ಬೆಳಗಾವಿ: ಕೋವಿಡ್ ಹಾಗೂ ಓಮೈಕ್ರಾನ್ ಹರಡುವಿಕೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ‘ಕರ್ಫ್ಯೂ’ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಸ್ಪಂದನೆ ದೊರೆತಿದೆ. ಶುಕ್ರವಾರ ರಾತ್ರಿ 8ರಿಂದಲೇ ಆರಂಭವಾಗಿರುವ ಕರ್ಫ್ಯೂ ಸೋಮವಾರ ಬೆಳಿಗ್ಗೆವರೆಗೂ ಜಾರಿಯಲ್ಲಿರಲಿದೆ.
ಜನರ ಓಡಾಟಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅದರಂತೆ, ಪೊಲೀಸರು ಸಂಜೆಯಿಂದಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚನೆ ನೀಡುತ್ತಿದ್ದರು. ರಾತ್ರಿ 8ರ ನಂತರ ಮುಚ್ಚಿಸಿದರು. ಜನರನ್ನು ಮಾರುಕಟ್ಟೆ ಮೊದಲಾದ ಪ್ರದೇಶಗಳಿಂದ ಮನೆಗಳತ್ತ ಕಳುಹಿಸಿದರು. ಮಾರ್ಗಸೂಚಿ ಪಾಲಿಸುವಂತೆ ಸೂಚಿಸಿದರು.
ಜನರು ಅನವಶ್ಯವಾಗಿ ಸಂಚರಿಸುವುದನ್ನು ತಡೆಯಲು ಎಲ್ಲೆಡೆ ‘ಬ್ಯಾರಿಕೇಡ್ ಬೇಲಿ’ ಹಾಕಲಾಗಿದೆ. ವೃತ್ತಗಳಲ್ಲಿ ಸೇರಿದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಇದರಿಂದಾಗಿ ರಾತ್ರಿ ಆಗುತ್ತಿದ್ದಂತೆಯೇ, ನಗರವು ಬಹುತೇಕ ಸ್ತಬ್ಧವಾಗಿತ್ತು.
ಆಹಾರ, ದಿನಸಿ, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಅಂಗಡಿಗಳು ಹಾಗೂ ಪ್ರಾಣಿಗಳಿಗೆ ಮೇವು ಪೂರೈಸುವ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಕಾರ್ಯ ನಿರ್ವಹಿಸಬಹುದು. ರೆಸ್ಟೊರೆಂಟ್ ಮತ್ತು ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿದೆ ಮತ್ತು ಮನೆಗಳಿಗೆ ತಲುಪಿಸಲು ಅನುಮತಿಸಲಾಗಿದೆ. ಉಳಿದ ಎಲ್ಲ ಅಂಗಡಿಗಳನ್ನು ಮುಚ್ಚಲು ಮಾರ್ಗಸೂಚಿ ಪ್ರಕಾರ ಆದೇಶ ಮಾಡಲಾಗಿದೆ.
ತೆರೆದ ಸ್ಥಳಗಳಲ್ಲಿ ನಿಗದಿಯಾದ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 200 ಜನರಿಗೆ ಸೀಮಿತಗೊಳಿಸಲಾಗಿದೆ. ಮುಚ್ಚಿದ ಸ್ಥಳಗಳಲ್ಲಿನ ಮದುವೆಗೆ 100 ಜನರಿಗೆ ಸೀಮಿತಗೊಳಿಸಲಾಗಿದೆ. ಉದ್ಯಾನ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಕಟ್ಟುನಿಟ್ಟಾಗಿ ಪಾಲಿಸಬೇಕು: ‘ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆ ಮಾರ್ಗಸೂಚಿಯನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಶ್ಯವಿಲ್ಲವಾದರೆ ರಸ್ತೆಗೆ ಇಳಿಯದಿರುವುದು ಒಳಿತು. ಅನಿವಾರ್ಯವಿದ್ದರೆ ಮಾತ್ರ ಹೊರಗಡೆ ಬರಬೇಕು. ದಿನಸಿ, ತರಕಾರಿ ಖರೀದಿ, ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಸಂಚರಿಸಬೇಕು. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪೊಲೀಸರಿಗೆ ಸಹಕಾರ ಕೊಡಬೇಕು’ ಎಂದು ತಿಳಿಸಿದರು.
‘ಕಿರಾಣಿ, ಹಾಲು-ಹಾಲಿನ ಉತ್ಪನ್ನಗಳು, ತರಕಾರಿ ಅಂಗಡಿ ಸೇರಿದಂತೆ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಬಹುದು. ಸಮೀಪದ ಆಸ್ಪತ್ರೆ ಬಿಟ್ಟು 4ರಿಂದ 5 ಕಿ.ಮೀ. ದೂರ ಬಂದರೆ ಅಂಥವರನ್ನು ಪರಿಶೀಲಿಸಲಾಗುವುದು. ಅಗತ್ಯ ವಸ್ತುಗಳನ್ನು ಸಮೀಪದ ಅಂಗಡಿಯಲ್ಲೇ ಖರೀದಿಸಬೇಕು’ ಎಂದು ಕೋರಿದರು. ಡಿಸಿಪಿಗಳಾದ ವಿಕ್ರಂ ಅಮಟೆ ಹಾಗೂ ಪಿ.ವಿ. ಸ್ನೇಹಾ ಇದ್ದರು.
ಬಸ್‌ಗಳ ಕಾರ್ಯಾಚರಣೆ: ‘ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸಂಸ್ಥೆಯ ಬಸ್ಸುಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ. ಆದರಂತೆ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಅವಶ್ಯ ಪ್ರಯಾಣಿಕರ ಸಂಖ್ಯೆ ಹಾಗೂ ಆನ್‌ಲೈನ್ ಬುಕ್ಕಿಂಗ್ ಆಧರಿಸಿ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪ್ರಕಟಣೆ ತಿಳಿಸಿದೆ.
ತೆಲಸಂಗ ವರದಿ: ತೆಲಸಂಗ: ‘ಕೊರೊನಾ ವೈರಸ್ ಸೋಂಕು ಹೆಚ್ಚಿದ್ದು, ನಿಯಂತ್ರಣಕ್ಕಾಗಿ ಶನಿವಾರ ಹಾಗೂ ಭಾನುವಾರ ಕರ್ಫ್ಯೂ ಇರುತ್ತದೆ. ಅದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಎಸ್‍ಐ ಎಸ್.ಪಿ. ಸವದಿ ಹೇಳಿದರು. ಗ್ರಾಮದಲ್ಲಿ ಕರ್ಫ್ಯೂ ಬಗ್ಗೆ ಜನರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ‘ಅನಗತ್ಯವಾಗಿ ಸಂಚರಿಸದೆ, ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ಕೊಡಬೇಕು’ ಎಂದರು.
ಗ್ರಾ.ಪಂ. ಸದಸ್ಯ ಸಿದ್ದಲಿಂಗ ಮಾದರ, ಕಾಶಿನಾಥ ಕುಂಬಾರಕರ, ಮಸ್ತಾನ ನಧಾಫ್, ಶಂಕರ ರೋಡಗಿ, ಗಜಾನನ ಮಾದರ, ಸಂಗಮೇಶ ಕುಮಠಳ್ಳಿ, ರವಿ, ವಿಜಯ, ಹುಸೇನ, ಸುನೀಲ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…