ವಿಜಯೋತ್ಸವದ ವೇಳೆ ಬಾರ್ ಗರ್ಲ್ ಮೇಲೆ ಹಣ ತೂರುವ ರೀತಿಯಲ್ಲಿ ಹಣ ತೂರಿದ್ದಾರೆ. ಹಣ ತೂರಿದ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು, ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ. ಗದಗ: ಗದಗ-ಬೆಟಗೇರಿ ನಗರಸಭೆಯ ಭಾವಿ ಅಧ್ಯಕ್ಷೆ ಅಂತಲೇ ಬಿಂಬಿತರಾದ 35ನೇ ವಾರ್ಡ್ ನ ಬಿಜೆಪಿಯ ನೂತನ ಸದಸ್ಯೆ ಉಷಾ ದಾಸರ್, ವಿಜಯೋತ್ಸವದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ.
ಬಾರ್ ಗರ್ಲ್ ಮೇಲೆ ಹಣ ಹಾರಿಸುವ ಮಾದರಿಯಲ್ಲಿ ಡ್ಯಾನ್ಸ್ ಮಾಡುವ ಯುವಕರ ಮೇಲೆ ಹಣ ತೂರಿ ಬಿಜೆಪಿ ಕಾರ್ಯಕರ್ತರು ಉದ್ಧಟನ ಮೆರೆದಿದ್ದಾರೆ. ಇದು ವಾರ್ಡ್ 35ರ ಮತದಾರನ್ನೇ ಅವಮಾನ ಮಾಡಿದಂತೆ ಅಂತ ವಾರ್ಡ್ ಜನ್ರು ಕಿಡಿಕಾರಿದ್ದಾರೆ.
ಗದಗ-ಬೆಟಗೇರಿ ನಗರಸಭೆಯ 35ನೇ ವಾರ್ಡ್ನ ಜನ್ರು ಅಂದ್ರೆ ಸುಸಂಸ್ಕೃತ ಜನರು. ಹೀಗಾಗಿ ಈ ವಾರ್ಡ್ ನಲ್ಲಿ ಯಾವ ಅಭ್ಯರ್ಥಿಗಳಿಂದ ಹಣ ಪಡೆಯದೇ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಉಷಾ ದಾಸರ್ ಎಂಬ ಮಹಿಳೆಗೆ ಮತ ಹಾಕಿ ಆಯ್ಕೆ ಮಾಡಿದ್ದಾರೆ. ಆದ್ರೆ, ಗೆಲುವು ಸಾಧಿಸಿದ ಬಳಿಕ ವಿಜಯೋತ್ಸವ ಆಚರಣೆ ವೇಳೆ ಹಣ ತೂರುವ ಮೂಲಕ ಜವಾಬ್ದಾರಿ ಮರೆತಿದ್ದಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಹಣ ತೂರಿ ಫುಲ್ ಡ್ಯಾನ್ಸ್ ಮಾಡಿದ ಘಟನೆ ಗದಗ ನಗರದ ಹುಡ್ಕೋ ಬಡಾವಣೆಯಲ್ಲಿ ನಡೆದಿದೆ. ಮೆರವಣಿಗೆ ವೇಳೆ ಬಿಜೆಪಿ ಹಣದ ಹೊಳೆ ಹರಿಸಿದೆ. 35 ನೇ ವಾರ್ಡ್ ನ ಬಿಜೆಪಿ ನೂತನ ಸದಸ್ಯೆ ಉಷಾ ದಾಸರ್ ವಿಜಯೋತ್ಸವದ ವೇಳೆ ಕಾರ್ಯಕರ್ತರು ಹಣ ತೂರಿದ್ದಾರೆ. ಡಿಸೆಂಬರ್ 30 ರಂದು ನಡೆದ ವಿಜಯೋತ್ಸವದಲ್ಲಿ ಈ ಘಟನೆ ನಡೆದಿತ್ತು.
ಉಷಾ ದಾಸರ್ ನಗರಸಸಭೆ ಅಧ್ಯಕ್ಷ ಸ್ಥಾನಕ್ಕೆ ಏರುವ ಏಕೈಕ ಮಹಿಳಾ ಸದಸ್ಯೆಯಾಗಿದ್ದು, ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಗದಗ-ಬೆಟಗೇರಿ ನಗರಸಭೆ ಎಸ್ಸಿ ಮಹಿಳೆಗೆ ಮೀಸಲಿದೆ. ಹೀಗಾಗಿ ಬಿಜೆಪಿ ಪಕ್ಷದಲ್ಲೇ ಆಯ್ಕೆಯಾದ ಏಕೈಕ ಮಹಿಳಾ ಸದಸ್ಯೆ. ಹೀಗಾಗಿ ಭಾವಿ ಅಧ್ಯಕ್ಷೆ ಅಂತಲೇ ಉಷಾ ದಾಸರ ಅವಳಿ ನಗರದಲ್ಲಿ ಚರ್ಚೆನಡೆದಿದೆ. ಈ ನಡುವೆ ವಿಜಯೋತ್ಸವದ ವೇಳೆ ಬಾರ್ ಗರ್ಲ್ ಮೇಲೆ ಹಣ ತೂರುವ ರೀತಿಯಲ್ಲಿ ಹಣ ತೂರಿದ್ದಾರೆ. ಹಣ ತೂರಿದ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು, ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಭ್ರಮಾಚರಣೆ ವೇಳೆ ಜೀಪ್ ಮೇಲೆ ಹತ್ತಿ ಓರ್ವ ಹಣ ತೂರುತ್ತಿದ್ರೆ ಇತ್ತ ಡ್ಯಾನ್ಸ್ ಮಾಡೋ ಯುವಕರು ಹಣಕ್ಕಾಗಿ ಗುದ್ದಾಟ ನಡೆಸಿದ್ದಾರೆ. ಅಧ್ಯಕ್ಷ ಗಾದಿಗೆ ಏರುವ ಜವಾಬ್ದಾರಿ ಜನಪ್ರತಿನಿಧಿಯೇ ಈ ರೀತಿ ವರ್ತನೆ ತೋರಿದ್ರೆ ಆಡಳಿತ ಹೇಗೆ ನಡೆಸ್ತಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಜನಪ್ರತಿಗಳ ವರ್ತನೆಗೆ ಅವಳಿ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…