ಹುಬ್ಬಳ್ಳಿ: ಪುಣೆ-ಬೆಂಗಳೂರು ಹಳೆ ರಸ್ತೆಯ ಕಿಮ್ಸ್ ಮುಖ್ಯ ದ್ವಾರದ ಬಳಿ ಸಾರಿಗೆ ಸಂಸ್ಥೆ ಬಸ್, ಬೇಂದ್ರೆ ನಗರ ಸಾರಿಗೆ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆಯುಂಟಾಗುತ್ತಿದೆ.
ಈ ರಸ್ತೆಯ ಹೆಚ್ಚಿನ ಪ್ರದೇಶವನ್ನು ಬಿಆರ್‌ಟಿಎಸ್ ಕಾರಿಡಾರ್ ವ್ಯಾಪಿಸಿದ್ದು, ಸಾಮಾನ್ಯ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಕಿಮ್ಸ್ ಮುಖ್ಯ ದ್ವಾರದಲ್ಲಿ ಆಗಾಗ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಧಾರವಾಡ-ಹುಬ್ಬಳ್ಳಿ ಮಾರ್ಗದಲ್ಲಿ ಕಿಮ್ಸ್ ಮುಖ್ಯದ್ವಾರಕ್ಕೆ ಮೊದಲೇ ಸಾರಿಗೆ ಬಸ್‌ಗಳ ನಿಲುಗಡೆಗೆ ಫಲಕ ಅಳವಡಿಸಿದ್ದರೂ, ಅಲ್ಲಿ ನಿಲ್ಲದೆ, ಕಿಮ್ಸ್ ವೃತ್ತ ದಾಟಿ ಮುಖ್ಯ ದ್ವಾರದ ಅಂಚಿನಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಮೊದಲೇ ರಸ್ತೆ ಕಿರಿದಾಗಿರುವುದರಿಂದ ಬಸ್‌ಗಳ ನಿಲುಗಡೆಯಿಂದ ಇನ್ನಷ್ಟು ಸಮಸ್ಯೆಯಾಗುತ್ತಿದೆ.
ಟ್ರಾಫಿಕ್ ಸಿಗ್ನಲ್ ಅನುಸರಿಸುವ ಭರದಲ್ಲಿ ವಾಹನ ಸವಾರರರು ಮುನ್ನುಗ್ಗಿದಾಗ ಬಸ್‌ಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಏರ್ಪಡುತ್ತಿದೆ. ನಾಲ್ಕು ದಿಕ್ಕಿನಿಂದ ಸಂಚರಿಸುವ ವಾಹನಗಳು ದಾರಿಗಾಗಿ ಕಿರಿಕಿರಿ ಅನುಭವಿಸುವಂತಾಗಿದೆ.
ಸಂಜೆ ವೇಳೆ ಕಿಮ್ಸ್ ವೃತ್ತದಲ್ಲಿ ರಸ್ತೆ ದಾಟಿವುದೇ ಸವಾಲಾಗಿದ್ದು, ದಿಢೀರ್ ಸಂಚಾರ ದಟ್ಟಣೆ ತುಂಬಾ ಕಿರಿಕಿರಿ ಎನಿಸಲಿದೆ. ಎಲ್ಲಾ ದಿಕ್ಕುಗಳಿಂದಲೂ ವಾಹನಗಳು ಬರುವುದರಿಂದ, ಯಾವ ಕಡೆ ಹೆಜ್ಜೆ ಇಡಬೇಕೆಂಬುದೇ ತೋಚುವುದಿಲ್ಲ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಮಂಜುಳಾ.
ಕಿಮ್ಸ್ ವೃತ್ತಕ್ಕೆ ಮೊದಲೇ ಬಸ್ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ. ಪ್ರಯಾಣಿಕರ‍್ಯಾರೂ ಬಸ್ ಏರಿ, ಇಳಿಯದ ಕಾರಣ ಮೊದಲು
ನಿಲುಗಡೆ ಮಾಡಲಾಗುತ್ತಿದ್ದ ಸ್ಥಳದಲ್ಲೇ ಬಸ್ ನಿಲುಗಡೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ಸಂಚಾರ ವಿಭಾಗದ ಅಧಿಕಾರಿ ವಿವೇಕಾನಂದ ವಿಶ್ವಜ್ಞ ‘ಇ-ಮೀಡಿಯಾಲೈನ್’ಗೆ ಪ್ರತಿಕ್ರಿಯಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…