ಬಿಸಿ ಬಿಸಿ ಸುದ್ದಿ

ಸೋಂಕಿನ ಬಗ್ಗೆ ಆತಂಕ ಬೇಡ ಮುಂಜಾಗೃತೆ ಇರಲಿ: ಶಾಸಕ ರಾಜುಗೌಡ

ಸುರಪುರ: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಲ್ಲಿ ಕೋವಿಡ್ ೨ನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದು ಈ ಬಾರಿ ಸಂಭವನೀಯ ೩ನೇ ಅಲೆ ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ರಾಜುಗೌಡ ಹೇಳಿದರು.

ಶುಕ್ರವಾರದಂದು ನಗರದ ಸರಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಸಿದ್ದತೆಗಳನ್ನು ಪರಿಶೀಲಿಸಿದ ಅವರು ನಂತರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ-೧೦೦, ನಗರ ಆರೋಗ್ಯ ಕೇಂದ್ರದಲ್ಲಿ-೫೦, ಹುಣಸಗಿ-೫೦, ಕೊಡೇಕಲ್-೫೦ ಹಾಗೂ ಕೆಂಭಾವಿ-೩೦ ಸೇರಿದಂತೆ ಒಟ್ಟು ೨೮೦ ಆಕ್ಸಿಜನ್ ಸಂಪರ್ಕ ಬೆಡ್‌ಗಳನ್ನು ವ್ಯವಸ್ಥೆಗೊಳಿಸಲಾಗಿದ್ದು ೨ನೇ ಅಲೆಯಲ್ಲೇ ಕೇವಲ ೩ ಐಸಿಯು ಬೆಡ್‌ಗಳಿದ್ದವು ಈಗ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ೨೯ ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು ೧.೫ಕೋಟಿ ರೂ ವೆಚ್ಚದಲ್ಲಿ ವೆಂಟಿಲೇಟರ್ ಸಹಿತ ಐಸಿಯು ಬೆಡ್ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು ಈಗಾಗಲೇ ೧೦ವೆಂಟಿಲೇಟರ್ ಸಹಿತ ಬೆಡ್ ವ್ಯವಸ್ಥೆ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ೧೯ ಐಸಿಯು ಸಹಿತ ಬೆಡ್ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಸೂಕ್ತ ಮುಂಜಾಗೃತೆ ಕೈಗೊಂಡಿದ್ದು ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ಆತಂಕ ಬೇಡ ಆದರೆ ಮುಂಜಾಗೃತೆ ವಹಿಸಬೇಕು ಮಾಸ್ಕ ಧರಿಸುವುದು ಸೇರಿದಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಹಾಗೂ ಕೋವಿಡ್ ವ್ಯಾಕ್ಸಿನ್ ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೋವಿಡ್ ವಿಷಯದಲ್ಲಿ ರಾಜಕಾರಣ ಬೇಡ, ಕೆಲವು ಕೋವಿಡ್ ಸೋಂಕು ಸುಳ್ಳು ಎಂದು ಹೇಳುತ್ತಾರೆ ಇದು ಬೇಡ ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಬೇಡ ಎಂದು ಹೇಳಿದ ಅವರು, ಸಾರ್ವಜನಿಕರು ಕೆಮ್ಮು,ನೆಗಡಿ ಇನ್ನೀತರ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಕೋವಿಡ್ ಪರೀಕ್ಷಿಸಿಕೊಳ್ಳಬೇಕು ತಕ್ಷಣವೇ ಚಿಕಿತ್ಸೆ ಪಡೆದುಕೊಂಡಲ್ಲಿ ೪-೫ ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಡಿವೈಎಸ್‌ಪಿ ಡಾ.ದೇವರಾಜ ಬಿ., ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಓಂಪ್ರಕಾಶ ಅಂಬೂರೆ, ಹಿರಿಯ ವೈದ್ಯರಾದ ಡಾ.ಶಫೀ ಉಜ್ಜುಮ್, ಡಾ.ಹರ್ಷವರ್ಧನ ರಫುಗಾರ, ಡಾ.ಖಾಜಾ ಮೈನುದ್ದಿನ್, ವೈದ್ಯರಾದ ಡಾ.ಪ್ರೀತಿ, ಡಾ.ಮಲ್ಲಿಕಾರ್ಜುನ, ಡಾ.ಸೃಜನ್ ಹಾಗೂ ಸಿಬ್ಬಂದಿ ವರ್ಗದವರಾದ ರಾಜೇಶ ಭಟ್, ವಿಜಯಕುಮಾರ, ಹಣಮಂತ ಹಾಗೂ ಇತರರಿದ್ದರು.

