ಭಾರತದಲ್ಲಿ ಕ್ರೂರ ಆಡಳಿತ ವ್ಯವಸ್ಥೆ ಕೊನೆಗಾಣಿಸಬಲ್ಲ ಏಕೈಕ ಪರ್ಯಾಯ ಶಕ್ತಿ ಮಾಯಾವತಿ: ಹ.ರಾ.ಮಹಿಶ ಬೌದ್ಧ

ಯಾರು ಒಪ್ಪಲಿ ಬಿಡಲಿ ಸಮಕಾಲೀನ ಭಾರತದೇಶಕ್ಕೆ ಸದ್ಯದ ಪರ್ಯಾಯನಾಯಕತ್ವವೆಂದರೆ ಅದು ಬಹುಜನ ಮಹಾನಾಯಕಿ ಬೆಹೆನ್ಜಿ ಮಾಯಾವತಿಯವರು ಮಾತ್ರ..!

ದೇಶದೊಳಗೆ ಅದೆಷ್ಟೇ ಹಿರಿಯ ಕಿರಿಯ ಸಮಕಾಲೀನ ದಲಿತರಾಜಕಾರಣಿಗಳಿದ್ದರೂ ಹೋರಾಟಗಾರ ನಾಯಕರಿದ್ದರೂ‌ ಸಮಕಾಲೀನ ಭಾರತದಲ್ಲಿ ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಗ್ರಗಣ್ಯ ಸಮರ್ಥ ದಲಿತ ಬಹುಜನನಾಯಕಿ ಎಂದು ಗುರುತಿಸುವುದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬೆಹೆನ್ಜಿ ಮಾಯಾವತಿಯವರನ್ನೇ…!! ಇದು ಅಂಬೇಡ್ಕರ್ ವಾದೀ ಸ್ವಾಭಿಮಾನಿ ಸ್ವತಂತ್ರರಾಜಕಾರಣದ ಶಕ್ತಿ..!!‌

