ಆ ಕಾರಣಕ್ಕೆ ಯಾರಿಗಾದರೂ ಹೃದಯಾಘಾತ ಅಥವಾ ಪಕ್ಷಾಘಾತವಾಗಿದೆಯೇ?
• ಲೋ ಬಿ.ಪಿ. ಸಮಸ್ಯೆಗಳು ಕಂಡಿವೆಯೇ?
• ತೀವ್ರ ತಲೆಸುತ್ತು ಬರುತ್ತಿದೆಯೇ?
• ಹೊಟ್ಟೆ ಉಬ್ಬರಗೊಳ್ಳುತ್ತಿದೆಯೇ?
• ಆತ್ಮವಿಶ್ವಾಸ ಕುಗ್ಗಿ, ಶರೀರಕ್ಕೆ ಸಾಯುವ ವಯಸ್ಸಾಗುತ್ತಿದೆ ಎನಿಸುತ್ತಿದೆಯೇ?
ಈ ಮೇಲಿನ ಲಕ್ಷಣಗಳು ವ್ಯಾಕ್ಸೀನ್ ತೆಗೆದುಕೊಂಡ ಕೆಲವಾರಗಳಿಂದ ಕೆಲ ತಿಂಗಳುಗಳ ನಂತರ ಆಗುತ್ತಿವೆ ಎಂದರೆ ಖಂಡಿತವಾಗಿ ಈ ಬಾರಿ ಬಹು ಎಚ್ಚರದಿಂದ ಇರಲೇಬೇಕು…
ಏಕೆಂದರೆ, ಈ ವ್ಯಾಕ್ಸೀನ್ ನಮ್ಮ ಬೋನ್‌ಮ್ಯಾರೋ(ಮಜ್ಜಾ ಧಾತು)ದಲ್ಲಿನ ಸೂಕ್ಷ್ಮ ಅಸಾಧಾರಣ ಶಕ್ತಿಯನ್ನು ಬಳಸಿಕೊಂಡಿದೆ. ಆಯುರ್ವೇದ ಹೇಳುತ್ತದೆ — ರಕ್ತ, ರಕ್ತನಾಳ, ಮೆದುಳು, ನರವ್ಯೂಹ, ಹೃದಯಸ್ಥಿತ ಆತ್ಮವಿಶ್ವಾಸ ತುಂಬುವ ಸಾಧಕ ಪಿತ್ತ ಮತ್ತು ವೀರ್ಯಗಳು ಉಂಟಾಗುವುದು ಮಜ್ಜಾ ಧಾತುವಿನಿಂದಲೇ ಎಂದು…. ವ್ಯಾಕ್ಸೀನ್ ನಂತರದ ಮೇಲೆ ತಿಳಿಸಿದ ಲಕ್ಷಣಗಳನ್ನು ನೋಡಿದರೆ, ಆ್ಯಂಟಿಬಾಡಿ ಉತ್ಪತ್ತಿ ಮಾಡಲು ನಮ್ಮ ಮಜ್ಜಾ ಧಾತು ಅತಿ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗಿದೆ ಎಂದೇ ತಿಳಿಸುತ್ತದೆ. ಹೆಚ್ಚು ಆ್ಯಂಟೀಬಾಡಿ ಇವೆ ಎಂದರೆ ರೋಗನಿರೋಧಕ ಶಕ್ತಿ ಹೆಚ್ಚು ಇದೆ ಎಂದರ್ಥವಲ್ಲ ಅಟೋಇಮ್ಯೂನ್ ಎಂದು ಅರ್ಥ ಮಾಡಿಕೊಳ್ಳಬೇಕು. ಹೀಗೆ ಮೂಲ ಧಾತುವಿನ ಶಕ್ತಿ ಹ್ರಾಸವಾದ ಅಥವಾ ಖರ್ಚಾದ ಹಂತದಲ್ಲಿ ಮತ್ತೊಮ್ಮೆ ಸೋಂಕು ದೀರ್ಘಕಾಲದಲ್ಲಿ ಅಪಾಯಕಾರಿ ಪರಿಣಾಮ ಬೀರುತ್ತದೆ. ತಕ್ಷಣಕ್ಕೆ ಸೋಂಕಿನ ಪ್ರಭಾವ ಕಡಿಮೆ ಇರಬಹುದು, ಆದರೆ ಅವಯವಗಳ ಶಕ್ತಿ ಅಪಹರಣವಾಗುವುದು ಖಂಡಿತಾ ಸತ್ಯ. ಹಾಗಾಗಿ ಸೋಂಕು ತಗುಲಿಸಿಕೊಳ್ಳದಿರುವುದೇ ಸೂಕ್ತ.
ಮತ್ತು
ಹಿಂದೆ ಸೋಂಕಿಗಾಗಿ ಯಾರು ಸ್ಟಿರಾಯ್ಡ್ ಬಳಸಿದ್ದಾರೋ ಅವರುಗಳು ಇನ್ನಷ್ಟು ಹೆಚ್ಚು ಎಚ್ಚರ ವಹಿಸಿಕೊಳ್ಳುವುದು ಅತ್ಯಗತ್ಯ. ಏಕೆಂದರೆ, ಸೋಂಕಿನ ವ್ಯತಿರಿಕ್ತ ಪ್ರಭಾವ ಒಂದೆಡೆಯಾದರೆ, ಇನ್ನೊಂದೆಡೆ ಸ್ಟಿರಾಯ್ಡ್ ಬಳಸಿ ಮಜ್ಜಾಧಾತುವನ್ನು ಹೀರಿ ದುರ್ಬಲಗೊಳಿಸಿರುವುದು ಇಷ್ಟು ಸಾಲದು ಎಂಬಂತೆ ವ್ಯಾಕ್ಸೀನ್ ಬಳಸಿ ಮತ್ತೆ ಮಜ್ಜಾಧಾತುವಿನ ಬಲವನ್ನು ಕ್ಷೀಣಗೊಳಿಸಿರುವುದು.
ನಮ್ಮ ಚಿಕಿತ್ಸಾ ಅನುಭವದಲ್ಲಿ ಹೇಳುವುದಾದರೆ, ವೃದ್ಧರು, ಹಳೆಯ ರೋಗಿಗಳು, ದುರ್ಬಲರು ಮೇಲಿನ ಲಕ್ಷಣಗಳಿಗಾಗಿ ಚಿಕಿತ್ಸೆಗೆಂದು ಬರುತ್ತಾರೆ, ಅವರಲ್ಲಿ ಕಾರಣ ಹುಡುಕಿದರೆ ಸಿಗುವುದು ಸ್ಟಿರಾಯ್ಡ್ ಬಳಕೆ ಮತ್ತು ವ್ಯಾಕ್ಸೀನ್ ಬಳಕೆ!!! ಆದರೆ ಅವರಲ್ಲಿ ಹೆಚ್ಚಿನ ಜನರಿಗೆ ಇದಕ್ಕೆ ಕಾರಣ ಸ್ಟಿರಾಯ್ಡ್ ಎಂದಾಗಲೀ, ವ್ಯಾಕ್ಸೀನ್ ಎಂದಾಗಲೀ ಗಮನಕ್ಕೇ ಬರುತ್ತಿಲ್ಲ?!!
