ಬಿಸಿ ಬಿಸಿ ಸುದ್ದಿ

ಕೊರೋನಾಕ್ಕೂ ಮತ್ತು ಮಧುಮೇಹಕ್ಕೂ ಇರುವ ಸಂಬಂಧ ಮತ್ತು ನಿಜವಾದ ಚಿಕಿತ್ಸೆ ಏನು?

ಶರೀರದಲ್ಲಿ ಸಂಚಯವಾದ ಯಾವ ರೋಗಕಾರಕ ವಸ್ತುವಿನಿಂದ ಮಧುಮೇಹ ಉಂಟಾಗುತ್ತಿದೆಯೋ ಮತ್ತು ಸಕ್ಕರೆ ಅಂಶವನ್ನು ವೃದ್ದಿಮಾಡುತ್ತಿದೆಯೋ ಅದೇ ಅಂಶ ಕೊರೋನಾ ವೈರಾಣುವನ್ನು ಪೋಷಣೆ ಮಾಡುತ್ತಿದೆ. ಇದು ಆಯುರ್ವೇದೀಯ ಸಿದ್ಧಾಂತದ ಅಡಿಯಲ್ಲಿ ಅಧ್ಯಯನ ಮಾಡಿದವರು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಸತ್ಯವಾಗಿದೆ. ಹಾಗಾದರೆ ಮಧುಮೇಹಕ್ಕೆ ಕೊಡುತ್ತಿರುವ ಔಷಧಗಳು ಕೊರೋನಾವನ್ನು ನಿಯಂತ್ರಿಸಬಹುದಿತ್ತು ಅಲ್ಲವೇ ?!

  • Metformin
  • Glimepiride Teneligiliptin
  • Vidagliptin
  • Voglibose
  • Insulin

ಇವುಗಳು ಏಕೆ ಕೊರೋನಾವನ್ನು • ನಿಯಂತ್ರಿಸುತ್ತಿಲ್ಲ • ಬಾರದಂತೆ ತಡೆಯುತ್ತಿಲ್ಲ • ಹೋಗಲಾಡಿಸುತ್ತಲೂ ಇಲ್ಲ ಏಕೆ? ಏಕೆಂದರೆ ಇವೆಲ್ಲಾ ರಕ್ತದ ಸಕ್ಕರೆ ನಿಯಂತ್ರಕಗಳೇ ಹೊರತು ಮಧುಮೇಹ ನಿವಾರಕಗಳಲ್ಲ! ಒಂದುವೇಳೆ ಮಧುಮೇಹ ನಿವಾರಕಗಳಾಗಿದ್ದರೆ ಶಾಶ್ವತವಾಗಿ ಮಧುಮೇಹವನ್ನು ಗುಣಪಡಿಸಬಹುದಾಗಿತ್ತು ಅಲ್ಲವೇ?!!ಅಷ್ಟು ನಿಖರ ಔಷಧಿಗಳನ್ನು ಜೀವನ ಪೂರ್ತಿ ತೆಗೆದುಕೊಂಡರೂ ಕನಿಷ್ಟ ಪಕ್ಷ ಮಧುಮೇಹದ ಉಪದ್ರವಗಳಾದ ಹೃದಯ, ರಕ್ತನಾಳ, ಕಿಡ್ನಿ, ನರಗಳನ್ನು ಹಾಳುಮಾಡಬಾರದಿತ್ತಲ್ಲವೇ?
ಹಾಗಾದರೆ, ಎಲ್ಲಿಯೋ ಹಾದಿತಪ್ಪಿ ನಡೆಯುತ್ತಿರುವುದು ಸತ್ಯ!.

ಆಯುರ್ವೇದ ಸಿದ್ಧಾಂತದ ಪ್ರಕಾರ ಶರೀರದಲ್ಲಿ ಸಂಚಯವಾದ “ಸಂಕ್ಲೇದ” ಎಂಬ ರೋಗಕಾರಕ ಅಂಶವು- ಸ್ಥಾನ, ವಯಸ್ಸು(ಕಾಲ), ಬಲ(ರೋಗನಿರೋಧಕ ಶಕ್ತಿ), ಮನೋಶಕ್ತಿ, ವ್ಯಕ್ತಿಯ ಪ್ರಕೃತಿ, ಆಹಾರ ವಿಧಾನ, ಜೀರ್ಣಶಕ್ತಿ ಮತ್ತು ತಕ್ಕಷ್ಟು ವ್ಯಾಯಾಮ ಇವುಗಳ ಆಧಾರದಲ್ಲಿ ವಿವಿಧ ರೋಗಗಳನ್ನು ಉಂಟುಮಾಡುತ್ತಿರುತ್ತದೆ.