ಭಾರತದಂಥ ಜಾತಿಗ್ರಸ್ತ ದೇಶದಲ್ಲಿ ಪರ ಪಕ್ಷಗಳಲ್ಲಿ ದುಡಿಯುವ ಅದೆಂಥ ಮಹಾದಲಿತ ರಾಜಕಾರಣಿಗಳು ಅದೆಷ್ಟೇ ಸಮರ್ಥರಿದ್ದರೂ‌‌ ಮೇಲ್ಜಾತಿಯವರು ಕಟ್ಟಿದ ಮನೆ(ಪಕ್ಷ)ಯಲ್ಲಿ ಯಜಮಾನರಾಗಲು ಎಂದೆಂದಿಗೂ ಸಾಧ್ಯವೇ ಇಲ್ಲ ಎಂಬುದು ಐತಿಹಾಸಿಕ ಮತ್ತು ಸಾರ್ವಕಾಲಿಕ ಸತ್ಯ.! ಈ ಸತ್ಯವನ್ನು ಬಹಳ ಹಿಂದೆಯೇ ಮನಗಂಡ ವಿಶ್ವಜ್ಞಾನಿ ಬಾಬಾಸಾಹೇಬರು ಕೇವಲ ಬ್ರಾಹ್ಮಣ ಬನಿಯಾಗಳ ಸೊತ್ತಾಗಿದ್ದ ರಾಜ್ಯಾಧಿಕಾರದ ಕೀಲಿಕೈಯಾದ ಓಟೆಂಬ ಹಕ್ಕನ್ನು ತಮ್ಮ ಹೋರಾಟದಿಂದ ಇಡೀ ಭಾರತೀಯರಿಗೆಲ್ಲಾ ಕೊಡಿಸಿಕೊಟ್ಟ ತಕ್ಷಣವೇ
ದುಡಿಯುವ ಬಡವರ ಶ್ರಮಿಕರ ಕೂಲಿಕಾರ್ಮಿಕರ ಹಿತಕ್ಕಾಗಿ ತಮ್ಮದೇ ಆದ ಸ್ವಾಭಿಮಾನಿ ಸ್ವಂತ ಪಕ್ಷವನ್ನು ಸ್ಥಾಪಿಸಿದರು..!! ಆದರೆ ಚಳವಳಿಯ ಇತರೆ ಜವಾಬ್ದಾರಿಗಳ ಒತ್ತಡ ಹಾಗು ಅನಾರೋಗ್ಯದ ಕಾರಣಕ್ಕೆ ಅವರು ರಾಜಕೀಯವಾಗಿ ಬೆಳೆದು ಪಕ್ಷ ಬೆಳೆಸಿ ಈ ದೇಶದ ಪ್ರಧಾನಿಯಾಗಿ ತಮ್ಮ ಸಂವಿಧಾನವನ್ನು ತಾವೇ ಜಾರಿಮಾಡಿ‌ ಭಾರತದ ಸರ್ವಜಾತಿ ಧರ್ಮಗಳ ಸಮಾನತಾ ನೆಮ್ಮದಿಯ ಜೀವನಕ್ಕೆ ನಾಂದಿಹಾಡಬಹುದಾಗಿದ್ದ ಅವಕಾಶವನ್ನು ಮನುವಾದೀ ಬ್ರಾಹ್ಮಣ ಬನಿಯಾ ಪಕ್ಷವಾದ ಕಾಂಗ್ರೆಸ್ ನ ಕುತಂತ್ರ ಮತ್ತು ಕ್ರೌರ್ಯದಿಂದ ಕಳೆದುಕೊಂಡರು..! ಅವರ ನಂತರ ಅವರ ಅನುಯಾಯಿಗಳೆನಿಸಿಕೊಂಡವರು ಅವರ ವಿಶಾಲ ಧ್ಯೇಯ ತ್ಯಾಗವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತು ಸ್ವಾರ್ಥಕ್ಕೆ ಬಿದ್ದು ಅವರ (ರಾಜಕೀಯ) ವಿಮೋಚನಾ ಚಳವಳಿಯನ್ನು ಹಿಮ್ಮುಖವಾಗಿ ಎಳೆಯಲು ಸ್ಪರ್ಧೆ ನಡೆಸುತ್ತಿದ್ದರು..!

ಈ ಕುಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಬಾಬಾಸಾಹೇಬರನ್ನು ಸರಿಯಾಗಿ‌ ಓದಿಕೊಂಡು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ಬಾಬಾಸಾಹೇಬರ ಜಾಡನ್ನೇ ಹಿಡಿದು ಸ್ವಾಭಿಮಾನಿ ಸ್ವತಂತ್ರರಾಜಕಾರಣದಿಂದ ಮಾತ್ರ ಈ ದೇಶದ ಮನುವಾದೀ ವ್ಯವಸ್ಥೆಯನ್ನು ಬದಲಿಸಬಹುದು ಭಾರತೀಯ ಸಮಾಜವನ್ನು ಪರಿವರ್ತಿಸಬಹುದೆಂದು ಬಾಬಾಸಾಹೇಬರ ಮಾರ್ಗವನ್ನು ಅನುಸರಿಸಿ ವಂಚಿತ ಬಹುಜನ ಸಮಾಜವಾದ OBC/SC/ST/RM ಗಳನ್ನು ಜೋಡಿಸಿ ಕಟ್ಟಿ “ಬಹುಜನ ಸಮಾಜ ಪಕ್ಷ” ವನ್ನು ಕಟ್ಟಿದ ದಾದಾಸಾಹೇಬ್ ಕಾನ್ಷಿರಾಂಜಿಯವರು‌ ಇತರೆ ಮನುವಾದೀ ಪಕ್ಷಗಳಿಗೆ ನಡುಕ ಹುಟ್ಟಿಸಿದರು..!

ಆ ಮಹಾನಾಯಕ ಕಟ್ಟಿದ ಬಹುಜನ ಸಾಮಾಜಿಕ ಪರಿವರ್ತನಾ ಚಳವಳಿಯ ಒಂದು ಭಾಗವಾದ ಬಹುಜನ ಸಮಾಜಪಕ್ಷವನ್ನು ದಾದಾಸಾಹೇಬರೊಂದಿಗೆ ಸೇರಿ ತಳಮಟ್ಟದಿಂದ ಕಟ್ಟಿ ಬೆಳೆಸಿ ನಾಲ್ಕುಬಾರಿ‌ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಅಂಬೇಡ್ಕರ್ ವಾದೀ ಆಡಳಿತ ವೈಖರಿಯಿಂದ ಸರ್ವಜನಾಂಗದ ಪ್ರೀತಿಗೌರವಕ್ಕೆ ಪಾತ್ರರಾಗಿ ಬಹುಜನ ಸಮಾಜಕ್ಕೆ ಭದ್ರತೆಯನ್ನು ರಕ್ಷಣೆಯನ್ನು ನೀಡಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿ ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುನ್ನಡೆಯುತ್ತಿರುವ ಬೆಹೆನ್ಜಿ ಮಾಯಾವತಿಯರನ್ನು ಮನುವಾದಿ ಮೀಡಿಯಾಗಳು ಬಿಂಬಿಸಿದ ಬಿಂಬಿಸುತ್ತಿರುವ ರೀತಿಯೇ ಬೇರೆ..

.! ಅತ್ತ ಮನುವಾದಿ ಮೀಡಿಯಾಗಳನ್ನು ಬೈಯುತ್ತಾ ಜರಿಯುತ್ತಾ ಆ ಮೀಡಿಯಾಗಳೇ ಮಾಯಾವತಿಯವರ ಬಗ್ಗೆ ನೀಡುವ ಹೊರಿಸುವ ಸುಳ್ಳು ಆರೋಪಗಳನ್ನೇ ನಂಬಿ ದೂರದಲ್ಲಿ ನಿಂತು ಅಂಥ ಯೋಗ್ಯ ಸಮರ್ಥ ತ್ಯಾಗಮಯಿ ಮಹಿಳಾನಾಯಕಿಯನ್ನು ಅಸಹಿಷ್ಣುತೆಯಿಂದ ನೋಡಿ ಕರುಬುವುದು ಅಸ್ಪೃಶ್ಯತಾಚರಣೆಯ ಆಧುನಿಕ ಲೇಪ ಮತ್ತು ರಾಜಕೀಯ ಅನಕ್ಷರತೆ.!

ಅವರು BJPಯೊಂದಿಗೆ ಸೇರಿ‌ ಆಡಳಿತ ನಡೆಸಿದ್ದನ್ನೇ ಅನೈತಿಕ ಎಂದು ಬರೆಯಿತು ಮನುವಾದಿ ಮೀಡಿಯಾ. ಅದನ್ನೇ ಬಾಯಿತುಂಬಾ ಮಾತಾಡಿದವರು ಇಂದಿಗೂ ಅದನ್ನೇ ಮುಂದುಮಾಡಿ ಮೂಗುಮುರಿಯುವವರು ಇದೇ ಮೆದುಮನುವಾದಿ ಕೆಲ ಜಾತ್ಯಾತೀತ ಪ್ರಗತಿಪರರು..! ಇವರು ಎಂಥವರೆಂದರೆ ಮೇಲ್ಜಾತಿಯವರು, ಮೇಲ್ಜಾಜಿ ಪಕ್ಷಗಳವರು ಮಾಡುವ ಅಕ್ಷಮ್ಯ ಅಪರಾಧಗಳನ್ನು ಮರೆಯುತ್ತಾರೆ ಸಹಿಸುತ್ತಾರೆ ಅಲ್ಲೇ ಅವರೊಂದಿಗೆ ಹಿಂದೆಮುಂದೆ ಓಡಾಡುತ್ತಾ ಪದವಿಗೋ ಪಗಾರಕ್ಕೋ ಪ್ರಶಸ್ತಿಗೋ ಏನೋ ಒಂದು ಅವಕಾಶ ಗಿಟ್ಟಿಸಿಕೊಳ್ಳಲು ಹೊಗಳುತ್ತಾ ಹೆಣಗುತ್ತಾರೆ.., ‌

ಆದರೆ ದಲಿತಾಸ್ಪೃಶ್ಯರು ಅಥವಾ ಅವರ ಪಕ್ಷವು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ಚೂರೂ ಸಹಿಸದೆ ಸಾಯುವವರೆಗೂ ಎತ್ತಿಎತ್ತಿ ತೋರಿಸುತ್ತಾ ತಮ್ಮ ಮೇಲರಿಮೆಯನ್ನು ಮತ್ತು ತಮ್ಮ ಪರಪಕ್ಷಗಳ ಗುಲಾಮಗಿರಿಯನ್ನು ಸಮರ್ಥಿಸುತ್ತಾರೆ..! ಈ ಅಸಹಿಷ್ಣುತೆಯ ಗೊಂದಲದಲ್ಲಿರುವ ಇವರಿಗೆ ಮಾಯಾವತಿಯವರು ಅಧಿಕಾರದಲ್ಲಿದ್ದು ಬಹುಜನರಿಗಾಗಿ ಮಾಡಿದ ಎಷ್ಟೋ‌ ಘನಕಾರ್ಯಗಳು ಇವರ ಇಂದ್ರಿಯಗಳನ್ನು ಮುಟ್ಟುವುದೇ ಇಲ್ಲ..! ಸತ್ಯಗಳನ್ನು ಕಿವಿಗೆ ಹಾಕಿಕೊಳ್ಳಲೂ ಹೆದರುತ್ತಾರೆ.‌.!

ಮುಂದೆ ಅವರ ಪ್ರತಿಮೆಗಳ ನಿರ್ಮಾಣದ ಬಗ್ಗೆಯೂ ಕೊಂಕು ಬರೆದ ಮನುವಾದೀ ಮೀಡಿಯಾ ದೇಶದ ತುಂಬಾ ಬರೀ ಬ್ರಾಹ್ಮಣರ ಬ್ರಾಹ್ಮಣ ನಿರ್ಮಿತ ಕಲ್ಪಿತ ದೇವರುಗಳ ಪ್ರತಿಮೆಗಳೇ ಇರಬೇಕು ದಲಿತರಿಗೇಕೆ ಈ ಗೌರವ ಎಂಬಂತೆ ಕರುಬಿತು. ಇತಿಹಾಸ ನಿರ್ಮಿಸಲು ಹೊರಟ ಅಕ್ಕ ಮಾಯಾವತಿಯವರ ಒಳಗನ್ನು ಕೆಲವು ದಲಿತರೂ ಇಂದಿಗೂ ಅರ್ಥಮಾಡಿಕೊಳ್ಳದೆ ವಿರೋಧಿಸುವುದು ದುರಂತ..! ದೇಶದ ಎಲ್ಲಾ ರಾಜಕಾರಣಿಗಳಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಏಕೈಕ ರಾಜಕಾರಣಿ ಅಕ್ಕ ಮಾಯಾವತಿಯವರು ಇದರರ್ಥ ಎಲ್ಲರಿಗಿಂತ ಇವರು ಶ್ರೀಮಂತರೆಂದಲ್ಲ..! ಪಕ್ಷದ ಕಾರ್ಯಕರ್ತರು ಪಕ್ಷ ಕಟ್ಟಲು ಕೊಡುವ ಹಣದ ಲೆಕ್ಕವನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ತೋರಿಸಿ ದೇಶಕ್ಕೆ ಮೋಸಮಾಡದೆ ತೆರಿಗೆ ಕಟ್ಟುತ್ತಿರುವ ಏಕೈಕ ರಾಜಕಾರಣಿ ಇವರು..! ಇವರನ್ನು ಭ್ರಷ್ಟರು ಎಂದು ಮನುವಾದಿ ಮೀಡಿಯಾ ಬರೆಯುತ್ತದೆ ಅಜ್ಞಾನಿ ವಲಯ ಪೂರ್ವಾಪರ ಚಿಂತಿಸದೆ ಪರೀಕ್ಷಿಸದೆ ಅದನ್ನೇ ಹೊತ್ತುಕೊಂಡು ತಿರುಗುತ್ತದೆ..! ಇನ್ನು ಮೊಸರಿನಲ್ಲಿ ಕಲ್ಲು ಹುಡುಕಿ ಇವರ ಮೇಲೆ ಇನ್ನೊಂದಷ್ಟು ಆರೋಪಗಳು.. “ಇವರು ಬ್ರಾಹ್ಮಣರನ್ನು ಪಕ್ಷದಲ್ಲಿ ಸೇರಿಸಿಕೊಂಡಿದ್ದಾರೆ..” ಇವರು ಮುಂದಿನ ದಲಿತ ಪೀಳಿಗೆಯನ್ನು ಬೆಳೆಯಲು‌ ಬಿಡುತ್ತಿಲ್ಲ..” ಸರ್ವಾಧಿಕಾರಿ…. ಹಾಗೆ ಹೀಗೆ ಎಂದೆಲ್ಲಾ ಮನುವಾದಿಗಳು ಬಿಂಬಿಸುತ್ತಾರೆ..! ಅದನ್ನೇ ಎಲ್ಲರೂ ನಂಬುತ್ತಾರೆ ನಂಬಿಸುತ್ತಾರೆ. ಆದರೆ ವಾಸ್ತವಸತ್ಯ ಬೇರೆಯೇ ಇದೆ..!

ಕೊನೆಯದಾಗಿ‌ ಬುದ್ಧಿಯಲ್ಲಾಗಲಿ‌ ಸಾಮರ್ಥ್ಯದಲ್ಲಾಗಲಿ ಸೈದ್ದಾಂತಿಕ ಗಟ್ಟಿತನದಲ್ಲಾಗಲೀ ತ್ಯಾಗದಲ್ಲಾಗಲೀ‌ ಧೈರ್ಯದಲ್ಲಾಗಲಿ‌ ನಾಯಕತ್ವಗುಣದಲ್ಲಾಗಲಿ ಈಗಿನ ಮೋದಿ-ಷಾ ಗಳಿಗೆ ಅಥವಾ ಯಾವುದೇ ಮನುವಾದಿಗಳಿಗೆ ಮನುವಾದಿ ಪಕ್ಷಗಳಿಗೆ ಎದುರಾಳಿಯಾಗಿ ನಿಂತು ಈ ನೆಲದಲ್ಲಿ ಮನುವಾದಿ ಆಳ್ವಿಕೆಯನ್ನು ಕೊನೆಗಾಣಿಸಿ ದೇಶವನ್ನು ಉಳಿಸುವ ತಾಕತ್ತು ಇರುವುದು ಅಂಬೇಡ್ಕರ್ವಾದೀ ಕಾನ್ಷಿರಾಂಜಿ ಪಕ್ಷವಾದ ಬಹುಜನ ಸಮಾಜ ಪಕ್ಷಕ್ಕೆ ಮಾತ್ರ ಅರ್ಥಾತ್ ಬೆಹೆನ್ಜಿ ಮಾಯಾವತಿಯವರಿಗೆ ಮಾತ್ರ..

.!! ಈ ಸತ್ಯ‌ ಬಹುಜನ ಸಮಾಜದ ಅಜ್ಞಾನಿಗಳಿಗಿಂತ ಕೋಮುವಾದಿ ಜಾತಿವಾದಿ ಬ್ರಾಹ್ಮಣ-ಬನಿಯಾಗಳಿಗೆ ಚೆನ್ನಾಗಿ ಅರ್ಥವಾಗಿದೆ..! ಹಾಗಾಗಿಯೇ ಈ ಅಂಬೇಡ್ಕರ್ ವಾದಿ ಸಿದ್ಧಾಂತದ ಈ ಪಕ್ಷವನ್ನು / ಇದರ ನಾಯಕತ್ವವನ್ನು ಮುಗಿಸಿಬಿಡಲು ದೊಡ್ಡ ಸಂಚು ಹೂಡಿರುವ ಮನುವಾದೀ ಪಕ್ಷಗಳಾದ ಕಾಂಗ್ರೆಸ್‌ ಬಿಜೆಪಿ ಇನ್ನಿತರ ಪಕ್ಷಗಳವರು ಅನ್ಯಾಯುತ EVM ತಂದಿರುವುದು..! ಈ ಪಕ್ಷವನ್ನು ಮುಗಿಸುವ ಒಳಸಂಚಿನ ಒಂದು ಭಾಗವೇ ಈ CAA NRC etc etc..!

ಮಾಯಾವತಿಯವರ ಬಗ್ಗೆ ಇರದ ಆರೋಪಗಳನ್ನು ಹೊರಿಸಿ ನಂಬುವಂತೆ ಮಾಡಿ ಹಿಂದುಳಿದ ವರ್ಗದವರಂತಿರಲಿ ದಲಿತರೇ ಇವರನ್ನು ಒಪ್ಪದಂತೆ ಮಹಿಳೆಯರೂ‌ ಇವರನ್ನು ಅನುಸರಿಸದಂತೆ ಮಾಡಿರುವುದು‌ ಮನುವಾದಿಗಳ ಸದ್ಯದ ಗೆಲುವು ಮತ್ತು ‌ಸತ್ಯದ ನಮ್ಮನಿಮ್ಮೆಲ್ಲರ ಸೋಲು..!! ಆದರೆ‌ ಈ ತಾತ್ಕಾಲಿಕ ಸೋಲಿಗೆ‌ ಹತಾಷರಾಗಿ ಎದೆಗುಂದಬೇಕಿಲ್ಲ.

ಅಸತ್ಯಕ್ಕೆ ಆಯಸ್ಸು ಕಡಿಮೆ. ಮನುವಾದಿಗಳು ಸೃಷ್ಟಿಸಿ ಒಡ್ಡಿರುವ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಮೀರಿ ಇವತ್ತಲ್ಲಾ ನಾಳೆ ಅಪ್ಪಟ ಅಂಬೇಡ್ಕರ್ ವಾದೀ ಸಿದ್ದಾಂತದ ಬಹುಜನ ಸಮಾಜ ಪಕ್ಷವು ಈ ದೇಶವನ್ನು ಆಳುತ್ತದೆ ಅಕ್ಕಾ ಮಾಯಾವತಿಯವರು ನಮ್ಮ ಕಣ್ಣಮುಂದೆಯೇ ಈ ದೇಶದ ಹೆಮ್ಮೆಯ ಪ್ರಧಾನಿಯಾಗುತ್ತಾರೆ ಎಂಬ ಆಶಯದೊಂದಿಗೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಹುಜನ ವಿಮೋಚಕಿ ತ್ಯಾಗಮಯಿ ಬೆಹೆನ್ಜಿ ಮಾಯಾವತಿಯವರಿಗೆ ಬಹುಜನರೆಲ್ಲಾ ಶುಭಾಶಯ ಕೋರೋಣ……. Many more Happy returns of the day our Beloved Behenj… Tum Sangharsh koro hum tumhara Sath hai… ಈ ದೇಶ ಸಂಕಷ್ಟದಲ್ಲಿದೆ. ಈ ದೇಶಕ್ಕೆ ಅಕ್ಕಾ ಮಾಯಾವತಿಯ‌ ಅನಿವಾರ್ಯವಿದೆ..!

emedialine Desk

Recent Posts

ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…

4 hours ago

ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲು ಜಿ. ಪಂ. ಮಾಜಿ ಸದಸ್ಯೆ ಅನಿತಾ ವಳಕೇರಿ ಕರೆ

ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…

5 hours ago

ಲಿಂಗರಾಜ ಶಾಸ್ತ್ರಿ ಪುಣ್ಯಸ್ಮರಣೋತ್ಸವ: ಬಹುಮುಖ ವ್ಯಕ್ತಿತ್ವದ ಶಾಸ್ತ್ರಿ

ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್‌ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…

5 hours ago

ಕಲಬುರಗಿ: ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯಧಿಕಾರಿಗೆ‌ ಮನವಿ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…

5 hours ago

ವೀ.ಲಿಂ.ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಸವರಾಜ ಶೆಳ್ಳಗಿ

ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…

6 hours ago

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420