ಬಿಸಿ ಬಿಸಿ ಸುದ್ದಿ

ಒಮಿಕ್ರಾನ್ ವೈರಸ್ ಜೋರಾಗಿದೆ: ನಿರ್ಲಕ್ಷ್ಯ ಸಲ್ಲದು, ವ್ಯಾಕ್ಸೀನ್ ರಕ್ಷಣೆಯ ಬಗೆಗೆ ನಂಬಿಕೆಯೇ ಇಲ್ಲ!

ಆರೋಗ್ಯದ ವಿಷಯದಲ್ಲಿ ನಾವು ಪೂರ್ಣವಾಗಿ ಸ್ವಾವಲಂಬಿಗಳಾಗಬೇಕು..!

ಆಸ್ಪತ್ರೆ, ಔಷಧಿ, ವೈದ್ಯಕೀಯ ಸೇವೆ ಎಲ್ಲವೂ ಹಣದೊಂದಿಗೆ ಆರೋಗ್ಯವನ್ನೂ ಹಿಂಡುತ್ತಿವೆ. ಇದೊಂದು ಬಹುದೊಡ್ಡ ವ್ಯಾಪಾರವಾಗಿದೆ, ಅಷ್ಟೇ ಅಲ್ಲ ವ್ಯಾಪಾರಕ್ಕಾಗಿ ಮಾನವೀಯತೆಯನ್ನೇ ತೊರೆದು ನಿಂತಿವೆ..!: # ಒಮಿಕ್ರಾನ್ ಹರಡುವ ವೇಗ ಅತ್ಯಧಿಕವಾಗಿದೆಯೂ: ನಮ್ಮ ದೇಶ ಒಂದರಲ್ಲೇ ಕೊರೋನಾ ಪಾಸಿಟಿವ್‌ಗಳು ದಿನಕ್ಕೆ ನೂರು, ಸಾವಿರ ದಾಟಿ, ಲಕ್ಷ, ಎರಡು ಲಕ್ಷದ ಹತ್ತಿರಕ್ಕೆ ಏರುತ್ತಿದೆ. ವ್ಯಾಕ್ಸೀನ್ ತೆಗೆದುಕೊಂಡರೂ ಸೋಂಕು ಏಕೆ ಬರುತ್ತದೆ..? ಕ್ಷಣಕ್ಷಣಕ್ಕೂ ರಚನೆ ಬದಲಾಯಿಸಿ ಅದರಿಂದಲೇ ತನ್ನ ಅಸ್ಥಿತ್ವ ಉಳಿಸಿಕೊಳ್ಳುವುದು ಯಾವುದೇ ವೈರಸ್‌ನ ಮೂಲ ಸ್ವಭಾವವು. ಇಂತಹ ಮೋಡದ ನೆರಳಿನ ಕೆಳಗೆ ಶಾಶ್ವತ ತಂಪನ್ನು ಬಯಸಿ ಬಯಲಿನಲ್ಲಿ ಕುಳಿತಂತಾಗಿದೆ ನಮ್ಮ ಸ್ಥಿತಿ..!

ಹಿಂದಿನ ವ್ಯಾಕ್ಸೀನ್ ಬಂದಾಗಲೇ ವೈರಸ್ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿತ್ತು, ಸುಮಾರು 7000ಕ್ಕೂ ಹೆಚ್ಚಿನ ಕೊರೋನಾ ವೈರಾಣುವಿನ ಮಾದರಿಗಳಿವೆ, ಇನ್ನೂ ಎಷ್ಟೋ ರೂಪಾಂತರಿಗಳು ಬರಲಿವೆ, ಎಲ್ಲಕ್ಕೂ ಒಂದೊಂದು ವ್ಯಾಕ್ಸೀನ್ ಮಾಡಲು ಅಸಾಧ್ಯವಾಗಿದೆ. ಇದು ಕೆಲಸ ಮಾಡುತ್ತದೆ ಎನ್ನುವಷ್ಟರಲ್ಲಿ ಹೊಸ ಹತ್ತು ಅಥವಾ ನೂರೂ ರೂಪಾಂತರವಾಗಿ ಬರುತ್ತವೆ. ಇಂತಹ ಅಸ್ಥಿರ ವೈರಸ್‌ಗೆ ಆ್ಯಂಟಿಡಾಟ್ ತಯಾರಿಸಲು ಅಥವಾ ವ್ಯಾಕ್ಸೀನ್ ತಯಾರಿಸಲು ಅಸಾಧ್ಯವಾಗಿದೆ. ಅಷ್ಟೊಂದು ಹಣ ಹಾಕಿ ಸಂಶೋಧನೆ ನಡೆಸಿದ್ದಾರೆ, ಸರಕಾರಗಳ ಸಹಾಯ ಪಡೆದಿವೆ.?! ಎಂದರೆ ಎಲ್ಲವೂ ವ್ಯಾಪಾರಕ್ಕಾಗಿ!!

