ವಿಶ್ವಕ್ಕೆ ಬಸವಾದಿ ಶರಣರು ಆರ್ಥಿಕ ಸಮಾನತೆ ಹೇಳಿಕೊಟ್ಟರು. ಒಂದು ಸಮಾಜ ಸುಖ ಸಮಾಜ ಆಗಬೇಕಾದರೆ, ಆರೋಗ್ಯಪೂರ್ಣ ಸಮಾಜ ಆಗಬೇಕಾದರೆ ಎಷ್ಟು “ಪ್ರೊಡಕ್ಚನ್” ಆಗುತ್ತದೋ ಅಷ್ಟು “ಡಿಸ್ಟ್ರಿಬ್ಯೂಷನ್” ಆಗಬೇಕು ಎಂದು ಅವರು ಹೇಳಿದರು. ಸಮ ಸಮಾಜ ಕಟ್ಟಲು ಶರಣರು ಹೆಣಗಾಡಿದರು. ವಚನಗಳು ಈ ವಿಷಯದ ಮೇಲೆ ಹೇಳಿಲ್ಲ ಅಂತಿಲ್ಲ. ಬದುಕಿನ ಎಲ್ಲ ಕ್ಷೇತ್ರ್ರಗಳ ಬಗ್ಗೆ ಶರಣರು ಮಾತನಾಡಿದ್ದಾರೆ. ಶರಣರು ಸತ್ಯವಂತರು, ನಿತ್ಯಮುಕ್ತರು. ಹೊಗಳಿಕೆ, ತೆಗಳಿಕೆ, ನಿಂದನೆಯನ್ನು ಮೀರಿ ನಿಂತವರು.
“ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು” ಎಂಬ ವಚನದಲ್ಲಿ ಬಸವಣ್ಣನವರು ಈಗಿನ ಜಿಎಸ್‌ಟಿ, ಟೆಕ್ಸ್ ಬಗ್ಗೆ ಅಂದೇ ಮಾತನಾಡಿದ್ದಾರೆ. “ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿ ಇರುಳೆಲ್ಲ ನಡೆದ ಸುಂಕಕ್ಕಂಜಿ, ಕಳವೆ ಹೋಗಿ ಬರಿ ಗೋಣಿ ಉಳಿಯಿತ್ತು, ಅಳಿಮನದವನ ಭಕ್ತಿ” ದಾಸೋಹಕ್ಕೆ ಸಲ್ಲದ್ದು ದಂಡಕ್ಕೆ ಸಲ್ಲುತ್ತದೆ ಎಂಬುದನ್ನು ಜೇಡರ ದಾಸಿಮಯ್ಯನವರು ವಿವರಿಸಿದ್ದಾರೆ.
ತೆರಿಗೆಯ ವಿಧಿ-ವಿಧಾನವನ್ನು ಶರಣರು ೧೨ನೇ ಶತಮಾನದಲ್ಲಿಯೇ ತೋರಿಸಿದ್ದರು. ಅಂತಹ ಸುಂಕ ಕಟ್ಟಿಸಿಕೊಳ್ಳುವ ಕಾಯಕ ಮಾಡುವ ಸುಂಕದ ಭಂಕಣ್ಣ (ಟೆಕ್ಸ್ ಕಲೆಕ್ಟರ್) ಎಂಬ ಶರಣರಿದ್ದರು. ಬಂಕೇಶ್ವರಲಿಂಗ ಅಂಕಿತದಲ್ಲಿ ಇವರ ೧೦೮ ವಚನಗಳು ದೊರೆತಿವೆ. ಇವರು ಯಾವ ಊರಿನವರು ಎಂಬುದರ ಬಗ್ಗೆ ಇನ್ನೂ ಶೋಧವಾಗಬೇಕಿದೆ. ಆದರೆ ಬಾಗಲಕೋಟೆ ಜಿಲ್ಲೆಯ “ಬಡಿಗಿ” ಎಂಬ ಗ್ರಾಮ ಇದ್ದಿರಬಹುದು ಎಂಬುದು ನಮ್ಮ ಊಹೆ. ಏಕೆಂದರೆ ಅಲ್ಲಿ ಬಂಕವ್ವ, ಬಂಕಪ್ಪ, ಬಂಕಯ್ಯ ಎಂಬ ಹೆಸರುಗಳನ್ನು ಕಾಣಬಹುದು. ಮೇಲಾಗಿ ಅಲ್ಲೊಂದು ಬಂಕಯ್ಯನ ಗುಡಿ ಇದೆ. ಅಲ್ಲಿನ ಕವಿ, ಸಾಹಿತಿಗಳು ಈತ ನಮ್ಮೂರಿನವರು ಎಂದು ಹೇಳುತ್ತಾರೆ.
ಭಕ್ತಿಯಲ್ಲಿ ನಾಲ್ಕು ವಿಧ. ಯುಕ್ತಿಭಕ್ತಿ, ಅಭಾವಭಕ್ತಿ, ಮುಕ್ತಿಭಕ್ತಿ, ನಿತ್ಯಭಕ್ತಿ ಎಂದು ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಕರೆದರು. ಭಕ್ತಿಯಿಲ್ಲದ ಧರ್ಮ ವ್ಯರ್ಥ. ಬಸವಣ್ಣ ಕೊಟ್ಟ ಧರ್ಮ ಭಕ್ತಿಯ ಧರ್ಮ. ಭಯದ ಧರ್ಮವಲ್ಲ. ಪರಮ ಪ್ರೇಮವೇ ಭಕ್ತಿ. ಭಕ್ತಿಯೆಂದರೆ ದೇಹಭಾವ ಬಿಟ್ಟು, ದೇವಭಾವ ಹೊಂದುವುದು. ಅಂಗಭಾವ ಬಿಟ್ಟು ಲಿಂಗಭಾವ ಹೊಂದುವುದು. ಬಹಿರಂಗದ ಸುಂಕ ಕಟ್ಟುವುದರ ಜೊತೆಗೆ ಅಂತರಂಗದಲ್ಲಿ ಭಕ್ತಿ ಎನ್ನುವ ಸುಂಕ ಕಟ್ಟಬೇಕು ಎಂದು ಹೇಳುವ ಬಂಕಣ್ಣ ಶರಣರು ತಮ್ಮ ಕಾಯಕದ ಪರಿಭಾಷೆಯನ್ನು ಬಳಸಿಕೊಂಡು ತತ್ವ ವಿವೇಚನೆ ಮಾಡುವುದು ಬಹಳ ವಿಶಿಷ್ಟವೆನಿಸುತ್ತದೆ.
ಅನ್ನದ ಮೇಲಿನ, ಅಂಗನೆಯರ ಮೇಲಿನ ಹಂಬಲ, ಮೋಹ ಕ್ಷಯವಾಗಿ ಶಿವಲಿಂಗದಲ್ಲಿ ನಮ್ಮ ಮೋಹವನ್ನು ಅಳವಡಿಸಿದರೆ ದೇವರು ನಮ್ಮೊಂದಿಗೆ ಕೂಡಬಲ್ಲ. ಬೆರೆಯಬಲ್ಲ. ಶರೀರವೆಂಬ ಹೊಲದಲ್ಲಿ ಭಕ್ತಿಯೆಂಬ ಬೆಳೆ ಬೆಳೆಯಬೇಕು ಎಂಬುದನ್ನು ಸರಳವಾಗಿ ತಿಳಿ ಹೇಳುತ್ತಾರೆ. ಮೂರ್ನಾಲ್ಕು ಸಾಲುಗಳ ಇವರ ವಚನಗಳಲ್ಲಿ ಅಧ್ಯಾತ್ಮ, ನೀತಿ, ಬೆಡಗು, ಬದುಕು ಎಲ್ಲವನ್ನೂ ಕಾಣಬಹುದು.
ಎಲ್ಲೆಡೆ ಗುರುಪಾದವನ್ನು ಕಂಡ ಯಮನವ್ವ ಎಂಬ ಬಾಲೆ ದೊಡ್ಡಬಸವಾರ್ಯರ ಕೃಪೆಯಿಂದ ಸಜ್ಜಲಗುಡ್ಡದ ಶರಣಮ್ಮ ಆದಳು. ಸಜ್ಜಲಶ್ರೀ ಅನ್ನಿಸಿಕೊಂಡಳು. ಇದೇ ಹಿನ್ನೆಲೆಯಲ್ಲಿ “ದೇವಸ್ಥಾನಗಳು ಹೆಚ್ಚಾದರೆ ಬಿಕ್ಷುಕರು ಹೆಚ್ಚಾಗುತ್ತಾರೆ. ಶಾಲೆ-ಗ್ರಂಥಾಲಯಗಳು ಹೆಚ್ಚಾದರೆ ಜ್ಞಾನ ಹೆಚ್ಚಾಗುತ್ತದೆ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತು ಬಹಳ ಪ್ರಸ್ತುತವೆನಿಸುತ್ತದೆ.
ಮನುಷ್ಯನಿಗಿಂತ ಮನುಷ್ಯತ್ವ ದೊಡ್ಡದು. ಮನುಷ್ಯತ್ವಕ್ಕಿಂತ ತತ್ವ ದೊಡ್ಡದು. ಇಂತಹ ತತ್ವ ದರ್ಶನವಿರುವ ಬಸವಣ್ಣನ ರಥದ ತೇರನೆಳೆಯಲು ಎಲ್ಲರೂ ಕೈ ಹಚ್ಚಬೇಕು. ಧರ್ಮದೊಳಗೆ, ತತ್ವದೊಳಗೆ “ಹಾವು ಬಿಡುವ” ಕೆಲಸ ಮಾಡಬಾರದು. ಒಂದುವೇಳೆ ಹಾಗೆ ಮಾಡಿದರೆ ಬಸವಣ್ಣನೆಂಬ ರೈಲು ಮುಂದಕ್ಕೆ ಹೋಗುತ್ತದೆ. ನಾವು ಹಾಗೆಯೇ ಹಿಂದುಳಿಯಬೇಕಾಗುತ್ತದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…