ಕೆಕೆಆರ್‌ಡಿಬಿ ಯಿಂದ ೩ಕೋಟಿ ಮಂಜೂರು: ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಸುರಪುರ ಮತಕ್ಷೇತ್ರಕ್ಕೆ ಕೆಕೆಆರಡಿಬಿ ಯಿಂದ ೩ಕೋಟಿ ರೂ ಮಂಜೂರಾಗಿದ್ದು ಸುರುಪರ ನಗರದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಪಕ್ಕದಲ್ಲಿ ಮೇಲ್ಗಡೆ ಹೊಸದಾಗಿ ಆಸ್ಪತ್ರೆಯನ್ನು ವಿಸ್ತರಿಸಿ ಕಟ್ಟಡವನ್ನು ನಿರ್ಮಿಸಲು ೧ಕೋಟಿರೂ, ಹುಣಸಗಿಗೆ-೧ಕೋಟಿ ರೂ ಹಾಗೂ ಕೊಡೇಕಲ್ ಮತ್ತು ರಾಜನಕೋಳೂರು ಗ್ರಾಮಗಳಿಗೆ ತಲಾ ೫೦ಲಕ್ಷ ರೂ ಮಂಜೂರಾಗಿದೆ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ, ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಅರಿವಳಿಕೆ ತಜ್ಞರು, ಮಕ್ಕಳ ತಜ್ಞರು,ಮಹಿಳಾ ವೈದ್ಯರನ್ನು ಸೇರಿದಂತೆ ಕೆಲವು ವೈದ್ಯರನ್ನು ನೇಮಕಗೊಳಿಸಲಾಗಿದ್ದು ಆಸ್ಪತ್ರೆಗೆ ಅತ್ಯವಶ್ಯಕವಾಗಿರುವ ಜನರಲ್ ಫಿಜಿಷಿಯನ್ ವೈದ್ಯರ ನೇಮಕಕ್ಕೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಿ ಒತ್ತಾಯಿಸುವುದಾಗಿ ತಿಳಿಸಿದರು.

೭ ಕೋವಿಡ್ ಪ್ರಕರಣಗಳು ಪತ್ತೆ: ಸುರಪುರ ಮತ್ತು ಹುಣಸಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಲ್ಲಿ ೭ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದ್ದಾರೆ. ನಗರದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಶಾಸಕ ರಾಜುಗೌಡ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿ, ಕೋವಿಡ್ ಸೋಂಕಿತರು ಎಲ್ಲರೂ ಲಕ್ಷಣ ರಹಿತರಾಗಿದ್ದು ಇವರನ್ನು ಸರಕಾರದ ಆದೇಶದಂತೆ ೭ದಿನಗಳವರೆಗೆ ಹೋಂ ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದರು, ಸುರಪುರ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂಡೋಳಿ, ಮಲ್ಲಾ(ಬಿ), ಮಾಳನೂರು ಹಾಗೂ ನಾರಾಯಣಪುರಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು ತಾಲೂಕಿಗೆ ಬೆಂಗಳೂರು, ಪುಣೆ ಹಾಗೂ ಇತರ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬರುವ ಜನರ ಗಂಟಲು ದ್ರವ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಪ್ರತಿನಿತ್ಯ ೩೦೦-೪೦೦ ಟೆಸ್ಟ್‌ಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಕೋವಿಡ್ ವ್ಯಾಕ್ಸಿನ್ ಮೊದಲ ಡೋಸ್‌ಕೊಂಡವರಲ್ಲಿ ಶೇ೩ ರಷ್ಟು ಅಂದಾಜು ೧೦ ರಿಂದ ೧೨ಸಾವಿರ ಜನರು ಎರಡನೇ ಡೋಸ್ ಪಡೆದಿಲ್ಲ ವ್ಯಾಕ್ಸಿನ್ ಪಡೆಯದ ಜನರು ಹಳ್ಳಿಯಲ್ಲಿದ್ದಾರೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು ತಾಲೂಕಿನ ಪದವಿ ಪೂರ್ವ ಹಾಗೂ ಪ್ರೌಢಶಾಲೆಯ ೧೫ ರಿಂದ ೧೮ ವರ್ಷ ವಯಸ್ಸಿನ ಅರ್ಹ ೧೮,೦೩೨ ಮಕ್ಕಳ ಪೈಕಿ ೧೩,೨೬೫ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗಿದ್ದು ಶೇ೭೪ ರಷ್ಟು ಸಾಧಿಸಲಾಗಿದೆ ಎಂದು ತಿಳಿಸಿದರು, ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಸುವ ೫೦೦ಎಲ್‌ಬಿಎಮ್ ಸಾಮರ್ಥ್ಯದ ಹೊಸ ಯಂತ್ರ ಬಂದಿದ್ದು ಇದರಿಂದ ಆಸ್ಪತ್ರೆಯಲ್ಲಿ ಹೆಚ್ಚು ಬೆಡ್‌ಗಳಿಗೆ ಆಕ್ಸಿಜನ್ ಪೂರೈಕೆ ಲಭ್ಯವಾಗಲಿದ್ದು ಜೊತೆಗೆ ೪೮ ಜಂಬೋ ಹಾಗೂ ೫೮ ಸಣ್ಣ ಆಕ್ಸಿಜನ್ ಸಿಲಿಂಡರ್‌ಗಳು ಲಭ್ಯ ಇದ್ದು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಲಭ್ಯ ಇವೆ ಎಂದು ತಿಳಿಸಿದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

40 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

43 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

46 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago