ಬಿಸಿ ಬಿಸಿ ಸುದ್ದಿ

ನ್ಯಾಯವಾದಿ ಕಾಶಿನಾಥ ಮೊತಕಪಲ್ಲಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು,  ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿಗೆ ನಗರಕ್ಕೆ  ಆಗಮಿಸಿದ ಕಾಶಿನಾಥ ಮೊತಕಪಲ್ಲಿ ಯವರಿಗೆ,  ಕಲ್ಯಾಣ ಕರ್ನಾಟಕ ಭಾಗದಿಂದ ಅವಿರೋಧವಾಗಿ ನೇಮಕ ಗೊಂಡ ಎರಡನೇ ವ್ಯಕ್ತಿಯಾಗಿದ್ದಕ್ಕೆ ಹರ್ಷಗೊಂಡ ಈ ಭಾಗದ ಎಲ್ಲಾ ವಕೀಲರು ಇಂದು ರಂದು ಅವರ ಮನೆಗೆ ತೆರಳಿ ಅದ್ದೂರಿಯಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಕಲಬುರಗಿ ನ್ಯಾಯವಾದಿಗಳ ಸಂಘದ ಪರವಾಗಿ ಎಲ್ಲಾ ಪಧಾದಿಕಾರಿಗಳು, ಅಲ್ಲದೆ ಪ್ರತ್ಯೇಕವಾಗಿ ಕೂಡಾ ಭೇಟಿ ನೀಡಿ ಅನೇಕರು ಗೌರವಿಸುವ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯಗಳು ಕೋರಿದರು. ಮೊದಲಿಗೆ ಕಲಬುರಗಿ ಅಧ್ಯಕ್ಷರಾದ ರಾಜಕುಮಾರ ಕಡಗಂಚಿ ಕುಟುಂಬ ಸಮೇತ ಆಗಮಿಸಿ ಗೌರವಿಸುವ ಮೂಲಕ ಚಾಲನೆ ನೀಡಿದ ನಂತರ, ಜಿಲ್ಲಾ ಪಧಾದಿಕಾರಿಗಳು, ಬಿಜೆಪಿಯ ಕಾನೂನು ಪ್ರಕೋಷ್ಠದ ಪಧಾದಿಕಾರಿಗಳು, ಕೊನೆಯಲ್ಲಿ ಕಲ್ಯಾಣ ಕರ್ನಾಟಕ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿ ಅಲ್ಲದೆ ಬಂಧು ಬಳಗದವರು ಅಧಿಕ ಸಂಖ್ಯೆಯಲ್ಲಿ ತೆರಳಿ ಗೌರವಿಸಿದರು.

ಜಿಲ್ಲೆಯ ಅತಿ ಹಿಂದುಳಿದ ಚಿಂಚೋಳಿ ತಾಲೂಕಿನ ಕುಗ್ರಾಮದಿಂದ ಆಗಮಿಸಿದ ಮಧ್ಯಮ ಕುಟುಂಬದಲ್ಲಿ ಜನಿಸಿದ ಒಬ್ಬ ನ್ಯಾಯವಾದಿ, ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ,  ನಂತರ ರಾಜ್ಯ ಪರಿಷತಿನ್ ಸಧ್ಯಸರಾಗಿ ಸೇವೆ ಸಲ್ಲಿಸಿ, ಈಗ ಅಧ್ಯಕ್ಷರಾಗಿ ಆಯ್ಕೆಗೊಂಡ ಎರಡನೇ ವ್ಯಕ್ತಿ,  ದಿವಂಗತ ಎಸ್.ಎಸ್.ಕುಮ್ಮಣ್ಣ ಮೊದಲ ವ್ಯಕ್ತಿ, ಅವರು  ಸತತ  15 ವರ್ಷಗಳ  ಸುಧೀರ್ಘ ಸೇವೆಯ ನಂತರ ಆಯ್ಕೆಗೊಂಡಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

5 hours ago