ಏನು ಉದ್ದೇಶದಿಂದ ಸೋಂಕು ಜನರಿಗೆ ಅಪ್ಪಳಿಸಿದೆಯೋ, ಯಾವ ಕಾಣದ ಕಾರಣ ಜನರ ಜೀವ ಹಿಂಡುತ್ತಿದೆಯೋ? ಅಂತೂ, ನಮ್ಮಗಳ ತಪ್ಪು ಹೆಜ್ಜೆ ಆತಂಕ ಆತುರದಿಂದ ಆಗುತ್ತಿದೆ ಎನ್ನುವುದಂತೂ ಸ್ಪಷ್ಟ…
ಆಸ್ಪತ್ರೆ ರಹಿತವಾಗಿ ಆರೋಗ್ಯ ಬಯಸುವ ಆಯುರ್ವೇದ ವೈದ್ಯನಾಗಿ, ತಮ್ಮಲ್ಲಿ ವಿನಂತಿಸುವುದೇನೆಂದರೆ…
• ಆಹಾರ ನಿಯಮಗಳನ್ನು ಸರಿಯಾಗಿ ಪಾಲಿಸಿ
• ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನು ಮಾತ್ರ ಸೇವಿಸಿ
• ವಿನಾಕಾರಣ, ಸಣ್ಣ ಸಣ್ಣ ಕಾರಣಕ್ಕೂ ಹೆಚ್ಚು ಅಲೋಪತಿ ಔಷಧಗಳನ್ನು ಸೇವಿಸಬೇಡಿ
• ಚೆನ್ನಾಗಿ ನಿದ್ದೆ ಮಾಡಿ
• ಸೋಂಕು ತಗುಲದಂತೆ ಎಚ್ಚರವಹಿಸಿ
• ಆತಂಕದಿಂದ ಆಸ್ಪತ್ರೆಗೆ ಓಡುವ ಬದಲು, ಮನೆಯಲ್ಲಿಯೇ ನಿಯಮಿತ ಆಹಾರ, ವಿಶ್ರಾಂತಿ ಪಡೆಯಿರಿ
• ರೋಗ ನಿರೋಧಕ ಶಕ್ತಿ ವರ್ಧನೆಗೆ ಮಾತ್ರ ಆಯುರ್ವೇದ ಔಷಧಿ ಬಳಸಿ. ಕಫ ಕರಗಿಸುವ, ಆ್ಯಂಟೀವೈರಲ್ ಗಿಡಮೂಲಿಕೆಗಳು ಹೆಚ್ಚು ಪ್ರಮಾಣದಲ್ಲಿ ಸೂಕ್ತವಲ್ಲ
• ಅತ್ಯಂತ ಮಿತವಾಗಿ ವೈದ್ಯರ ನಿರ್ದೇಶನದಂತೆ ಕಫ ಕರಗಿಸುವ ಆಯುರ್ವೇದ ಔಷಧ ಬಳಸಿ
• ಹೆಚ್ಚು ಕಫ ಕರಗಿಸಲು ಹೋದರೆ ತೊಂದರೆ ಹೆಚ್ಚು
• ತೂಕ ಇಳಿಸುವ ಔಷಧಗಳನ್ನು ಸೇವಿಸಲೇಬೇಡಿ
• ಆದ್ದರಿಂದ ಈ ಹಿಂದೆ ಅಥರ್ವ ಯೋಜಿಸಿದ ಔಷಧ ವಿಧಿವಿಧಾನಗಳಲ್ಲಿ ಗಮನೀಯ ಬದಲಾವಣೆ ಮಾಡಿಕೊಂಡಿದೆ…
ಈ ಎಲ್ಲಾ ಕಾರಣಗಳಿಂದ, ಜನರು ಹೆಚ್ಚಿನ ಎಚ್ಚರದಿಂದ ಇದ್ದು ಸೋಂಕು ತಗುಲಿಸಿಕೊಳ್ಳದಿರುವುದು ಮತ್ತು ಚಿಕಿತ್ಸೆಗೆಂದು ಮತ್ತೆ ಸ್ಟಿರಾಯ್ಡ್ ಬಳಸದೇ ಇರುವುದು ಅತ್ಯಂತ ಸೂಕ್ತವಾಗಿದೆ..!
# ಮಧುಶ್ರೀ ರಾಗಿ
ಫೋನ್ ನಂಬರ್ – 6361321848
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…