ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದ (ಟಿಬಿಯ) ಲಕ್ಷಣಗಳು ಇರುವ ಯಾವುದೇ ವ್ಯಕ್ತಿ ಕಂಡು ಬಂದರೆ ಅವರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಬೇಕು ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿಗು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾದಗ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಕ್ಷಯ ರೋಗ ಮುಕ್ತ ಕರ್ನಾಟಕಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಜಿಲ್ಲಾ ಕ್ಷಯರೋಗ ಡಿ ಆರ್ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ ಹೇಳಿದರು.
ಅವರು ಮಹಾಗಾಂವ ಪಟ್ಟಣದ ಸರ್ಕಾರಿ ಪಿಯು ಕಾಲೇಜು ನಲ್ಲಿ . ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಹಾಗಾಂವ. ಇವರ. ಸಂಯೋಗದಲ್ಲಿ ಹಮ್ಮಿಕೊಂಡ. ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಟಿಬಿ ಸೋಲಿಸಿ ಕರ್ನಾಟಕದಲ್ಲಿ ಗೆಲ್ಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ವಿದ್ಯಾರ್ಥಿಗಳಲ್ಲಿಹಾಗೆಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ ಜೊತೆಗೆ ನಿಮ್ಮ ಊರಿನ ಸಮುದಾಯದ ಜನರಿಗೆ ಕ್ಷಯರೋಗ ಕುರಿತು ಅರಿವು ಮಾಹಿತಿ ನೀಡಬೇಕು ಅಂದಾಗ ಮಾತ್ರ ರೋಗ ತಡೆಯಲು ಸಾಧ್ಯವೆಂದರು ಅವರು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಎಂಬ ಘೋಷವಾಕ್ಯದಂತೆ ಸಮುದಾಯದ ಜನರು ಕ್ಷಯರೋಗ ನಿರ್ಮೂಲನಗೆ ಪಣತೊಡಬೇಕೆಂದರು.
ನಂತರ ತಾಲ್ಲೂಕ ಹಿರಿಯ ಕ್ಷಯರೋಗ ಮೇಲ್ವಿಚಾರಕ ಶಿವಕುಮಾರ್ ಪಾಟೀಲ್, ಅವರು ಮಾತನಾಡುತ್ತ ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿ ಒಬ್ಬರು ಎಚ್ಚರವಹಿಸಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಬದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂದ ಮಾಸಿಕ ೫೦೦ ರೂ, ಗಳನ್ನು ಕೊಡಲಾಗುತ್ತದೆ ಇದರ ಉಪಯೋಗ ಪ್ರತಿ ರೋಗಿಯು ಪಡೆಯಬೇಕು ಎಂದು ತಿಳಿಸಿದರು.
ವೇದಿಕೆ ಮೇಲೆ ಪ್ರಮುಖರಾದ ತಾಲ್ಲೂಕ ಕಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಇರ್ಷಾದ್ ಹುಸೇನ್ . ಅವರು ಕೋವಿಡ್ ಲಸಿಕೆ ಹಾಗೂ ಕರೋನದಿಂದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವವರಿಸಿದ್ದರು ಆರೋಗ್ಯ ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಶ್ರೀ ಪಾಟೀಲ್, ಡಾ. ಸಂತೋಷ ಪಂಚಾಳ. ಪ್ರೊಫೆಸರ್ ಗಳಾದ ಅನುರಾಧ ಕಿನ್ನಾಳ ಕಾಶಿ ಬಾಯ್ಸ ರೇಣುಕಾದೇವಿ ಮಹಾಜನಮಠ ಇದ್ದರು.
ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಕ್ಷಯರೋಗ ಕುರಿತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು ಅರಿವು ಮೂಡಿಸುವುದರ ಜೊತೆಗೆ ಪ್ರಥಮ ದ್ವಿತೀಯ ತೃತೀಯ ನಗದು ರೂಪದ ಬಹುಮಾನ. ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಹುರಿದುಂಬಿಸುವುದು ಮುಖ್ಯ ಉದ್ದೇಶವಾಗಿತ್ತು.
ಇದರಲ್ಲಿ ಮೊದಲ ನಗದು ಬಹುಮಾನ ಸುಷ್ಮ ಮಲ್ಲಿಕಾರ್ಜುನ 750. ದ್ವಿತೀಯ ನಗದು ಬಹುಮಾನ ಕಿರಣ್ ಭರತ್ 500. ತೃತೀಯ ನಗದು ಬಹುಮಾನ ಕನ್ಯಾಶ್ರೀ ರಮೇಶ್ 250.ನೀಡಿ ಪ್ರಶಂಸಿಸಿ. ಉತ್ತೇಜನ ನೀಡಲಾಯಿತು. ಮತ್ತು ಬಿತ್ತಿ ಪತ್ರ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರು ಭಾಗವಹಿಸಿದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…