ಬಿಸಿ ಬಿಸಿ ಸುದ್ದಿ

ಶೇಂಗಾದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ

ಒಂದು ಕ್ವಿಂಟಾಲ್ ಶೇಂಗಾ ಬೀಜದ ಉತ್ಪಾದನೆಗೆ ಸಾಮಾನ್ಯವಾಗಿ ೪.೩೮ ಕಿ.ಗ್ರಾಂ. ಸಾರಜನಕ, ೦.೪ ಕಿ.ಗ್ರಾಂ.ರಂಜಕ, ೨.೬೦ ಕಿ.ಗ್ರಾಂ. ಪೋಟ್ಯಾಷ್, ೧.೨೩ ಕಿ.ಗ್ರಾಂ.ಮ್ಯಾಗ್ನೇಶಿಯಂ ಮತ್ತು ೪.೦ ಗ್ರಾಂ.ಸತುವು ಬೇಕಾಗುವುದೆಂದು ಕಂಡುಬಂದಿದೆ. ಶೇಂಗಾ ಬೆಳೆ ಸಾವಯವ ಮತ್ತು ರಸಾಯನಿಕ ಗೊಬ್ಬರಗಳಿಗೆ ಉತ್ತಮ ಪ್ರತಿಕ್ರಿಯೆ ತೋರಿಸುತ್ತಿದ್ದು, ಅವುಗಳಲ್ಲಿ ಸಾರಜನಕ, ರಂಜಕ, ಪೋಟ್ಯಾಷ್, ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಗಂಧಕ, ಸತುವು, ಬೋರಾನ್ ಮತ್ತುಕಬ್ಬಿಣ ಪೋಷಕಾಂಶಗಳು ಮುಖ್ಯವಾದವುಗಳು ಸಾವಯವ ಗೊಬ್ಬರ ಪ್ರತಿ ಎಕರೆಗೆ ೪ ಟನ್ ಪ್ರಮಾಣದಲ್ಲಿ ೩ ರಿಂದ ೪ ವಾರ ಬಿತ್ತುವ ಮುಂಚೆ ಮಣ್ಣಿನಲ್ಲಿ ಸೇರಿಸಬೇಕು. ಶೇಂಗಾ ಬೆಳೆಗೆ ಬೇಕಾಗುವ ಪೋಷಕಾಂಶಗಳ ನಿರ್ವಹಣೆ ಇಲ್ಲಿ ಕೊಡಲಾಗಿದೆ.

ಸಾರಜನಕ: ನೆಲಗಡಲೆ ದ್ವಿದಳ ಧಾನ್ಯದ ಬೆಳೆಯಾಗಿರುವುದರಿಂದ ಅದರ ಬೇರುಗಳ ಗಂಟುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಸಸ್ಯಕ್ಕೆ ಒದಗಿಸಿದರೂ, ಸಾರಜನಕದ ಕೊರತೆ ಬೆಳವಣಿಗೆಯ ಹಂತದಲ್ಲಿಕಾಣುವುದು.ಆದ್ದರಿಂದ ಪ್ರತಿ ಎಕರೆಗೆ ಶೇಂಗಾ ಬೆಳೆಗೆ ೫ ಕಿ.ಗ್ರಾಂ.ಬಿತ್ತುವ ಸಮಯದಲ್ಲಿ ಮತ್ತು ಹೂ ಬಿಡುವ ಹಂತದಲ್ಲಿ ೫ ಕಿ.ಗ್ರಾಂ.ಸಾರಜನಕ ಮೇಲು ಗೊಬ್ಬರವಾಗಿ ಕೊಡಬೇಕು. ವಾತಾವರಣದಲ್ಲಿಯ ಸಾರಜನಕವನ್ನು ಸ್ಥಿರೀಕರಿಸಲು ಒಂದು ಎಕರೆಗೆ ಬೇಕಾಗುವ ಶೇಂಗಾ ಬೀಜಕ್ಕೆ ೧೫೦ ಗ್ರಾಂ.ರೈಜೋಬಿಯಂ ಜೀವಾಣುಗಳಿಂದ ಬಿತ್ತುವ ಪೂರ್ವದಲ್ಲಿ ಉಪಚರಿಸಬೇಕು.

ರಂಜಕ: ಶೇಂಗಾ ಬೆಳೆಗೆ ಅತಿ ಕಡಿಮೆ ಪ್ರಮಾಣದ ರಂಜಕ ಬೇಕಾಗುತ್ತದೆ. ಆದುದರಿಂದ ಅದನ್ನು ಸೂಪರ ಫಾಸ್ಫೇಟ್ ಅಥವಾ ಅಮೋನಿಯಂ ಫಾಸ್ಫೇಟ್ ಮೂಲಕ ಕೊಡಬೇಕು. ರಂಜಕವು ನೆಲಗಡೆಯಲ್ಲಿ ಕಾಯಿಗಳನ್ನು ಹೆಚ್ಚಿಸಿ ಕಾಳುಗಳು ಸರಿಯಾಗಿತುಂಬಲು, ಕಾಯಿಗಳ ತೂಕ ಮತ್ತು ಇಳುವರಿ ಹೆಚ್ಚಿಸುವುದರೊಂದಿಗೆ, ಕಾಳುಗಳಲ್ಲಿ ಎಣ್ಣೆ ಮತ್ತು ಪ್ರೋಟಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುವುದು. ಶೇಂಗಾ ರಂಜಕಕ್ಕೆ ಕಪ್ಪು ಮಣ್ಣಿಗಿಂತ ಕೆಂಪು ಮಣ್ಣಿನಲ್ಲಿ ಒಳ್ಳೆಯ ಪ್ರತಿಕ್ರಿಯೆ ತೋರಿಸುತ್ತಿದ್ದು ಪ್ರತಿ ಎಕರೆಗೆ ೩೦ ಕಿ.ಗ್ರಾಂ.ನೀರಾವರಿಯಲ್ಲಿ ಮತ್ತು ೨೦ ಕಿ.ಗ್ರಾಂ.ರಂಜಕವನ್ನು ಮಳೆಯಾಶ್ರಿತ ಬೆಳಗೆ ಬಿತ್ತುವ ಸಮಯದಲ್ಲಿ ಕೊಡಬೇಕು. ಕಪ್ಪು ಜಮೀನಿನಲ್ಲಿ ಬೆಳೆಗೆ ರಂಜಕದ ಉಪಯುಕ್ತತೆ ಹೆಚ್ಚಿಸಲು ಒಂದು ಎಕರೆಗೆ ಬೇಕಾಗುವ ಬೀಜಕ್ಕೆ ೨೦೦ ಗ್ರಾಂ.ರಂಜಕ ಕರಗಿಸುವ ಜೀವಾಣುಗಳಿಂದ ಬೀಜೋಪಚಾರ ಮಾಡಬೇಕು.

ಪೋಟ್ಯಾಷ್: ೧೦ ಕಿ.ಗ್ರಾಂ.ಪೋಟ್ಯಾಷ್‌ನ್ನು ಪ್ರತಿ ಎಕರೆಗೆ ಮ್ಯೂರೇಟ್ ಆಫ್ ಪೋಟ್ಯಾಷ್ ಮೂಲಕ ಬಿತ್ತುವ ಸಮಯದಲ್ಲಿ ಸಾಲುಗಳಲ್ಲಿ ಕೊಡಬೇಕು.ಇದರಿಂದ ಕಾಳಿನ ತೂಕ ಮತ್ತು ಕಾಳಿನ ಇಳುವರಿ ಹೆಚ್ಚಾಗುವುದು.

ಕ್ಯಾಲ್ಸಿಯಂ ಮತ್ತು ಗಂಧಕ: ಈ ಎರಡು ಪೋಷಕಾಂಶಗಳು ಕಾಯಿ ಬೆಳೆಯಲು ಮತ್ತು ಕಾಯಿ ತುಂಬಲು ಅತೀ ಅವಶ್ಯ. ಕ್ಯಾಲ್ಸಿಯಂ ಕೊಡುವುದರಿಂದ ಕಾಯಿಗಳು ಬಲಿತು, ಬೀಜಾಂಕುರ ಬಲಯುತವಾಗಿ ಬೆಳೆದು, ರೋಗ ಸಹಿಷ್ಣುಗುಣ ಬೆಳೆಗೆ ಬರುವುದು.ಅದರಂತೆ ಗಂಧಕವು ಬೀಜಗಳಲ್ಲಿಯ ಎಣ್ಣೆ ಪ್ರಮಾಣವನ್ನು ಹೆಚ್ಚಿಸಲು ಸಹಾಯವಾಗುತ್ತದೆ.ಈ ಎರಡು ಪೋಷಕಾಂಶಗಳನ್ನು ಒಟ್ಟಿಗೆ ಕೊಡಲು, ಪ್ರತಿ ಎಕರೆಗೆ ೨೦೦ಕಿ.ಗ್ರಾಂ.ಜಿಪ್ಸಮ್‌ನ್ನು ಬಿತ್ತಿದ ೩೦ ದಿನಗಳೊಳಗಾಗಿ ಸಾಲುಗಳಲ್ಲಿ ಕೊಡುವುದುರಿಂದ ಇಳುವರಿಯ ಜೊತಗೆ ಎಣ್ಣೆಯ ಪ್ರಮಾಣ ಹೆಚ್ಚಾಗುವುದು.

ಪೋಟ್ಯಾಷ್: ಕ್ಯಾಲ್ಸಿಯಂ;ಮ್ಯಾಗ್ನೇಶಿಯಂಅನುಪಾತ ೪:೪:೨ ರಷ್ಟಿದ್ದರೆ ಸಮತೋಲನವೆಂದು ಪ್ರಯೋಗಗಳಿಂದ ಕಂಡು ಬಂದಿದ್ದು ಈ ಅನುಪಾತವನ್ನು ಕಾಪಾಡಿಕೊಂಡರೆ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

ಸತುವು: ನೆಲಗಡಲೆಯಲ್ಲಿ ಸತುವಿನ ಕೊರತೆಯಿಂದ ಕಡಿಮೆ ಹೂಗಳು, ಕುಂಠಿತಕೊಂಡಿಯ ಬೆಳವಣಿಗೆ, ಕಡಿಮೆ ಕಾಯಿ ಬಿಡುವ ಬಳ್ಳಿಗಳು, ಕುಂಠಿತ ಬೇರು ಮತ್ತುಕಾಂಡದ ಬೆಳವಣಿಗೆ ಮರಳು ಮಿಶ್ರಿತ ಮಣ್ಣಿನಲ್ಲಿಕಾಣುವುದು. ಎಲೆಗಳಲ್ಲಿ ೨೨ ಪಿಪಿಎಂ ಗಿಂತಕಡಿಮೆಇದ್ದರೆಅಥವಾ ಸತುವಿನ ಪ್ರಮಾಣ ಮಣ್ಣಿನಲ್ಲಿ ಶೇಕಡಾ ೦.೬ ಪಿಪಿಎಂ ಕ್ಕಿಂತಲೂ ಕಡಿಮೆ ಇದ್ದಾಗ, ೧೦ ಕಿ.ಗ್ರಾಂ.ಸತುವಿನ ಸಲ್ಫೇಟನ್ನು ಪ್ರತಿ ಎಕರೆಗೆ ಹಾಕುವುದರಿಂದಅಧಿಕ ಇಳುವರಿ ಪಡೆಯಬಹುದು.

ಬೋರಾನ್: ನೆಲಗಡಲೆಯಲ್ಲಿ ಬೋರಾನ್ ಕೊರತೆಯಿಂದ ಕಾಳು ಸರಿಯಾಗಿತುಂಬುವುದಿಲ್ಲ. ಭೂಮಿಯಲ್ಲಿ ೦.೩೩ ಪಿಪಿಎಂ ನಷ್ಟು ಬೋರಾನ್‌ಇರಬೇಕು. ಈ ಕೊರತೆ ನೀಗಿಸಲು ೨ ಕಿ.ಗ್ರಾಂ.ಬೋರಾಕ್ಸ್‌ನ್ನು ಪ್ರತಿ ಎಕರೆಗೆ ಮಣ್ಣಿನ ಮೂಲಕ ಕೊಡಬೇಕು.

ಕಬ್ಬಿಣ: ಶೇಂಗಾದಲ್ಲಿ ಕಬ್ಬಿಣದ ಕೊರತೆಯಿಂದಕ್ಲೋರೋಸಿಸ್ ಬರುವುದು. ಕ್ಷಾರ ಭೂಮಿಯಲ್ಲಿ ಸುಣ್ಣದ ಅಂಶ ಹೆಚ್ಚಾದಾಗ, ಭೂಮಿಯಲ್ಲಿ ಹೆಚ್ಚಿನ ಪ್ರಮಾಣದರಂಜಕ ಮತ್ತು ಕಾರ್ಬೋನೆಟ್‌ಗಳಿದ್ದಾಗ ಶೇಂಗಾದ ಬೆಳೆಗೆ ಕಬ್ಬಿಣದ ಕೊರತೆ ಕಾಣುವುದು.ಸುಣ್ಣ ಮಿಶ್ರಿತ ಉಸುಕು ಮಣ್ಣಿನಲ್ಲಿ ಈ ಕೊರತೆ ಬಹಳ ಕಾಣುವುದು.೧೦ ಕಿ.ಗ್ರಾಂ ಕಬ್ಬಿಣದ ಸಲ್ಫೇಟನ್ನು ಪ್ರತಿ ಎಕರೆಗೆ ಹಾಕುವುದರಿಂದ ಅಧಿಕ ಇಳುವರಿ ಪಡೆಯಬಹುದು.

ಬಸವರಾಜ ಕೆ., ಬಸವರಾಜ ಕಾಡನವರ, ಮಂಜುನಾಥ್ ಎನ್. ಶೃತಿ ಎನ್., ಮತ್ತು ಜಹೀರ್ ಅಹಮದ್,. ಕೃಷಿ ವಿಶ್ವವಿದ್ಯಾಲಯ, ರಾಯಚೂರು

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

4 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

4 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

4 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

4 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

5 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

6 hours ago