ಶಹಾಪುರ: ಮನೆಯಲ್ಲಿ ಇಟ್ಟಿರುವ ಪೆಟ್ರೋಲ್ ಕ್ಯಾನ್ ಸಿಡಿದು ಬೆಂಕಿಗಾಹುತಿಯಾಗಿ ಬಾಲಕಿಯೋರ್ವಳು ಮೃತಪಟ್ಟು ತಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮದ್ರಿಕಿ ಗ್ರಾಮದಲ್ಲಿ ಜರುಗಿದೆ.
ಸಂಗೀತ ನಿಂಗಣ್ಣ ಆಂದೋಲ (10) ಮದ್ರಿಕಿ ಗ್ರಾಮದ ನಿವಾಸಿ, 5 ನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿಯೇ ಬೆಂಕಿಯಲ್ಲಿ ಬೆಂದು ಮೃತಪಟ್ಟಿರುವ ದುರ್ದೈವಿ.
ಘಟನೆ: ಬಾಲಕಿಯ ತಂದೆ ನಿಂಗಣ್ಣ ದ್ವಿಚಕ್ರ ಬಳಕೆಗೆ ಪೆಟ್ರೋಲ್ನ್ನು ತಂದು ಮನೆಯಲ್ಲಿ ಅಡುಗೆ ಕೋಣೆಯ ಒಲೆಯ ಹತ್ತಿರವೇ ಇಟ್ಟಿದ್ದ, ನಿಂಗಣ್ಣನ ಹೆಂಡತಿ ಅಂದರೆ ಮೃತಪಟ್ಟ ಬಾಲಕಿಯ ತಾಯಿ ಶ್ರೀದೇವಿ (28) ಅಡುಗೆ ಮಾಡುವಾಗ ಒಲೆಯ ಜಳದ ತಾಪ ಹೆಚ್ಚಾಗಿ ಅಲ್ಲೆ ಪಕ್ಕದಲ್ಲೆ ಇಟ್ಟಿರುವ ಪೆಟ್ರೋಲ್ ಕ್ಯಾನ್ ಬ್ಲಾಸ್ಟ್ ಆಗಿ ಪೆಟ್ರೋಲ್ ತಾಯಿ ಮತ್ತು ಮಗಳ ಮೇಲೆ ಚೆಲ್ಲಿದೆ
ಪೆಟ್ರೋಲ್ ಸಿಡಿದು ಚೆಲ್ಲಿದ ಅವಸರದಲ್ಲಿ ಮಗಳನ್ನು ಅಲ್ಲೇ ಬಿಟ್ಟು ಹೊರಗಡೆ ಬಂದಾಗ ಸಂಪೂರ್ಣ ಮಗು ಬೆಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ನಂತರದಲ್ಲಿ ಮಗುವನ್ನು ರಕ್ಷಣೆ ಮಾಡಲಿಕ್ಕೆ ಹೋದಾಗ ತಾಯಿಗೆ ಬೆಂಕಿ ತಗುಲಿ ಕೈ ಕಾಲು ಬೆನ್ನು ಮುಖ ಎದೆಯ ಭಾಗ ಸ್ವಲ್ಪ ಸುಟ್ಟಿದೆ ಕಲಬುರ್ಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…