ಹೋಗಲಿ, ಈ ವ್ಯಾಕ್ಸೀನ್‌ಗಳು ಸುರಕ್ಷಿತವೇ? ಎಂದರೆ ಖಂಡಿತಾ ಅಲ್ಲ ಎಂದು ಉತ್ತರಿಸಬಹುದು..!

ಏಕೆಂದರೆ ಹತ್ತಾರು ವರ್ಷಗಳ ಕಾಲ ವ್ಯಾಕ್ಸೀನ್‌ಗಳು ದೀರ್ಘಕಾಲೀನ ತೊಂದರೆಗಳನ್ನು ತರಬಹುದೇ? ಎಂಬ ಪರೀಕ್ಷೆಗೆ ಒಳಪಡಿಸಿ ಹೊರತರಬೇಕಾದ ವ್ಯಾಕ್ಸೀನ್‌ಗೆ ಈಗ ಕಾಲಾವಕಾಶವೇ ಇಲ್ಲವೆಂಬ ಕಾರಣ ನೀಡಿ, ತುರ್ತು ಅನುಮತಿ ಪಡೆಯುತ್ತಿದ್ದಾರೆ, ಇದರ ಪರಿಣಾಮದ ಬಗ್ಗೆ ಯಾರಿಗೂ ಗೊತ್ತಿಲ್ಲ.?!

ವ್ಯಾಕ್ಸೀನ್ ಕಾರ್ಯಶೈಲಿ: ನಮ್ಮ ಮಜ್ಜೆಯನ್ನೇ ಉಪಯೋಗಿಸಿಕೊಂಡು ಆ್ಯಂಟಿಬಾಡಿ ತಯಾರಿಸಲು ಉತ್ತೇಜಿಸುವ ವ್ಯಾಕ್ಸೀನ್‌ಗಳು, ಮಜ್ಜೆಯ ಶಕ್ತಿಯನ್ನು ಇನ್ನಿಲ್ಲದಂತೆ ಕ್ಷೀಣಗೊಳಿಸುವುದು ಅನಿವಾರ್ಯವಾಗಿದೆ.!!

ಮಜ್ಜೆಯು ರಕ್ತವನ್ನು ಉತ್ಪತ್ತಿ ಮಾಡುತ್ತದೆ ಎಂದು ನಾವು ಬಲ್ಲೆವು. ಹಾಗೆಯೇ, ರಕ್ತವೇ ನಮ್ಮ ಜೀವನ ಎಂದೂ ಸಹ ನಾವು ಬಲ್ಲೆವು. ಮಜ್ಜೆಯು ಮೂಲ ಜೀವಕೋಶ ಸ್ಥಾನವಾಗಿದ್ದು ಶರೀರದ ಎಲ್ಲಾ ಅವಯವಗಳನ್ನೂ ಮರುಸೃಷ್ಟಿಸಬಲ್ಲದು. ಅಪಾಯದ ಸಂದರ್ಭದಲ್ಲಿ ತನ್ನನ್ನು ತಾನು ಬಳಸಿಕೊಂಡು ಶರೀರವನ್ನು ಬದುಕಿಸಿಕೊಳ್ಳಲು ಅಷ್ಟು ಸಾಮರ್ಥ್ಯವನ್ನು ಪ್ರಕೃತಿ ಕೊಟ್ಟಿದೆ.

ಈಗಾಗಲೇ ಮಜ್ಜೆ ದುರ್ಬಲಗೊಂಡಿದೆ — ಎಚ್ಚರ ಎಚ್ಚರ..!

1) ಸಣ್ಣ ಪುಟ್ಟ ಕಾಯಿಲೆಗಳಿಗೆ ಆ್ಯಂಟಿಬಯೋಟಿಕ್ಸ್, ಸ್ಟಿರಾಯ್ಡ್‌ಗಳಂತಹ ತೀಕ್ಷ್ಣ ಔಷಧಗಳ ಪ್ರಯೋಗ ಮಾಡಿ ಮಜ್ಜೆಯನ್ನು ಹಾಳುಮಾಡಲಾಗಿದೆ.
2) ಈ ಎರಡು ವರ್ಷಗಳಲ್ಲಿ, ವೈರಸ್ ದಾಳಿಯಿಂದ ಮಜ್ಜೆ ದುರ್ಬಲಗೊಂಡಿದೆ. ಹಿಂದಿನ‌ ಸೋಂಕಿನಲ್ಲಿ ಎಗ್ಗಿಲ್ಲದೇ ಸ್ಟಿರಾಯ್ಡ್ ಬಳಸಿ ಮಜ್ಜೆಯ ಬುನಾದಿಯವರೆಗೆ ತಲುಪಲಾಗಿದೆ…..

3) ವ್ಯಾಕ್ಸೀನ್ ಮಜ್ಜಾ ಶಕ್ತಿಯನ್ನು ಹೀರಿದೆ.

# ಮುಂದೆ.?!: ಜೀವನಕ್ಕೆ ಮೂಲವಾದ ಮಜ್ಜೆಯನ್ನು ಸಶಕ್ತಗೊಳಿಸಬೇಕೋ ಅಥವಾ ಈಗಾಗಲೇ ಇರುವ ದುರ್ಬಲ ಮಜ್ಜೆಯನ್ನೇ ಇನ್ನಷ್ಟು ಮತ್ತಷ್ಟು ಕರಗಿಸಬೇಕೋ?

ನಾವು ನೋಡಿದಂತೆ ಇಂದಿನ ಮಕ್ಕಳು, ವಯಸ್ಕರು, ರೋಗದ ತಕ್ಷಣ ತೀವ್ರಬಾಧೆಗೆ ಒಳಗಾಗಲು ಮತ್ತು ದೀರ್ಘಕಾಲೀನ ರೋಗಗಳಿಗೆ ತುತ್ತಾಗಲು ಕಾರಣವೇ ಅವರ ಆಹಾರ ಮತ್ತು ಜೀವನ ಶೈಲಿ. ಯಾರು ನಿತ್ಯವೂ ಒಂದು ಬಾರಿಯಾದರೂ ಹೊಟೆಲ್ ಊಟಕ್ಕೆ ಅವಲಂಬಿತರೋ, ಯಾರು ಬೇಕರಿ, ಜಂಕ್ ತಿನ್ನುತ್ತಾರೋ, ವಿವಿಧ ಜಾಹೀರಾತು ನೋಡಿ ಆರೋಗ್ಯದ ಹೆಸರಿನ ಪೇಯಗಳನ್ನು ಕುಡಿಯುತ್ತಾರೋ ಅಂತವರ ಲಿವರ್ ಮತ್ತು ಮಜ್ಜೆ(ಎರಡೂ ಒಂದೇ ತೆರನಾದ ಸಾಮರ್ಥ್ಯ ಮತ್ತು ಸಂಬಂಧಗಳನ್ನು ಹೊಂದಿವೆ) ಅತ್ಯಂತ ದುರ್ಬಲಗೊಂಡಿವೆ.

# ಗಮನಿಸಿ ನೋಡಿ —

ಇಂತವರು, ಸಣ್ಣ ಸೋಂಕಿಗೂ, ಜ್ವರಕ್ಕೂ ಒದ್ದಾಡಿ ಬಿಡುತ್ತಾರೆ, ರಕ್ತ ಬಹಳಷ್ಟು ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿದು ಬಿಡುತ್ತದೆ. ಇದೇ ಮಜ್ಜೆ ಮತ್ತು ಯಕೃತ್ ದುರ್ಬಲತೆಯ ಸಂಕೇತ..! ಹಾಗಾಗಿ, ಈಗ ವ್ಯಾಕ್ಸೀನ್ ಅಥವಾ ಸೋಂಕು ಎರಡೂ ಬಹಳ ದುಬಾರಿಯಾಗಿ ಪರಿಣಮಿಸುತ್ತವೆ. ಎರಡರಿಂದಲೂ ರಕ್ಷಿಸಿಕೊಳ್ಳಬೇಕು. ಆದ್ದರಿಂದ, ಸೋಂಕಿಗೆ ನಿರ್ಲಕ್ಷ್ಯ ಸಲ್ಲದು; ಹಾಗೆಯೇ ವ್ಯಾಕ್ಸೀನ್ ರಕ್ಷಿಸಲು ಆಗದು..! # ಇದರ ಬದಲು ಮಜ್ಜೆಯ ಶಕ್ತಿಯನ್ನೇ ವರ್ಧಿಸುವ ಉಪಾಯಗಳಿಗೆ ಏಕೆ ಮೊರೆ ಹೋಗಬಾರದು.!? —

ಅತ್ಯಂತ ಸಮರ್ಥ, ಸಮಯೋಚಿತ ಚಿಕಿತ್ಸೆ: ವೈರಸ್ ಕೊಲ್ಲಲು ಇರುವ ಸರಳ ಮತ್ತು ಅತ್ಯಂತ ಕ್ಷಮತೆಯಿಂದ ಕೂಡಿದ ಉಪಾಯ ಒಂದೇ ಒಂದು. ಅದು ವೈರಸ್ ಬೆಳೆಯಲು ಬೇಕಾದ ಆಹಾರ, ಗಾಳಿ, ನೀರು ಮತ್ತು ಸ್ಥಳ ಈ ನಾಲ್ಕರಲ್ಲಿ ಒಂದನ್ನು ಕೊಡದಿದ್ದರೂ ಅದಕ್ಕೆ ಉಳಿಗಾಲವಿಲ್ಲ. ಅದು ಸಾಯಲೇಬೇಕು ಅಲ್ಲವೇ..? ನೀರು ಕೊಡದಿದ್ದರೆ ಹುಲ್ಲು ಸಾಯುತ್ತದೆ, ಅದಕ್ಕೆ ಕಳೆನಾಶಕವನ್ನೇ ಸಿಂಪಡಿಸಬೇಕೇ..? ಹಾಗೆಯೇ, ವೈರಸ್ ಕೊಲ್ಲಲು ಔಷಧಗಳೆಂಬ ವಿಷ ಸುರಿದುಕೊಳ್ಳಬೇಕೆ..? ವ್ಯಾಕ್ಸೀನ್ ಎಂಬ ಬೆಂಕಿಯಿಂದ ಮಣ್ಣನ್ನೇ ಹುರಿದು ಬಿಡಬೇಕೇ..? ಎರಡರಿಂದಲೂ ಶರೀರವೆಂಬ ಭೂಮಿ ಬರಡು ಅಲ್ಲವೇ..?

ಎಚ್ಚೆತ್ತುಕೊಳ್ಳಬೇಕಾದ ಸಂಗತಿ ಇದು. ನಮ್ಮ ಆಸ್ಪತ್ರೆಯಲ್ಲೇ ಹಲವಾರು ವ್ಯಾಕ್ಸೀನ್ ನಂತರದ ಶೀಘ್ರ ಮತ್ತು ದೀರ್ಘಕಾಲೀನ ಅಪಾಯಗಳನ್ನು ನೋಡಿರುವೆವು. ವಿಶೇಷವಾಗಿ ಹೃದಯದ ಮಾಂಸಖಂಡಗಳು ಗಡುಸಾಗಿ ದುರ್ಬಲವಾಗುತ್ತಿವೆ. ಶರೀರದ ಇತರ ಮಾಂಸಖಂಡಗಳು ದುರ್ಬಲತೆಯಿಂದ ಅದುರುತ್ತಿವೆ, ಆದ್ದರಿಂದ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾನೆ.

ಈ ವ್ಯಾಪಾರ ಜೀವಿಗಳ ಜೀವವನ್ನೇ ಹಿಂಡುತ್ತಿರುವುದು ಅತ್ಯಂತ ವಿಷಾದನೀಯ..!

https://t.me/joinchat/Pzj2OBdb9refGJ5DbP1CSw
ಫೋನ್ ನಂಬರ್ — 8792290274, 9148702645
# ಮೂಲ‌ ಮಾಹಿತಿ — ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

 ನಿರೂಪಣೆ — ಡಾ.ಮಧುಶ್ರೀ ರಾಗಿ
ಆಯುರ್ವೇದ ಚಿಕಿತ್ಸಕರು.
ಫೋನ್ ನಂಬರ್ — 6361321848

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

17 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago