ಬಿಸಿ ಬಿಸಿ ಸುದ್ದಿ

ಫರ್ಡ್ಪ್ಲಾನ್ ಸ್ವಾಸ್ಥ್, ಎನ್ಯು ಹಾಸ್ಪಿಟಲ್ಸ್ ಸಹಯೋಗದಿಂದ ರೋಗಿಗಳಿಗೆ ವೈದ್ಯಕೀಯ ಬಿಲ್ ಉಳಿತಾಯಕ್ಕೆ ನೆರವು

ಶಿವಮೊಗ್ಗ: ಅಫರ್ಡ್ಪ್ಲಾನ್ ಸ್ವಾಸ್ಥ್ ಮತ್ತು ಎನ್ಯು ಹಾಸ್ಪಿಟಲ್ಸ್ ಆರೋಗ್ಯಸೇವಾ ಉಳಿತಾಯ ಕಾರ್ಡ್ಗೆ ತಮ್ಮ ಸಹಯೋಗ ಪ್ರಕಟಿಸಿದ್ದು ಎನ್ಯು ಆಸ್ಪತ್ರೆ ಸೇವೆಗಳನ್ನು ಹೆಚ್ಚು ರೋಗಿಗಳ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ಅಫರ್ಡ್ಪ್ಲಾನ್ ಸ್ವಾಸ್ಥ್ ಕಾರ್ಡ್ ಗ್ರಾಹಕರಿಗೆ ಎನ್ಯು ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳು ಹಾಗೂ ಹಣಕಾಸು ಪ್ರಯೋಜನಗಳನ್ನು ಪಡೆಯಲು ನೆರವಾಗುತ್ತದೆ ಮತ್ತು ಅವರ ಇಡೀ ಕುಟುಂಬಕ್ಕೆ ಸಂಪೂರ್ಣ ಶ್ರೇಣಿಯ ಆರೋಗ್ಯಸೇವಾ ಆಯ್ಕೆಗಳನ್ನು ನೀಡುತ್ತವೆ. ಈ ಕಾರ್ಡ್ ಅನ್ನು ಬೆಂಗಳೂರು, ಶಿವಮೊಗ್ಗ ಮತ್ತು ಅಂಬೂರಿನ ಎಲ್ಲ ಶಾಖೆಗಳಲ್ಲೂ ಸುಲಭವಾಗಿ ಬಳಸಬಹುದು.

ಅಫರ್ಡ್ಪ್ಲಾನ್ ಸ್ವಾಸ್ಥ್ ಯೆಸ್ ಬ್ಯಾಂಕ್ ಪ್ರಿಪೇಯ್ಡ್ ಕಾರ್ಡ್ ಆಗಿದು ಅದು ಒಪಿಡಿ(ಔಟ್ಪೇಷೆಂಟ್ ಡಿಪಾರ್ಟ್ಮೆಂಟ್) ಸೇವೆಗಳು, ಲ್ಯಾಬ್ ಟೆಸ್ಟ್ಗಳು, ಔಷಧ ಕೊಳ್ಳುವಿಕೆ ಮತ್ತು ಎಲ್ಲ ಐಪಿಡಿ(ಇನ್ಪೇಷೆಂಟ್ ಡಿಪಾರ್ಟ್ಮೆಂಟ್) ಚಿಕಿತ್ಸೆಗಳಿಗೆ ಡಿಜಿಟಲ್ ವ್ಯಾಲೆಟ್ನೊಂದಿಗೆ ಬಂದಿದೆ. ಚಿಪ್-ಸನ್ನದ್ಧ ಕಾರ್ಡ್ನೊಂದಿಗೆ ಸನ್ನದ್ಧವಾಗಿದ್ದು ಗ್ರಾಹಕರು ತಕ್ಷಣದ ಕ್ಯಾಶ್ಬ್ಯಾಕ್, ವಿಶೇಷ ಆಸ್ಪತ್ರೆ ಕೊಡುಗೆಗಳು ಮತ್ತು ಅಫರ್ಡ್ಪ್ಲಾನ್ ಸ್ವಾಸ್ಥ್ ಪಾಲುದಾರ ಸಹಯೋಗಗಳ ಮೂಲ ಆದ್ಯತೆಯ ಬ್ರಾಂಡ್ಗಳ ವಿಶೇಷ ರಿಯಾಯಿತಿಗಳನ್ನು ನೀಡುತ್ತದೆ. ಅಫರ್ಡ್ಪ್ಲಾನ್ ಸ್ವಾಸ್ಥ್ ಈಗಾಗಲೇ ದಕ್ಷಿಣ ಭಾರತದ ಹಲವು ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದು, ಈ ಪ್ಲಾಟ್ಫಾರಂ ಮೂಲಕ ರೋಗಿಗಳಿಗೆ ಅವರ ವೈದ್ಯಕೀಯ ವೆಚ್ಚಗಳನ್ನು ಹಲವು ಅನುಕೂಲಗಳನ್ನು ಒದಗಿಸಿ ನೆರವಾಗಿದೆ.