ಉದಾಹರಣೆಗೆ–

• ಇದೇ ಸಂಕ್ಲೇದವು ದುರ್ಬಲನಿಗೆ ಚರ್ಮರೋಗವನ್ನು ತರುತ್ತದೆ.
• ಇದೇ ಸಂಕ್ಲೇದವು ವ್ಯಾಯಾಮ ರಹಿತರಿಗೆ ಮತ್ತು ಸದಾ ಚಿಂತಿತ/ಆತಂಕಿತನಿಗೆ ಮಧುಮೇಹ ತರುತ್ತದೆ.
• ಇದೇ ಸಂಕ್ಲೇದವು ಕಫ ಪ್ರಕೃತಿಯವರಲ್ಲಿ ಶರೀರದ ತೂಕ ವರ್ಧಿಸಿ ಸ್ಥೌಲ್ಯವನ್ನು ಉಂಟುಮಾಡುತ್ತದೆ.
• ಇದೇ ಸಂಕ್ಲೇದವು ಬಾಲ್ಯದಲ್ಲಿ ಉದರ ಕ್ರಿಮಿಗಳನ್ನು ಮತ್ತು ಸದಾ ನೆಗಡಿ ಅಲರ್ಜಿಯನ್ನು ಉಂಟು ಮಾಡುತ್ತದೆ.

ಹೀಗೆಯೇ ಇದೇ ಸಂಕ್ಲೇದವು ಕಫವನ್ನು ಹಿಚ್ಚಿಸಿ ಶ್ವಾಸಕೋಶಗಳಲ್ಲಿ ತೂರಿಬಿಟ್ಟರೆ ಯಾವುದೇ ವೈರಾಣು ಬೆಳೆಯುವುದು ಅತ್ಯಂತ ಸಹಜ ಈಗ ಕೊರೋನಾ ವೈರಾಣು‌ವಿನ ಕಾಲ ಅದು ಬಂದು ಕಾಡುತ್ತಿದೆ ಅಲ್ಲವೇ? ಈ ರೀತಿ ಎಲ್ಲಾ ಕಫಜ ರೋಗಗಳಿಗೆ ಸಂಕ್ಲೇದವೇ ಕಾರಣ. ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಬಗೆ ಹೇಗೆಂದರೆ ಒಂದೇ ಅಕ್ಕಿಯು ಸಿದ್ಧತೆಗೆ ಅನುಗುಣವಾಗಿ, ತಯಾರಿಸುವ- ಬೇಯಿಸುವ ಸಂಸ್ಕಾರಕ್ಕೆ ಅನುಗುಣವಾಗಿ- ದೋಸೆಯೋ, ಇಡ್ಲಿಯೋ, ಪಡ್ಡು(ಗುಂಡು ಪಂಗಳ), ಸಂಡಿಗೆಯೋ, ಚಿತ್ರಾನ್ನವೋ ವಿವಿಧ ಪ್ರೈಡ್‌ರೈಸ್‌ಗಳೋ, ಚಕ್ಕುಲಿಯೋ ಆಗಿ ಬದಲಾಗುತ್ತದೆ ಮತ್ತು ತಿಂದರೆ ಪ್ರತಿಯೊಂದರ ಗುಣಪ್ರಭಾವಗಳು ಭಿನ್ನಭಿನ್ನವಾಗಿ ರೋಗ ತರುತ್ತವೆ.

ಕೊರೋನಾ ಎಂಬ ಕಫಸ್ಥಾನದ ರೋಗಕ್ಕೆ ಸಂಕ್ಲೇದವೇ ಕಾರಣ ಇಲ್ಲಿ ಆಯುರ್ವೇದೀಯರು ಅಕ್ಕಿಯನ್ನು ಸರಿಯಾಗಿ ಸಂಸ್ಕರಿಸಿ ಅನ್ನವನ್ನಾಗಿಸುತ್ತಾರೆ ಮತ್ತು ಯಾವುದೇ ಆಂತರಿಕ ಕಾರಣದಿಂದ ಅದು ಸಂಕ್ಲೇದವಾಗುತ್ತಿದೆ ಎಂದು ಕಂಡುಬಂದರೆ ಅದನ್ನು ಕ್ಲೇದಹರ ದ್ರವ್ಯಗಳಿಂದ ಕರಗಿಸಿಬಿಡುತ್ತಾರೆ ಆಗ ಅದರ ಸಂಸ್ಕಾರದಿಂದ “ಸಂಕ್ಲೇದ” ಉಂಟಾಗದೇ ಮಾನವನ ಶಕ್ತಿ ವೃದ್ಧಿಯಾಗುತ್ತದೆ.”ಕೊರೋನಾ ಬದಲು ಕೋಶಬಲ ವೃದ್ಧಿಯಾಗುತ್ತದೆ.

“ಇದೇ ಆಯುರ್ವೇದೀಯರ ಚಿಕಿತ್ಸಾ ಗುಟ್ಟು”.. ಗಮನಿಸಿ ನೋಡಿ..!

ನಾವು ಚಿಕಿತ್ಸಿಸುತ್ತಿರುವ ಔಷಧಿಗಳಿಂದ ಕೊರೋನಾ ಬರುತ್ತಿಲ್ಲ‌ ಎಂಬುದು ಸಿದ್ಧ. ಅಷ್ಟೇ ಅಲ್ಲ ಅನೇಕರು ಇದರಿಂದ-
• ತಾವು ತೆಳ್ಳಗಾಗಿದ್ದೇವೆ • ಮಧುಮೇಹ ನಿಯಂತ್ರಣದಲ್ಲಿದೆ. ಇನ್ಸುಲಿನ್ ಬಿಟ್ಟಿದ್ದೇವೆ • ಚರ್ಮರೋಗ ಹೋಗಿದೆ
• ತಲೆಹೊಟ್ಟು ಮಾಯವಾಗಿದೆ • ಈ ವರ್ಷ ಶೀತ ಅಲರ್ಜಿಯೇ ಬಂದಿಲ್ಲ.

ಹೀಗೆಯೇ ಅನೇಕ ರೀತಿಯ ಫಲಿತಾಂಶಗಳಿಂದ ತೃಪ್ತರಾಗಿದ್ದಾರೆ.

ಹಿಂದಿಯೇ ತಿಳಿಸಿದಂತೆ ಮೈಗೆ ಮೆತ್ತಿಕೊಂಡ “ಬೆಲ್ಲವನ್ನು ತೆಗೆಯದೇ ನೊಣಗಳೆಂಬ ವೈರಾಣುಗಳೊಂದಿಗೆ ಹೋರಾಡಲು ಖಡ್ಗದಿಂದ ಹೊಡೆದರೆ ಶರೀರ ಕತ್ತರಿಸುವುದಿಲ್ಲವೇ?” ಈಗ ನಡೆಯುತ್ತಿರುವ ಕೇವಲ ಅಲೋಪತಿ ಸಿದ್ಧಾಂತ ಆಧಾರದ ತೀಕ್ಷ್ಣ ಔಷಧಿಗಳೆಂಬ ಖಡ್ಗದಿಂದ ಹೊಡೆಯುವ ಚಿಕಿತ್ಸೆಗಳಿಂದೆಲೇ ನಮ್ಮವರನ್ನು ಕಳೆದುಕೊಳ್ಳುತ್ತಿಲ್ಲವೇ? ಇದು ಉಚಿತವೇ? ವಿಚಾರ ಮಾಡುವುದರಿಂದ ಎಲ್ಲವನ್ನೂ ತಿಳಿಯಬಹುದು,
“ಆಹಾರ ಪದ್ಧತಿ ಬದಲಾಯಿಸಿಕೊಳ್ಳಿ, ಆಯುರ್ವೇದ ಅನುಸರಿಸುತ್ತಾ ಸುಖವಾಗಿ ಬಾಳಿರಿ.“

  • # ಮೂಲ ಲೇಖಕರು —
  • # ಡಾ.ಮಲ್ಲಿಕಾರ್ಜುನ ಡಂಬಳ
    ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
    ಶಿವಮೊಗ್ಗ ಮತ್ತು ದಾವಣಗೆರೆ.
  • # ಸಾದರ ಪಡಿಸಿದವರು — ಡಾ.ಮಧುಶ್ರೀ ರಾಗಿ
emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago