ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜ್ಯ ಸರಕಾರ ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದಲ್ಲದೆ ಜಾತ್ರೆಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ ಬ್ಯಾರಿಕೇಡ ಆದರೂ ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಬನಶಂಕರಿ ದೇವಿ ಜಾತ್ರೆಗೆ ಬರುವ ಭಕ್ತರ ದಂಡು ಮಾತ್ರ ನಿಂತಿಲ್ಲ.
ಬನಶಂಕರಿ ದೇವಿ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ನಿನ್ನೆ ಮೊನ್ನೆಯಿಂದ ಬಾಗಲಕೋಟೆ ಬೆಳಗಾವಿ, ಗದಗ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಬನಶಂಕರಿ ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ಬಾಗಲಕೋಟೆಯಲ್ಲಿ ಇಳಕಲ್, ಹುನಗುಂದ ಭಾಗದದಿಂದ ನಿನ್ನೆಯಿಂದಲೇ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದು, ಪೊಲೀಸರು ತಡೆದು ವಾಪಸ್ ಕಳಿಸುತ್ತಿದ್ದಾರೆ. ಆದೂ ಭಕ್ತರ ಯಾತ್ರೆ ಮಾತ್ರ ನಿಂತಿಲ್ಲ.
ಪೊಲೀಸರ ಕಣ್ತಪ್ಪಿಸಿ ಹೊಲಗದ್ದೆಗಳ ಮೂಲಕ ದೇವಿ ದರ್ಶನಕ್ಕೆ ಭಕ್ತರ ಆಗಮನ: ಇಳಕಲ್ ಹುನಗುಂದ ಭಾಗದಿಂದ ನಿನ್ನೆಯಿಂದ ಬನಶಂಕರಿ ದೇವಿ ಭಕ್ತರು ಪಾದಯಾತ್ರೆ ಮೂಲಕ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಈ ಪಾದಯಾತ್ರೆ ತಡೆಯೋದಕ್ಕೆ ಪೊಲೀಸರು ಮುಂದಾಗಿದ್ದು, ಅಲ್ಲಲ್ಲಿ ಅಡ್ಡಗಟ್ಟಿ ಪಾದಯಾತ್ರಾರ್ಥಿಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಆದರೆ ಪಾದಯಾತ್ರಾರ್ಥಿಗಳು ಮಾತ್ರ ಪೊಲೀಸರ ಕಣ್ತಪ್ಪಿಸಿ ಹೊಲಗದ್ದೆಗಳಲ್ಲಿ ನಡೆದುಕೊಂಡು ಬನಶಂಕರಿ ದೇವಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೊರಡುತ್ತಿದ್ದಾರೆ.
ಬನಶಂಕರಿ ದೇವಸ್ಥಾನದ ಸುತ್ತಲೂ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಬ್ಯಾರಿಕೇಡ್: ಬನಶಂಕರಿ ದೇವಿ ಜಾತ್ರೆ ಬಂದ್ ಆದ ಕಾರಣ ಈಗಾಗಲೇ ಪೊಲೀಸರು ಬನಶಂಕರಿ ದೇವಸ್ಥಾನದ ಸುತ್ತಲೂ ಬ್ಯಾರಿಕೇಡ್ ಹಾಕಿ ಜನರು ಬಾರದಂತೆ ಬಂದ್ ಮಾಡುತ್ತಿದ್ದಾರೆ. ಆದರೂ ಕೇರ್ ಮಾಡದ ಜನರು ಇಂದು ಕೂಡ ಕಾಲ್ನಡಿಗೆ ಮೂಲಕ ಆಗಮಿಸಿ ಬನಶಂಕರಿ ದರ್ಶನ ಮಾಡಿ ಹೊರಡುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಬಾಗಲಕೋಟೆ ಜಿಲ್ಲೆ ಗದಗ ಜಿಲ್ಲೆಯಿಂದ ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ವಾಪಸ್ ಹೋಗುತ್ತಿದ್ದಾರೆ.
ಈಗಾಗಲೇ ಸರಕಾರ ಬನಶಂಕರಿ ದೇವಿ ಜಾತ್ರೆ ಬಂದ್ ಮಾಡಿ ಆದೇಶ ಹೊರಡಿಸಿದೆ. ಅದರ ಜೊತೆ ಜೊತೆಗೆ ಯಾವುದೇ ವ್ಯಾಪಾರ ವಹಿವಾಟಿಗೂ ಅವಕಾಶವಿಲ್ಲ. ನಾಟಕಗಳನ್ನು ಕೂಡ ಬನಶಂಕರಿ ದೇವಿ ಜಾಗದಲ್ಲಿ ನಿಷೇಧ ಮಾಡಿದ್ದು, ದೇವಸ್ಥಾನದ ವ್ಯಾಪ್ತಿ ಬಿಟ್ಟು ಬೇರೆ ಭಾಗದಲ್ಲಿ ನಾಟಕವನ್ನು ಪ್ರದರ್ಶನ ಮಾಡೋಕೆ ಅವಕಾಶ ಮಾತ್ರ ಕಲ್ಪಿಸಲಾಗಿದೆ. ನಾಳೆ ಬನಶಂಕರಿ ದೇವಿ ಜಾತ್ರೆಯ ರಥೋತ್ಸವ ನಡೆಯಲಿದ್ದು, ಈ ಬಾರಿ ನಡೆಯಲಿರುವ ರಥೋತ್ಸವ ಎಲ್ಲರ ಕುತೂಹಲ ಕೆರಳಿಸಿದೆ ಸದ್ಯದ ಮಟ್ಟಿಗೆ ಹೇಳುವುದಾದರೆ ಈಗಾಗಲೇ ರಥವನ್ನು ಬಣ್ಣಬಣ್ಣದ ಬಾವುಟಗಳಿಂದ ದೇವಸ್ಥಾನದ ಆಡಳಿತ ಮಂಡಳಿ ಅಲಂಕಾರ ಮಾಡಿದ್ದು ನಾಳೆ ಸರಳವಾಗಿ ತೇರು ಎಳೆಯುವ ಸಾಧ್ಯತೆ ಇದೆ.
ಈ ಬಗ್ಗೆ ಮಾತಾಡಿದ ಬಾದಾಮಿ ತಹಸೀಲ್ದಾರ ಸುಹಾಸ್ ಇಂಗಳೆ, “ಈಗಾಗಲೇ ಬನಶಂಕರಿ ದೇವಿ ಜಾತ್ರೆ ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು ಬನಶಂಕರಿ ದೇವಿ ಭಕ್ತರು ಸಹಕರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯಾರೂ ಸೇರಬಾರದು. ನಾಳೆ ಗದಗ ಜಿಲ್ಲೆ ಮಾಡಲಗೇರಿಯಿಂದ ತೇರಿನ ಹಗ್ಗ ತರಲಿದ್ದು ನಾಳೆ ತೇರಿನ ಮುಂದೆ ಹಗ್ಗ ಇಟ್ಟು ಪೂಜೆ ಮಾಡಲಾಗುತ್ತದೆ. ಕೇವಲ ದೇವಸ್ಥಾನ ಟ್ರಸ್ಟ್ ಕಮಿಟಿ, ಕೆಲವೇ ಕೆಲ ಭಕ್ತರಿಂದ ತೇರು ಒಂದೆರಡು ಹೆಜ್ಜೆ ಎಳೆಯೋದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು.”ಎಂದರು.
ಇನ್ನು ಜಾತ್ರೆ ಬಂದ್ ಆದರೂ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದು ಇಂದು ವಿವಿಧ ತರಕಾರಿ, ಸೊಪ್ಪುಗಳಿಂದ ದೇವಿಗೆ ಅಲಂಕಾರ ಮಾಡಿ ಮಂತ್ರ ಘೋಷದೊಂದಿಗೆ ಅರ್ಚಕರು ಪೂಜೆ ಮಾಡಿದರು. ಒಟ್ಟಾರೆ ಜಾತ್ರೆ ಬಂದ್ ಆದರೂ ಭಕ್ತಿಸುಧೆ ಮಾತ್ರ ಹರಿಯುತ್ತಲೇ ಇದ್ದು ನಾಳೆ ದಿನ ರಥೋತ್ಸವ ನಡೆಯುತ್ತಾ ಎಂಬ ಕುತೂಹಲ ಮೂಡಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…