ಈ ಕುರಿತು ಅಫರ್ಡ್ಪ್ಲಾನ್ನ ಸಿಇಒ ಆದಿತ್ಯ ಶರ್ಮಾ, “ಕರ್ನಾಟಕದ ಪ್ರತಿಷ್ಠಿತ ಎನ್ಯು ಹಾಸ್ಪಿಟಲ್ಸ್ನೊಂದಿಗಿನ ಸಹಯೋಗಕ್ಕೆ ನಾವು ಬಹಳ ಹೆಮ್ಮೆ ಪಡುತ್ತೇವೆ. ಎನ್ಯು ಹಾಸ್ಪಿಟಲ್ಸ್ ಕೇಂದ್ರದಲ್ಲಿ ಚೇತರಿಕೆ ಮತ್ತು ಪುನರ್ವಸತಿಯನ್ನು ಕೇಂದ್ರವಾಗಿರಿಸಿಕೊಂಡಿದ್ದೇವೆ. ಓಮಿಕ್ರಾನ್ ವೇರಿಯೆಂಟ್ ಬಂದಿರುವುದರಿಂದ ನಾವು ನಮ್ಮ ಸಹಯೋಗದ ಮೂಲಕ ಗುಣಮಟ್ಟದ ರೋಗಿಯ ಆರೈಕೆ ವಿಸ್ತರಿಸುವ ಭರವಸೆ ಹೊಂದಿದ್ದೇವೆ ಮತ್ತು ಆರೋಗ್ಯಸೇವಾ ಹಣಕಾಸು ಲಭ್ಯತೆ ಮತ್ತು ವೇಗ ಹಾಗೂ ದಕ್ಷ ವಿಧಾನದಲ್ಲಿ ವೆಚ್ಚ ಉಳಿಸಲು ನೆರವಾಗುತ್ತೇವೆ” ಎಂದರು.

ಎನ್ಯು ಹಾಸ್ಪಿಟಲ್ಸ್ನ ಹಿರಿಯ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಯುರಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೆಶಕ ಡಾ. ಪ್ರಸನ್ನ ವೆಂಕಟೇಶ್, “ಅಫರ್ಡ್ಪ್ಲಾನ್ ನಿಜಕ್ಕೂ ರೋಗಿಗಳಿಗೆ ಅವರ ಆರೋಗ್ಯಸೇವಾ ಹಣಕಾಸು ಯೋಜನೆಯ ನಿಯಂತ್ರಣ ಸಾಧಿಸಲು ಶಕ್ತಿ ನೀಡುತ್ತದೆ. ಈ ಮೌಲ್ಯಯುತ ಸಹಯೋಗದಿಂದ ನಾವು ಆರೋಗ್ಯಕರ, ಸಂತೋಷಕರ ರೋಗಿಯ ಆರೈಕೆಯತ್ತ ಮುನ್ನಡೆಯುತ್ತಿದ್ದೇವೆ” ಎಂದರು.

ಅಫರ್ಡ್ಪ್ಲಾನ್ 15 ನಗರಗಳ ನೂರಾರು ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದು ಅವರ ಉತ್ಪನ್ನದ ಮೂಲಕ 5,00,000 ರೋಗಿಯ ಜೀವನಗಳನ್ನು ಸ್ಪರ್ಶಿಸಿದೆ. ಅವರು ಈಗಾಗಲೇ ದೆಹಲಿ/ಎನ್ಸಿಆರ್, ಬೆಂಗಳೂರು, ಜೈಪುರ, ಮುಂಬೈ ಮತ್ತು ಕೊಲ್ಕತಾ ಮಾರುಕಟ್ಟೆಗಳಲ್ಲಿ ಸದೃಢ ಆಸ್ಪತ್ರೆ ಜಾಲ ಹೊಂದಿದೆ. ಪ್ರಸ್ತುತ ಅವರು ಭಾರತದಲ್ಲಿ 80+ ಆಸ್ಪತ್ರೆಗಳ ಸಕ್ರಿಯ ಸಹಯೋಗಗಳನ್ನು ಹೊಂದಿದ್ದಾರೆ.

emedialine

Recent Posts

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

7 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 hours ago