ಬಿಸಿ ಬಿಸಿ ಸುದ್ದಿ

ವಾರ್ಡ ಮಟ್ಟದ ಸಮಾಲೋಚನೆ ಕಾರ್ಯಕ್ರಮ

ಕಲಬುರಗಿ : ವಾರ್ಡ ನಂ.೫೦.ರ ಗೋದುತಾಯಿ ನಗರದಲ್ಲಿರುವ ಶಿವು ಮಂದಿರದಲ್ಲಿ ಮಾಹಾನಗರ ಪಾಲಿಕೆ ಕೆಯುಐಡಿಎಫ್‌ಸಿ ಹಾಗೂ ಆಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಾರ್ಡ ಮಟ್ಟದ ಸಮಾಲೋಚನೆ ಕಾರ್ಯಕ್ರಮದಲ್ಲಿ ಕೆಯುಐಡಿಎಫ್‌ಸಿಯ ಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ ಪಾಟೀಲ ಅವರು ಮಾತನಾಡುತ್ತಾ ಕಲಬುರಗಿ ನಗರದ ಜನರಿಗೆ ಆದಷ್ಟು ಬೇಗ ಎಲ್ಲ ವಾರ್ಡಗಳಲ್ಲಿ ೨೪/೭ ನಿರಂತರ ನೀರು ಸರಬರಾಜು ಯೋಜನೆಯಿಂದ ನೀರು ಪೂರೈಕೆ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಹಾಗೂ ವಿಶ್ವ ಬ್ಯಾಂಕ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ವಾಗಿದೆ ಎಂದು ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಎಲ್ ಮತ್ತು ಟಿ ಕಂಪನಿಯ ಓ&ಎಮ್ ವ್ಯವಸ್ಥಾಪಕರಾದ ಭರತ ನಾರಾಯಣ ಇವರು ಸಭೆಯನುದ್ದೆಶಿಸಿ ಮಾತನಾಡಿ ಈಗಾಗಲೇ ಕಲಬುರಗಿ ನಗರದಲ್ಲಿ ಇರುವ ಎಲ್ಲಾ ನೀರಿನ ಸೋರಿಕೆಯನ್ನು ತಡೆಗಟ್ಟುವಲ್ಲಿ ಎಲ್ ಮತ್ತು ಟಿ ಕಂಪನಿ ನಿರತವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ೨/೩ ದಿನಗಳಿಗೋಮ್ಮೆ ನೀರು ಪೋರೈಕೆ ಮಾಡಲು ಪ್ರಯತ್ನಿಸಲಾಗುವದು ಎಂದು ಹೇಳಿದರು.

ಸಾಮಾಜಿಕ ಪರಿಣಿತರು ಎಲ್ ಮತ್ತು ಟಿ ಕಂಪನಿಯ ಶರಣಪ್ಪಾ ಸಾಲಿಮನಿ ಅವರು ಮಾತನಾಡಿ ನಿರಂತರ ನೀರು ಸರಬರಾಜು ಯೋಜನೆ ಪ್ರಾರಂಭವಾದಾಗ ನಗರದ ಜನತೆಗೆ ಯಾವುದೇ ರೀತಿಯ ನೀರಿನ ತೊಂದರೆಗಳು ಇರುವದಿಲ್ಲಾ ಮತ್ತು ನೀರಿಗಾಗಿ ಕಟ್ಟುವ ಕರ ಕೂಡಾ ಮಿತವಾಗಿರುತದೆ ಹಾಗೂನೀರಿನ ಬಳಕೆಯ ಮಹತ್ವ ಮತ್ತು ಜನರ ಪಾತ್ರದ ಕುರಿತು ತಿಳಿಸಿದರು.

ಗೋದುತಾಯಿ ಅಭಿವೃದ್ದಿ ಸಂಘದ ಕಾರ್ಯದರ್ಶಿಗಳಾದ ಚಂದ್ರಶೇಖರ ಶೀಲವಂತ ಇವರು ಮಾತನಾಡಿ ತಮ್ಮ ಬಡಾವಣೆಯ ನೀರಿನ ಸಮಸ್ಯೆಯನ್ನು ಆದಷ್ಡು ಬೇಗ ಪರಿಹರಿಸಬೇಕೆಂದು ಸಭೆಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಲ್ಲಿಕಾರ್ಜುನ ಪಾಟೀಲ ಇವರು ಮಾತನಾಡಿ ಎಲ್ ಮತ್ತು ಟಿ ಕಂಪನಿಯವರು ನಿರಂತರ ನೀರು ಸರಬರಾಜು ಯೋಜನೆ ಪ್ರಾರಂಭವಾದಾಗ ತಮ್ಮ ನಗರದಲ್ಲಿ ಎಲ್ಲ ರೀತಿಯ ಸಹಕಾರ ನೀಡಿ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮತ್ತು ನಿರ್ಧಿಷ್ಟ ಸಮಯದಲ್ಲಿ ಮುಗಿಸಲು ಸಹಕರಿಸುತ್ತೆವೆ ಎಂದರು.

ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಕುಶಂಪು ಯೋಜನೆಯ ನಾಗಯ್ಯಾ ಹಿರೇಮಠ, ಮಾಹಿತಿ ತಜ್ಞರು ನೆರವು ಸಂಸ್ಥೆಯ ತಂಡದ ನಾಯಕರಾದ ಡಾ. ಜೈಭೀಮ ದರ್ಗಿ, ದಾಖಲಾತಿ ತಜ್ಞರಾದ ಶಿವಾನಂದ ಬಿ ಅಥಣಿ, ಕಛೇರಿ ವ್ಯವಸ್ಥಾಪಕರಾದ ಸುಮಂಗಲಾ, ಸಮುದಾಯ ಸುಗಮಕಾರರಾದ ಸೋನಿಮಹೇಶ್ವರಿ, ವಂದನಾ ದಳವಾಯಿ, ಅಂಬಿಕಾ, ವಿಜಯಲಕ್ಷ್ಮಿ, ಅಶ್ವಿನಿ, ಪ್ರಸನ್ನ, ಹಾಗೂ ಗೋದುತಾಯಿ ಬಡಾವಣೆ ನಿವಾಸಿಗಳು ಉಪಸ್ಥಿತರಿದರು,

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago